Search
  • Follow NativePlanet
Share
» »ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಪ್ರಪಂಚದಲ್ಲಿನ ಏಕೈಕ 13 ಅಂತಸ್ತಿನ ದೇವಾಲಯವಿದು.... !

ಪ್ರಾವಸಿಗರು ಇಲ್ಲಿ ಅನೇಕ ಸಾಹಸ ಕ್ರೀಡೆಗಳನ್ನು, ಟ್ರೆಕ್ಕಿಂಗ್ ಯಾತ್ರೆಗಳಂತಹದನ್ನು ಮಾಡಲು ಇಷ್ಟಪಡುತ್ತಾರೆ. ಈ ಪ್ರದೇಶವು ಮುಖ್ಯವಾಗಿ ರಿವರ್ ರಾಪ್ಟಿಂಗ್‍ಗೆ ಪ್ರಸಿದ್ಧಿ ಹೊಂದಿದೆ. ಅನೇಕ ಅಂಶಗಳಿಂದ ಹಾಗು ವಿಶೇಷಗಳಿಂದ ಸಮ್ಮಿಲನಗೊಂಡ ಈ ಪ್ರದೇಶ

By Sowmyabhai

ಉತ್ತರಾಖಂಡ ರಾಜ್ಯದಲ್ಲಿರುವ ಪ್ರಮುಖ ಆಧ್ಯಾತ್ಮಿಕ ಪಟ್ಟಣ ಮತ್ತು ಹಿಂದೂಗಳ ಪವಿತ್ರವಾದ ಪುಣ್ಯ ಕ್ಷೇತ್ರವೇ ರಿಶಿಕೇಷ್. ಈ ಪಟ್ಟಣವನ್ನು ದೇವಭೂಮಿ ಎಂದು ಕೂಡ ಕರೆಯುತ್ತಾರೆ. ಪವಿತ್ರ ಗಂಗಾ ನದಿ ತೀರದಲ್ಲಿರುವ ರಿಶಿಕೇಷ್‍ದ ಪಕ್ಕದಲ್ಲಿಯೇ ಇರುವ ಹಿಮಾಲಯವನ್ನು ಭೇಟಿ ನೀಡುವ ಸಲುವಾಗಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಡೆಹ್ರಾಡೂನ್ ಜಿಲ್ಲೆಯಲ್ಲಿನ ಈ ಪಟ್ಟಣವು ಪುರಾತನವಾದ ದೇವಾಲಯಗಳು ಮತ್ತು ಆಶ್ರಮಗಳನ್ನು ಹೊಂದಿದ್ದು, ವಿಶ್ವವಿಖ್ಯಾತಿಯನ್ನು ಹೊಂದಿದೆ. ಕೇವಲ ದೇವಾಲಯಗಳು, ಆಶ್ರಮಗಳೇ ಅಲ್ಲದೇ ಇನ್ನು ಅನೇಕ ವಿಶೇಷಗಳು ಕೂಡ ಇಲ್ಲಿದೆ.

ಅವುಗಳಲ್ಲಿ ಪ್ರಾವಸಿಗರು ಇಲ್ಲಿ ಅನೇಕ ಸಾಹಸ ಕ್ರೀಡೆಗಳನ್ನು, ಟ್ರೆಕ್ಕಿಂಗ್ ಯಾತ್ರೆಗಳಂತಹದನ್ನು ಮಾಡಲು ಇಷ್ಟಪಡುತ್ತಾರೆ. ಈ ಪ್ರದೇಶವು ಮುಖ್ಯವಾಗಿ ರಿವರ್ ರಾಪ್ಟಿಂಗ್‍ಗೆ ಪ್ರಸಿದ್ಧಿ ಹೊಂದಿದೆ. ಅನೇಕ ಅಂಶಗಳಿಂದ ಹಾಗು ವಿಶೇಷಗಳಿಂದ ಸಮ್ಮಿಲನಗೊಂಡ ಈ ಪ್ರದೇಶದಲ್ಲಿ ಪ್ರವಾಸಿಗರು, ಭಕ್ತರು ಮತ್ತು ಸಾಹಸ ಪ್ರವಾಸಿಗರು ಪ್ರವಾಸಕ್ಕಾಗಿ ಕೆಲವು ಮುಖ್ಯವಾದ ಪ್ರದೇಶಗಳು ಲೇಖನದ ಮೂಲಕ ತಿಳಿದುಕೊಳ್ಳೋಣ.

