Search
  • Follow NativePlanet
Share
» »ಕಪ್ಪು ಬಿಳುಪಿನ ದಕ್ಷಿಣ ಭಾರತ ಹೇಗಿದೆ ನೋಡಿ!

ಕಪ್ಪು ಬಿಳುಪಿನ ದಕ್ಷಿಣ ಭಾರತ ಹೇಗಿದೆ ನೋಡಿ!

18 ಹಾಗೂ 19 ನೇಯ ಶತಮಾನಗಳ ಸಂದರ್ಭದಲ್ಲಿ ದಕ್ಷಿಣ ಭಾರತದ ಕೆಲವು ಗುರುತರವಾದ ಪ್ರವಾಸಿ ವಿಶೇಷತೆಯ ಪಟ್ಟಣಗಳು ಹೇಗಿತ್ತು ಎಂಬ ತಿಳಿಯುವ ಕುತೂಹಲವಿದ್ದಲ್ಲಿ ಈ ಲೇಖವನ್ನೊಮ್ಮೆ ಕಣ್ಣಾಡಿಸಿ

By Vijay

ಇಂದು ನಮ್ಮಲ್ಲಿ ಬಹುತೇಕರಿಗೆ ಹಿಂದಿನ ಸಮಯಕ್ಕೆ ಮತ್ತೆ ಮರಳಿ ಹೋಗಬೇಕೆಂಬ ಬಯಕೆಗಳು ಆಗಾಗ ಬರುತ್ತಲೆ ಇರುತ್ತವೆ. ಇಂದಿನ ಹಾಗೆ ಕಿರಿ ಕಿರಿ ಹಿಂದಿನ ಸಮಯದಲ್ಲಿ ಇರುತ್ತಿರಲಿಲ್ಲ, ವಿಶಾಲವಾದ ಪ್ರದೇಶಗಳು, ಸಾಕಷ್ಟು ಶಾಂತತೆ, ಯಾವಾಗಲೂ ಸಿಗುತ್ತಿದ್ದ ಸಮಯ, ಆರಾಮವಾಗಿ ಸಾಗುತ್ತಿದ್ದ ಜೀವನಶೈಲಿಗಳು ಕಣ್ಣು ಮುಂದೆ ಕಟ್ಟಿ ಬಂದು ಬಿಡುವುದೆ ಈ ರೀತಿಯ ಬಯಕೆಗಳಿಗೆ ಮುಖ್ಯ ಕಾರಣ.

ಆದರೆ ಏನು ಮಾಡುವುದು ಸಮಯವೆಂಬುದು ಸಾಗಲೇಬೇಕು, ಜೀವನ ಎಂಬುದು ಗತಿಸಲೇಬೇಕು. ಆದಾಗ್ಯೂ ಆ ಸಮಯದ ನೆನಪುಗಳನ್ನು ಇಂದಿಗೂ ಚಿತ್ರಗಳ ಮೂಲಕ ನೋಡಿ ಆನಂದಿಸಬಹುದಾಗಿದೆ ಎಂಬುದೊಂದೆ ತುಸು ಸಮಾಧಾನ ನೀಡುವ ವಿಷಯ. ಹೌದು, 18, 19 ನೇಯ ಶತಮಾನಗಳಲ್ಲಿ ಇಂದು ನಾವು ನೋಡುವ ಅದೆಷ್ಟೊ ನಗರ ಪಟ್ಟಣಗಳು ಹೇಗಿತ್ತು ಎಂಬುದನ್ನು ಕಲ್ಪಿಸಿಕೊಂಡಾಗ ಅಥವಾ ಚಿತ್ರಗಳ ಮೂಲಕ ನೋಡಿದಾಗ ಒಂದು ರೀತಿಯ ಆನಂದ ಮನಸ್ಸಿನಲ್ಲುಂಟಾಗುವುದಂತೂ ನಿಜ.

ಹಳೆಯ ಬಾಂಬೆಯ ಬೊಂಬಾಟ್ ಚಿತ್ರಗಳು!

