
ಯೌವನದಲ್ಲಿರುವಾಗ ಎಲ್ಲೆಲ್ಲಾ ತಿರುಗಾಡಬೇಕೆಂಬ ಆಸೆ ಇರುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಂಡು ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿದರೆ ಎಷ್ಟು ಚೆನ್ನಾಗಿರುತ್ತದೆ ಅನಿಸುವುದು ಸಹಜ. ವಯಸ್ಸಾದ ನಂತರ ಹೀಗೆಲ್ಲಾ ಸುತ್ತಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ವಯಸ್ಸು 30 ಆಗೋ ಮೊದಲು ಎಲ್ಲೆಲ್ಲಾ ತಿರುಗಾಡಬೇಕೋ ಅಲ್ಲೆಲ್ಲಾ ತಿರುಗಾಡಿ. ಹಾಗಾದ್ರೆ ವಯಸ್ಸು 30 ಆಗೋ ಒಳಗೆ ಯಾವ್ಯಾವ ಸ್ಥಳಗಳನ್ನೆಲ್ಲಾ ನೋಡಬೇಕು ಅನ್ನೋ ಕೆಲವು ಬೆಸ್ಟ್ ಸ್ಥಳಗಳ ಬಗ್ಗೆ ಇಲ್ಲಿ ನಿಮಗೆ ನೀಡಲಾಗಿದೆ.
ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.. ವೆಸ್ಟರ್ನ್ ಬಟ್ಟೆ ಹಾಕುವಂತಿಲ್ಲ

ಗೋವಾ ಪಾರ್ಟಿ ಹಬ್
30 ದಾಟೋ ಒಳಗೆ ನೀವು ಭೇಟಿ ನೀಡಬೇಕಾದ ಭಾರತದಲ್ಲಿರುವ ಅನೇಕ ಸ್ಥಳಗಳಲ್ಲಿ ಗೋವಾ ಕೂಡಾ ಒಂದು. ಗೋವಾವನ್ನು ಭೂಮಿಯಲ್ಲಿನ ಸ್ವರ್ಗ ಎಂದೇ ಹೇಳಬಹುದು. ಸ್ನೇಹಿತರ ಜೊತೆ ಮಜಾ ಮಾಡಲು ಬೀಚ್‌ನ ಸೌಂದರ್ಯವನ್ನು ಕಣ್ಣುತುಂಬಿಸಲು, ಬ್ಯಾಚುಲರ್ ಪಾರ್ಟಿ ಮಾಡಲು ಗೋವಾ ಉತ್ತಮ ಆಯ್ಕೆಯಾಗಿದೆ.
ನವಂಬರ್‌ನಿಂದ ಫೆಬ್ರವರಿ ಗೋವಾಕ್ಕೆ ಹೋಗಲು ಉತ್ತಮ ಸಮಯವಾಗಿದೆ.

ಹೋಗುವುದು ಹೇಗೆ?
ವಿಮಾನದಲ್ಲಿ ಹೋಗೋದಾದರೆ ಡಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗೋವಾ
ರೈಲಿನಲ್ಲಿ ಹೋಗೋದಾದರೆ ಮಡ್‌ಗಾಂವ್ ರೈಲ್ವೆ ಸ್ಟೇಶನ್
ಬಸ್ ಮೂಲಕ ಹೋಗುವುದಾದರೆ ಮರ್‌ಗಾಂ ಬಸ್ ನಿಲ್ದಾಣ, ಕದಂಬ ಬಸ್ ನಿಲ್ದಾಣ
ಬಹುತೇಕರು ಕಾರ್, ಬೈಕ್ ಮೂಲಕ ಮುಂಬೈ, ಪೂಣೆಯಿಂದ ಬರುತ್ತಾರೆ.

