Search
  • Follow NativePlanet
Share
» »ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟೊಂದು ಮುಂದಿತ್ತು ಅನ್ನೋದನ್ನು ಈ ಸ್ಥಳ ತಿಳಿಸುತ್ತದೆ

ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟೊಂದು ಮುಂದಿತ್ತು ಅನ್ನೋದನ್ನು ಈ ಸ್ಥಳ ತಿಳಿಸುತ್ತದೆ

ಮಧ್ಯಪ್ರದೇಶದಲ್ಲಿರುವ ಉಜ್ಜೈನ್ ಹಿಂಧೂ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಾಚೀನ ನಗರವು ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿಲ್ಲ. ಬದಲಾಗಿ ತನ್ನ ಐತಿಹಾಸಿಕತೆಗೂ ಪ್ರಸಿದ್ಧಿಹೊಂದಿದೆ. ಈ ಸ್ಥಳಕ್ಕೆ ತನ್ನದೇ ಆದ ಒಂದು ಕಥೆ ಇದೆ. ಹಿಂದೆ ಉಜ್ಜೈನಿ ಅವಂತಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಭಾರತದ ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರ್

ಬ್ರಿಟಿಷರಿಂದ ಇಂಧೋರ್‌ನ್ನು ವಿಕಸನ ಮಾಡುವ ಮೊದಲ ಉಜ್ಜೈನ್ 19 ನೇ ಶತಮಾನದ ಆರಂಭದಲ್ಲಿ ಮಧ್ಯ ಭಾರತದ ಒಂದು ರಾಜನೀತಿಯನ್ನು ಹೊಂದಿರುವ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಇದು ಪ್ರಾಚೀನ ಕಾಲದಲ್ಲಿ ಆಧ್ಯಾತ್ಮಿಕತೆಯ ಕೇಂದ್ರವೂ ಆಗಿತ್ತು. ಇಲ್ಲಿ ನಡೆಯುವ ಮಹಾಕುಂಭ ಮೇಳವು ಇಡೀ ವಿಶ್ವವನ್ನು ತನ್ನತ್ತ ಆಕರ್ಷಿಸುತ್ತದೆ. ಲಕ್ಷಾಂತರ ಭಕ್ತರು ಈ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. ಪ್ರವಾಸಿಗರ ದೃಷ್ಠಿಯಲ್ಲಿ ಉಜ್ಜೈನ್ ಎಷ್ಟು ಮುಖ್ಯ ಅನ್ನೋದನ್ನು ತಿಳಿಯೋಣ.

ಮಹಾಕಾಲೇಶ್ವರ ಮಂದಿರ

ಮಹಾಕಾಲೇಶ್ವರ ಮಂದಿರ

ಉಜ್ಜೈನ್‌ನ್ನು ಸುತ್ತಾಡುವಾಗ ನೀವು ಮೊದಲು ಇಲ್ಲಿನ ಮಹಾಕಾಲೇಶ್ವರ ಮಂದಿರದಿಂದ ಪ್ರಾರಂಭಿಸಿ. ಇಲ್ಲಿನ ಶಿವಲಿಂಗವು ದೇಶದ 12 ನೇ ಜ್ಯೋತಿರ್ಲಿಂಗದಲ್ಲಿ ಒಂದಾಗಿದೆ. ಈ ಜ್ಯೋತಿರ್ಲಿಂಗವು ಸ್ವಯಂ ಭೂ ವಾಗಿದ್ದು, ಇದು ಯಾವಾಗ ಅಸ್ತಿತ್ವಕ್ಕೆ ಬಂದಿದ್ದು ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಇಲ್ಲಿನ ಮಂದಿರವು ಒಂದು ಪ್ರಸಿದ್ಧ ಕೆರೆಯ ಸಮೀಪದಲ್ಲಿದೆ. ಕಾಳಿದಾಸನ ಕೃತಿಯಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ.

ಕಾಲ ಬೈರವ ದೇವಸ್ಥಾನ

ಕಾಲ ಬೈರವ ದೇವಸ್ಥಾನ

PC-Utcursch

ಮಹಾಕಾಲೇಶ್ವರ ಮಂದಿರದ ನಂತರ ನೀವು ಶಿಪ್ರ ನದಿಯ ತೀರದಲ್ಲಿರುವ ಕಾಲ ಬೈರವ ದೇವಸ್ಥಾನದ ದರ್ಶನ ಪಡೆಯಬಹುದು. ಈ ಮಂದಿರವನ್ನು ರಾಜ ಭದ್ರ ಸೇನಾನು ನಿರ್ಮಿಸಿದನು ಎನ್ನುತ್ತದೆ ಇತಿಹಾಸ. ಹಿಂದೂ ಪುರಾನದ ಪ್ರಕಾರ ಕಾಲಬೈರವ ಶಿವನ ರೂಪ. ಈ ಮಂದಿರವ ಪರಿಸರದಲ್ಲಿ ದೇವಿ ದೇವತೆಯರ ಮೂರ್ತಿಗಳನ್ನೂ ಕಾಣಬಹುದು. ಇಲ್ಲಿ ಕಾಲಬೈರವನಿಗೆ ಇತರ ಪ್ರಸಾದದ ಜೊತೆಗೆ ಸಾರಾಯಿಯನ್ನೂ ಅರ್ಪಿಸಲಾಗುತ್ತದೆ.

