Search
  • Follow NativePlanet
Share
» »ಅಜ್ಮೀರ್‌ನಲ್ಲಿ ದರ್ಗಾವನ್ನು ಹೊರತುಪಡಿಸಿ ಇನ್ನೆನೆಲ್ಲಾ ಇದೆ ನೋಡಿ

ಅಜ್ಮೀರ್‌ನಲ್ಲಿ ದರ್ಗಾವನ್ನು ಹೊರತುಪಡಿಸಿ ಇನ್ನೆನೆಲ್ಲಾ ಇದೆ ನೋಡಿ

ಅಜ್ಮೀರ್‍ ನಲ್ಲಿ ಪ್ರಸಿದ್ದ ಭೂಭಾಗಗಳು, ಮೊಯಿನುದ್ದೀನ್ ಚಿಸ್ಟಿಮ್ ಅವರ ದರ್ಗಾದ ಜೊತೆಗೆ ಅನೇಕ ಕಡಿಮೆ ಪ್ರಚಾರದಲ್ಲಿರುವ ಸ್ಥಳಗಳೂ ಇವೆ. ಅಕ್ಬರನ ಕಾಲದಿಂದಲೂ ಇಲ್ಲಿಯ ದರ್ಗಾಕ್ಕೆ ಜನರು ಬಂದು ತಮ್ಮ ಗೌರವವನ್ನು ಅರ್ಪಿಸುತ್ತಿದ್ದಾರೆ. ಇದಕ್ಕಾಗಿಯೇ ಹೈದರಾಬಾದಿನ ನಿಜಾಮರು ಇಲ್ಲಿಗೆ ನೇರವಾಗಿ ಸಂಪರ್ಕಕ್ಕೆ ಅನುಕೂಲವಾಗುವಂತೆ ರೈಲ್ವೇ ಸೌಕರ್ಯವನ್ನೂ ಮಾಡಿಸಿದ್ದರು. ದರ್ಗಾ ಪ್ರಸಿದ್ದಿಗೆ ಬರುವ ಮುಂಚಿನಿಂದಲೂ ಅಜ್ಮೀರ್‍ ಒಂದು ಕುತೂಹಲಕಾರಿಯಾದ ನಗರವಾಗಿತ್ತು.

ಈ ನಗರಕ್ಕೆ ಸುಮಾರು ಕ್ರಿ.ಶ. 11ನೇ ಶತಮಾನದ ಇತಿಹಾಸವಿದ್ದು ಚೌಹಾಣರ ದೊರೆಯಾದ ಅಜಯ್ ರಾಜ್ ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದರು ಮತ್ತು ಇದನ್ನು ಅಜಯ್ಮೆರು ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು . ಪೌರಾಣಿಕ ಹಿನ್ನೆಲೆಯಿರುವ ಮೇರು ಪರ್ವತದೊಂದಿಗೆ ತನ್ನ ಹೆಸರನ್ನು ಸೇರಿಸಿ ಈ ಹೆಸರನ್ನು ಇರಿಸಿಕೊಂಡಿದ್ದರು ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ಈ ಹೆಸರು ಕ್ರಮೇಣ ಬದಲಾವಣೆಯಾಗುತ್ತಾ ಅಜ್ಮೀರ್‍ ಎಂದು ಬದಲಾಯಿತು ಆದರೆ ಅಜ್ಮೀರ್‍ ನಲ್ಲಿ ಅಜಯ್ಮೇರು ಎಂದೇ ಕರೆಯಲಾಗುವುದನ್ನು ನಾವು ಕೇಳಿಸಿಕೊಳ್ಳಬಹುದು .

