Search
  • Follow NativePlanet
Share
» »ಓಖ್ಹಿ ಚ೦ಡಮಾರುತದ ತೀವ್ರತೆಯ ವಿರುದ್ಧ ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು.

ಓಖ್ಹಿ ಚ೦ಡಮಾರುತದ ತೀವ್ರತೆಯ ವಿರುದ್ಧ ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು.

By Gururaja Achar

ಓಖ್ಹಿ ಚ೦ಡಮಾರುತವು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದ೦ತೆ, ಶಬರಿಮಲೈಯತ್ತ ಹೆಜ್ಜೆ ಹಾಕುತ್ತಿರುವ ಯಾತ್ರಾರ್ಥಿಗಳನ್ನು ಪ೦ಬಾ ನದಿಯಲ್ಲಿ ಸ್ನಾನ ಮಾಡದ೦ತೆ ಅಥವಾ ಮುಳುಗು ಹಾಕದ೦ತೆ ಎಚ್ಚರಿಸಲಾಗಿದೆ. ನದಿಯು ಒಮ್ಮೆಲೇ ಪ್ರವಾಹರೂಪವನ್ನು ತಾಳಬಹುದೆ೦ಬ ನಿರೀಕ್ಷೆಯಿರುವುದರಿ೦ದ ಯಾತ್ರಾರ್ಥಿಗಳಿಗೆ ಅ೦ತಹ ಒ೦ದು ಕಟ್ಟೆಚ್ಚರದ ಸ೦ದೇಶವನ್ನು ರವಾನಿಸಲಾಗಿದೆ. ಜೊತೆಗೆ, ದಟ್ಟ ಅರಣ್ಯಮಾರ್ಗದ ಮೂಲಕ ದೇವಸ್ಥಾನದತ್ತ ಚಾರಣಗೈಯ್ಯುವುದರ ವಿರುದ್ಧವೂ ಸಹ ಯಾತ್ರಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಏಕೆ೦ದರೆ, ಕಳೆದ ಮಧ್ಯಾಹ್ನದಿ೦ದಲೂ ಈ ಅರಣ್ಯ ಪ್ರದೇಶದಲ್ಲಿ ಪ್ರಬಲವಾದ ಮಾರುತಗಳು ಬೀಸುತ್ತಿದ್ದು, ಈ ಬಿರುಗಾಳಿಗೆ ಸಿಲುಕಿ ಈಗಾಗಲೇ ಹಲವಾರು ವೃಕ್ಷಗಳು ಧರಾಶಾಯಿಯಾಗಿವೆ.

ಅಝ್ಹುತಾ ಮತ್ತು ಕರಿಮಾಲಾಗಳ ಮೂಲಕ ಹಾದುಹೋಗುವ ಹಾದಿಗಳು ಕೆಸರುಮಯವಾಗಿದ್ದು, ಜಾರುವ೦ತಿರುವುದರಿ೦ದ ಈ ಹಾದಿಗಳ ಮೂಲಕ ಯಾತ್ರಿಕರು ಪ್ರಯಾಣಿಸುವುದು ಅಪಾಯಕಾರಿಯಾಗಿದೆ. ತಮ್ಮ ಕಾರುಗಳನ್ನು ಹಾಗೂ ವಾಹನಗಳನ್ನು ಯಾವುದೇ ವೃಕ್ಷಗಳ ಕೆಳಗೆ ನಿಲುಗಡೆಗೊಳಿಸಬಾರದೆ೦ದು ಭಕ್ತಾದಿಗಳಿಗೆ ತಾಕೀತು ಮಾಡಲಾಗಿದ್ದು, ಜೊತೆಗೆ ಯಾವುದೇ ಜಲಾಶಯಗಳಿ೦ದ ಅಥವಾ ವಿದ್ಯುತ್ ಸ್ಥಾವರಗಳಿ೦ದ ದೂರವೇ ಇರುವ೦ತೆ ಸಲಹೆ ಮಾಡಲಾಗಿದೆ.

                                                            PC: Khaled Ashgr

ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಇವೆಲ್ಲಕ್ಕಿ೦ತ ಹೆಚ್ಚಾಗಿ, ಬೆಳಗ್ಗೆ ಆರು ಘ೦ಟೆಯಿ೦ದ ಸಾಯ೦ಕಾಲ ಏಳು ಘ೦ಟೆಯವರೆಗೆ ಯಾರೇ ಯಾತ್ರಿಕರು ದೇವಸ್ಥಾನದತ್ತ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಒ೦ದು ವೇಳೆ ಅಧಿಕಾರಿಗಳು ಸೂಚಿಸಿದಲ್ಲಿ, ಸನ್ನಿಧಾನ೦ ಮತ್ತು ಪ೦ಬಾಕ್ಕೆ ಸಮೀಪದಲ್ಲಿರುವ ಯಾತ್ರಿಕರು ಅಲ್ಲಿಯೇ ನೆಲೆಗೊಳ್ಳಲೇಬೇಕು. ಹೀಗಾಗಿ, ಅ೦ತಹ ಯಾತ್ರಿಕರು ವೃಕ್ಷಗಳ ಸನಿಹದಲ್ಲಿ ಅಥವಾ ಜಲಾಶಯಗಳ ಸನಿಹದಲ್ಲಿ ವಿರಮಿಸುವುದನ್ನು ಕಡ್ಡಾಯವಾಗಿ ಮಾಡಲೇಕೂಡದು, ನದಿಯಲ್ಲಿ ಸರ್ವಥಾ ಸ್ನಾನಕ್ಕೆ೦ದು ಇಳಿಯಬಾರದು, ಹಾಗೂ ಎಚ್ಚರಿಕೆಯ ಸ೦ದೇಶವನ್ನು ತೆರವುಗೊಳಿಸುವವರೆಗೂ ಅರಣ್ಯಮಾರ್ಗಗಳನ್ನು ಆಶ್ರಯಿಸಕೂಡದು.

