Search
  • Follow NativePlanet
Share
» »ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

By Vijay

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಪುನಲೂರು ಒಂದು ಪಟ್ಟಣ ಪ್ರದೇಶವಾಗಿದ್ದು ಕೇರಳ-ತಮಿಳುನಾಡು ಗಡಿಯ ಬಳಿ ನೆಲೆಸಿದೆ. ಮೂಲತಃ ಈ ಪಟ್ಟಣಕ್ಕೆ ಹೆಸರು ತಮಿಳು ಭಾಷೆಯಿಂದ ಬಂದಿದ್ದು ಅದರ ಪ್ರಕಾರ, ಪುನಲ್ ಅಂದರೆ ನೀರು ಎಂತಲೂ ಊರು ಎಂದರೆ ಪಟ್ಟಣ ಎಂತಲೂ ಇರುವುದರಿಂದ ಇದಕ್ಕೆ ಪುನಲೂರು ಎಂಬ ಹೆಸರು ಬಂದಿದೆ.

ನಿಮಗಿಷ್ಟವಾಗಬಹುದಾದ : ಮನಸೂರೆಗೊಳ್ಳುವ ಕೊವಲಂ ಕಡಲ ತೀರ

ಅಂದರೆ, ಇದು ನೀರಿನ ನಗರ ಎಂಬ ಅರ್ಥ ನೀಡುವ ಸುಂದರ ಪಟ್ಟಣವಾಗಿದೆ. ಕೊಲ್ಲಂ ನಗರ ಕೇಂದ್ರದಿಂದ 45 ಕಿ.ಮೀ ಹಾಗೂ ರಾಜಧಾನಿ ತಿರುವನಂತಪುರಂನಿಂದ 75 ಕಿ.ಮೀ ದೂರದಲ್ಲಿ ಪುನಲೂರು ಪಟ್ಟಣವಿದೆ. ಈ ಪಟ್ಟಣದ ವಿಶೇಷವೆಂದರೆ ಭಾರತದ ಪ್ರಥಮ ಸೇತುವೆಯನ್ನು ಇಲ್ಲಿಯೆ ನಿರ್ಮಿಸಲಾಯಿತು. ಅಲ್ಲದೆ ವಾಹನ ಚಲಾಯಿಸುವ ದೇಶದ ಮೊದಲ ಸೇತುವೆಯಾಗಿಯು ಇದು ಹೆಗ್ಗಳಿಕೆ ಪಡೆದಿದೆ.

ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಚಿತ್ರಕೃಪೆ: Sandeep545

ಈ ಸೇತುವೆಯ ನಿರ್ಮಾಣ 1877 ರಲ್ಲಿ ಅಲ್ಬರ್ಟ್ ಹೆನ್ರಿ ಎಂಬಾತನಿಂದಾಯಿತು. ಪುನಲೂರು, ತಿರುವಾಂಕೂರು ಅರಸರ ಆಡಳಿತದಲ್ಲಿ ತಮಿಳುನಾಡು ಹಾಗೂ ಕೇರಳದ ಮಧ್ಯೆ ವ್ಯಾಪಾರ ವಹಿವಾಟು ನಡೆಸಲು ಮುಖ್ಯ ಕೇಂದ್ರವಾಗಿತ್ತು ಹಾಗೂ ಇದಕ್ಕೆ ಸರಳವಾಗಿ ತಲುಪಬೇಕೆಂದರೆ ಕಲ್ಲಾಡಾ ನದಿಯು ಅಡ್ಡವಾಗಿತ್ತು. ಹಾಗಾಗಿ ಈ ಸೇತುವೆಯ ನಿರ್ಮಾಣವಾಯಿತು.