ಶ್ರೀನಗರ
ಇದು ಭಾರತದಲ್ಲಿ ಪ್ರವಾಸಕೈಗೊಳ್ಳಲು ಉತ್ತಮ ಸ್ಥಳವಾಗಿದೆ. ಭಯೋತ್ಪಾದನಾ ಚಟುವಟಿಕೆಗಳು ಇಲ್ಲಿ ನಡೆಯುತ್ತದೆ. ಜಮ್ಮು ಕಾಶ್ಮೀರಕ್ಕೆ ಬಂದರೆ ಶ್ರೀನಗರಕ್ಕೆ ತೆರಳಲೇ ಬೇಕು. ದಾಲ್ ನದಿ, ನಿಶಾತ್ ಬಾಗ್, ಶಾಲಿಮಾರ್ ಬಾಗ್, ಜಮಾ ಮಜೀದ್, ಹಜಾರತ್‌ಬಾಲ್ ಮೋಸ್ಕ್ ಶಂಕರಾಚಾರ್ಯ ಬೆಟ್ಟ ಎಲ್ಲಾ ನೋಡಬಹುದಾಗಿದೆ.
ಎಪ್ರಿಲ್‌ನಿಂದ ಅಕ್ಟೋಬರ್ ತಿಂಗಳು ಗೋವಾಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಹೋಗುವುದು ಹೇಗೆ?
ವಿಮಾನದಲ್ಲಿ ಹೋಗೋದಾದರೆ ಶ್ರೀನಗರ ಏರ್‌ಪೋರ್ಟ್
ರೈಲಿನಲ್ಲಿ ಹೋಗೋದಾದರೆ ಶ್ರೀನಗರ ರೈಲ್ವೆಸ್ಟೇಶನ್ ಅಥವಾ ಉದಾಂಪುರ್ ರೈಲ್ವೆ ಸ್ಟೇಶನ್

ಅಂಡಮಾನ್
ನೀರೆಂದರೆ ನಿಮಗೆ ಭಯವೇ? ಈವರೆಗೂ ಸ್ವಿಮ್ಮಿಂಗ್ ಮಾಡಿಲ್ಲವೆಂದಾದಲ್ಲಿ ನಿಮ್ಮ ಭಯವನ್ನು ದೂರ ಮಾಡಲು ಅಂಡಮಾನ್ ಉತ್ತಮ ಸ್ಥಳವಾಗಿದೆ. ಅಂಡಮಾನ್‌ನ ಸಮುದ್ರದಲ್ಲಿ ಆಳಕ್ಕೆ ಇಳಿದರೆ ನಿಮ್ಮ ಭಯವೆಲ್ಲಾ ದೂರವಾಗಬಹುದು. ಭಾರತದ ಪ್ರವಾಸಿ ತಾಣಗಳಲ್ಲಿ ಪ್ರಸಿದ್ಧವಾಗಿರುವುದು. ಇಲ್ಲಿಗೆ ನವಂಬರ್‌ನಿಂದ ಮೇ ವರೆಗೂ ಭೇಟಿ ನೀಡಬಹುದು.

ಹೋಗುವುದು ಹೇಗೆ?
ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಏರ್‌ಪೋರ್ಟ್ ಇಲ್ಲಿಗೆ ಹತ್ತಿರವಿರುವ ಏರ್‌ಪೋರ್ಟ್
ಹಡಗಿನಲ್ಲಿ ಬರೋದಾದರೆ ಚೆನ್ನೈ, ಕೊಲ್ಕತ್ತಾ , ವಿಶಾಖಪಟ್ಟಣದಿಂದ ಬರುವವರಿಗೆ ಪೋರ್ಟ್ ಬ್ಲೇರ್‌ನಲ್ಲಿರುವ ವರ್ಫ್ ಪೋರ್ಟ್ ಸಮೀಪವಾಗುತ್ತದೆ.
ಇಲ್ಲಿ ರಾಧಾನಗರ್ ಬೀಚ್, ರಾಜೀವ್ ಗಾಂಧಿ ವಾಟರ್ ಸ್ಪೋರ್ಟ್ಸ, ಮಹಾತ್ಮಗಾಂಧಿ ಮರೈನ್ ನ್ಯಾಷನಲ್ ಪಾರ್ಕ್, ಸ್ಕೂಬಾ ಡೈವಿಂಗ್, ಸ್ನೋರ್ಕಿಂಗ್, ಪ್ಯಾರಸೈಕೆಲಿಂಗ್ ಕೂಡಾ ಇದೆ.

