Search
  • Follow NativePlanet
Share
» »ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ

ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ

ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಬೀಚ್ ನಗರವು ಸಣ್ಣ ಬೆಟ್ಟಗಳು, ಮಂಜು ಬಂಡೆಗಳು ಮತ್ತು ಮುಕ್ತ ಹರಿಯುವ ನದಿಗಳನ್ನು ಒಳಗೊಂಡಿದೆ. ಮಲಬಾರ್ ಕರಾವಳಿಯ ಈ ವಾಣಿಜ್ಯ ಪಟ್ಟಣವಾದ ತಲಚೇರಿ ಎಂದು ಕೂಡ ಕರೆಯಲ್ಪಡುತ್ತದೆ.

ಐತಿಹಾಸಿಕ ನಗರ ತಲಸ್ಸೆರಿಯು ಕೇರಳದ ಉತ್ತರ ಭಾಗದ ಕಣ್ಣೂರಿನಿಂದ ತಲಸ್ಸೆರಿ 21 ಕಿಮೀ ದೂರದಲ್ಲಿದೆ. ಸಮೃದ್ಧವಾಗಿ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಬೀಚ್ ನಗರವು ಸಣ್ಣ ಬೆಟ್ಟಗಳು, ಮಂಜು ಬಂಡೆಗಳು ಮತ್ತು ಮುಕ್ತ ಹರಿಯುವ ನದಿಗಳನ್ನು ಒಳಗೊಂಡಿದೆ. ಮಲಬಾರ್ ಕರಾವಳಿಯ ಈ ವಾಣಿಜ್ಯ ಪಟ್ಟಣವಾದ ತಲಚೇರಿ ಎಂದು ಕೂಡ ಕರೆಯಲ್ಪಡುತ್ತದೆ. ಇದು ಕೇರಳದ ಮೊದಲ 'ಹೆರಿಟೇಜ್ ಟೌನ್' ಆಗಿದೆ. ತಲಸ್ಸೆರಿಯಲ್ಲಿ ನೀವು ನೋಡಬೇಕಾದ ಇನ್ನಷ್ಟು ಸ್ಥಳಗಳಿವೆ. ಅವುಗಳು ಯಾವ್ಯಾವುವು ಅನ್ನೋದನ್ನು ನೋಡೋಣ.

ಫಿಶರ್‌ಪೋಕ್‌ ಟೆಂಪಲ್‌

ಫಿಶರ್‌ಪೋಕ್‌ ಟೆಂಪಲ್‌

PC:Primejyothi
ಫಿಶರ್‌ಪೋಕ್‌ ಟೆಂಪಲ್‌ ಕಡಲ ತೀರದ ಜತೆ ಧಾರ್ಮಿಕತೆಯೂ ಈ ದೇವಾಲಯದ ಜತೆ ಬೆರೆತಿದೆ. ಕಣ್ಣೂರಿನಿಂದ ತಲಸ್ಸೆರಿ ಹಾಗೂ ಅಲ್ಲಿಂದ ಮಾಹೆವರೆಗೂ ಇದರ ವ್ಯಾಪ್ತಿ ಇದೆ. ಸ್ಥಳ ವೀಕ್ಷಣೆಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಲ ತೀರ ಹಾಸಿಕೊಂಡಿದೆ. ಈ ಸೌಂದರ್ಯದ ನಡುವೆಯೇ ದೇವಾಲಯವೂ ಸ್ಥಾಪಿಸಲ್ಪಟ್ಟಿದೆ. ಸ್ಥಳೀಯ ಮೀನುಗಾರರು ಸದಾ ನೀರಿನಲ್ಲಿ ಕೆಲಸ ಮಾಡುತ್ತಿದ್ದು ಈ ಸಂದರ್ಭದಲ್ಲಿ ಯಾವುದೇ ಅನಾಹುತ ಎದುರಾದರೆ ಇವರನ್ನು ಈ ದೇವರು ಕಾಪಾಡುತ್ತಾರೆ ಎನ್ನುವ ನಂಬಿಕೆ ಜನರದ್ದು. ಈ ದೇವಾಲಯವು ಮೀನುಗಾರರಿಂದ ನಿರ್ಮಿತವಾಗಿದೆ ಎಂದು ನಂಬಲಾಗುತ್ತದೆ.