1.ಕುನ್ಜಪುರಿ ದೇವಾಲಯ

1.ಕುನ್ಜಪುರಿ ದೇವಾಲಯ

Photo Courtesy:Travel & Shit

ಕುನ್ಜಪುರಿ ದೇವಾಲಯವು ರಿಶಿಕೇಷ್ ಪಟ್ಟಣದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕದಾದ ಬೆಟ್ಟದ ಮೇಲಿದೆ. ಈ ದೇವಾಲಯದ ಸಮೀಪದಲ್ಲಿ ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯದಲ್ಲಿ ವಾತಾವರಣವು ಆಹ್ಲಾಕರವಾಗಿರುತ್ತದೆ. ಈ ದೇವಾಲಯವು ಶಿವಾಲಿಕ್ ಪರ್ವತ ಶ್ರೇಣಿ ಪಂಕ್ತಿಯಲ್ಲಿರುವ 13 ಪ್ರಮುಖ ದೇವಾಲಯಗಳಲ್ಲಿ ಇದು ಕೂಡ ಒಂದು. ಈ ದೇವಾಲಯವನ್ನು ಭೇಟಿ ನೀಡಿದಾಗ ಪ್ರವಾಸಿಗರು ಚುಖಂಬ, ಸ್ವರ್ಗ, ರೋಹಿಣಿ, ಬಂದೆರ್ಪುನ್ಸ್ ಮತ್ತು ಗಂಗೋತ್ರಿಯ ಜೊತೆ ಗರ್ವಾಲ್ ಹಿಮಾಲಯದ ಶಿಖರವನ್ನು ನೋಡಿ ಆನಂದಿಬಹುದು.

2.ಭಾರತ ಮಂದಿರ್

2.ಭಾರತ ಮಂದಿರ್

Photo Courtesy: Rishikesh Writings

ಭಾರತ ಮಂದಿರ್ ಆದಿಗುರು ಶಂಕರಾಚಾರ್ಯರ ಕೈಯಲ್ಲಿ ಪವಿತ್ರವಾದ ಗಂಗಾನದಿ ತೀರದಲ್ಲಿ ಪುರಾತನವಾದ ವಿಷ್ಣುಮೂರ್ತಿ ದೇವಾಲಯವನ್ನು ಸ್ಥಾಪಿಸಲಾಯಿತು ಎಂದು ನಂಬಲಾಗಿದೆ. ದೇವಾಲಯದಲ್ಲಿರುವ ವಿಷ್ಣು ವಿಗ್ರಹವು ಶಾಲಿಗ್ರಾಮದ ಕಲ್ಲಿನ ಸ್ವಲ್ಪ ತುಂಡನ್ನು ಉಪಯೋಗಿಸಿ ತಯಾರು ಮಾಡಲಾಗಿದ್ದು. ಆ ಕಲ್ಲು, ಹಿಂದೂಗಳಿಗೆ ಅತ್ಯಂತ ಪವಿತ್ರವಾದುದು ಎಂದು ಭಾವಿಸಲಾಗುತ್ತದೆ 9 ಒಂದಕ್ಕೆ ಒಂದು ಅಂಟಿಕೊಂಡಿರುವ ತ್ರಿಭುಜಾಕಾರದಿಂದ ಕೂಡಿರುವ ಒಂದು ಸುಂದರವಾದ ಶ್ರೀ ಯಂತ್ರವನ್ನು ದೇವಾಲಯದ ಒಳಭಾಗದಲ್ಲಿ ಕಾಣಬಹುದು. ಬಸಂತ್ ಪಂಚಮಿ ಎಂಬ ಪ್ರಮುಖ ಹಿದೂ ಧರ್ಮದ ಹಬ್ಬವನ್ನು ಈ ದೇವಾಲಯದಲ್ಲಿ ಉತ್ಸವವನ್ನು ಮಾಡುತ್ತಾರೆ.

