Search
  • Follow NativePlanet
Share
» »ಬೆಂಗ್ಳೂರಿನಲ್ಲಿ ಸ್ಟ್ರೀಟ್‌ ಫುಡ್ ತಿಂದಿದ್ರೆ, ಪಕ್ಕಾ ಇಲ್ಲಿ ತಿಂದಿರ್ತೀರಾ...

ಬೆಂಗ್ಳೂರಿನಲ್ಲಿ ಸ್ಟ್ರೀಟ್‌ ಫುಡ್ ತಿಂದಿದ್ರೆ, ಪಕ್ಕಾ ಇಲ್ಲಿ ತಿಂದಿರ್ತೀರಾ...

By Manjula Balaraj Tantry

ಈಗಿನ ಯುವಕರಂತೂ ಫಾಸ್ಟ್ ಫುಡ್ ಪ್ರಿಯರು. ಮನೆಯಲ್ಲಿ ತಿನ್ನೋದಕ್ಕಿಂತ ಹೊರಗಡೆ ತಿನ್ನೋದೇ ಹೆಚ್ಚು. ಹೀಗಿರುವಾಗ ಬೆಂಗಳೂರಿನಲ್ಲಿ ಯಾವೆಲ್ಲಾ ಸ್ಟ್ರೀಟ್ ಫುಡ್ ಸೆಂಟರ್‌ಗಳಿವೆ ಅನ್ನೋದು ನಿಮಗೆ ಗೊತ್ತಾ? ಗೊತ್ತಿಲ್ಲಾಂದ್ರೆ ಇಲ್ಲಿದೆ ಬೆಂಗಳೂರಿನ ಬೆಸ್ಟ್ ಸ್ಟ್ರೀಟ್‌.

ಗರ್ಲ್ಸ್ ಗ್ಯಾಂಗ್‌ ಟ್ರಿಪ್‌ಗೆ ಬೆಸ್ಟ್ ಸ್ಪಾಟ್

1 ವಿ ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರು

1 ವಿ ವಿ ಪುರಂ ಫುಡ್ ಸ್ಟ್ರೀಟ್ ಬೆಂಗಳೂರು

Omshivaprakash

ಬಿಸಿಯಾದ ಮತ್ತು ಮಸಾಲೆಯುಕ್ತ ಮಸಾಲ ದೋಸೆಯಿಂದ ಹಿಡಿದು ಸಿಹಿಯಾದ ಮತ್ತು ಶುದ್ದ ತುಪ್ಪದಿಂದ ಸವರಿದ ಬೇಳೆ ಹೋಳಿಗೆಯವರೆಗೆ ಬೆಂಗಳೂರಿನ ಈ ಫುಡ್ ಸ್ಟ್ರೀಟ್ ನಲ್ಲಿ ನೀವು ತಿನ್ನ ಬಯಸುವಂತಹ ಎಲ್ಲವೂ ಸಿಗುತ್ತದೆ. ಇಲ್ಲಿಯ ಶಿವಣ್ಣ ಗುಲ್ಕನ್ ಸೆಂಟರ್ ನಲ್ಲಿ ಸಿಗುವ ಬಿಳಿ ಬೆಣ್ಣೆ ಮತ್ತು ಶುದ್ದ ಜೇನಿನಿಂದ ತಯಾರಿಸಲಾಗುವ ಗುಲ್ಕನ್ ತಿನ್ನುವುದನ್ನು ತಪ್ಪಿಸಲೇಬಾರದು. ಈ ಬೀದಿಯಲ್ಲಿ ಸಿಗುವ ಆಹಾರಗಳ ಬೆಲೆಯೂ ಕೈಗೆಟಕುವ ರೀತಿಯಲ್ಲಿದ್ದು ಬೆಂಗಳೂರಿನಲ್ಲಿ ಅತ್ಯುತ್ತಮವಾದ ಆಹಾರ ಸಿಗುವ ಸ್ಥಳವೆನಿಸಿದೆ. ಇವಲ್ಲದೆ ಇಲ್ಲಿ ಪಾವ್ ಬಾಜಿ ಅಂಗಡ್, ಸ್ವೀಟ್ ಕಾರ್ನ್ ಅಂಗಡಿ, ಮಂಚೂರಿ ಅಂಗಡಿ ಇನ್ನೂ ಮುಂತಾದುವುಗಳನ್ನು ಕಾಣಬಹುದಾಗಿದೆ.