ಫಾಯ್ ಸಾಗರ್

ಫಾಯ್ ಸಾಗರ್

ಫಾಯ್ ಸಾಗರ್ ಎನ್ನುವುದು ಅಜ್ಮೀರ್‍ ನಗರದ ಬಳಿ ಇರುವ ಮತ್ತು ಅನಾ ಸಾಗರ್ ಸರೋವರದ ನಂತರ ಬರುವ ಒಂದು ಕೃತಕ ಸರೋವರವಾಗಿದೆ. ಇದು ಸುಮಾರು 123 ವರ್ಷಗಳಷ್ಟು ಹಳೆಯದಾಗಿದ್ದರೂ ಕೂಡಾ ಅನಾ ಸಾಗರ್ ಗೆ ಹೋಲಿಸಿದರೆ ಇದು ಇನ್ನೂ ಹೊಸತಾಗಿ ಕಾಣುತ್ತದೆ ಅನಾಸಾಗರ್ ಸರೋವರಕ್ಕೆ ಸುಮಾರು 800ಕ್ಕಿಂತಲೂ ಹಳೆಯದಾದ ಇತಿಹಾಸವಿದೆ ಫಾಯ್ ಸಾಗರ್ ಸರೋವರಕ್ಕೂ ಇದನ್ನು ನಿರ್ಮಿಸಿದ ಇಂಗ್ಲಿಷರ ಒಬ್ಬ ವಾಸ್ತುಶಿಲ್ಪಿಯ ಹೆಸರನ್ನು ಇರಿಸಲಾಗಿದೆ.

ಈ ಸರೋವರವನ್ನು ನೀರಿನ ಕ್ಷಾಮದ ಪರಿಹಾರದ ಯೋಜನೆಗಾಗಿ ನಿರ್ಮಿಸಲಾಗಿದ್ದು ಇದಕ್ಕೆ ಪ್ರತಿಯಾಗಿ ಇದು ನೀರಿನ ಕ್ಷಾಮದ ತೀವ್ರತೆಯನ್ನು ಎದುರಿಸಲು ಸಮರ್ಥವಾಗಿದೆ. ಸರೋವರದಲ್ಲಿಯ ಶಾಸನಗಳು ಈ ಸರೋವರದ ಬಗೆಗಿನ ಎಲ್ಲಾ ತಾಂತ್ರಿಕ ಮಾಹಿತಿಗಳನ್ನು ನೀಡುತ್ತವೆ. ಇದು ಸರೋವರದ ಆಳ ಮತ್ತು ವಿಸ್ತಾರದ ಮತ್ತು ಇದರ ನಿರ್ಮಾಣದ ಖರ್ಚುವೆಚ್ಚ ಮತ್ತು ನಿರ್ಮಿಸಲಾದ ವರ್ಷ(1892). ಇವೆಲ್ಲದರ ಬಗೆಗಿನ ಮಾಹಿತಿಯನ್ನೂ ಒಳಗೊಂಡಿದೆ.

ದರ್ಗಾ ಬಜಾರ್

ದರ್ಗಾ ಬಜಾರ್

ಮೋಯಿನುದ್ದಿನ್ ಚಿಸ್ಟಿ ದರ್ಗಾದ ಪ್ರದೇಶವನ್ನು ಒಂದು ರೋಮಾಂಚಕವಾದ ಬಜಾರ್ ಆವರಿಸಿಕೊಂಡಿದೆ ಮತ್ತು ಇದು ಆಹಾರ ಪ್ರಿಯರ ಮೆಕ್ಕಾ ಎಂದೆನಿಸಿದೆ. ಇದು ದೆಹಲಿಯ ಪಹರ್ ಗಂಜ್ ನಂತಿದ್ದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅನೇಕ ಹೋಟೇಲುಗಳು ಲಾಡ್ಜ್ ಗಳು ಇತ್ಯಾದಿಗಳನ್ನು ಹೊಂದಿದೆ.

