Search
  • Follow NativePlanet
Share
» »ಬನ್ನಿರಿ, ನೋಡಿರಿ, ಆನಂದಿಸಿರಿ..ಪಾಂಡಿಚೆರಿ

ಬನ್ನಿರಿ, ನೋಡಿರಿ, ಆನಂದಿಸಿರಿ..ಪಾಂಡಿಚೆರಿ

By Vijay

ಭಾರತ ದೇಶದ ಎಲ್ಲ ಏಳು ಕೇಂದ್ರಾಡಳಿತ ಪ್ರದೇಶಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿವೆ. ಪ್ರತಿ ಸ್ಥಳಗಳೂ ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿವೆ. ಅವುಗಳಲ್ಲೊಂದಾದ ಪಾಂಡಿಚೆರಿ ಅಥವಾ ಪುದುಚೆರಿಯು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ.

ಅತಿ ಶ್ರೀಮಂತಮಯ ಇತಿಹಾಸ ಹೊಂದಿರುವ ಈ ತಾಣವು ಚೋಳರಿಂದ ಹಿಡಿದು ಪಾಂಡ್ಯರು, ವಿಜಯನಗರದ ಅರಸರು, ಬಿಜಾಪುರ ಸುಲ್ತಾನ, ಡಚ್ಚರು, ಇಂಗ್ಲೀಷರು, ಫ್ರೆಂಚರು ಹೀಗೆ ಸಾಕಷ್ಟು ಸಾಮ್ರಾಜ್ಯಗಳ ವೈಭವವನ್ನು ಕಂಡಿರುವ ಪ್ರಸಿದ್ಧ ಸ್ಥಳವಾಗಿದೆ.

ಇಲ್ಲಿ ಇನ್ನೂ ಜೀವಂತ ಇರುವ ಫ್ರೆಂಚ್ ಕಾಲೋನಿ, ಅರಬಿಂದೊ ಆಶ್ರಮ, ಮಣಕುಳ ವಿನಾಕನ ದೇವಸ್ಥಾನ ಹಿರಿಯ ಪ್ರವಾಸಿಗರನ್ನು ಆಕರ್ಷಿಸಿದರೆ, ಇನ್ನೊಂದೆಡೆ ಯುವಪಿಳಿಗೆಯನ್ನು ಹುರುದುಂಬಿಸುವ ಹೊಸ ಹೊಸ ರೀತಿಯ ಪಶ್ಚಾತ್ಯದ ಪ್ರಭಾವವಿರುವ ಕಾಫಿ ಕೇಂದ್ರಗಳು, ಮದ್ಯ ಕೇಂದ್ರಗಳು, ಉದ್ಯಾನ, ಶಾಪಿಂಗ್ ಮಳಿಗೆಗಳು, ಬೀಚುಗಳು ಪಾಂಡಿಚೆರಿಯ ಮತ್ತನ್ನು ಮತ್ತಷ್ಟು ಮಹೋನ್ನತಗೊಳಿಸುತ್ತದೆ.

ದೇಸಿ ಹಾಗು ವಿದೇಶಿ ಪ್ರವಾಸಿಗರಿಬ್ಬರಿಗೂ ಇಷ್ಟವಾಗುವ ಪಾಂಡಿ ಸ್ಥಳದ ಪರಿಸರ ಹೇಗಿರುತ್ತದೆ ಹಾಗೂ ಏನೇಲ್ಲ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದಾಗಿದೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಪಾಂಡಿಚೆರಿ:

ಪಾಂಡಿಚೆರಿ:

ಪ್ರಮುಖವಾಗಿ ಪಾಂಡಿಚೆರಿಯು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಮದ್ಯಗಳ ದರಕ್ಕೆ ತೆರಿಗೆಯಲ್ಲಿ ವಿನಾಯಿತಿ ದೊರೆಯುತ್ತದೆ. ಈ ಒಂದು ಕಾರಣದಿಂದ ಬಹುತೇಕ ವಯಸ್ಕರು ಚೆನ್ನೈ ಹಾಗೂ ಬೆಂಗಳೂರಿನಂತಹ ನಗರಗಳಿಂದ ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Sarath Kuchi