2 ಸೆಂಟ್ರಲ್ ಟಿಫಿನ್ ರೂಮ್ - ಮಲ್ಲೇಶ್ವರಂ

2 ಸೆಂಟ್ರಲ್ ಟಿಫಿನ್ ರೂಮ್ - ಮಲ್ಲೇಶ್ವರಂ

Mishti Malik

ಸಂಪೂರ್ಣವಾಗಿ ರುಚಿಕರವಾದ ಬೆಣ್ಣೆ ಮಸಾಲಾ ದೋಸಾವನ್ನು ನಿರಂತರವಾಗಿ ಗ್ರಾಹಕರಿಗೆ ಬೃಹತ್ ಸಂಖ್ಯೆಯವರಿಗೆ ಒದಗಿಸುತ್ತಿರುವುದು ಮಕ್ಕಳ ಆಟವಲ್ಲ. ಆದರೆ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಸಿಟಿಆರ್ ಆರು ದಶಕಗಳ ಕಾಲದಿಂದಲೂ ದೋಸೆ ಪ್ರಿಯರಿಗೆ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಇಂದಿಗೂ ಕೂಡಾ, ಬೆಂಗಳೂರಿನ ಈ ಟಿಫಿನ್ ರೂಮ್ ಅತ್ಯುತ್ತಮ ದಕ್ಷಿಣ ಭಾರತೀಯ ಆಹಾರವನ್ನು ಹೊಂದಿರುವ ಸ್ಥಳಗಳಲ್ಲಿ ಒಂದಾಗಾಗಿದೆ. ಇಲ್ಲಿ ವಿವಿಧ ಬಗೆಯ ರೀತಿಯ ದೋಸೆಗಳ ಹೊರತಾಗಿ ಇಲ್ಲಿ ಇಡ್ಲಿ - ವಡಾ , ಕೇಸರಿಬಾತ್, ಮತ್ತು ಪೂರಿ ಸಾಗು ಕೂಡಾ ಇಲ್ಲಿ ಸಿಗುವ ಇತರ ಆಹಾರಗಳು. ಐಸ್ ಕ್ರೀಂ, ಚಾಟ್ ಗಳು ಮತ್ತು ಈ ಸ್ಥಳದ ಸುತ್ತಲೂ ಇತರ ವಸ್ತುಗಳನ್ನು ಪೂರೈಸುವ ಇತರ ಅಂಗಡಿಗಳು ಇವೆ.

