Search
  • Follow NativePlanet
Share
» »ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...

ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲಿ ನೋಡಲೇಬೇಕಾದ ಅನೇಕ ಪ್ರದೇಶಗಳಿವೆ. ಆ ಪ್ರದೇಶಗಳನ್ನು ಮಳೆಗಾಲದಲ್ಲಿಯೇ ನೋಡಬೇಕು. ಆ ಸುಂದರವಾದ ಪ್ರದೇಶಗಳು ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಅದೇ ವಿಧವಾಗಿ ಸಮುದ್ರ ತೀರದ ಮರಳುಗಳು ನವ ವಧುವಿನಂತೆ ಕಂಗೊಳಿಸಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಮಳೆಗಾಲದಿಂದಾಗಿ ಕೆಲವು ತಿಂಗಳಿಂದ ನಿಶ್ಯಬ್ಧವಾಗಿದ್ದ ಜಲಪಾತಗಳು ಕೂಡ ಹಾಲ್ನೊರೆಯಂತೆ ಧುಮುಕುತ್ತಿದೆ. ಕರ್ನಾಟಕವು ಅನೇಕ ಸಮುದ್ರ ತೀರ ಪ್ರದೇಶಗಳು, ಪರ್ವತ ಶಿಖರಗಳು, ಜಲಪಾತಗಳ‌ ನಿಲಯ. ಹಾಗಾಗಿ ದೇಶದ ಮೂಲೆಮೂಲೆಗಳಿಂದ ನಮ್ಮ ಕರ್ನಾಟಕದ ಸೌಂದರ್ಯವನ್ನು ಕಾಣಲು ಪ್ರವಾಸಿಗರು ಹಾತೊರೆಯುತ್ತಾರೆ. ಲೇಖನದ ಮೂಲಕ ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಪ್ರಸಿದ್ಧ ತಾಣಗಳ ಬಗ್ಗೆ ತಿಳಿಯೋಣ.

1. ಗೋಕರ್ಣ

1. ಗೋಕರ್ಣ

PC:Axis of eran

ಗೋಕರ್ಣ ಬೀಚ್ ಗೋಕರ್ಣ ಪಟ್ಟಣದ ಹತ್ತಿರದಲ್ಲೇ ಇರುವ ಮತ್ತೊಂದು ಜನಪ್ರಿಯ ಕರಾವಳಿ ಪ್ರದೇಶ. ಈ ಸಮುದ್ರ ತೀರವನ್ನು ತಲುಪಿದ ನಂತರ, ಪ್ರವಾಸಿಗರು ಒಂದೆಡೆ ಪಶ್ಚಿಮ ಘಟ್ಟಗಳನ್ನು ಮತ್ತೊಂದೆಡೆಗೆ ಅರೇಬಿಯನ್ ಸಮುದ್ರದ ನೋಟವನ್ನು ಸವಿಯಬಹುದು. ಸ್ಥಳೀಯ ಉಪಾಹಾರ ಅಂಗಡಿಗಳ ಭಕ್ಷ್ಯಗಳು, ಜಲ ಕ್ರೀಡೆಗಳು ಮತ್ತು ಸೂರ್ಯ ಸ್ನಾನ ಗೋಕರ್ಣ ತೀರದಲ್ಲಿ ಅನುಭವಿಸಬಲ್ಲ ಇತರೆ ಚಟುವಟಿಕೆಗಳು ಈ ಬೀಚ್ ಗೆ ಭೇಟಿ ಕೊಡುವ ಪ್ರಮುಖ ಕಾರಣ ಇದು ನೆಲೆಸಿರುವ ಸ್ಥಳದಮಹತ್ವವೆಂದರೆ ತಪ್ಪಾಗಲಾರದು. ನೋಡಬೇಕಾಗಿರುವ ಪ್ರವಾಸಿ ಕೇಂದ್ರಗಳು,

ಮಹಾಬಲೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ, ಓಂ ಬೀಚ್ ಗಳಿವೆ.