ಲೇಹ್-ಲಡಾಕ್ ಬೈಕರ್ಸ್‌ಗಳ ಸ್ವರ್ಗ
ಪ್ರಯಾಣಿಸುವುದನ್ನು ಇಷ್ಟಪಡುವ ಪ್ರತಿಯೊಬ್ಬ ವ್ಯಕ್ತಿಯು ಲೇಹ್-ಲಡಾಕ್‌ಗೆ ಹೋಗಲು ಬಯಸುತ್ತಾನೆ. ಸಾಹಸಮಯ ಜರ್ನಿ ಇದಾಗಲಿದೆ. ಮರುಭೂಮಿಯ ಬೆಟ್ಟಗಳ ನಡುವೆ ಒಂದು ಉತ್ತಮ ಅನುಭವವಾಗಲಿದೆ. ಎಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ಹೋಗುವುದು ಹೇಗೆ?
ಕುಶೋಕ್ ಬಕುಲಾ ರಿಂಪೊಚೆ ವಿಮಾನ ನಿಲ್ದಾಣ ಸಮೀಪವಾಗಿದೆ. ಇನ್ನೂ ರೈಲಿನಲ್ಲಿ ಹೋಗುವುದಾದರೆ ಜಮ್ಮು ತವಿ ರೈಲ್ವೆ ಸ್ಟೇಶನ್ ಲಡಾಕ್‌ಗೆ ಸಮೀಪವಿರುವ ರೈಲ್ವೆ ಸ್ಟೇಶನ್ ಆಗಿದೆ. ಇಲ್ಲಿಂದ ಕ್ಯಾಬ್ ಮಾಡಿಕೊಳ್ಳಬಹುದು. ಇಲ್ಲವಾದರಲ್ಲಿ ಜೆಕೆಎಸ್‌ಆರ್‌ಟಿಸಿ ಬಸ್ ಕೂಡಾ ಹತ್ತಬಹುದು.

ಕಾಫಿ ನಾಡು ಕೂರ್ಗ್
ಕೂರ್ಗ್ ಬೆಂಗಳೂರಿಗೆ ಬಹಳ ಸಮೀಪದ ಪ್ರವಾಸಿ ತಾಣವಾಗಿದೆ. ಬೆಟ್ಟಗುಡ್ಡಗಳು, ಇಲ್ಲಿನ ಹಸಿರು ಪ್ರಕೃತಿ ಸೌಂದರ್ಯ, ಸುತ್ತಲೂ ಕಾಫಿ ಗಿಡಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್‌ನಿಂದ ಮಾರ್ಚ್.
ಹೋಗುವುದು ಹೇಗೆ?
ವಿಮಾನದ ಮೂಲಕ ಹೋಗುವುದಾದರೆ ಮಂಗಳೂರು ಏರ್‌ಪೋರ್ಟ್ ಸಮೀಪದಲ್ಲಿದೆ. ಸುಮಾರು 156 ಕಿ.ಮೀ ದೂರದಲ್ಲಿದೆ. ಇಲ್ಲವಾದಲ್ಲಿ ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಅದು ಸುಮಾರು 285 ಕಿ.ಮೀ ದೂರದಲ್ಲಿದೆ. ಇಲ್ಲಿ ಅಬ್ಬಿ ಫಾಲ್ಸ್, ಇರುಪ್ಪು ಫಾಲ್ಸ್, ನಾಗರಹೊಳೆ ನ್ಯಾಷನಲ್ ಪಾರ್ಕ್ ಮುಂತಾದ ಸ್ಥಳಗಳಿವೆ.