3 ಬ್ರಾಹ್ಮಣರ ಕಾಫೀ ಬಾರ್- ಬಸವನಗುಡಿ

3 ಬ್ರಾಹ್ಮಣರ ಕಾಫೀ ಬಾರ್- ಬಸವನಗುಡಿ

Tinu alby

ಬೆಂಗಳೂರಿನ ಬಸವನಗುಡಿಯಲ್ಲಿರುವ ಬ್ರಾಹ್ಮಣರ ಕಾಫೀ ಬಾರ್ ನಲ್ಲಿ ಸಿಗುವ ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಕ್ಕೆ ತನ್ನದೇ ಆದ ಒಂದು ಗುಣಮಟ್ಟವನ್ನು ಹೊಂದಿದೆ ಮತ್ತು ತನ್ನದೇ ಆದ ಹೆಸರಿದೆ. ಇಲ್ಲಿ ಹಬೆಯಾಡುವ ಮೆದುವಾದ ಬಿಸಿ ಅಕ್ಕಿಯ ಇಡ್ಲಿಗಳು ರುಚಿಕರವಾಗಿರುತ್ತದೆ. ಮತ್ತು ಗರಿ ಗರಿಯಾದ ವಡೆಗಳು ನೀವು ಒಂದೇ ಪ್ಲೇಟಿಗೆ ತಿನ್ನುವುದನ್ನು ಮುಕ್ತಾಯ ಮಾಡಲು ಬಿಡಲಾರವು. ಇಲ್ಲಿ ಇನ್ನಿತರ ಆಹಾರಗಳೂ ಸಿಗುತ್ತವೆ ಆದರೆ ಇಲ್ಲಿಯ ಇಡ್ಲಿ ವಡೆಯ ರುಚಿಗೆ ಸಾಟಿಯಾದುದು ಇನ್ನೊಂದಿಲ್ಲವೆನ್ನಬಹುದು. ಕಾಫೀ ಟೀ ಕೇಸರಿಬಾತ್ ಇಲ್ಲಿ ಸಿಗಲಾಗುವ ಇನ್ನಿತರ ಆಹಾರಗಳು.

4 ಹರೀಸ್ ಸ್ಯಾಂಡ್ ವಿಚ್ ಜೋನ್- ಜಯನಗರ

4 ಹರೀಸ್ ಸ್ಯಾಂಡ್ ವಿಚ್ ಜೋನ್- ಜಯನಗರ

Sahilrathod

ಚಾಕಲೇಟ್ ಸಾಂಡ್ ವಿಚ್!! ಹೌದು ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಇಲ್ಲಿ ಇದುವೇ ಪ್ರಸಿದ್ದವಾದುದು. ಈ ಸ್ಥಳವು ಬೆಂಗಳೂರಿನ ಅತ್ಯಂತ ಉತ್ತಮವಾದ ಆಹಾರಗಳನ್ನು ಹಾಗೂ ಸ್ಯಾಂಡ್ ವಿಚ್ ಗಳು ಮತ್ತು ರುಚಿಕರವಾದ ಚಾಟ್ ಗಳನ್ನು ಹೊಂದಿದ ಬೀದಿಗಳನ್ನೊಳಗೊಂಡ ಜಯನಗರದಲ್ಲಿದೆ. ಇಲ್ಲಿ ಸಿಗುವ ಸ್ಯಾಂಡ್ ವಿಚ್ ಗಳು ಮತ್ತು ಚಾಟ್ ಗಳು ಕೈಗೆಟಕುವ ದರದಲ್ಲಿದ್ದು ಇವು ಆರೋಗ್ಯಕರವಾದುದಾಗಿದೆ. ಪಕ್ಕದಲ್ಲಿ ಲಸ್ಸಿ ಕಾರ್ನರ್ ಇದೆ ಸ್ಯಾಂಡ್ ವಿಚ್ ಜೋನ್ ನಲ್ಲಿ ಆಹಾರ ಸೇವಿಸಿದ ನಂತರ ಇಲ್ಲಿ ಸಿಹಿಯಾದ ಲಸ್ಸಿಯನ್ನು ಇಲ್ಲಿ ಸೇವಿಸಬಹುದಾಗಿದೆ.