2.ಕುದುರೆಮುಖ

2.ಕುದುರೆಮುಖ

PC:YOUTUBE

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖವು ಒಂದು ಗುಡ್ಡ ಪ್ರದೇಶವಾಗಿದೆ ಹಾಗೂ ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ. ತನ್ನ ಯಥೇಚ್ಛ ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯದಿಂದಾಗಿ ಜೀವವೈವಿಧ್ಯದ ಪ್ರಮುಖ ಕೇಂದ್ರವಾಗಿದೆ. ಕುದುರೆಮುಖದ ಸುತ್ತಮುತ್ತ ಹಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಲಕ್ಯಾ ಡ್ಯಾಮ್‌, ರಾಧಾಕೃಷ್ಣ ದೇವಸ್ಥಾನ, ಗಂಗಾಮೂಲ ಬೆಟ್ಟ ಮತ್ತು ಹನುಮಾನ್‌ ಗುಂಡಿ ಜಲಪಾತಗಳು, ಇಲ್ಲಿ ನೀರು ಸುಮಾರು 100 ಅಡಿ ಮೇಲಿನಿಂದ ಕೆಳಗೆ ಕಲ್ಲಿನ ಮೇಲೆ ಬೀಳುತ್ತದೆ. ಕುದುರೆಮುಖಕ್ಕೆ ನೀವು ಭೇಟಿ ನೀಡಿದರೆ ಈ ಪ್ರದೇಶವು ಪಿಕ್‌ನಿಕ್‌ಗೆ ಅತ್ಯುತ್ತಮ ಸ್ಥಳ.

3.ಜೋಗ ಜಲಪಾತ

3.ಜೋಗ ಜಲಪಾತ

PC:Shuba

ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ ನೋಡುವುದೇ ಚಂದ. ರಾಜ, ರಾಣಿ, ರೋವರ್ ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಅಪ್ಪಟ ಸ್ಫಟಿಕದಂತೆ ಕಾಣುವ ಜಲಪಾತದ ನೋಟ ಮನದುಂಬಿಸುತ್ತದೆ. ಅದ್ಭುತವಾದ ನೀರಿನ ಪದರದಂತೆ ಕಾಣುವ ಜಲಪಾತವು, ನೇರವಾಗಿ ನೆಲಕ್ಕೆ ಜೋಡಿಸುತ್ತಿರುವ ಸ್ಫಟಿಕದ ಮಾಲೆಯಂತೆ ಕಾಣುತ್ತದೆ. 830 ಅಡಿಗಳಷ್ಟು ಎತ್ತರದಿಂದ ಬೀಳುವ ಶರಾವತಿ ನೀರು ಬಂಡೆಗಳ ಸಾಲಿನಲ್ಲಿ ಬರುವ ಆಳವಾದ ಕಲ್ಲು ಮತ್ತು ಇತರೆ ತೊಡಕುಗಳಿಗೆ ಧೃತಿಗೆಡದೆ ಮುನ್ನುಗ್ಗುವುದನ್ನು ನೋಡುವುದೇ ಒಂದು ಹಬ್ಬ. ಈ ಸುಂದರ ದೃಶ್ಯವನ್ನು ನೋಡಲೆಂದೇ ವಿಶ್ವದೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಕರ್ಷಿತರಾಗಿ ಬರುತ್ತಲೇ ಇದ್ದಾರೆ.

4. ಶಿವಮೊಗ್ಗ

4. ಶಿವಮೊಗ್ಗ

PC:YOUTUBE

ಶಿವಮೊಗ್ಗ ಕರ್ನಾಟಕದ ಸಂಪ್ರದಾಯ, ಸಾಂಸ್ಕೃತಿಕ ರಾಜಧಾನಿಯಾಗಿ ಹೆಸರುವಾಸಿಯಾಗಿದೆ. ಇಲ್ಲಿರುವ ಫಲವತ್ತಾದ ಭೂಮಿ, ಸುಂದರವಾದ ಜಲಪಾತಗಳು, ಹಚ್ಚ ಹಸಿರಿನಿಂದ ಕೂಡಿರುವ ಗಿರಿಶಿಖರಗಳು ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಕರ್ನಾಟಕದಲ್ಲಿನ ಈ ಸುಂದರ ತಾಣಕ್ಕೆ ಮಳೆಗಾಲದಲ್ಲಿ ಎಂದೇ ಪ್ರತ್ಯೇಕವಾಗಿ ಅನೇಕ ಪ್ರವಾಸಿಗರು ಹೋಗುವುದುಂಟು. ಆಗಸ್ಟ್ ತಿಂಗಳು ಈ ತಾಣಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅತಿಶಯೋಕ್ತಿಯಲ್ಲ. ತುಂಗಾ ಭದ್ರಾ ಶರಾವತಿ ವರದಾ ಎಂಬ ಪವಿತ್ರ ನದಿಗಳನ್ನು ಶಿವಮೊಗ್ಗ ಹೊಂದಿದೆ. ಅದೇ ವಿಧವಾಗಿ ಈ ಶಿವಮೊಗ್ಗವನ್ನು ಗಂಗರು , ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು , ವಿಜಯನಗರದ ರಾಜರು ಕೂಡ ಆಳ್ವಿಕೆಯನ್ನು ನಡೆಸಿದ್ದಾರೆ. ಆದುದರಿಂದಲೇ ಈ ಅದ್ಭುತವಾದ ಶಿಲ್ಪಕಲೆಗಳಿಂದ ಕೂಡಿರುವ ಭವನಗಳು, ದೇವಾಲಯಗಳನ್ನು ಕೂಡ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X