ಪಾಂಡಿಚೆರಿ:

ಪಾಂಡಿಚೆರಿ:

ಅಲ್ಲದೆ ಇಲ್ಲಿರುವ ಅಚ್ಚುಕಟ್ಟಾದ ರಸ್ತೆಗಳು, ಸ್ವಚ್ಛತೆ, ಪರಿಸರ, ಅದರಲ್ಲೂ ಪ್ರಮುಖವಾಗಿ ಅರೋವಿಲ್ ಆಶ್ರಮ ಹಾಗೂ ಸಮುದ್ರ ತೀರಗಳು ಸಾಕಷ್ಟು ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ನೋಡಲು ಯೋಗ್ಯವಾದ ಅಥವಾ ಭೇಟಿಯ ಮಹತ್ವ ಹೊಂದಿರುವ ಸಾಕಷ್ಟು ಆಕರ್ಷಣೆಗಳು ಇಲ್ಲಿವೆ.

ಚಿತ್ರಕೃಪೆ: Dey.sandip

ಪಾಂಡಿಚೆರಿ:

ಪಾಂಡಿಚೆರಿ:

ಆರೋವಿಲ್ ನಗರ (ಮುಂಜಾನೆಯ ನಗರ ಎಂದೂ ಕರೆಯುತ್ತಾರೆ) ಒಂದು ಸುಂದರ ಆಕರ್ಷಣೆ. ಪಾಂಡಿಚೆರಿಯಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿರುವ ಇದು ವಿವಿಧ ರಾಷ್ಟ್ರೀಯತೆ ಹಾಗೂ ಸಂಸ್ಕೃತಿಗಳ ಮಿಶ್ರಣವೆಂದೇ ಹೇಳಬಹುದು. ಇಲ್ಲಿ 50 ವಿವಿಧ ರಾಷ್ಟ್ರಗಳ ಜನರು ಬಂದು ನೆಲೆಸಿರುವ ಪಟ್ಟಣವಿದೆ ಹಾಗೂ ಇದನ್ನು ಜಾಗತಿಕ ನಗರ ಎಂದೂ ಸಹ ಕರೆಯಲಾಗುತ್ತದೆ. ಅರೋವಿಲ್ ನಲ್ಲಿರುವ ಮಾತ್ರಿ ಮಂದಿರ.

ಚಿತ್ರಕೃಪೆ: Santoshnc

ಪಾಂಡಿಚೆರಿ:

ಪಾಂಡಿಚೆರಿ:

ಶ್ರೀ ಅರಬಿಂದೊ ಘೋಷ್ ಅವರು1926 ರಲ್ಲಿ ಅರಬಿಂದೋ ಆಶ್ರಮವನ್ನು ಇಲ್ಲಿ ಕಟ್ಟಿಸಿದರು. 'ತಾಯಿ' ಎಂದೆ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಮೀರಾ ಅಲ್ಫಾಸ್ಸಾ ಅವರು ನವೆಂಬರ್ 24, 1926 ರಿಂದ ಅವರ ಮರಣವಾಗುವ ತನಕ ಈ ಆಶ್ರಮದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದರು. ಅರಬಿಂದೊ ಅವರು 1950 ರಲ್ಲಿ ಮರಣರಾದ ನಂತರ ಕಟ್ಟಲಾದ ಅರಬಿಂದೋ ಟ್ರಸ್ಟ್ ನ್ ಮುಖ್ಯಸ್ಥರೂ ಇವರೇ ಆಗಿದ್ದರು. ಇಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ ಹಾಗೂ ಮೊದಲೇ ಅನುಮತಿ ಪಡೆಯದೆ ಒಳಗೆ ಛಾಯಾಚಿತ್ರ ತೆಗೆಯಲು ಸಾಧ್ಯವಿಲ್ಲ. ಈ ಆಶ್ರಮ ಬೆಳಗ್ಗೆ ಎಂಟರಿಂದ ಮಧ್ಯಾಹ್ನ 12 ರ ತನಕ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6 ರ ತನಕ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿರುತ್ತದೆ.