5 ರಾಕೇಶ್ ಕುಮಾರ್ ಪಾನಿಪೂರಿ ಸ್ಟಾಲ್ - ಜಯನಗರ,

5 ರಾಕೇಶ್ ಕುಮಾರ್ ಪಾನಿಪೂರಿ ಸ್ಟಾಲ್ - ಜಯನಗರ,

Anshuman S Manur

ಪಾನೀಪುರಿ- ಗೋಲ್ ಗಪ್ಪಾ- ಪುಚ್ಕಾ ಅಥವಾ ನೀವೇನು ಪ್ರೀತಿಯಿಂದ ಹೆಸರಿಟ್ಟು ಕರೆಯುವಿರೋ ಅದನ್ನು ಈ ಅಂಗಡಿಯು ಈ ಆಹಾರಗಳನ್ನು ನೀಡುತ್ತದೆ ಅಲ್ಲದೆ ಈ ಆಹಾರದಲ್ಲಿ ರುಚಿಯ ಸಾರವು ಎದ್ದು ಕಾಣುತ್ತದೆ. ಬೆಂಗಳೂರಿನ ಆಹಾರ ಬೀದಿಗಳ ಪೈಕಿಯಲ್ಲಿ ಇದರ ಹೆಸರಿರದಿದ್ದಲ್ಲಿ ಅಪೂರ್ಣವೆನಿಸುವುದು. ರಾಕೇಶ್ ಕುಮಾರ್ ಪಾನಿ ಪುರಿ ಒಂದು ಸಣ್ಣ ಅಂಗಡಿಯಾಗಿದ್ದು ಬೆಂಗಳೂರಿನ ಜಯನಗರ 3ನೇ ಬ್ಲಾಕ್ ನಲ್ಲಿದೆ. ಇಲ್ಲಿ ಕೇವಲ ಚಾಟ್ಸ್ ಮತ್ತು ಪಾನಿಪುರಿಗಾಗಿಯೇ ಮೀಸಲಾದ ಅಂಗಡಿ ಇದಾಗಿದೆ. ಒಂದು ಸಲ ಇಲ್ಲಿಯ ಸ್ವಾದಿಷ್ಟ ಪಾನಿ ಪುರಿಯನ್ನು ಸವಿದರೆ ನೀವು ಖಚಿತವಾಗಿಯೂ ದಿನಾಲೂ ಭೇಟಿ ಕೊಡ ಬಯಸುವಿರಿ. ಪಾನಿ ಪುರಿಯ ಹೊರತಾಗಿ ಇಲ್ಲಿ ದಹಿಪುರಿ, ಆಲೂ ಚಾಟ್ ಮತ್ತುಪಾಪ್ಡಿ ಚಾಟ್ ಕೂಡಾ ಸಿಗುತ್ತದೆ.

6 ಖಾನ್ ಸಾಹೇಬ್ ಗ್ರಿಲ್ಸ್ ಆಂಡ್ ರೋಲ್ಸ್- ಇಂದಿರಾನಗರ , ಬೆಂಗಳೂರು

6 ಖಾನ್ ಸಾಹೇಬ್ ಗ್ರಿಲ್ಸ್ ಆಂಡ್ ರೋಲ್ಸ್- ಇಂದಿರಾನಗರ , ಬೆಂಗಳೂರು

Mohammed Muzammil

ಇಂದಿರಾ ನಗರದಲ್ಲಿರುವ ಶ್ರೀ ಶಿವಸಾಯಿ ಕಾಂಪ್ಲೆಕ್ಸ್ ನ ಕೆಳಭಾಗದಲ್ಲಿರುವ ಈ ಅಂಗಡಿಯು ಬೆಂಗಳೂರಿನ ಒಂದು ಅತ್ಯುತ್ತಮವಾದ ಸ್ಟ್ರೀಟ್ ಫುಡ್ ತಯಾರಿಸುವ ಸ್ಥಳಗಳಲ್ಲೊಂದಾಗಿದೆ. ಇಲ್ಲಿ ಸ್ವಾದಿಷ್ಟವಾದ ಗರಿಗರಿಯಾದ ರೋಲ್ಸ್ ಮತ್ತು ಗ್ರಿಲ್ಸ್ ಗಳು ಸಿಗುತ್ತವೆ. ಇಲ್ಲಿ ಶಾಖಾಹಾರಿ ಮತ್ತು ಮಾಂಸಾಹಾರಿ ಎರಡೂ ಸ್ಟ್ರೀಟ್ ಆಹಾರಗಳು ಸಿಗುತ್ತವೆ. ಅಲ್ಲದೆ ಇಲ್ಲಿ ಸಿಗುವ ಆಹಾರಗಳು ಕೈಗೆಟಕುವ ದರದಲ್ಲಿದೆ. ಇಲ್ಲಿ ಸಿಗುವ ಕೆಲವು ಪ್ರಸಿದ್ದ ಆಹಾರಗಳಲ್ಲಿ ಮಿಕ್ಸೆಡ್ ವೆಜಿಟೆಬಲ್ ಟಿಕ್ಕಾ ರೋಲ್, ಪನೀರ್ ಮಶ್ರೂಮ್ , ಬೇಬಿ ಕಾರ್ನ್ ಟಿಕ್ಕಾ ರೋಲ್, ಮಟನ್ ಬೂನಾದ ಜೊತೆಗೆ ಕಾಥೀ ರಾಪ್, ಸಿಂಗಲ್ ಎಗ್ ರೋಲ್ ಇನ್ನಿತರ ಆಹಾರಗಳೂ ಇಲ್ಲಿ ಸಿಗುತ್ತವೆ.