ಅಲ್ಲದೆ ಆ ಸಮಯಕ್ಕೆ ಮತ್ತೆ ಹೋಗಬೇಕೆಂದು ಅನಿಸದೆ ಇರಲಾರದು. ಇಂದಿಗೂ ಕೆಲವು ಪ್ರಸಿದ್ಧ ಸ್ಥಳಗಳ ಗತ ಕಾಲದ ವೈಭವನ್ನು ನೋಡುವುದೆಂದರೆ ಬಹುತೇಕರಿಗೆ ಕುತೂಹಲ ಉಂಟಾಗುತ್ತದೆ. ಪ್ರಸ್ತುತ ಲೇಖನದಲ್ಲಿ ದಕ್ಷಿಣ ಭಾರತದ ಕೆಲವು ಆಕರ್ಷಕ ಹಾಗೂ ಪ್ರವಾಸಿ ಖ್ಯಾತಿಯ ಪಟ್ಟಣಗಳು ಹಿಂದೆ ಹೇಗಿದ್ದವು ಎಂಬುದನ್ನು ಚಿತ್ರಗಳ ಮೂಲಕ ನೋಡಬಹುದಾಗಿದೆ.

ತೆಲಂಗಾಣ

ತೆಲಂಗಾಣ

ತೆಲಂಗಾಣ ರಾಜಧಾನಿ ನಗರವಾದ ಹೈದರಾಬಾದ್ ಸಾಕಷ್ಟು ಅತಿಹಾಸಿಕ ಶ್ರೀಮಂತಿಕಯಿರುವ ತಾಣ. ಹೈದರಾಬಾದ್ ನಗರಕ್ಕೆ ಪ್ರವೇಶ ಮಾರ್ಗವಾದ ಸೇತುವೆ. ಹಿನ್ನೆಲೆಯಲ್ಲಿ ಚಾರ್ಮಿನಾರ್ ಕಟ್ಟಡ. ಸಂದರ್ಭ : 1892.

commons.wikimedia

ಐತಿಹಾಸಿಕ ತಾಣ

ಐತಿಹಾಸಿಕ ತಾಣ

ಹೈದರಾಬಾದ್ ನಗರದ ಹೊರವಲಯದಲ್ಲಿರುವ ಇಂದು ಅದ್ಭುತ ಪ್ರವಾಸಿ ತಾಣವಾಗಿರುವ ಗೋಲ್ಕೊಂಡಾ ಕೋಟೆ. ಸಂದರ್ಭ : 1902

ಚಿತ್ರಕೃಪೆ: commons.wikimedia

ರೈಲು ನಿಲ್ದಾಣ

ರೈಲು ನಿಲ್ದಾಣ

ಹೈದರಾಬಾದ್-ಸಿಕಂದಾರಾಬಾದ್ ಅವಳಿ ನಗರಗಳು ಇಂದು ತುಂಬಾನೆ ಪ್ರಸಿದ್ಧಿ ಪಡೆದಿರುವ ಮೆಟ್ರೊಪಾಲಿಟನ್ ನಗರಗಳಾಗಿವೆ. ಇಂದು ಆಧುನಿಕ ರೈಲು ನಿಲ್ದಾಣ ಹೊಂದಿರುವ ಸಿಕಂದರಾಬಾದ್ ರೈಲು ನಿಲ್ದಾಣ ಹಿಂದೆ 1928 ರ ಸಮಯದಲ್ಲಿ ಹೀಗೆತ್ತು ನೋಡಿ.

ಚಿತ್ರಕೃಪೆ: commons.wikimedia

ಆಕರ್ಷಕ

ಆಕರ್ಷಕ

ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ವಿಶ್ವ ವಿಖ್ಯಾತ ತಾಣ ಹಂಪಿಯ ಕಲ್ಲಿನ ರಥ. ಸಮಯ : 1868

ಚಿತ್ರಕೃಪೆ: commons.wikimedia

ಗೋಪುರ

ಗೋಪುರ

ಹಂಪಿಯ ಗುರುತರ ದೇವಾಲಯ ಗೋಪುರವಾದ ವಿರೂಪಾಕ್ಷ ದೇವಾಲಯದ್ ಒಂದು ನೋಟ. ಸಮಯ : 1923

ಚಿತ್ರಕೃಪೆ: Nasjonalbiblioteket

ಕರ್ನಾಟಕ

ಕರ್ನಾಟಕ

ಕರ್ನಾಟಕದಲ್ಲಿರುವ ಚಿತ್ರದುರ್ಗ ಒಂದು ಐತಿಹಾಸಿಕ ಮಹತ್ವದ ಪ್ರವಾಸಿ ತಾಣವಗಿದ್ದು ತನ್ನಲ್ಲಿರುವ ಏಳು ಸುತ್ತಿನ ಕಲ್ಲಿನ ಕೋಟೆಯಿಂದಾಗಿ ಅಪಾರ ಜನಮನ್ನಣೆಗಳಿಸಿದೆ. ಚಿತ್ರದುರ್ಗದ ಕೋಟೆ 1857 ರ ಸಂದರ್ಭದಲ್ಲಿ.