ಚಿತ್ರಕೃಪೆ: Praveen

ಪಾಂಡಿಚೆರಿ:

ಪಾಂಡಿಚೆರಿ:

ಫ್ರೆಂಚ್ ಯುದ್ಧ ಸ್ಮಾರಕವನ್ನು ಮೊದಲ ವಿಶ್ವಯುದ್ಧದಲ್ಲಿ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಕಟ್ಟಲಾಗಿದೆ. ಇದನ್ನು 1971 ರಲ್ಲಿ ಕಟ್ಟಲಾಯಿತು ಹಾಗೂ ಪ್ರತಿ ವರ್ಷ ಬಾಸ್ಟೈಲ್ ದಿನದಂದು ಅಂದರೆ 14 ಜುಲೈ ರಂದು ಇಲ್ಲಿ ಈ ಸ್ಮಾರಕ ಕಟ್ಟಡವನ್ನು ಸಿಂಗಾರ ಗೊಳಿಸಲಾಗುತ್ತದೆ. ಈ ದಿನದಂದು ಫ್ರೆಂಚ್ ಯುದ್ಢದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂದಿಗೂ ಪಾಂಡಿಚೆರಿ ಮತ್ತು ಫ್ರೆಂಚರ ನಡುವೆ ಇರುವ ಉತ್ತಮ ಸಂಬಂಧಕ್ಕೆ ಇದೇ ಸಾಕ್ಷಿಯಾಗಿದೆ.

ಚಿತ್ರಕೃಪೆ: shrikant rao

ಪಾಂಡಿಚೆರಿ:

ಪಾಂಡಿಚೆರಿ:

ಪಾಂಡಿಚೆರಿ ವಸ್ತುಸಂಗ್ರಹಾಲಯ ನೋಡಲೇ ಬೇಕಾದ ಪ್ರಮುಖ ಸ್ಥಳವಾಗಿದೆ. ಈ ಸಂಗ್ರಹಾಲಯದಲ್ಲಿ ಅರಿಕಮೇಡು ರೋಮನ್ ವಸತಿ ಪ್ರದೇಶದ ಬಹಳಷ್ಟು ವಾಸ್ತು ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೆ ಗತ ಕಾಲದ ಕಾಲದ ಪಳೆಯುಳಿಕೆಗಳೂ ಇಲ್ಲಿ ಸಂಗ್ರಹಿಸಲ್ಪಟ್ಟಿವೆ. ಇಲ್ಲಿರುವ ಬಹಳಷ್ಟು ವಸ್ತುಗಳು ಚೋಳ ಮತ್ತು ಪಲ್ಲವ ರಾಜವಂಶದ ಕಾಲದ ವಸ್ತುಗಳಾಗಿವೆ. ಇವುಗಳಲ್ಲಿ ಕಂಚು ಮತ್ತು ಕಲ್ಲಿನ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿವೆ.

ಚಿತ್ರಕೃಪೆ: Prabhupuducherry

ಪಾಂಡಿಚೆರಿ:

ಪಾಂಡಿಚೆರಿ:

ಪಾಂಡಿಚೆರಿಯನ್ನು ದೇಶದ ಎಲ್ಲ ಭಾಗಗಳಿಂದ ಸುಲಭವಾಗಿ ತಲುಪಬಹುದಾಗಿದೆ. ಏಸ್ಟ್ ಕೋಸ್ಟ್ ರೋಡ್ (ಪೂರ್ವ ಕರಾವಳಿ ರಸ್ತೆ) ಮೂಲಕ ಚೆನ್ನೈನಿಂದ ಪಾಂಡಿಚೆರಿಗೆ ಮಹಾಬಲಿಪುರಂ ಮೂಲಕ ಸುಲಭವಾಗಿ ತೆರಳಬಹುದಾಗಿದೆ. ದೆಹಲಿ ಹಾಗೂ ಮಂಗಳೂರಿನೊಂದಿಗೆ ರೈಲಿನ ಮೂಲಕ ಪಾಂಡಿಚೆರಿ ಸಂಪರ್ಕ ಸಾಧಿಸುತ್ತದೆ. ಪಾಂಡಿಚೆರಿ ಮಹಾಬಲಿಪುರಂ ಹಾಗೂ ಚೆನ್ನೈನಿಂದ ಕ್ರಮವಾಗಿ 100, 160 ಕಿ.ಮೀ ಗಳಷ್ಟು ಅಂತರದಲ್ಲಿದೆ.