7 ಶ್ರೀ ಸಾಯಿರಾಂಸ್ ಚಾಟ್ಸ್ ಮತ್ತು ಜೂಸ್ - ಮಲ್ಲೇಶ್ವರಂ

7 ಶ್ರೀ ಸಾಯಿರಾಂಸ್ ಚಾಟ್ಸ್ ಮತ್ತು ಜೂಸ್ - ಮಲ್ಲೇಶ್ವರಂ

Kiranrad

ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಪ್ರಸಿದ್ದವಾದ ಸಾಯಿರಾಂಸ್ ನಲ್ಲಿ ವಿಶೇಷವಾದ ಬಾಯಿನೀರೂರಿಸುವ ದಹಿಪುರಿ, ಯನ್ನು ತಿನ್ನುವ ಅವಕಾಶವನ್ನು ತಪ್ಪಿಸದಿರಿ. ಮಲ್ಲೇಶ್ವರಂ ನಲ್ಲಿ ನೀವು ಬಯಸಿದ್ದಕ್ಕಿಂತಲೂ ಹೆಚ್ಚಿನದನ್ನು ಪಡೆಯಬಹುದಾಗಿದೆ. ಇಲ್ಲಿ ಸೇವೆ ಮಾಡುವ ವ್ಯಕ್ತಿಯು ಯಾವಾಗಲೂ ಹೃತ್ಪೂರ್ವಕವಾಗಿ ನಗು ನಗುತ್ತಾ ಸೇವೆಯನ್ನು ಒದಗಿಸುತ್ತಾರೆ ಇದು ಇಲ್ಲಿಯ ಸ್ವಾದಿಷ್ಟ ಆಹಾರಕ್ಕೆ ಇನ್ನಷ್ಟು ಸ್ವಾದವನ್ನು ಒದಗಿಸಿಕೊಡುತ್ತದೆ ಎಂದರೆ ತಪ್ಪಾಗಲಾರದು. ಇಲ್ಲಿ ಅನೇಕ ಬಗೆಯ ಚಾಟ್ ಗಳನ್ನು ಮಾರಲಾಗುತ್ತದೆ ಅವುಗಳಲ್ಲಿ ವೇಫರ್ ಚಾಟ್ ಚಿಪ್ಸ್ ಮಸಾಲಾ, ಡಿಸ್ಕೋ ಚಾಟ್, ಕೇಜೀ ಮಸಾಲಾ ಮತ್ತು ಇನ್ನೂ ಹೆಚ್ಚಿನವುಗಳು ಇಲ್ಲಿ ಸಿಗುತ್ತದೆ. ಇಲ್ಲಿ ಊಟಿಯ ಮನೆಗಳಲ್ಲಿ ತಯಾರು ಮಾಡಲಾದ ಚಾಕಲೇಟ್ ಅನ್ನು ಮಾರಲಾಗುತ್ತದೆ. ಹೌದು ಇಲ್ಲಿ ಪಾನಿಯಲ್ಲಿ ಅದ್ದಿರುವ ಪ್ಲೈನ್ ಪೂರಿಯನ್ನು ಮತ್ತು ಸಿಹಿಯ ಮಿಶ್ರಣವನ್ನು ಕೇಳಲು ಮರೆತರೆ ಇಲ್ಲಿಯ ಸ್ವಾದಿಷ್ಟ ಆಹಾರವನ್ನು ಸವಿಯುವಲ್ಲಿ ಏನೋ ಕಳೆದುಕೊಂಡಂತಾಗುವುದು .