ತಲಸ್ಸೆರಿ ಕೋಟೆ

ತಲಸ್ಸೆರಿ ಕೋಟೆ

PC: Ranjithsiji
1708 ರಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯಿಂದ ಐತಿಹಾಸಿಕ ತಲಸ್ಸೆರಿ ಕೋಟೆ (ತೆಲ್ಲಿಚೇರ್ರಿ ಕೋಟೆ) ನಿರ್ಮಾಣವಾಯಿತು. ಬ್ರಿಟೀಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಇದು ಪ್ರಮುಖ ವಾಣಿಜ್ಯ ಹಾಗೂ ಮಿಲಿಟರಿ ನೆಲೆಯಾಗಿ ಕಾರ್ಯನಿರ್ವಹಿಸಿದೆ. ಮುಜಾಫಿಲಾಂಗಡ ಕಡಲ ತೀರದಲ್ಲಿ ಈ ಕೋಟೆ ನಿರ್ಮಾಣವಾಗಿದೆ. ಬ್ರಿಟೀಷರ ಆಳ್ವಿಕೆ ಹಾಗೂ ಮೈಸೂರು ರಾಜ್ಯಭಾರ ಸಂದರ್ಭದಲ್ಲಿ ಸಾಕಷ್ಟು ಸಾಧನೆ ಇಲ್ಲಾಗಿದ್ದು, ಸಾಕಷ್ಟು ಕಥೆಗಳು ಇದರ ಹಿಂದೆ ಸೃಷ್ಟಿಯಾಗಿವೆ.

ಇಂಗ್ಲಿಷ್‌ ಚರ್ಚ್

ಇಂಗ್ಲಿಷ್‌ ಚರ್ಚ್

PC:Shagil Kannur

ಇಂಗ್ಲಿಷ್‌ ಚರ್ಚ್ ಅಥವಾ ಸೇಂಟ್‌ ಜಾನ್ಸ್‌ ಆಂಗ್ಲಿಯನ್‌ ಚರ್ಚ್ ಎಂದು ಕರೆಸಿಕೊಳ್ಳುವ ಈ ಸ್ಥಳ ಒಮ್ಮೆ ಸಂದರ್ಶಿಸಲೇಬೇಕಾದ ಪ್ರವಾಸಿ ತಾಣವಾಗಿದೆ. ತಲಸ್ಸೆರಿಯ ಅತ್ಯಂತ ಜನಪ್ರಿಯ ಹಾಗೂ ಭೇಟಿ ನೀಡಲೇಬೇಕಾದ ಸ್ಥಳ ಇದಾಗಿದ್ದು, 140 ವರ್ಷ ಹಿಂದಿನ ಇತಿಹಾಸ ಈ ಕಟ್ಟಡಕ್ಕಿದೆ. ಮಲಬಾರ್‌ ಕಾಲಮಾನದ ಮೊದಲ ಚರ್ಚ್ ಎಂಬ ಹೆಗ್ಗಳಿಕೆ ಇದಕ್ಕಿದೆ. ತಲಸ್ಸೆರಿ ಬಂದರಿಗೆ ಅತ್ಯಂತ ಸಮೀಪದಲ್ಲಿರುವ ಈ ಚರ್ಚ್ ಆಕರ್ಷಕ ನೋಟದಿಂದ ಗಮನ ಸೆಳೆಯುತ್ತದೆ. ಈ ಚರ್ಚ್ ನಲ್ಲಿ ಮಲಬಾರ್‌ನ ವೀರ ಕೊಲೋನಿಯಲ್‌ಗಳ ಶವವನ್ನು ಹೂಳಲಾಗಿದೆ.