ಜಂತರ್ ಮಂತರ್

ಜಂತರ್ ಮಂತರ್

PC- Bernard Gagnon

ಉಜ್ಜೈನ್‌ನಲ್ಲಿರುವ ಜಂತರ್ ಮಂತರ್ ಒಂದು ಲೋಕಪ್ರಿಯ ಐತಿಹಾಸಿಕ ತಾಣವಾಗಿದೆ. ಇಲ್ಲಿ ಅಧ್ಯಯನದ ಖಗೋಳ ವಿಜ್ಞಾನದ ಶಿಕ್ಷಣವನ್ನು ನೀಡುವ ಅಧ್ಯಯನ ಕೇಂದ್ರವಿತ್ತು. 17 ನೇ ಶತಮಾನದಲ್ಲಿ ರಾಜ ಜಯಸಿಂಗ್ ಜಂತರ್‌ ಮಂತರ್‌ನ್ನು ನಿರ್ಮಿಸಿದ್ದನು ಎನ್ನುವುದನ್ನು ತಿಳಿಸುತ್ತದೆ ಇತಿಹಾಸ. ಜಯಸಿಂಹ ಓರ್ವ ಮಹಾನ್ ವಿಜ್ಞಾನಿಯಾಗಿದ್ದರು. ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಜಂತರ್ ಮಂತರ್‌ನಲ್ಲಿರುವ ಪ್ರತಿಯೊಂದು ಉಪಕರಣವನ್ನು ರಾಜ ಜಯಸಿಂಗ್‌ನ ಕಾಲದಲ್ಲಿ ಮಾಡಲಾಗಿರುವವರು. ಕರ್ಕಾಟಕ ರೇಖೆಯು ಉಜ್ಜೈನಿಯಿಂದ 3 ಕಿ.ಮೀ ದೂರದಲ್ಲಿದೆ. ಹಾಗಾಗಿ ಇದೇ ಕಾರಣದಿಂದಲೋ ಏನೋ ರಾಜ ಜಯಸಿಂಗ್‌ ಒಂದು ವೇದಶಾಲೆಯ ನಿರ್ಮಾಣ ಮಾಡಿದನು. ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟು ಮುಂದಿದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ.

ಕಾಲಿಯಾದೇಹ ಪ್ಯಾಲೇಸ್

ಕಾಲಿಯಾದೇಹ ಪ್ಯಾಲೇಸ್

PC- Prabhavsharma8

ಇಲ್ಲಿ ನೀವು ಶಿಪ್ರ ನದಿಯ ತೀರದಲ್ಲಿರುವ ಕಾಲಿಯಾದೇಹ ಪ್ಯಾಲೇಸ್‌ನ್ನು ತಿರುಗಾಡಬಹುದು. ಇತಿಹಾಸದತ್ತ ಕಣ್ಣು ಹಾಯಿಸಿದರೆ ಈ ಪ್ಯಾಲೇಸ್‌ನ್ನು 1458 ಇಸವಿಯಲ್ಲಿ ಮಂಡೂವಿನ ಸುಲ್ತಾನರು ನಿರ್ಮಿಸಿದ್ದರು ಎನ್ನುವುದು ತಿಳಿಯುತ್ತದೆ. ಈ ಅರಮನೆಯ ವಾಸ್ತುಶಿಲ್ಪವು ಪಾರ್ಸಿ ವಾಸ್ತುಕಲೆಯಿಂದ ಪ್ರಭಾವಿತವಾಗಿರುವಂತಹದ್ದು. 1920ರಲ್ಲಿ ಈ ಅರಮನೆಯನ್ನು ಮಾದವ ರಾವ್ ಸಿಂಧಿಯಾ ಪುನಃನಿರ್ಮಾಣ ಮಾಡಿದರು.

ಚಿಂತಾಮನ್ ಗಣೇಶ ಮಂದಿರ

ಚಿಂತಾಮನ್ ಗಣೇಶ ಮಂದಿರ

PC- Ssriram mt

ಇಲ್ಲಿ ಚಿಂತಾಮನ ಗಣೇಶನ ಮಂದಿರವೂ ಇದೆ. ಶಿಪ್ರ ನದಿಯ ತೀರದಲ್ಲಿರುವ ಈ ಮಂದಿರವು ನಗರದ ಅತ್ಯಂತ ದೊಡ್ಡ ಗಣೇಶನ ಮಂದಿರವಾಗಿದೆ. ಇಲ್ಲಿ ಗಣೇಶನ ಮೂರ್ತಿ ಸ್ವಯಂ ಪ್ರಕಟವಾಗಿದ್ದು ಎನ್ನಲಾಗುತ್ತದೆ. ಇಲ್ಲಿ ಗಣೇಶನನ್ನು ಚಿಂತಾಮಣಿ ರೂಪದಲ್ಲಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more