8 ಪುಚ್ಕಾಸ್- ಮಾರತಹಳ್ಳಿ

8 ಪುಚ್ಕಾಸ್- ಮಾರತಹಳ್ಳಿ

Sharada Prasad CS

ದಕ್ಷಿಣ ಭಾರತದ ಆಹಾರಗಳು ಮತ್ತು ಕೆಲವು ಸ್ವಾದಿಷ್ಟಕರವಾದ ಚಾಟ್ ಗಳನ್ನು ಸವಿದಾದ ನಂತರ ಇದು ಇಂದೋರಿನ ಜನಪ್ರಿಯ ಆಹಾರವನ್ನು ಸವಿಯುವ ಸರದಿ. ಈ ಅಂಗಡಿಯು ಬೆಂಗಳೂರಿನ ಮಾರತಹಳ್ಳಿಯ ಸಿಲ್ವರ್ ಸಿಂಗ್ ಲೇಔಟ್ ನ ಪೂರ್ವ ರಿವೆರಾ ಅಪಾರ್ಟ್ ಮೆಂಟಿನ ಹತ್ತಿರದಲ್ಲಿದೆ. ಈ ಮೊದಲು ಹೇಳಿದ ಅಂಗಡಿಗಳಿಗಿಂತ ಇಲ್ಲಿ ದರವು ಸ್ವಲ್ಪ ಜಾಸ್ತಿಯಾದರೂ ಇಲ್ಲಿಯ ಸ್ವಚ್ಚತೆ ಮತ್ತು ಆಹಾರವನ್ನು ಬಡಿಸುವ ರೀತಿ ಮತ್ತು ಅತ್ಯುತ್ತಮ ರುಚಿಗೆ ಸರಿಸಾಟಿಯಾದುದು ಇನ್ನೊಂದಿಲ್ಲವೆನ್ನಬಹುದು. ಹಾಟ್ ಡಾಗ್ ಪುಚ್ಕಾ ಇಲ್ಲಿಯ ಪ್ರಸಿದ್ದ ವಾದ ಖಾದ್ಯವಾಗಿದ್ದು ಇನ್ನಿತರ ಆಹಾರಗಳನ್ನೂ ಇಲ್ಲಿ ಮಾರಲಾಗುತ್ತದೆ.

9 ಕರ್ನಾಟಕ ಬೇಲ್ ಹೌಸ್- ಬಸವನಗುಡಿ

9 ಕರ್ನಾಟಕ ಬೇಲ್ ಹೌಸ್- ಬಸವನಗುಡಿ

Mishti Malik

ಬೆಂಗಳೂರಿನಲ್ಲಿ ಹಿತವಾದ ಸಂಜೆಯ ವೇಳೆಯಲ್ಲಿ ಸಂತೋಷದಿಂದ ರುಚಿಕರ ಸ್ಟ್ರೀಟ್ ಪುಡ್ ಗಾಗಿ ಬಸವನಗುಡಿಯ ಚಾಮರಾಜಪೇಟೆಯ ಉಮಾ ಸಿನೆಮಾ ಮಂದಿರದ ರಸ್ತೆಯಲ್ಲಿರುವ ಕರ್ನಾಟಕ ಬೇಲ್ ಹೌಸ್ ಗೆ ಭೇಟಿ ಕೊಡಿ ಇದು ಶುದ್ದ ಶಾಖಾಹಾರಿ ಅಂಗಡಿಯಾಗಿದ್ದು ಹೊರಗೆ ನಿಂತು ತಿನ್ನುವ ಅಂಗಡಿಗಳಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಯ ಆಹಾರಗಳಿಗೆ ಬೆಲೆಯು ಕಡಿಮೆ ದರದಲ್ಲಿರುವುದು ಇಲ್ಲಿಯ ವಿಶೇಷತೆ. ಇಲ್ಲಿ ಆಲೂ ದಹಿಪುರಿ, ಸೇವ್ ಪುರಿ, ಮಸಾಲಪುರಿ ಮುಂತಾದ ಕೆಲವು ಉತ್ತಮವಾದ ಹಾಗೂ ಸ್ವಾದಿಷ್ಟವಾದ ಆಹಾರವನ್ನು ಇಲ್ಲಿ ಮಾರಲಾಗುತ್ತದೆ.

