Search
  • Follow NativePlanet
Share
» »ಕೊಲ್ಲಂನಲ್ಲಿರುವ ಪುನಲೂರನ್ನು ನೋಡಿಲ್ಲಂದ್ರೆ ಹೇಗೆ?

ಕೊಲ್ಲಂನಲ್ಲಿರುವ ಪುನಲೂರನ್ನು ನೋಡಿಲ್ಲಂದ್ರೆ ಹೇಗೆ?

ಕೇರಳವು ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ರಾಜ್ಯವಾಗಿದೆ. ಅಂತಹ ಕೇರಳದಲ್ಲಿರುವ ಒಂದು ಪುಟ್ಟ ಪಟ್ಟಣವೇ ಪುನಲೂರು. ಇದು ತಮಿಳುನಾಡು ಮತ್ತು ಕೇರಳದ ಗಡಿ ಭಾಗದಲ್ಲಿದೆ. ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಪುನಲೂರು ಪ್ರತೀವರ್ಷ ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಈ ಪುನಲೂರಿನ ವಿಶೇಷತೆಗಳ ಬಗ್ಗೆ ನಾವಿಂದು ತಿಳಿಯೋಣ.

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: Sarathplr07
ಪುನಲೂರ್ ಪೇಪರ್ ಮಿಲ್ಸ್ ನ ಸ್ಥಾಪನೆಯೊಂದಿಗೆ ಕೇರಳದಲ್ಲಿ ಕೈಗಾರಿಕಾ ಕ್ರಾಂತಿಯನ್ನು ತಂದ ಮೊಟ್ಟಮೊದಲ ಪಟ್ಟವೆಂದರೆ ಪುನಲೂರ್. ಪುನಲೂರ್ ನಲ್ಲಿ ಕಲ್ಲಡ ನದಿ ಹರಿಯುತ್ತಿದ್ದು, ಪುನಲ್ ಎಂದರೆ ತಮಿಳು ಮತ್ತು ಮಲಯಾಳಂನಲ್ಲಿ ನೀರು ಎಂದರ್ಥ. ಊರು ಎಂದರೆ ಸ್ಥಳ. ತಮಿಳು ಮತ್ತು ಮಲಯಾಳಂನ ಈ ಎರಡೂ ಪದಗಳು ಸೇರಿ ಪುನಲೂರ್ ಎಂಬ ಹೆಸರು ಬಂದಿದೆ. ಹೀಗಾಗಿಯೇ ಈ ಊರನ್ನು ನೀರಿನ ಪಟ್ಟಣವೆಂದು ಅನುವಾದ ಮಾಡಲಾಗುತ್ತದೆ.

ಪಶ್ಚಿಮ ಘಟ್ಟಗಳ ಮಡಿಲು

ಪಶ್ಚಿಮ ಘಟ್ಟಗಳ ಮಡಿಲು

PC: wikicommons

ಪಶ್ಚಿಮ ಘಟ್ಟಗಳ ಮುಖ್ಯ ಆಡಳಿತ ಕಚೇರಿ ಪತನಪುರಂ ತಾಲೂಕಿನಲ್ಲಿದ್ದು ಪಶ್ಚಿಮ ಘಟ್ಟಗಳ ಮತ್ತೊಂದು ಹೆಬ್ಬಾಗಿಲಾಗಿ ಇದು ಗುರುತಿಸಿಕೊಳ್ಳುತ್ತದೆ. ಈ ಪಟ್ಟಣವನ್ನು ಪಶ್ಚಿಮ ಘಟ್ಟಗಳ ಮಡಿಲು ಎಂದೂ ಕರೆಯಲಾಗುತ್ತಿದ್ದು, ಇದು ದಕ್ಷಿಣ ಭಾರತದ ಐದನೇ ದೊಡ್ಡ ಪಟ್ಟಣವೂ ಹೌದು. ಪುನಲೂರ್ ಪ್ರಸಿದ್ದವಾಗಿರುವುದು ಅನಾನಸ್ ಹಣ್ಣುಗಳಿಗೆ, ಪ್ಲೈವುಡ್, ಕಾಳುಮೆಣಸು ಮತ್ತು ಮರಮುಟ್ಟು ಸಾಮಾಗ್ರಿಗಳಿಗೆ.

