Search
  • Follow NativePlanet
Share
» »ಮಾಟಮಂತ್ರ ಮಾಡೋಕೆ ಈ ಸ್ಥಳಗಳು ತುಂಬಾನೇ ಫೇಮಸ್...ಕೊಳ್ಳೆಗಾಲ ಇದ್ರ ಮುಂದೇ ಏನೂ ಅಲ್ಲ...

ಮಾಟಮಂತ್ರ ಮಾಡೋಕೆ ಈ ಸ್ಥಳಗಳು ತುಂಬಾನೇ ಫೇಮಸ್...ಕೊಳ್ಳೆಗಾಲ ಇದ್ರ ಮುಂದೇ ಏನೂ ಅಲ್ಲ...

By Rajatha

ಭಾರತದಲ್ಲಿ ಮಾಟಮಂತ್ರಗಳೆಲ್ಲಾ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿವೆ. ತಂತ್ರ ಮಂತ್ರಗಳ ಸಹಾಯದಿಂದ ಮನುಷ್ಯರನ್ನು ವಶೀಕರಣಗೊಳಿಸುವುದು ಈ ಮಾಟ ಮಂತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ವಶೀಕರಣದ ಪ್ರಯೋಗವನ್ನು ತಮ್ಮ ವಿರೋಧಿಗಳ ಮೇಲೆ ನಡೆಸುತ್ತಾರೆ. ಈ ಮಾಟಮಂತ್ರಗಳನ್ನು ಮಾಡುವವರನ್ನು ತಾಂತ್ರಿಕರು ಎನ್ನುತ್ತಾರೆ. ಬಂಗಾಳ ಅಸ್ಸಾಂನಂತಹ ಹಲವು ರಾಜ್ಯಗಳಿವೆ ಅವು ಈ ಮಾಟಮಂತ್ರಗಳಿಗಾಗಿಯೇ ಪ್ರಸಿದ್ಧಿಯನ್ನು ಪಡೆದಿದೆ.

ಇವುಗಳಷ್ಟೇ ಅಲ್ಲದೆ ಭಾರತದಲ್ಲಿ ಇನ್ನೂ ಹಲವರು ಸ್ಥಳಗಳಿವೆ ಅಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮಾಟಮಂತ್ರಗಳನ್ನು ನಡೆಸಲಾಗುತ್ತಿದೆ. ಆದರೆ ಪ್ರಾಚೀನ ಯುಗದಿಂದ ಆಧುನಿಕ ಯುಗದತ್ತ ಕಾಲಿಡುತ್ತಿರುವ ಈಗಿನ ಕಾಲದಲ್ಲೂ ಜನರು ತಂತ್ರ ಮಂತ್ರಗಳನ್ನು ನಂಬುತ್ತಾರೆ ಎಂದರೇ ಆಶ್ಚರ್ಯವೇ ಸರಿ. ಇನ್ನೂ ಯಾವ್ಯಾವ ಸ್ಥಳದಲ್ಲಿ ಗುಟ್ಟಾಗಿ ಮಾಟಮಂತ್ರ ನಡೆಸ್ತಾರೆ ಅನ್ನೋದು ನಿಮಗೆ ಗೊತ್ತಾ?

ಕರ್ನಾಟಕದ ಕೊಳ್ಳೆಗಾಲ:

ಕರ್ನಾಟಕದ ಕೊಳ್ಳೆಗಾಲ:

ಕರ್ನಾಟಕದ ಚಾಮರಾಜನಗರದಲ್ಲಿರುವ ಕೊಳ್ಳೆಗಾಲವು ಮಾಟಮಂತ್ರಗಳಿಗಾಗಿಯೇ ಹೆಸರಾಗಿರುವಂತಹ ಸ್ಥಳವಾಗಿದೆ. ದೂರ ದೂರದಿಂದ ಜನರು ಇಲ್ಲಿ ವಶೀಕರಣ, ಮಾಟ ಮಂತ್ರ ಮಾಡಿಸಲು, ಹಾಗೆಯೇ ಬಿಡಿಸಲು ಬರುತ್ತಾರೆ. ಇದೊಂದು ರೀತಿಯ ಬ್ಯುಸಿನೆಸ್ ಆಗಿ ಬಿಟ್ಟಿದೆ.

ಕೇರಳದ ತ್ರಿಶೂರ:

ಕೇರಳದ ತ್ರಿಶೂರ:

ಸಾಕ್ಷಾರತೆ ವಿಷ್ಯದಲ್ಲಿ ಕೇರಳ ರಾಜ್ಯವು ದೇಶದ ಇತರ ಎಲ್ಲಾ ರಾಜ್ಯಗಳಿಗಿಂತಲೂ ಬಹಳ ಮುಂದಿದೆ. ಹಾಗಿರುವಾಗ ಇಲ್ಲಿನ ಜನ ತಂತ್ರಮಂತ್ರಗಳಲ್ಲಿ ವಿಶ್ವಾಸ ಇಟ್ಟಿದ್ದಾರೆ ಎಂದರೆ ಇದು ಆಶ್ಚರ್ಯವೇ ಸರಿ. ಈ ಸ್ಥಳವು ಮಾಟಕ್ಕೆ ಪ್ರಸಿದ್ಧವಾಗಿದ್ದು, ಇಲ್ಲಿ ಕುಟ್ಟಿಚಾತನ್‌ನ್ನು ವಿಷ್ಣುವಿನ ರೂಪ ಎಂದು ನಂಬಲಾಗುತ್ತದೆ. ಇಲ್ಲಿಯ ತಾಂತ್ರಿಕ ಪೂಜಾರಿ ಪೂಜೆ ಮಾಡುವ ಮೂಲಕ ಜನರ ಸಂಕಷ್ಟವನ್ನು ಪರಿಹರಿಸುವ ವಚನ ನೀಡುತ್ತಾರೆ.