ದೇವರ ನಾಡು ಕೇರಳ
ಪ್ರಕೃತಿ ಪ್ರೇಮಿಗಳಿಗೆ ಕೇರಳ ಬಹಳ ಇಷ್ಟವಾಗುತ್ತದೆ. ಸುತ್ತಲೂ ಹಸಿರು ಮರಗಿಡಗಳು. ಬ್ಯಾಕ್ ವಾಟರ್ ಬೋಟಿಂಗ್ ಇವೆಲ್ಲಾ ಕೇರಳದ ವಿಶೇಷತೆಗಳಾಗಿವೆ. ಇಲ್ಲಿಗೆ ಹೋಗಬೇಕಾದರೆ ನವಂಬರ್‌ನಿಂದ ಜನವರಿ ಹಾಗೂ ಜೂನ್‌ನಿಂದ ಆಗಸ್ಟ್ ಉತ್ತಮವಾಗಿದೆ.
ಹೋಗುವುದು ಹೇಗೆ?
ಕೇರಳದಲ್ಲಿ ಮೂರು ಮುಖ್ಯ ವಿಮಾನ ನಿಲ್ದಾಣಗಳಿವೆ. ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ತ್ರಿವಂಡ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ರೈಲಿನಲ್ಲಿ ಹೋಗುವುದಾದರೆ ತಿರುವನಂತಪುರಂ ಸೆಂಟ್ರಲ್ ರೈಲ್ವೆ ಸ್ಟೇಶನ್, ಎರ್ನಾಕುಲಂ ಜಂಕ್ಷನ್ ರೈಲ್ವೆ ಸ್ಟೇಶನ್, ಕೊಲ್ಲಮ್ ಜಂಕ್ಷನ್ ರೈಲ್ವೆ ಸ್ಟೇಶನ್.
ಇಲ್ಲಿ ಅಲಪ್ಪಿ, ಮುನ್ನಾರ್, ವಯನಾಡ್, ತೆಕ್ಕಾಡಿ, ಕೋವಲಂ, ಬೇಕಲ್ ಮುಂತಾದ ಸುಂದರ ಸ್ಥಳಗಳಿವೆ.

ಕುಚ್ ಉಪ್ಪಿನ ಮರುಭೂಮಿ
ಗುಜರಾತ್‌ನಲ್ಲಿರುವ ಈ ಸ್ಥಳವು ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಇಲ್ಲಿ ಗಾಳಿಪಟ ಉತ್ಸವವನ್ನು ನಡೆಸಲಾಗುತ್ತದೆ. ಇಲ್ಲಿ ಉಪ್ಪಿನ ಮರುಭೂಮಿಯನ್ನು ಕಾಣಬಹುದು.
ಹೋಗುವುದು ಹೇಗೆ?
ವಿಮಾನದ ಮೂಲಕ ಭುಜ್ ಏರ್‌ಪೋರ್ಟ್ ನಿಂದ ಸುಮಾರು 69 ಕಿ.ಮೀ ದೂರದಲ್ಲಿದೆ .
ರೈಲಿನ ಮೂಲಕ ಭುಜ್ ರೈಲ್ವೆ ಸ್ಟೇಶನ್‌ನಿಂದ 50 ಕಿ.ಮೀ ದೂರದಲ್ಲಿದೆ ಕುಚ್.