10 ಟಿಕ್ಕಿ ಟಿಕ್ಕಿ- ಕೋರಮಂಗಲ

10 ಟಿಕ್ಕಿ ಟಿಕ್ಕಿ- ಕೋರಮಂಗಲ

Shankru85

ಹೆಸರೇ ಸೂಚಿಸುವಂತೆ ಈ ಚಾಟ್ ಅಂಗಡಿಯು ಕೋರಮಂಗಲದಲ್ಲಿದೆ. ಇದು ಸ್ವಾದಿಷ್ಟ ಆಹಾರವನ್ನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಇಲ್ಲಿ ತಯಾರಿಸಲಾಗುತ್ತದೆ. ಇದರ ಹೆಸರು ಇಲ್ಲಿ ಸಿಗುವ ಸ್ವಾದಿಷ್ಟವಾದ ಮತ್ತು ವಿಶೇಷವಾದ ಆಹಾರವಾದ ಟಿಕ್ಕಿ ಪುರಿಯದ್ದಾಗಿದೆ. ಇದು ಬೆಂಗಳೂರಿನಲ್ಲಿ ಸಿಗುವ ಅತ್ಯುತ್ತಮವಾದ ಸ್ಟ್ರೀಟ್ ಆಹಾರ ಸಿಗುವ ಸ್ಥಳಗಳಲ್ಲೊಂದಾಗಿದೆ. ಇಲ್ಲಿ ಒಂದು ಕ್ಷಣ ನಿಂತು ಇಲ್ಲಿ ಸಿಗುವ ಸ್ವಾದಿಷ್ಟವಾದ ಆಹಾರವನ್ನು ಸವಿದರೆ ನೀವು ಇಲ್ಲಿಗೆ ದಿನಾ ಭೇಟಿಕೊಡುವುದರಲ್ಲಿ ಸಂಶಯವೇ ಇಲ್ಲ. ಚಾಕೊಲೇಟ್ ಟಿಕ್ಕಿ, ಮುಡಿಪಿ ಟಿಕ್ಕಿ, ಮಸಾಲಾ ಟಿಕಿ ಮತ್ತು ಪನೀರ್ ಟಿಕ್ಕಿ ಮುಂತಾದುವುಗಳು ಇಲ್ಲಿ ತಿನ್ನಲು ಸಿಗುವ ಅತ್ಯುತ್ತಮವಾದ ಆಹಾರಗಳಾಗಿವೆ.