ಹೈದರಾಬಾದ್‌ನ ಸುಲ್ತಾನ್‌ ಶಾಹಿ ಇಲಾಕೆ:

ಹೈದರಾಬಾದ್‌ನ ಸುಲ್ತಾನ್‌ ಶಾಹಿ ಇಲಾಕೆ:

ಹೈದರಾಬಾದ್‌ನಲ್ಲಿರುವ ಈ ಇಲಾಕೆಯನ್ನು ಮಾಟಮಂತ್ರದ ಬಹುದೊಡ್ಡ ಅಡ್ಡ ಎನ್ನಲಾಗುತ್ತದೆ. ಇಲ್ಲಿ ಮದುವೆಯ ನಂತರ ಬರುವ ತಾಪತ್ರಯಗಳನ್ನು ಹೋಗಲಾಡಿಸುವುದಾಗಿ ಹೇಳಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಗುತ್ತದೆ. ಇದರಲ್ಲಿ ಬರೀ ಪುರುಷರಷ್ಟೇ ಅಲ್ಲ ಮಹಿಳೆಯರೂ ಕೂಡಾ ಸೇರಿಕೊಂಡಿದ್ದಾರೆ. ಕಷ್ಟಗಳನ್ನು ದೂರಮಾಡುತ್ತೇವೆ ಎಂದು ಹೇಳಿಕೊಂಡು ಪುರುಷರ ಜೊತೆ ಶಾರೀರಿಕ ಸಂಬಂಧವನ್ನು ಬೆಳೆಸುವವರೂ ಇದ್ದಾರೆ. ಸುಲ್ತಾನ್‌ಶಾಹಿಯಲ್ಲಿರುವ ಕೆಲವು ಪ್ರದೇಶಗಳಲ್ಲಿ ಮಾಟಮಂತ್ರಗಳನ್ನು ಕಲಿಸಿಕೊಡಲಾಗುತ್ತದೆ.

ವಾರಣಾಸಿಯ ಸ್ಮಶಾನ ಘಾಟ್ :

ವಾರಣಾಸಿಯ ಸ್ಮಶಾನ ಘಾಟ್ :

ವಾರಣಾಸಿಯನ್ನು ಭಾರತದ ಧಾರ್ಮಿಕ ನಗರಿ ಎನ್ನಲಾಗುತ್ತದೆ. ಇಲ್ಲಿ ದೂರದೂರದಿಂದ ಭಕ್ತರು ಪೂಜೆಗಾಗಿ ಆಗಮಿಸುತ್ತಾರೆ. ಅಲ್ಲದೇ ದೇಶದ ಅತೀದೊಡ್ಡ ಸ್ಮಶಾನ ಇರುವುದೂ ವಾರಣಾಸಿಯಲ್ಲಿ. ಈ ಸ್ಮಶಾನದಲ್ಲಿ ಅಘೋರಿ ಸಾಧುಗಳು ಮಾಟಮಂತ್ರ ಮಾಡುತ್ತಾರೆ ಇದರಿಂದ ಅವರಿಗೆ ಹೆಚ್ಚಿನ ತಾಕತ್ತು ದೊರೆಯುತ್ತದೆ ಎನ್ನಲಾಗುತ್ತದೆ.

ಕೋಲ್ಕತ್ತಾದ ನಿಮ್ತಲಾ ಘಾಟ್:

ಕೋಲ್ಕತ್ತಾದ ನಿಮ್ತಲಾ ಘಾಟ್:

ಕೊಲ್ಕತ್ತಾ ಮೊದಲಿನಿಂದಲೂ ಮಾಟಮಂತ್ರಗಳ ವಿಚಾರದಲ್ಲಿ ಚರ್ಚಾವಿಷ್ಯವಾಗಿಯೇ ಉಳಿದಿದೆ. ಇಲ್ಲಿನ ನಿಮ್ತಲಾ ಘಾಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂತ್ರ ಸಾಧನೆಯನ್ನು ಮಾಡಲಾಗುತ್ತದೆ. ರಾತ್ರಿಯಲ್ಲಿ ಗುಪ್ತವಾಗಿ ತಂತ್ರ ಮಂತ್ರಗಳ ಅಭ್ಯಾಸ ಮಾಡಲಾಗುತ್ತದೆ. ಸ್ಮಶಾನದಲ್ಲಿ ಅಘೋರಿ ಸಾಧುಗಳು ತಡರಾತ್ರಿವರೆಗೂ ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಯಾವ ಯಾವ ರೀತಿಯ ಗುಪ್ತ ಕಲೆಯನ್ನು,ಮಂತ್ರ ತಂತ್ರಗಳನ್ನು ಕಲಿಯುತ್ತಾರೆ ಎನ್ನುವುದನ್ನು ಗುಟ್ಟಾಗಿಡುತ್ತಾರೆ.

ಅಸ್ಸಾಂನ ಮಾಯಾಂಗ್ :

ಅಸ್ಸಾಂನ ಮಾಯಾಂಗ್ :

ಬಂಗಾಳದ ನಂತರ ಮಾಟಮಂತ್ರಗಳಿಗಾಗಿಯೇ ಹೆಚ್ಚು ಚರ್ಚೆಯಲ್ಲಿರುವ ಸ್ಥಳವೆಂದರೆ ಅಸ್ಸಾಂನ ಮಾಯಾಂಗ್ . ಇಲ್ಲಿಯ ಹೆಸರನ್ನು ಹೇಳಲೂ ಜನರು ಹೆದರುತ್ತಾರೆ.

Read more about: travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X