3.ಲಕ್ಷ್ಮಣ ದೇವಾಲಯ

3.ಲಕ್ಷ್ಮಣ ದೇವಾಲಯ

Photo Courtesy: Kori Brus

ರಿಶಿಕೇಷ್‍ನಲ್ಲಿರುವ ಪ್ರಧಾನವಾದ ಆಕರ್ಷಣೆಯಲ್ಲಿ ಒಂದಾಗಿ ಹೇಳಲಾಗುವ ಈ ಲಕ್ಷ್ಮಣ ದೇವಾಲಯವು ಪಟ್ಟಣಕ್ಕೆ ಸುಮಾರು 5 ಕಿ.ಮೀ ದೂರದಲ್ಲಿದೆ. ಲಕ್ಷ್ಮಣ ಮಂದಿರ ರಾಮನ ಸಹೋದರನಾದ ಲಕ್ಷ್ಮಣನಿಗೆ ಅಂಕಿತವಾದ ಪುರಾತನವಾದ ದೇವಾಲಯವಾಗಿದೆ. ಈ ದೇವಾಲಯವು ಪವಿತ್ರವಾದ ಗಂಗಾ ನದಿ ತೀರದಲ್ಲಿದೆ. ದೇವಾಲಯದ ಗೋಡೆಯ ಮೇಲೆ ಕೆತ್ತನೆ ಮಾಡಲಾದ ಚಿತ್ರಗಳನ್ನು ಇಲ್ಲಿ ಕಾಣಬಹುದು.

4.ನೀಲಕಂಠ ಮಹಾದೇವ ದೇವಾಲಯ

4.ನೀಲಕಂಠ ಮಹಾದೇವ ದೇವಾಲಯ

Photo Courtesy: Munish Chandel

ನೀಲಕಂಠ ಮಹಾದೇವ ದೇವಾಲಯ, ರಿಶಿಕೇಷ್‍ನಲ್ಲಿರುವ ಪ್ರಮುಖ ಧರ್ಮ ಕೇಂದ್ರವಾಗಿದೆ. ಸಮುದ್ರ ಮಟ್ಟಕ್ಕೆ ಸುಮಾರು 1330 ಮೀಟರ್ ಎತ್ತರದಲ್ಲಿರುವ ಬೆಟ್ಟದ ಮೇಲೆ ಇರುವ ಈ ಮಂದಿರದಿಂದ ವಿಶ್ನಕೂಟ್, ಬ್ರಹ್ಮಕೂಟ್ ಮತ್ತು ಮನಿಕೂಟ್ ಬೆಟ್ಟಗಳ ಅದ್ಭುತವಾದ ವೀಕ್ಷಣೆಯನ್ನು ಕಾಣಬಹುದು. ಈ ದೇವಾಲಯವು ಹಿಂದೂ ಧರ್ಮದ ದೇವರಿಗೆ ಅಂಕಿತವಾಗಿದೆ. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಶ್ರಾವಣ ಮಾಸದಲ್ಲಿ, ಶಿವರಾತ್ರಿಯ ಸಮಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

5.ಶಿವಪುರಿ

5.ಶಿವಪುರಿ

Photo Courtesy: Dr Satendra

ಶಿವಪುರಿ ರಿಶಿಕೇಷ್‍ನಿಂದ 16 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕದಾದ ಗ್ರಾಮವಾಗಿದೆ. ಹಿಂದೂ ಧರ್ಮದ ದೈವವಾದ ಪರಮಶಿವನಿಗೆ ಅಂಕಿತವಾದ ಕೆಲವು ದೇವಾಲಯಗಳು ಇರುವುದರಿಂದ ಈ ಸ್ಥಳವು ಶಿವನ ನಿವಾಸ ಸ್ಥಾನ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಶಿವಪುರಿ ಎಂಬ ಹೆಸರು ಬಂದಿದೆ. ಸಾಹಸ ಉತ್ಸಾಹಿಗಳಿಗೆ ಶಿವಪುರಿಯಿಂದ ರಿಶಿಕೇಷ್‍ಗೆ ತಪ್ಪದೇ ಭೇಟಿ ನೀಡಿ ರೊಮಾಂಚನಕಾರಿ ಅನುಭವನ್ನು ಪಡೆಯಿರಿ.

6.ಸ್ವರ್ಗ ನಿವಾಸ ದೇವಾಲಯ

6.ಸ್ವರ್ಗ ನಿವಾಸ ದೇವಾಲಯ

Photo Courtesy: Michael Ferranti

ಸ್ವರ್ಗ ನಿವಾಸ ದೇವಾಲಯವು ಸುಮಾರು 13 ಅಂತಸ್ತನ್ನು ಹೊಂದಿರುವ ಒಂದು ಭಾರಿ ಭವನವಾಗಿದೆ. ಇದು ಕೇಸರಿ ಬಣ್ಣವನ್ನು ಹೊಂದಿರುವ ಅದ್ಭುತವಾದ ದೇವಾಲಯ. ಈ 13 ಅಂತಸ್ತುಗಳ ದೇವಾಲಯವು ಪ್ರತಿ ಅಂತಸ್ತಿನಲ್ಲಿ ವಿವಿಧ ಹಿಂದೂ ಧರ್ಮ ದೇವತೆಗಳ ಅನೇಕ ವಿಗ್ರಹಗಳು ಇರುವುದನ್ನು ಕಾಣಬಹುದು. ಗಂಗಾ ನದಿ ಮತ್ತು ರುಷಿಕೆಷ್‍ನಲ್ಲಿ ಈ ದೇವಾಲಯದಿಂದ ಮಂತ್ರಮುಗ್ಧರನ್ನಾಗಿಸುವ ಅದ್ಭುತವಾದ ವೀಕ್ಷಣೆ ಲಭಿಸುತ್ತದೆ.