ಇಲ್ಲಿ ನೀವು ಸ್ಥಳೀಯರನ್ನು ಅದರಲ್ಲೂ ವಿಶೇಷವಾಗಿ ವರ್ಣ ರಂಜಿತ ಉಡುಪಿನಲ್ಲಿರುವ ಮಹಿಳೆಯರು ತಮ್ಮ ದಿನನಿತ್ಯದ ವ್ಯಾಪಾರವನ್ನು ಈ ಬಜಾರ್ ನಲ್ಲಿ ಮಾಡುತ್ತಿರುವುದನ್ನು ಕಾಣಬಹುದು. ಇದು ನಿಮಗೆ ವರ್ಣರಂಜಿತ ರಾಜಸ್ಥಾನವನ್ನು ನೆನಪಿಸುತ್ತದೆ. ಇಲ್ಲಿಯ ಚಿಕ್ಕದಾದ ಇಕ್ಕಟ್ಟಾದ ಹಾದಿಗಳ ಅಂಚಿನಲ್ಲಿ ತುಂಬಿರುವ ಜನರನ್ನು ಕಾಣಬಹುದಾಗಿದೆ ಅಲ್ಲದೆ ಇಲ್ಲಿಯ ದೃಶ್ಯಗಳು, ಸದ್ದುಗದ್ದಲಗಳು, ಸುವಾಸನೆಗಳು ಮತ್ತು ಮೂಲೆ ಮೂಲೆಯಲ್ಲಿಯೂ ತಯಾರಿಸಲಾಗುವ ಆಹಾರದ ಸುವಾಸನೆಗಳಿಂದ ತುಂಬಿರುವ ಈ ಅನುಭವವನ್ನು ತಪ್ಪಿಸಲೇ ಬಾರದು.

ಇಲ್ಲಿ ಮಾಂಸಾಹಾರಿಗಳಿಗಾಗಿ ಬಾಯಿ ನೀರೂರಿಸುವ ಕಬಾಬ್ ಗಳು , ಬಿರಿಯಾನಿಗಳು ಮತ್ತು ಇನ್ನೂ ಅನೇಕ ಕರಿಗಳ ಸವಿಯನ್ನು ರುಚಿನೋಡಬಹುದಾಗಿದೆ. ಸಸ್ಯಾಹಾರಿಗಳಿಗಾಗಿ ಇಲ್ಲಿ ಅನೇಕ ಆಹಾರ ಬೀದಿಗಳಿವೆ ಇದು ಬಿಸಿ ಬಿಸಿಯಾದ ಜಿಲೇಬಿಗಳಿಂದ ಹಿಡಿದು ಕಚೋರಿಗಳವರೆಗೆ ಇವೆ. ಅಜ್ಮೀರ್‍ ನಲ್ಲಿನ ಸ್ಟ್ರೀಟ್ ಪುಡ್ ಗಳಲ್ಲಿ ಒಂದಾದ ದಾಲ್ ಪಕ್ವಾನ್ ಅತ್ಯಂತ ಜನಪ್ರಿಯವಾದುದು ಇದು ಕಡಲೆ ಬೆಳೆಯಿಂದ ತಯಾರಿಸಲಾಗುತ್ತದೆ ಇದನ್ನು ಗರಿಗರಿಯಾದ ಪೂರಿಯ ಜೊತೆಗೆ ಸವಿಯಲು ಕೊಡಲಾಗುತ್ತದೆ.

ಅನಾ ಸಾಗರ್

ಅನಾ ಸಾಗರ್

Hemant Shesh

ಅನಾ ಸಾಗರ್ ಲೇಕ್ ಇದು ಅಜ್ಮೀರ್‍ ಹೃದಯ ಭಾಗದಲ್ಲಿದೆ, ನಗರವು ಈ ಸರೋವರವನ್ನು ಸುತ್ತುವರಿದಿದೆ. ಇದೊಂದು ಕೃತಕ ಸರೋವರವಾಗಿದ್ದು, ಇದನ್ನು ಕ್ರಿ.ಪೂ 12 ನೇ ಶತಮಾನದಲ್ಲಿ ಲುನೀ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿ ಈ ಸರೋವರವನ್ನು ನಿರ್ಮಿಸಲಾಯಿತು.

ಈ ಸರೋವರವನ್ನು ಹೆಚ್ಚು ಕಡಿಮೆ ಅಜ್ಮೀರ್‍ ಅಥವಾ ಅಜಯ್ ಮೇರು ನಗರವನ್ನು ನಿರ್ಮಾಣ ಮಾಡುವಾಗಲೇ ಇದರ ನಿರ್ಮಾಣವೂ ಆಯಿತು . ಪೃಥ್ವೀ ರಾಜ್ ಚೌಹಾನ್ ರ ತಾತ ಅನಾಜಿ ಚೌಹಾನರು ಈ ದೊಡ್ಡದಾದ ಸರೋವರವನ್ನು ಅಜ್ಮೇರ್ ನಲ್ಲಿ ನಿರ್ಮಿಸಿದರು ಆದುದರಿಂದ ಈ ಸರೋವರಕ್ಕೆ ಅವರ ಹೆಸರಿಡಲಾಯಿತು. ಈ ಸರೋವರವು ಬೂದು ಬಣ್ಣದ ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿದ್ದು ಇದು ಅಜ್ಮೀರ್‍ ಗೆ ಸುಂದರವಾದ ಹಿನ್ನಲೆಯನ್ನು ಒದಗಿಸುತ್ತದೆ.