ಅಸ್ಸಾಂ
ಇಲ್ಲಿ ನವಂಬರ್‌ನಿಂದ ಎಪ್ರಿಲ್ ತಿಂಗಳಲ್ಲಿ ಜೀಪ್ ಸಫಾರಿ, ಜಂಗಲ್ ವಾಕ್, ಬೋಟ್ ರೈಡ್ ಕೈಗೊಳ್ಳಲಾಗುತ್ತದೆ. ಇಲ್ಲಿ ಬ್ರಹ್ಮಪುತ್ರ ನದಿ ಹರಿಯುತ್ತದೆ. ಅಸ್ಸಾಂ ಒಂದು ಕೊಂಬಿನ ರೈನೋಸ್‌ಗೆ ಹೆಸರುವಾಸಿಯಾಗಿದೆ. ಇಲ್ಲಿನ ಸಂಸ್ಕೃತಿ ವಿಭಿನ್ನವಾಗಿದೆ. ಅಕ್ಟೋಬರ್‌ನಿಂದ ಎಪ್ರಿಲ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಇಲ್ಲಿ ಪ್ರಸಿದ್ಧ ಕಾಮಾಕ್ಯ ದೇವಸ್ಥಾನ, ಮನಸ್ ನ್ಯಾಷನಲ್ ಪಾರ್ಕ್, ಕಾಜಿರಂಗ ನ್ಯಾಷನಲ್ ಪಾರ್ಕ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.

ರಿಶಿಕೇಶ್
ಸುಮ್ಮನೆ ಯೌವನವನ್ನು ಕೂತು ಹಾಳು ಮಾಡುವುದಕ್ಕಿಂತ ತಮ್ಮ ಯೌವನದಲ್ಲಿ ಬೇರೆ ಬೇರೆ ರಾಜ್ಯಗಳನ್ನು ಭೇಟಿ ನೀಡಿ ಸ್ನೇಹಿತರ ಜೊತೆ ಎಂಜಾಯ್ ಮಾಡುವುದು ಒಳ್ಳೆಯದು ಅಲ್ವಾ? ರಿಶಿಕೇಶ್ ಸಾಹಸಮಯ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ಗಂಗಾ ನದಿ ಹರಿಯುತ್ತದೆ. ನವಂಬರ್‌ನಿಂದ ಫೆಬ್ರವರಿ ಇಲ್ಲಿಗೆ ಹೋಗಲು ಸೂಕ್ತ ಸಮಯವಾಗಿದೆ.ಹೋಗುವುದು ಹೇಗೆ?
ಜಾಲಿ ಗ್ರಾಂಟ್ ಏರ್‌ಪೋರ್ಟ್ ಡೆಹ್ರಾಡೂನ್‌ನಿಂದ 20 ಕಿ.ಮಿ ದೂರದಲ್ಲಿದೆ.
ರೈಲಿನಲ್ಲಿ ಹೋಗುವುದಾದರೆ ಹರಿದ್ವಾರ ಜಂಕ್ಷನ್ ರಿಶಿಕೇಶ್‌ದಿಂದ ಸುಮಾರು 21 ಕಿ.ಮೀ ದೂರದಲ್ಲಿದೆ.

ಶಿಮ್ಲಾ
ಶಿಮ್ಲಾ ಕೂಡಾ ಒಂದು ಉತ್ತಮ ಟೂರಿಸ್ಟ್ ಸ್ಥಳಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು. ಹಸಿರು ಬೆಟ್ಟಗಳು, ಹಿಮಭರಿತ ವಾತಾವರಣ ಮನಸ್ಸಿಗೆ ಒಂದು ರೀತಿಯ ಮುದನೀಡುತ್ತದೆ. ಮಾರ್ಚ್‌ನಿಂದ ಜೂನ್ ತಿಂಗಳಲ್ಲಿ ಶಿಮ್ಲಾಕ್ಕೆ ಭೇಟಿ ನೀಡಬಹುದಾಗಿದೆ.
ಹೋಗುವುದು ಹೇಗೆ?
ಜುಬ್ಬರ್‌ಹಟ್ಟಿ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಹಲವು ರಾಜ್ಯಗಳಿಂದ ಶಿಮ್ಲಾಕ್ಕೆ ಖಾಸಗಿ ಬಸ್‌ಗಳೂ ಇವೆ .