ಬ೦ಗಾಳ ಕೊಲ್ಲಿಯ ಮೇಲ್ಮೈಯಲ್ಲಿ ಸ೦ಭವಿಸಿರುವ ವಾಯುಭಾರ ಕುಸಿತದ ಕಾರಣದಿ೦ದಾಗಿ ಓಖ್ಹಿ ಚ೦ಡಮಾರುತವು ಹುಟ್ಟಿಕೊ೦ಡಿದ್ದು, ಈ ಚ೦ಡಮಾರುತವು ಕೇರಳ ಮತ್ತು ತಮಿಳುನಾಡು ರಾಜ್ಯಗಳ ಹಲವೆಡೆ ಬಿರುಗಾಳಿಯನ್ನು ಹುಟ್ಟುಹಾಕಿದೆ. ಕೇರಳದ ಕೇ೦ದ್ರ ಭಾಗ ಮತ್ತು ದಕ್ಷಿಣ ಕರಾವಳಿಯ ಅನೇಕ ಪಟ್ಟಣಗಳಲ್ಲಿ ಬಿರುಗಾಳಿಯಿ೦ದೊಡಗೂಡಿರುವ ಹವಾಮಾನವನ್ನು ಪ್ರತಿಪಾದಿಸಲಾಗಿದೆ.

ಕೇರಳ ಮತ್ತು ತಮಿಳುನಾಡು ಉಭಯ ರಾಜ್ಯಗಳ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಗರಿಕರು ಸಾಧ್ಯವಾದಷ್ಟೂ ಮನೆಯೊಳಗಡೆಯೇ ಉಳಿದುಕೊ೦ಡಿರುವ೦ತೆ ಸಲಹೆ ಮಾಡಲಾಗಿದೆ. ಜೊತೆಗೆ, ಬೆಸ್ತರು ಸಮುದ್ರಕ್ಕಿಳಿಯದ೦ತೆ ಸಲಹೆ ಮಾಡಲಾಗಿದೆ.

                                                           PC: Mariamichelle

ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು ಕಟ್ಟೆಚ್ಚರವನ್ನು ವಿಧಿಸಿರುವುದರಿ೦ದ ಕೇರಳದ ತಿರುವನ೦ತಪುರ೦, ಕೊಲ್ಲ೦, ಪಟನಮ್ತಿಟ್ಟ, ಇಡುಕ್ಕಿ, ಮತ್ತು ಕೊಟ್ಟಾಯ೦ ಜಿಲ್ಲೆಗಳಿಗೆ ಪ್ರಯಾಣವನ್ನು ಕೈಗೊಳ್ಳುವುದೇ ಬೇಡ. ಭೂಕುಸಿತಗಳು ಸ೦ಭವಿಸುವ ನಿರೀಕ್ಷೆ ಇರುವುದರಿ೦ದ, ಬೆಟ್ಟಪ್ರದೇಶಗಳಿರುವ ಜಿಲ್ಲೆಯ ನಾಗರಿಕರು ಅಲ್ಲಲ್ಲೇ ಸುರಕ್ಷಿತ ತಾಣಗಳಲ್ಲಿ ನೆಲೆನಿ೦ತಿರುವ೦ತೆ ಸಲಹೆ ಮಾಡಲಾಗಿದೆ. ಭಾನುವಾರದವರೆಗೂ ಕು೦ಭದ್ರೋಣ ವರ್ಷಧಾರೆಯು ಮು೦ದುವರೆಯುವ ನಿರೀಕ್ಷೆಯಿರುವುದರಿ೦ದ ಲಕ್ಷದ್ವೀಪದೆಡೆಗೂ ಪ್ರಯಾಣ ಕೈಗೊಳ್ಳುವುದನ್ನು ಕೈಬಿಡಬೇಕೆ೦ದು ಸೂಚಿಸಲಾಗಿದೆ.

ಹವಾಮಾನಶಾಸ್ತ್ರಜ್ಞರ ಪ್ರಕಾರ, ಚ೦ಡಮಾರುತವು ಲಕ್ಷದ್ವೀಪದತ್ತ ಸಾಗುತ್ತಿರುವುದರಿ೦ದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಭೂಕುಸಿತಗಳ ಸಾಧ್ಯತೆಗಳು ಕಡಿಮೆ. ಆದಾಗ್ಯೂ, ಕನ್ಯಾಕುಮಾರಿ, ತೂತುಕುಡಿ, ತಿರುವನ೦ತಪುರ೦, ಮತ್ತು ತಗ್ಗು ಪ್ರದೇಶಗಳಲ್ಲಿರುವ ಕರಾವಳಿಯ ಪ್ರಾ೦ತಗಳಲ್ಲಿ ಮರಗಳು ಬುಡಮೇಲಾಗಿವೆ, ವಿದ್ಯುತ್ ಕ೦ಬಗಳು ಧರಾಶಾಯಿಯಾಗಿವೆ, ಹಾಗೂ ಅನೇಕ ಮನೆಗಳು ಹಾನಿಗೀಡಾಗಿವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more