ಇದರ ಆಗ್ನೇಯ ದಡದ ಮೇಲೆ ಬಿಳಿ ಬಣ್ಣದ ಮಾರ್ಬಲ್ ನ ಮಂಟಪವನ್ನು ಹೊಂದಿದ್ದು ಇದರೊಂದಿಗೆ ಕೆಲವು ಸುಂದರವಾದ ಅನಾ ಸಾಗರ್ ಬರಾದರಿ ಎಂದು ಕರೆಯಲ್ಪಡುವ ಗೂಡುಗಳನ್ನು ಒಳಗೊಂಡಿದೆ. - ಇದು ಒಂಡು ಮೊಘಲರ ರಚನೆಯಾಗಿದ್ದು ಇದನ್ನು ನೀರಿನ ಜಾಗಗಳ ಮತ್ತು ಉದ್ಯಾನವನಗಳ ಸುತ್ತ ಮುತ್ತಲು ಕಾಣಬಹುದಾಗಿದೆ. ನಿಜವಾಗಿಯೂ ಈ ಮಂಟಪಗಳು ಜಹಾಂಗೀರ್ ಮತ್ತು ಶಹ ಹಾನರಿಂದ ನಿರ್ಮಿಸಲಾದ ದೌಲತ್ ಭಾಗ್ ಎಂದು ಕರೆಯಲ್ಪಡುವ ಉದ್ಯಾನವನದ ಒಂದು ಸುಂದರವಾದ ಭಾಗವಾಗಿದೆ ಎನ್ನಬಹುದು.

ಮಾಯೋ ಕಾಲೇಜ್

ಮಾಯೋ ಕಾಲೇಜ್

Singh92karan

ಮಾಯೋ ಕಾಲೇಜ್ ಇದು ನಿಜವಾಗಿಯೂ ಕಾಲೇಜು ಅಲ್ಲ ಬದಲಾಗಿ ಇದು ಒಂದು ಶಾಲೆಯಾಗಿದೆ. ಇದನ್ನು 1875 ರಲ್ಲಿ ಬ್ರಿಟಿಷರಿಂದ ನಿರ್ಮಿಸಲಾಗಿದ್ದು ಇದಕ್ಕೆ ಭಾರತದ ವೈಸರಾಯ್ ಆಗಿದ್ದ ರಿಚರ್ಡ್ ಬೋರ್ಕೆ ಅವರ ಹೆಸರನ್ನು ಇಡಲಾಯಿತು ಇವರು ಮೇಯೊ ಅರ್ಲ್ ಆಗಿದ್ದರು. ಎಟನ್ ಕಾಲೇಜಿನ ನಂತರ ರೂಪಿಸಲ್ಪಟ್ಟ, ಇದು ಭಾರತದ ಎಟನ್ ಎಂದು ಅರ್ಥೈಸಲಾಗಿತ್ತು - ರಾಜಪುತಾನದ ಶ್ರೀಮಂತರು ಮತ್ತು ರಾಜವಂಶಸ್ಥರಿಗೆ ಶಿಕ್ಷಣ ನೀಡುವ ಒಂದು ಗಣ್ಯ ಬೋರ್ಡಿಂಗ್ ಶಾಲೆಯಾಗಿತ್ತು. ಇಂಡು ಇದು ಅತ್ಯಂತ ಹಳೆಯ ಶಾಲೆಯಾಗಿದ್ದು ಭಾರತದ ಅತ್ಯಂತ ಗೌರವಾನ್ವಿತ ಶಾಲೆಗಳಲ್ಲಿ ಒಂದೆನಿಸಿದೆ.