 7.ತೇರಾ ಮಂಜಿಲ್ ದೇವಾಲಯ

7.ತೇರಾ ಮಂಜಿಲ್ ದೇವಾಲಯ

Photo Courtesy: Sunrider007

ರಿಶಿಕೇಷ್ ಸಮೀಪದಲ್ಲಿರುವ ತೇರಾ ಮಂಜಿಲ್ ದೇವಾಲಯವು ಪ್ರಪಂಚದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಮತ್ತು ವಿವಿಧ ಹಿಂದೂ ದೇವತಾ-ದೇವತೆಗಳಿಗೆ ಅಂಕಿತವಾದ 13 ಅಂತಸ್ತಿನ ಏಕೈಕ ದೇವಾಲಯ. ಇತರ ಸಾಧಾರಣ ದೇವಾಲಯಕ್ಕೆ ಹಾಗು ಇತರ ದೇವಾಲಯಕ್ಕೆ ಇದೇ ವ್ಯತ್ಯಾಸ. 13 ಅಂತಸ್ತಿನ ಈ ದೇವಾಲಯದಿಂದ ಸೂರ್ಯಾಸ್ತ ಸಮಯದ ವೀಕ್ಷಣೆಯು ಅದ್ಭುತವಾದುದು. ದೇವಾಲಯದ ಸುತ್ತ ಅದ್ಭುತವಾದ ಸೌಂದರ್ಯವನ್ನು ನೂರಾರು ಮಂದಿ ಭಕ್ತರು ಹಾಗು ಪ್ರವಾಸಿಗರಿಗೆ ಇದು ಆಕರ್ಷಿಸುತ್ತದೆ.

8.ಗೀತಾ ಭವನ

8.ಗೀತಾ ಭವನ

Photo Courtesy: Watercooker

ಗೀತಾ ಭವನ ಗಂಗಾ ನದಿ ತೀರದಲ್ಲಿರುವ ಪುರಾತನವಾದ ದೇವಾಲಯ. ಇಲ್ಲಿ ಮಹಾಭಾರತ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಚಿತ್ರಗಳು ಗೋಡೆಗಳ ಮೇಲೆ ಕೆತ್ತನೆ ಮಾಡಿದ್ದಾರೆ. ಪವಿತ್ರವಾದ ಗಂಗಾ ನದಿಯಲ್ಲಿ ಸ್ನಾನ ಮಾಡಿ ಭಕ್ತರು ಗೀತಾ ಭವನದಲ್ಲಿ ಧ್ಯಾನವನ್ನು ಮಾಡಬಹುದು. ಹಾಗೆಯೇ ಸಾಧುಗಳ ಭೋದನೆಗಳೂ ಕೂಡ ಕೇಳಿಸಿಕೊಳ್ಳಬಹುದು. ಇಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಕೊಠಡಿಗಳು ಕೂಡ ಇದೆ.

9.ಓಂಕಾರನಂದ ಆಶ್ರಮ

9.ಓಂಕಾರನಂದ ಆಶ್ರಮ

Photo Courtesy:Watercooker

ಪ್ರಮುಖ ಹಿಂದೂ ತತ್ವಗಾರ, ಮಹರ್ಷಿ ಮತ್ತು ರಚನೆಗಾರನಾದ ಓಂಕಾರನಂದ ಸರಸ್ವತಿ 1967ರ ವರ್ಷದಲ್ಲಿ ಪವಿತ್ರ ಗಂಗಾ ನಧಿ ತೀರದಲ್ಲಿ ಓಂಕಾರನಂದ ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮದಲ್ಲಿ ಆಧ್ಯಾತ್ಮಿಕ ಕಾರ್ಯಕಲಾಪಗಳು, ಯೋಗ ಶಿಕ್ಷಣ ತರಗತಿ ಮತ್ತು ಯಜ್ಞಗಳು ನಿರ್ವಹಿಸುತ್ತಾರೆ. ಇಲ್ಲಿ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X