Search
  • Follow NativePlanet
Share
» »ಕಾಲೇಜ್ ಟ್ರಿಪ್ ಹೋಗೋದಾದ್ರೆ ಈ ಸ್ಥಳಗಳಿಗೆಲ್ಲಾ ಹೋಗಬಹುದು

ಕಾಲೇಜ್ ಟ್ರಿಪ್ ಹೋಗೋದಾದ್ರೆ ಈ ಸ್ಥಳಗಳಿಗೆಲ್ಲಾ ಹೋಗಬಹುದು

ಕಾಲೇಜು ದಿನಗಳಲ್ಲಿ ಟ್ರಿಪ್ ಹೋಗೋದಂದ್ರೆ ಅದರ ಮಜಾನೇ ಬೇರೆ. ಸ್ನೇಹಿತರ ಜೊತೆಗೂಡಿ ಬೇರೆ ಬೇರೆ ಸ್ಥಳಗಳಿಗೆ ಟ್ರಿಪ್ ಹೋಗೋದೂ ನಿಜಕ್ಕೂ ಸುಂದರ ಅನುಭವವಾಗಿದೆ. ಕಾಲೇಜು ಸಮುಯದಲ್ಲಿ ಎಲ್ಲೆಲ್ಲಾ ಟ್ರಿಪ್ ಹೋಗಬೇಕು ? ಅಂತಹ ಸ್ಥಳಗಳು ಯಾವ್ಯಾವಿವೆ ಅನ್ನೋದರ ಪಟ್ಟಿ ಇಲ್ಲಿವೆ.

ನೈಟ್‌ ಟ್ರೆಕ್ಕಿಂಗ್ ಹೋಗಿದ್ದೀರಾ...ಇವೆಲ್ಲಾ ನೈಟ್ ಟ್ರೆಕ್‌ಗೆ ಬೆಸ್ಟ್ ತಾಣಗಳು ನೈಟ್‌ ಟ್ರೆಕ್ಕಿಂಗ್ ಹೋಗಿದ್ದೀರಾ...ಇವೆಲ್ಲಾ ನೈಟ್ ಟ್ರೆಕ್‌ಗೆ ಬೆಸ್ಟ್ ತಾಣಗಳು

ಗೋವಾ

ಗೋವಾ

PC:Zerohund
ಸಾಮಾನ್ಯವಾಗಿ ಕಾಲೇಜು ದಿನಗಳಲ್ಲಿ ಹೆಚ್ಚಿನವರು ಅಯ್ಕೆ ಮಾಡುವ ಸ್ಥಳ ಇದಾಗಿದೆ. ಪಾರ್ಟಿಹಬ್ ಆಗಿರುವ ಗೋವಾದಲ್ಲಿ ಪೋರ್ಚುಗೀಸ್ ಕಲ್ಚರ್‌ನ್ನು ಕಾಣಬಹುದು. ಬ್ಯಾಚುಲರ್ಸ್‌ಗಳು ಫ್ರೆಂಡ್ಸ್‌ ಜೊತೆ ಇಲ್ಲಿ ಬಂದು ಪಾರ್ಟಿ ಮಾಡುತ್ತಾರೆ. ಪ್ರತಿಯೊಬ್ಬರು ಬೀಚ್‌, ಚರ್ಚ್, ನೈಟ್ ಬಾರ್, ಕ್ಲಬ್, ಕೋಟೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಶ್ರೀನಗರ

ಶ್ರೀನಗರ

PC:Stuti chakraborty
ಕಾಶ್ಮೀರದಲ್ಲಿರುವ ಶ್ರೀನಗರವು ಬೆಟ್ಟಗಳಿಂದ ಆವೃತವಾಗಿರುವ ಪ್ರದೇಶವಾಗಿದ್ದು, ಬೆಟ್ಟಗಳ ನಡುವೆ ಜೀವನವನ್ನು ಎಂಜಾಯ್ ಮಾಡಲು ಉತ್ತಮ ಸ್ಥಳವಾಗಿದೆ. ಸ್ವರ್ಗ ಎಂದೇ ಹೇಳಬಹುದು. ಬ್ಯಾಚುಲರ್‌ಗಳು ತಮ್ಮ ಬೋರಿಂಗ್ ಲೈಫ್‌ನ್ನು ಇಂಟ್ರಸ್ಟಿಂಗ್ ಆಗಿಸಲು ತಮ್ಮ ಸ್ನೇಹಿತರ ಜೊತೆ ಬರುತ್ತಾರೆ. ದೂರದ ಊರುಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ,