ಈ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಭಾರತದಲ್ಲಿ ಗೌರವಾನ್ವಿತವಾಗಿ ನೋಡಲಾಗುತ್ತದೆ. ಇಲ್ಲಿಗೆ ಪ್ರಯಾಣಿಕರನ್ನು ಆಕರ್ಷಿಸುವ ವಿಷಯವೆಂದರೆ ಇಲ್ಲಿ ಭವ್ಯವಾದ ಮಾರ್ಬಲ್ ನಿಂದ ನಿರ್ಮಿತವಾದ ಕಟ್ಟಡ. ಇದು ಇಂಡೋ ಸೆರಾನಿಕ್ ವಾಸ್ತು ಶಿಲ್ಪದ ಅದ್ಬುತ ಕಲಾಗಾರಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ.

ತಾರಾ ಘರ್

ತಾರಾ ಘರ್

Daniel Villafruela

ಅಜ್ಮೀರ್‍ ನಲ್ಲಿಯ ತಾರಾ ಘರ್ ಒಂದು ಬೆಟ್ಟದ ಮೇಲೆ ಇದ್ದು ಈ ನಗರಕ್ಕೆ ನೆರಳಿನಂತಿದೆ. ಈ ಕೋಟೆಗೆ ಸುಮಾರು ಕ್ರಿ.ಪೂ 11ನೇ ಶತಮಾನಗಳಷ್ಟು ಹಳೆಯ ಇತಿಹಾಸವಿದ್ದು ತಾರಾಘರ್ ಕೋಟೆ ಎಂದು ಕರೆಯಲ್ಪಡುತ್ತದೆ. ಮೊಘಲರ ಚಕ್ರಾಧಿಪತ್ಯದ ಅವಧಿಯಲ್ಲಿ ಇಲ್ಲಿ ಹಲವಾರು ಯುದ್ದಗಳು ನಡೆದಿದ್ದು ಆ ಸಮಯದಲ್ಲಿ ಈ ಕೋಟೆಯು ಸೈನ್ಯದ ಮೂಲ ನೆಲೆಯಾಗಿ ಕಾರ್ಯನಿರ್ವಹಿಸುತ್ತಿತ್ತು .

ಬ್ರಿಟಿಷರ ಕಾಲದಲ್ಲಿ ದುರ್ಗದಲ್ಲಿಯ ಈ ಕೋಟೆಯನ್ನು ಕೆಡವಲಾಯಿತು ಮತ್ತು ಇದು ಬ್ರಿಟಿಷ್ ಸೇನೆಯ ಆರೋಗ್ಯಧಾಮವಾಗಿ ಕಾರ್ಯ ನಿರ್ವಹಿಸಲ್ಪಟ್ಟಿತು. ಇಂದು ಇದು ಮಿರಾನ್ ಶಹಾ ಅವರ ದರ್ಗಾ ವಾಗಿ ಗುರುತಿಸಲ್ಪಡುತ್ತಿದೆ. ಇವರು ಒಬ್ಬ ಗವರ್ನರ್ ಆಗಿದ್ದರು ಮತ್ತು ಯುದ್ದದಲ್ಲಿ ರಜಪೂತರ ಸೈನಿಕರಿಂದ ಕೊಲ್ಲಲ್ಪಟ್ಟರು. ಎಂದು ಅವರನ್ನು ಶಹೀದ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಅವರ ಮಜಾರ್ ಆಗಿದ್ದು, ಅನೇಕ ಯಾತ್ರಿಕರಿಂದ ಭೇಟಿ ನೀಡಲ್ಪಡುತ್ತದೆ. ಇದು ಅಜ್ಮೀರ್‍ ದಲ್ಲಿನ ಹೆಚ್ಚು ಗಮನಾರ್ಹವಾದ ಸ್ಥಳವೆನಿಸಿದೆ. ನೀವು ಈ ಬೆಟ್ಟದ ಮೇಲ್ಬಾಗಕ್ಕೆ ಅಜ್ಮೀರ್‍ ಮೊಯಿನುದ್ದೀನ ಚಿಸ್ಟಿ ಅವರ ದರ್ಗಾದ ಹಿಂದಿನ ರಸ್ತೆಯ ಮೂಲಕ ಹೋಗಬಹುದಾಗಿದೆ. ಈ ಸ್ಥಳವು ಸ್ವಲ್ಪ ಕಡಿದಾಗಿದೆ ಮತ್ತು ಪೂರ್ಣಗೊಳ್ಳಲು 60 ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳಬಹುದು.