11ಚತರ್ ಪತರ್- ಜಯನಗರ

11ಚತರ್ ಪತರ್- ಜಯನಗರ

Harsha K R

ವಾಹ್! ಈ ಹೆಸರು ಕೇಳಿದರೆ ಇಲ್ಲಿಗೆ ಭೇಟಿ ಕೊಡಬೇಕೆನಿಸುವುದು. ಇಲ್ಲಿ ಅನೇಕ ಬಗೆಯ ಆಹಾರಗಳು ಸಿಗುತ್ತವೆ. ಇಲ್ಲಿ ತಿನಿಸುಗಳ ಪಟ್ಟಿ ಉದ್ದವಾಗಿದ್ದು ನೀವು ಯಾವುದನ್ನು ಆಯ್ಕೆ ಮಾಡಬೇಕೆಂದು ಒಮ್ಮೆ ಯೋಚನೆಗೆ ಒಳಗಾಗುವಿರಿ. ಇಲ್ಲಿ ಬೇಲ್ ಪುರಿಯಿಂದ ಬ್ಲಾಕ್ ಕರೆಂಟ್ ಗಪಾಗಪ್ ವರೆ ಗೆ ಸಿಗುವ ಪ್ರತಿಯೊಂದು ಆಹಾರದ ರುಚಿಯಲ್ಲಿಯೂ ಒಂದು ವಿಭಿನ್ನತೆ ಇದೆ. ಉತ್ತರಭಾರತದ ರುಚಿಯ ಆಹಾರವನ್ನು ಒದಗಿಸುವ ಈ ಅಂಗಡಿಯು ಜಯನಗರ 3ನೇ ಬ್ಲಾಕ್ ನಲ್ಲಿದೆ. ಇಲ್ಲಿ ಸಿಗುವ ಕೆಲವು ಅಪರೂಪದ ಖಾದ್ಯಗಳೆಂದರೆ ಪಾನಿಪುರಿ, ರುಚಿಕರ ಟ್ವಿಸ್ಟರ್ ಚಾಟ್, ಕಟ್ಟಾ ಮೀಟಾ ಗಪಾಗಪ್ ಚೌಪಾತಿ ಪಾವ್ ಬಾಜಿ ಮತ್ತು ಇವೆಲ್ಲವುಗಳಿಗಿಂತ ಉತ್ತಮವಾದುದೆಂದರೆ ಅಹಮ್ಮದಾಬಾದಿನ ಡಾಬೇಲಿ.

12ಶಾಹೀ ದರ್ಬಾರ್- ಯಶವಂತಪುರ

12ಶಾಹೀ ದರ್ಬಾರ್- ಯಶವಂತಪುರ

Sahilrathod

ಯಶವಂತಪುರದಲ್ಲಿರುವ ಮತ್ತಿಕೆರೆಯ ಎಂ ಎಸ್ ರಾಮಯ್ಯ ಮೈದಾನದ ಪಕ್ಕದಲ್ಲಿರುವ ಈ ಚಾಟ್ ಅಂಗಡಿಯಲ್ಲಿ ಸಿಗುವ ಸ್ವಾದಿಷ್ಟವಾದ ಮತ್ತು ರುಚಿಕರವಾದ ರೋಲ್ಸ್ ಪ್ರಸಿದ್ದವಾದುದಾಗಿದೆ. ಇದರ ಬೆಲೆಯು ಕಡಿಮೆ ದರದ್ದಾಗಿದ್ದು ಖಂಡಿತವಾಗಿಯೂ ಸ್ವಾದಿಷ್ಟಕರವಾದುದಾಗಿದೆ. ಈ ಸ್ಟ್ರೀಟ್ ಪುಡ್ ಸಿಗುವ ಈ ಅಂಗಡಿಯಲ್ಲಿ ಸಿಗುವ ಆಹಾರಗಳು ಬಾಯಿ ನೀರೂರಿಸುವಂತಹುದಾಗಿದ್ದು ಯಾವಾಗಲೂ ವಿದ್ಯಾರ್ಥಿಗಳಿಂದ ತುಂಬಿ ತುಳುಕಿರುತ್ತದೆ. ಇಲ್ಲಿ ಸಿಗುವ ಕೆಲವು ಉತ್ತಮವಾದ ರೋಲ್ ಗಳೆಂದರೆ ಡಬಲ್ ಪನೀರ್ ರೋಲ್, ಡಬಲ್ ಎಗ್ ಚಿಕನ್ ರೋಲ್ ಮತ್ತು ಕೆಲವು ಸರಳವಾದ ವೆಜ್ ರೋಲ್ ಇತ್ಯಾದಿಗಳು.

Read more about: bangalore hotel restaurant food
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more