 ಸಸ್ಪೆನ್ಶನ್ ಸೇತುವೆ

ಸಸ್ಪೆನ್ಶನ್ ಸೇತುವೆ

PC:Sandeepkrishnantm
ಇದರ ಜೊತೆಗೆ 19 ನೇ ಶತಮಾನದಲ್ಲಿ ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಸಸ್ಪೆನ್ಶನ್ ಸೇತುವೆಯಿಂದಲೂ ಪುನಲೂರ್ ಪ್ರಸಿದ್ದವಾಗಿದೆ. ಅಧಿಕಾರಿಗಳು ಈ ಸಸ್ಪೆನ್ಶನ್ ಬ್ರಿಡ್ಜ್ ಅನ್ನು ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕವೆಂದು ಘೋಷಿಸಿದ್ದಾರೆ. ಈ ಸೇತುವೆಯನ್ನು ಸದ್ಯ ನವೀಕರಿಸಲಾಗುತ್ತಿದ್ದು ಸಾರ್ವಜನಿಕರು ಉಪಯೋಗಿಸಲಾಗುತ್ತಿಲ್ಲ. ಪುನಲೂರಿನಲ್ಲಿ ಅಗಸ್ತ್ಯಮಲೈ ಎಂಬ ಭೌಗೋಳಿಕ ಸಂರಕ್ಷಿತ ಪ್ರದೇಶವೂ ಇದೆ.

ಕಲ್ಲಡ ನದಿ

ಕಲ್ಲಡ ನದಿ

PC: Sprouter13
ಪುನಲೂರಿನಲ್ಲಿ ನೋಡತಕ್ಕ ಪ್ರದೇಶಗಳು ಕಲ್ಲಡ ನದಿ ಪ್ರವಾಸಿಗರನ್ನು ಸೆಳೆಯುವ ಹಲವಾರು ದೃಶ್ಯವೈಭವವನ್ನು ಹೊಂದಿದೆ. ಹಬ್ಬಗಳ ಕಾಲದಲ್ಲಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನಕ್ಕೆ ಹೊರಟ ಯಾತ್ರಾರ್ಥಿಗಳು ಪುನಲೂರಿನಲ್ಲಿ ಒಮ್ಮೆ ನಿಂತು ನೋಡಿಕೊಂಡು ಹೋಗುವುದರಿಂದ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Noblevmy
ತೆನ್ಮಲ ಎಕೋ ಟೂರಿಸಂ ನ ಒಂದು ಭಾಗವಾದ ಶೆಂತ್ರುನಿ ಅರಣ್ಯ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿರುವ ಪರ್ವತ ಶ್ರೇಣಿಗಳನ್ನು ಹತ್ತಿಕೊಂಡು ಹೋಗಬಹುದಾದ್ದರಿಂದ ಈ ಸ್ಥಳ ಸಾಹಸ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಪ್ರೇಕ್ಷಣೀಯ ಸ್ಥಳವಾದ ಪಲರುವಿ ಜಲಪಾತ ಮತ್ತು ಹಳೆ ಕೋರ್ಟಲಮ್ ಜಲಪಾತ, ಪುರಾತನವಾದ ಪಟ್ಟಾಜಿ ದೇವಿ ದೇವಸ್ಥಾನ ಮತ್ತೊಂದು ಪ್ರವಾಸಿ ತಾಣವಾಗಿದೆ.

ಯಾವಾಗ ಭೇಟಿ ನೀಡಲು ಸೂಕ್ತ

ಯಾವಾಗ ಭೇಟಿ ನೀಡಲು ಸೂಕ್ತ

PC:Sandeep545
ಇಂತಹ ಆಕರ್ಷಣೀಯ ತಾಣಕ್ಕೆ ಬೇಸಿಗೆಯಲ್ಲಂತೂ ಹೋಗಲೇ ಬಾರದು, ಯಾಕೆಂದರೆ ಬೇಸಿಗೆಯಲ್ಲಿ ಪುನಲೂರು 45 ಡಿಗ್ರಿ ತಾಪಮಾನವನ್ನು ಹೊಂದಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಜನವರಿಯಿಂದ ಪೆಬ್ರವರಿ. ಈ ಸಂದರ್ಭದಲ್ಲಿ 16ಡಿಗ್ರಿ ತಾಪಮಾನವಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Sktm14
ಪುನಲೂರಿಗೆ ತಲುಪುವುದು ಏನು ದೊಡ್ಡ ವಿಷ್ಯವಲ್ಲ. ಕೊಲ್ಲಂನಿಂದ ಪುನಲೂರಿನಿಂದ ರಸ್ತೆ, ರೈಲು ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಇನ್ನು ತಿರುವನಂತಪುರಂ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವಾಗಿದೆ.
ಪುನಲೂರು ರೈಲ್ವೆ ನಿಲ್ದಾಣವು ಕೊಲ್ಲಂ, ತಿರುವನಂತಪುರಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಜಂಕ್ಷನ್, ನಾಗರಕೋಯಿಲ್, ಕನ್ಯಾಕುಮಾರಿ, ತಿರುನೆಲ್ವೇಲಿ, ಮಧುರೈ, ತಿರುಚರಪಲ್ಲಿ, ಚೆನ್ನೈ ಮತ್ತು ವೇಲಾಂಕಣ್ಣಿಗೆ ಸಂಪರ್ಕ ಕಲ್ಪಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X