Search
  • Follow NativePlanet
Share
» »ಪಿತೃಪಕ್ಷದಂದು ಇಲ್ಲಿ ಪಿಂಡದಾನ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗುತ್ತಂತೆ

ಪಿತೃಪಕ್ಷದಂದು ಇಲ್ಲಿ ಪಿಂಡದಾನ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗುತ್ತಂತೆ

ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಬಹಳ ಮಹತ್ವವಿದೆ. ಹಿಂದೂಗಳು ತಮ್ಮ ಪೂರ್ವಜರು ಹಾಗೂ ಪಿತೃಗಳ ಬಗ್ಗೆ ಭಕ್ತಿಯನ್ನು ಪ್ರಕಟಿಸುತ್ತಾರೆ. ಅದಕ್ಕಾಗಿ ಅವರು ಶ್ರಾದ್ಧಾ ಕಾರ್ಯಕ್ಕಾಗಿ ಪ್ರಮುಖ ಪವಿತ್ರ ಸ್ಥಳಗಳ ಹುಡುಕಾಟದಲ್ಲಿರುತ್ತಾರೆ. ಪವಿತ್ರ ಸ್ಥಳಗಳಲ್ಲಿ ಶ್ರಾದ್ಧಾ ಕಾರ್ಯ ಪೂರ್ಣ ಮಾಡೋದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನಲಾಗುತ್ತದೆ. ಶ್ರಾದ್ಧಾ ಕಾರ್ಯ ಮಾಡಲು ಯೋಗ್ಯವಾದ ಪ್ರಮುಖ ತಾಣಗಳು ಯಾವುವು ಎನ್ನುವುದರ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ.

ಕಾಲಿಘಾಟ್

ಕಾಲಿಘಾಟ್

PC: Balajijagadesh

ಕೊಲ್ಕತ್ತಾದಲ್ಲಿರುವ ಕಾಲಿಘಾಟ್ ಕಾಳಿ ದೇವಿಯ ಮಂದಿರಕ್ಕೆ ಪ್ರಸಿದ್ಧವಾಗಿದೆ. ಇದು ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಶ್ರಾದ್ಧಾ ಮಾಡೋದರಿಂದ ನಿಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನಲಾಗುತ್ತದೆ.

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ಪುರಿ

ಪುರಿ

PC: Bernard Gagnon

ಒಡಿಸಾದಲ್ಲಿರುವ ಪುರಿ ಜಗನ್ನಾಥ ಮಂದಿರವು ಚಾರ್‌ಧಾಮ ಯಾತ್ರೆಯಲ್ಲಿ ಒಂದಾಗಿದೆ. ಇದೊಂದು ಪವಿತ್ರ ಧಾರ್ಮಿಕ ತಾಣವಾಗಿದ್ದು, ಪಿತೃಪಕ್ಷ ಹಾಗೂ ಶ್ರಾದ್ಧಾ ಕಾರ್ಯಗಳಿಗೆ ಉತ್ತಮವಾಗಿದೆ.

ಗಯಾ

ಗಯಾ

PC: RAVIRAJ KUMBLE

ಗಯಾವು ಬಿಹಾರದ ಒಂದು ನಗರವಾಗಿದೆ. ಇದು ಫಗೂ ನದಿ ತೀರದಲ್ಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪಿತೃ ಪಕ್ಷದ ಸಂದರ್ಭದಲ್ಲಂತೂ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಕಾರ್ಯ ಮಾಡಲು ಬರುತ್ತಾರೆ.

ಈ ಕ್ಷೇತ್ರದ ತೀರ್ಪು ಸುಪ್ರೀಂಗಿಂತಲೂ ಮೇಲು, ತಪ್ಪು ಮಾಡಿದವ್ರಿಗೆ ಇಲ್ಲಿ ಸಾವೇ ಶಿಕ್ಷೆ

ಹರಿದ್ವಾರ

ಹರಿದ್ವಾರ

PC:mckaysavage

ಹರಿದ್ವಾರವನ್ನು ಹರಿಯ ದ್ವಾರ ಎನ್ನಲಾಗುತ್ತದೆ. ಇದು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಹರಿದ್ವಾರದಲ್ಲಿ ಪೂರ್ಣವಾದ ಬಯಲು ಪ್ರದೇಶವನ್ನು ಸೇರುತ್ತದೆ. ಈ ಕಾರಣದಿಂದ ಹರಿದ್ವಾರಕ್ಕೆ ಗಂಗಾದ್ವಾರ ಎಂಬ ಹೆಸರು ಸಹ ಇದೆ.

ಋಷಿಕೇಶ್

ಋಷಿಕೇಶ್

PC:meg and rahul

ಉತ್ತರ ಖಂಡದಲ್ಲಿರುವ ಋಷಿಕೇಶ್ ಧಾರ್ಮಿಕ ಮಹತ್ವವನ್ನು ಹೊಂದಿದ್ದು. ಹಿಮಾಲಯ ತಪ್ಪಲಿನಲ್ಲಿದೆ. ಪಿತೃಪಕ್ಷದಂದು ಬಹಳಷ್ಟು ಜನರು ಇಲ್ಲಿ ಪಿಂಡದಾನ ಮಾಡಲು ಬರುತ್ತಾರೆ.

 ಅಲಹಾಬಾದ್

ಅಲಹಾಬಾದ್

PC: Yosarian

ಪ್ರಯಾಗ್ ಕಸೆತ್ರದಲ್ಲಿರುವ ಅಲಹಾಬಾದ್ ಗಂಗಾ, ಯಮುನಾ ಮತ್ತು ಸರಸ್ವತಿಯ ನದಿಗಳ ಸಂಗಮವಾಗಿದೆ. ಇದು ಪವಿತ್ರ ನೀರಿನಲ್ಲಿ ಪವಿತ್ರ ಸ್ನಾನವನ್ನು ತೆಗೆದುಕೊಳ್ಳಲು ಅಲ್ಲಿಗೆ ಹೋಗುವ ಹತ್ತಾರು ಲಕ್ಷ ಭಕ್ತರು ಭೇಟಿ ನೀಡುವ ಅತ್ಯಂತ ದೊಡ್ಡ ಯಾತ್ರಾಸ್ಥಳವಾಗಿದೆ.

ಚಿಮ್ಮಡದ ಕಿಚಡಿ ಜಾತ್ರೆಗೆ ಹೋಗಿದ್ದೀರಾ? ಕಿಚಡಿ ತಿಂದಿದ್ದೀರಾ?

ದ್ವಾರಕಾ

ದ್ವಾರಕಾ

PC: Shishirdasika

ಗುಜರಾತ್‌ನಲ್ಲಿರುವ ಕೃಷ್ಣನ ನಗರ ದ್ವಾರಕ ಒಂದು ಪ್ರಮುಖ ತೀರ್ಥ ಸ್ನಾನವಾಗಿದೆ. ದ್ವಾರಕಾದೀಶ ಮಂದಿರದಲ್ಲಿ ದೇವರ ದರ್ಶನ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X