ಚಿತ್ರಕೃಪೆ: N D Senthil Ram

ಪಾಂಡಿಚೆರಿ:

ಪಾಂಡಿಚೆರಿ:

ನಗರದಲ್ಲಿರುವ ಅರಬಿಂದೊ ಮುದ್ರಣಾಲಯ.

ಚಿತ್ರಕೃಪೆ: Vinamra Agrawal

ಪಾಂಡಿಚೆರಿ:

ಪಾಂಡಿಚೆರಿ:

ಪಾಂಡಿಚೆರಿಯಲ್ಲಿರುವ ಪ್ಯಾರಾಡೈಸ್ ಕಡಲ ತೀರದ ದೃಶ್ಯ.

ಚಿತ್ರಕೃಪೆ: Anuradha Sengupta

ಪಾಂಡಿಚೆರಿ:

ಪಾಂಡಿಚೆರಿ:

ಪಾಂಡಿಚೆರಿಯನ್ನು ಚೆನ್ನೈ ಹಾಗೂ ಮಹಾಬಲಿಪುರಂಗಳೊಂದಿಗೆ ಸಂಪರ್ಕ ಬೆಸೆಯುವ ಈಸ್ಟ್ ಕೋಸ್ಟ್ ರೋಡ್ ಹೆದ್ದಾರಿ.

ಚಿತ್ರಕೃಪೆ: Soham Banerjee

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು. ನಿರಾಳ ಭಾವವನ್ನು ಸೂಚಿಸುವ ಪ್ರಶಾಂತ ಸಮುದ್ರ.

ಚಿತ್ರಕೃಪೆ: Soham Banerjee

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು. ಪಾಂಡಿಚೆರಿಯಲ್ಲಿರುವ ಲೀ ಪಾಂಡಿ ಎಂಬ ಸುಂದರ ರಿಸಾರ್ಟು.

ಚಿತ್ರಕೃಪೆ: Saad Faruque

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು. ಪಾಂಡಿಯಲ್ಲಿರುವ ಒಂದು ಉದ್ಯಾನ.

ಚಿತ್ರಕೃಪೆ: Roshan Sam

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು. ಪಾಂಡಿಚೆರಿಯ ಒಂದು ಸಾಮಾನ್ಯ ಬೀದಿ.

ಚಿತ್ರಕೃಪೆ: Joseph Jayanth

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Nishanth Jois

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು. ನೀಲಾಕಾಶ ನೀಲಿ ಸಾಗರ.

ಚಿತ್ರಕೃಪೆ: Savio Sebastian

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: pnfromtn

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Praveen

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Koshy Koshy

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: yogasanft

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Alessandro Malatesta

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Raj

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Soham Banerjee

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Vinamra Agrawal

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Pratheesh Prakash

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Sandip Bhattacharya

ಚಿತ್ರಕೃಪೆ: Ryan

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Praveen

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Aleksandr Zykov

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Aleksandr Zykov

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Ernesto Perez

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: V.v

ಪಾಂಡಿಚೆರಿ:

ಪಾಂಡಿಚೆರಿ:

ಪ್ರೀತಿಯಿಂದ ಪಾಂಡಿ ಎಂದು ಕರೆಯಲ್ಪಡುವ ಪಾಂಡಿಚೆರಿಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: V.v

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more