ಹಂಪಿ

ಹಂಪಿ

PC: Bjørn Christian Tørrissen
ವಿಜಯನಗರ ಸಾಮ್ರಾಜ್ಯದ ಶಿಲ್ಪಗಳನ್ನು ನೋಡಬೇಕಾದರೆ ಹಂಪಿಗೆ ಹೋಗಬೇಕು. ಅಲ್ಲಿನ ವಾಸ್ತುಶಿಲ್ಪ, ಕಲ್ಲಿನಲ್ಲಿ ಕೆತ್ತಲಾಗಿರುವ ಕಲಾಕೃತಿ, ಕಲ್ಲಿನ ರಥ ಇವೆಲ್ಲಾ ಬಹಳ ಸುಂದರವಾಗಿದೆ. ಪ್ರವಾಸಿಗರನ್ನು ಮಂತ್ರಮುಗ್ಧವಾಗಿಸುತ್ತದೆ. ಐತಿಹಾಸಿಕ ಪರಂಪರೆಯ ಪಟ್ಟಿಯಲ್ಲಿ ಹಂಪಿ ಸೇರಿಕೊಂಡಿದೆ.

ಕಸೋಲ್

ಕಸೋಲ್

PC:Surajhaveri
ಈ ಸ್ಥಳಕ್ಕೆ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಲೇ ಬೇಕು. ಅಲ್ಲಿಗೆ ಒಮ್ಮೆ ಹೋದರೆ ಲೈಫ್ ಟೈಮ್ ಎಕ್ಸ್‌ಪೀರಿಯನ್ಸ್‌ ಜೊತೆಗೆ ಹಿಂದಿರುಗುತ್ತಾರೆ. ಬೆಳೆಯುತ್ತಿರುವ ಹರಿನಿಂದ ಕೂಡಿರುವ ಈ ಪ್ರದೇಶವು ಶಾಂತಿಯುತ ಪ್ರದೇಶವಾಗಿದೆ,

ಕೂರ್ಗ್

ಕೂರ್ಗ್

PC:Charankmrh
ಕರ್ನಾಟಕದ ಊಟಿ ಎಂದೇ ಕರೆಯಲಾಗುವ ಕೊಡಗು ಹೆಚ್ಚಿನವರ ಅಚ್ಚುಮೆಚ್ಚಿನ ತಾಣವಾಗಿರುತ್ತದೆ. ಕಾಫಿ ತೋಟಕ್ಕೆ ಫೇಮಸ್ ಆಗಿರುವ ಈ ಪ್ರದೇಶ ಯಾವಾಗಲೂ ಕೂಲ್ ಆಗಿರುತ್ತದೆ. ಸ್ನೇಹಿತರ ಜೊತೆ ಕಾಲೇಜ್ ಟ್ರಿಪ್ ಹೋಗೋದಾದರೆ ಇದೂ ಕೂಡಾ ಒಂದು ಉತ್ತಮ ಆಯ್ಕೆಯಾಗಿದೆ.

ರಿಶಿಕೇಶ್

ರಿಶಿಕೇಶ್

PC:Ajay Tallam
ದೇಶದ ಪ್ರಸಿದ್ಧ ದೇವಾಲಯವಿರುವ ಈ ತಾಣ ವಾಟರ್ ಸ್ಫೋರ್ಟ್ಸ್‌ಗೂ ಹೆಸರುವಾಸಿಯಾಗಿದೆ. ರಿವರ್ ರಾಫ್ಟಿಂಗ್ ಅಂತೂ ಸಖತ್ ಫೇಮಸ್ ಆಗಿದೆ. ಗಂಗಾ ನದಿಯಲ್ಲಿ ಸ್ನೇಹಿತರ ಜೊತೆ ಸೇರಿ ರಿವರ್ ರಾಫ್ಟಿಂಗ್ ಮಾಡೋದರ ಅನುಭವವೇ ಬೇರೆ.

ಮನಾಲಿ

ಮನಾಲಿ

PC: John Hill
ಮಂಜಿನ ಬೆಟ್ಟಗಳ ನಡುವೆ ಇರುವ ಈ ಸ್ಥಳವು ಹಿಮಾಚಲಪ್ರದೇಶದ ಹೃದಯಭಾಗವಾಗಿದೆ. ಇಲ್ಲಿ ಬೆಟ್ಟ ಹತ್ತುವುದು ಹಾಗೂ ರಾತ್ರಿ ಹೋತ್ತಿನಲ್ಲೂ ಮಂಜು ಬೀಳುವುದು ಪ್ರವಾಸಿಗರಿಗೆ ಇಲ್ಲಿನ ಲೋಕಲ್ ಜನರ ಪಾಡನ್ನು ಬಿಚ್ಚಿಡುತ್ತದೆ. ಸಾಹಸಮಯ ಚಟುವಟಿಕೆಗೂ ಪ್ರಸಿದ್ಧವಾಗಿದೆ.

ಮೈಸೂರು

ಮೈಸೂರು

ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ರೇಷ್ಮೇ ಸೀರೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಅರಮನೆ, ನ್ಯಾಷನಲ್ ಪಾರ್ಕ್, ಬೃಂದಾವನ, ಕೆಆರ್ಎಸ್ ಅಣೆಕಟ್ಟು ಇವೆಲ್ಲಾ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

Read more about: india travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X