ಲಾಲ್ ಮಂದಿರ್

ಲಾಲ್ ಮಂದಿರ್

Pratyk321

ಸೋನಿಜಿ ಕಿ ನಸಿಯಾ ಎಂದೂ ಕರೆಯಲ್ಪಡುವ ಲಾಲ್ ಮಂದಿರ್ ಅಜ್ಮೀರ್‍ ನಲ್ಲಿನ ಒಂದು ಗುಪ್ತ ರತ್ನವೆನ್ನಬಹುದು. ಇದನ್ನು ಜೈನ ವ್ಯಾಪಾರಿ ಅಥವಾ ಸೇಠ್ ಒಬ್ಬರಿಂದ 100 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿತು. ಕೆಂಪು ಮರಳುಗಲ್ಲಿನಿಂದ ನಿರ್ಮಿತವಾದ ಈ ಕಟ್ಟಡವು ಹೊರಗಿನಿಂದ ದೇವಾಲಯದಂತೆ ಕಾಣುತ್ತದೆ.

ಆದರೆ ಒಳಭಾಗದಲ್ಲಿ ಇದು ಸುಮಾರು 90 ಅಡಿಗಳಿಂದ 65 ಅಡಿಗಳಿಂದ 92 ಅಡಿಗಳ ವರೆಗಿನ ದೊಡ್ಡ ಸಭಾಂಗಣವನ್ನು ಹೊಂದಿದೆ. ಇದು ಸಂಪೂರ್ಣ ಜೈನ್ ನಗರ, ಅಯೋಧ್ಯಾ ನಗರಿ ಎಂಬ ಜೀವಮಾನದ ದಿಯೋರಾಮಾವನ್ನು ಹೊಂದಿದೆ. ಇದರಲ್ಲಿ ಬರುವ ದೃಶ್ಯಗಳು ದೊಡ್ಡದಾಗಿದ್ದು ಸಂಕೀರ್ಣದಲ್ಲಿರುವ ದೃಶ್ಯಗಳು ಜೈನ ತೀರ್ಥಂಕರ ಆದಿನಾಥ ಅವರ ಹುಟ್ಟಿದ ಸಮಯದ ಘಟನೆಗಳನ್ನು ವಿವರಿಸುತ್ತದೆ.

ಇಲ್ಲಿ ಬೃಹತ್ ಮೂರು ಅಂತಸ್ತಿನ ಅರಮನೆಯಿದ್ದು ಇದು ನಗರದ ಜೀವನ ಶೈಲಿಯ ದೃಶ್ಯವನ್ನು ಪ್ರತಿಬಿಂಬಿಸುತ್ತದೆ. ಆನೆಗಳ ಮತ್ತು ಕುದುರೆಗಳ ದೊಡ್ಡ ಸೇನೆಗಳು ಇವುಗಳ ಚಿತ್ರಗಳನ್ನು ನೆಲದ ಮೇಲೆ ಚಿತ್ರಿಸಲಾಗಿದೆ . ಇಲ್ಲಿಗೆ ದೇವ ದೇವತೆಗಳು ಭೂಮಿಗೆ ಅಯೋಧ್ಯಾ ನಗರದಲ್ಲಿರುವ ತಮ್ಮ ಭೂಪ್ರದೇಶಕ್ಕೆ ಭೇಟಿ ನೀಡಲು ಬರುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಂತ ಆದಿನಾಥ ಅವರ ಹುಟ್ಟಿನಿಂದ ಈ ಭೂಮಿಯು ಪವಿತ್ರವೆಂದು ಪರಿಗಣಿಸಲಾಯಿತು. ಇಲ್ಲಿಯ ಬಂಗಾರ ಬಣ್ಣದಿಂದ ಅಲಂಕರಿಸಲಾದ ಗೋಡೆಗಳ ಮೇಲೆ ಅನೇಕ ಬಿಡಿಸಲಾದ ಅನೇಕ ಗ್ಲಾಸ್ ಚಿತ್ರಕಲೆಗಳು ಜೈನ ಧರ್ಮಗ್ರಂಥದ ಅನೇಕ ಕಥೆಗಳನ್ನು ಪ್ರತಿಬಿಂಬಿಸುತ್ತದೆ.