ನಿಮಗಿಷ್ಟವಾಗಬಹುದಾದ : ಭಾರತದ ಭವ್ಯ ಸೇತುವೆಗಳು

ಈ ಸೇತುವೆಯ ಹಿಂದಿರುವ ಒಂದು ಆಸಕ್ತಿಕರ ವಿಷಯವೆಂದರೆ ಮೊದ ಮೊದಲು ಇದರ ನಿರ್ಮಾಣವಾದಾಗ ಇದರ ಮೇಲೆ ನಡೆದಾಡಲು ಜನರು ಹೆದರುತ್ತಿದ್ದರು. ಇದನ್ನರಿತ ಅಲ್ಬರ್ಟ್ ತನ್ನ ಕುಟುಂಬದೊಂದಿಗೆ ದೋಣಿಯಲ್ಲಿ ಕುಳಿತು ಸೇತುವೆಯ ಕೆಳ ಭಾಗದಲ್ಲಿ ಸವಾರಿ ಮಾಡುತ್ತ ಸೇತುವೆಯ ಮೇಲೆ ಆರು ಆನೆಗಳನ್ನು ನಡೆಸಿದನಂತೆ. ಇದರಿಂದ ಜನರಿಗೆ ಧೈರ್ಯ ಬಂದು ಸಂಚಾರ ಪ್ರಾರಂಭಿಸಿದರಂತೆ!

ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಚಿತ್ರಕೃಪೆ: Jpaudit

ಈ ಸೇತುವೆ ನಿರ್ಮಿಸುವಾಗ ನದಿಯ ಇನ್ನೊಂದು ಬದಿಯಲ್ಲಿ ದಟ್ಟವಾದ ಅರಣ್ಯವಿದ್ದುದರಿಂದ ಅಲ್ಲಿಂದ ಕಾಡು ಪ್ರಾಣಿಗಳು ಪಟ್ಟಣ ಸೇರಬಹುದೆಂಬ ಆತಂಕವಿತ್ತು. ಹೀಗಾಗಿ ಈ ಸೇತುವೆಯನ್ನು ತೂಗು ಸೇತುವೆಯನ್ನಾಗಿಸಿ ನಿರ್ಮಿಸಲಾಯಿತು. ಪ್ರಾಣಿಗಳು ಇಲ್ಲಿಗೆ ಬರುವಾಗ ಸೇತುವೆ ತೂಗುವುದರಿಂದ ಅವು ಬರಲಾರವು ಎಂಬ ಉದ್ದೇಶ ಇದರ ಹಿಂದಿತ್ತು.

ಅಲ್ಲದೆ ಕೇರಳದಲ್ಲಿ ಕೈಗಾರೀಕರಣದ ಕ್ರಾಂತಿಗೂ ಸಹ ಪುನಲೂರ ಮಹತ್ತರ ಕೊಡುಗೆ ನೀಡಿದೆ. ಪ್ರಖ್ಯಾತ ಪುನಲೂರು ಪೇಪರ್ ಮಿಲ್ ಸಹ ಪ್ರಾರಂಭವಾಗಿದ್ದು ಪುನಲೂರಿನಲ್ಲಿಯೆ ಅದೂ ಸಹ 1888 ರಲ್ಲಿ. ಈಗ ಇದು ಮುಚ್ಚಿ ಹೋಗಿದೆ. ಅದರಂತೆ ಪುನಲೂರು ಸೇತುವೆಯೂ ಸಹ ಇತಿಹಾಸ ನೆನಪಿಸುವ ಪ್ರವಸಿ ಆಕರ್ಷಣೆಯಾಗಿ ಮಾತ್ರ ಉಳಿದುಕೊಂಡಿದೆ.

ಭಾರತದ ಮೊದಲ ಸೇತುವೆಯ ಪಟ್ಟ ಹೊತ್ತ ಪುನಲೂರು

ಚಿತ್ರಕೃಪೆ: Sktm14

ಪುನಲೂರಿನ ರೈಲು ಮಾರ್ಗವೂ ಸಹ ಸಾಕಷ್ಟು ಅದ್ಭುತ ಇತಿಹಾಸ ಹೊಂದಿದೆ. ಈ ಮಾರ್ಗವು ಅತ್ಯಂತ ರಮಣೀಯವಾದ ಪ್ರಕೃತಿ ಸೌಂದರ್ಯದ ಮಧ್ಯದಿಂದ ಸಾಗುವ ಮಾರ್ಗವಾಗಿದೆ. ಮೊದಲಿಗೆ ಬ್ರಿಟೀಷರು ಕೊಲ್ಲಂನಿಂದ ಪುನಲೂರು ಮಾರ್ಗವಾಗಿ ತಮಿಳುನಾಡಿನ ಸೆಂಗೊಟ್ಟೈಗೆ ರೈಲು ಮಾರ್ಗದ ನಿರ್ಮಾಣ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X