ಓವರ್‌ಬರ್ರಿಸ್ ಫಾಲಿ

ಓವರ್‌ಬರ್ರಿಸ್ ಫಾಲಿ

PC: Shijaz
ಓವರ್‌ಬರ್ರಿಸ್ ಫಾಲಿಯು ಅಪೂರ್ಣ ನಿರ್ಮಾಣದ ಹಾಗೂ ಸಾಮಾನ್ಯವಾಗಿ ಕಲಾತ್ಮಕ ವಾಸ್ತುಶಿಲ್ಪ ಅನ್ನಿಸಿಕೊಂಡಿರುವ ಪ್ರದೇಶ. ತಲಸ್ಸೆರಿ ಕೋರ್ಟ್ ಹಾಗೂ ಮುನ್ಸಿಪಲ್‌ ಸ್ಟೇಡಿಯಂ ಸಮೀಪ ಇರುವ ಗುಡ್ಡದ ಮೇಲೆ ಈ ಪಾರ್ಕ್ ಇದೆ. ಉದ್ಯಾನಕ್ಕೆ ಈ ಹೆಸರು ಇ.ಎನ್‌. ಓವರ್‌ಬರಿ ಅವರಿಂದ ಬಂದಿದೆ. ಇವರು ಈ ಭಾಗದ ಸಬ್‌ ಕಲೆಕ್ಟರ್‌ ಆಗಿದ್ದರು. ಸ್ವಂತ ಶ್ರಮದಿಂದ ಅವರು ಈ ತಾಣವನ್ನು ಪಿಕ್‌ನಿಕ್‌ ತಾಣವನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ.

ಕಣ್ಣೂರು

ಕಣ್ಣೂರು

PC:LJAlumkal
ಕಣ್ಣೂರು 2 ಪದಗಳ ಮಿಶ್ರಣವಾಗಿದೆ. ಕೃಷ್ಣ ಪರಮಾತ್ಮನಿಗೆ ಕಣ್ಣಾ ಪದವನ್ನು ಬಳಸಲಾಗಿದೆ ಮತ್ತು ಉರ್ ಎಂಬ ಶಬ್ದವು ಸ್ಥಳಗಳಾಗಿದ್ದು, ಇದು ಕೃಷ್ಣನ ಸ್ಥಳವಾಗಿದೆ. ಕಣ್ಣೂರು ಎನ್ನುವುದು ಒಂದು ಸುಂದರ ಸಮುದ್ರ ತೀರದ ಪಟ್ಟಣವಾಗಿದ್ದು, ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ತಲಸ್ಸೆರಿ ಮತ್ತು ಕಣ್ಣೂರುಗಳು ಕೆಲವೇ ಕಿಲೋಮೀಟರ್ ದೂರದಲ್ಲಿವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Kidu
ತಲಸ್ಸೆರಿಯ ರೈಲ್ವೇ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಬೆಂಗಳೂರು-ತಲಸ್ಸೆರಿ ಎರಡು ನಗರಗಳ ನಡುವೆ ನೇರ ರೈಲು ಲಭ್ಯವಿದೆ.
ತಲಸ್ಸೆರಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೊಜಿಖೋಡ್‌ನ ಕರಿಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 94 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಬೆಂಗಳೂರಿಗೆ ನಿಯಮಿತ ವಿಮಾನಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕೊಜಿಖೋಡ್‌ ವಿಮಾನ ನಿಲ್ದಾಣದಿಂದ ತಲಸ್ಸೆರಿಗೆ ಹೋಗಲು, ನೀವು ಟ್ಯಾಕ್ಸಿ ಬಾಡಿಗೆ ಪಡೆಯಬಹುದು.
ಬೆಂಗಳೂರು ಮತ್ತು ತಲಸ್ಸೆರಿ ರಸ್ತೆಗಳ ಉತ್ತಮ ಜಾಲದಿಂದ ಪರಸ್ಪರ ಸಂಪರ್ಕವನ್ನು ಹೊಂದಿವೆ. ನೀವು ಕಾರನ್ನು ಬಾಡಿಗೆಗೆ ಪಡೆಯುವುದು ಸೂಕ್ತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X