ಅಧೈ ದಿನ್ ಕಾ ಜೋಪ್ರಾ

ಅಧೈ ದಿನ್ ಕಾ ಜೋಪ್ರಾ

Ramesh lalwani

ಅಜ್ಮೇರ್ ನ ದರ್ಗಾದಿಂದ ಹೆಚ್ಚೇನೂ ದೂರದಲ್ಲಿರದ ಶಿಥಿಲಾವಸ್ಥೆಯಲ್ಲಿರುವ ಸುಂದರವಾದ ರಚನೆಯೆ ಆಧಿ ದಿನ್ ಕಾ ಜೋಪ್ರಾ ಅಂದರೆ ಎರಡು ಮತ್ತು ಒಂದು ಅರ್ಧ ದಿನದ ಗುಡಿಸಲು ಎಂದು ಅರ್ಥೈಸುತ್ತದೆ. ಅನೇಕರ ಪ್ರಕಾರ ಈ ರಚನೆಯು ಮೂಲತ: ಜೈನರ ಸಂಸ್ಕೃತ ಕಾಲೇಜಾಗಿತ್ತು ಅಥವಾ ಒಂದು ವೈಷ್ಣವ ದೇವಾಲಯವಾಗಿತ್ತು. ದೆಹಲಿಯ ಮೊದಲ ಮುಸಲ್ಮಾನ ದೊರೆಯಾದ ಸುಲ್ತಾನನಾದ ಕುತುಬುದ್ದೀನ್ ಐಬಕ್ ನ ಕಾಲದಲ್ಲಿ ಇದನ್ನು ಮಸೀದಿಯಾಗಿ ಪರಿವರ್ತನೆ ಮಾಡಿದನು ಅಲ್ಲದೆ ಮೂಲಕಟ್ಟಡದ ಎದುರುಗಡೆ ಏಳು ಕಮಾನುಗಳನ್ನು ಪ್ರತ್ಯೇಕವಾಗಿ ಸೇರಿಸಿದನು.

ಇದರಿಂದಾಗಿ ಈ ರಚನೆಯು ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿಯ ಮಸೀದಿಗೆ ಸಮಕಾಲೀನವಾದುದಾಗಿದೆ. ನಿಜವಾಗಿ ನೀವು ಹತ್ತಿರದಲ್ಲಿ ಈ ರಚನೆಯನ್ನು ವೀಕ್ಷಿಸಿದರೆ ಇದರ ಎತ್ತರವಾದ ಕಮಾನುಗಳು ಕುರಾನಿನ ಅನೇಕ ಪದಗಳನ್ನು ಒಳಗೊಂಡಿರುವುದನ್ನು ಕಲ್ಲಿನಲ್ಲಿ ಕೆತ್ತಿರುವುದನ್ನು ಕಾಣಬಹುದಾಗಿದೆ. ಮಸೀದಿಯಲ್ಲಿರುವ ಈ ಕಮಾನುಗಳು ಎರಡು ಮತ್ತು ಅರ್ಧ ದಿನದಲ್ಲಿ ನಿರ್ಮಿತವಾಯಿತು ಆದುದರಿಂದ ಈ ಸ್ಥಳಕ್ಕೆ ಅದೇ ಹೆಸರನ್ನ ನೀಡಲಾಗಿದೆ ಎಂದು ಹೇಳಲಾಗುತ್ತದೆ. ಇನ್ನೊಂದು ಸಿದ್ದಾಂತದ ಪ್ರಕಾರ ಈ ಮಸೀದಿಯು ಎರಡು ಮತ್ತು ಒಂದು ಅರ್ಧ ದಿನದ ಜಾತ್ರೆಯನ್ನು ನಡೆಸುತ್ತದೆ ಆದುದರಿಂದ ಈ ಹೆಸರು ಪಡೆದಿದೆ ಎಂದು ಹೇಳಲಾಗುತ್ತದೆ. ಆದರೆ ನಿಜವಾದ ಸಂಗತಿ ಏನೆಂದು ಇನ್ನೂ ಯಾರಿಗೂ ತಿಳಿದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X