ಚಿತ್ರಕೃಪೆ: commons.wikimedia

ಪ್ರವಾಸಿ ಕೇಂದ್ರ

ಪ್ರವಾಸಿ ಕೇಂದ್ರ

ಇಂದಿನ ಕಲಬುರಗಿ ನಗರದಲ್ಲಿ ಕಂಡುಬರುವ ಕಲಬುರಗಿ ಕೋಟೆಯ ಒಂದು ಚಿತ್ರ. ಸಮಯ 1880.

ಚಿತ್ರಕೃಪೆ: commons.wikimedia

ಹಾಸನ

ಹಾಸನ

ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೋಳದ ನೋಟ. ವಿಂಧ್ಯಗಿರಿ ಹಾಗೂ ಅದರ ಮೇಲೆ ಸ್ಥಿತವಿರುವ ಪ್ರಖ್ಯಾತ ಗೊಮ್ಮಟೇಶ್ವರನ ಪ್ರತಿಮೆ. ಸಂದರ್ಭ : 1899

ಚಿತ್ರಕೃಪೆ: commons.wikimedia

ಮಂಗಳೂರು

ಮಂಗಳೂರು

ಕರ್ನಾಟಕದ ಬಂದರು ಪಟ್ಟಣ ಮಂಗಳೂರಿನ ಪ್ರಸಿದ್ಧ ಸಂತ ಅಲಾಸಿಯಸ್ ಕಾಲೇಜು ಹಾಗೂ ಸುತ್ತಮುತ್ತಲಿನ ದಟ್ಟ ಹಸಿರು. ಸಂದರ್ಭ : 1913

ಚಿತ್ರಕೃಪೆ: commons.wikimedia

ಉತ್ತರ ಕರ್ನಾಟಕ

ಉತ್ತರ ಕರ್ನಾಟಕ

ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಸಿದ್ಧ ಐತಿಹಾಸಿಕ ನಗರ ಹಿಂದಿನ ಬಿಜಾಪುರ ಅಥವಾ ಇಂದಿನ ವಿಜಯಪುರ. ಇಲ್ಲಿ ಸಾಕಷ್ಟು ಅದ್ಭುತ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಮನ ಸೆಳೆವ ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದಾಗಿದೆ. ಇಬ್ರಾಹಿಂ ರೋಜಾ. ಸಂದರ್ಭ : 1860

ಚಿತ್ರಕೃಪೆ: commons.wikimedia

ವಿಶ್ವವಿಖ್ಯಾತ

ವಿಶ್ವವಿಖ್ಯಾತ

ವಿಜಯಪುರದಲ್ಲಿರುವ ಅತಿ ಪ್ರಮುಖ ಹಾಗೂ ಸಕಲ ಪ್ರವಾಸಿಗರನ್ನು ಮುಖ್ಯವಾಗಿ ಆಕರ್ಷಿಸುವ ಪ್ರಮುಖ ಐತಿಹಾಸಿಕ ಸ್ಮಾರಕ, ಗೋಲ ಗುಮ್ಮಟ. ಸಂದರ್ಭ : 1890

ಚಿತ್ರಕೃಪೆ: commons.wikimedia

ಉತ್ತರದ ತುದಿ

ಉತ್ತರದ ತುದಿ

ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್ ಪಟ್ಟಣವೂ ಸಹ ಐತಿಹಾಸಿಕವಾಗಿ ಅಪಾರ ಮಹತ್ವಗಳಿಸಿದ ಪಟ್ಟಣವಾಗಿದೆ. ಬೀದರ್ ಕೋಟೆ ಸಂದರ್ಭ : 1889

ಚಿತ್ರಕೃಪೆ: commons.wikimedia

ಬಾದಾಮಿ

ಬಾದಾಮಿ

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ಬಾದಾಮಿಯಲ್ಲಿರುವ ಭೂತನಾಥ ದೇವಾಲಯ ಸಂಕೀರ್ಣ. ಸಂದರ್ಭ : 1880

ಚಿತ್ರಕೃಪೆ: commons.wikimedia

ಮಂಡ್ಯ

ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣವು ಕಾವೇರಿ ನದಿ ತಟದಲ್ಲಿ ಹರಿದಿರುವ ಅದ್ಭುತ ತಾಣವಾಗಿದ್ದು ಧಾರ್ಮಿಕವಾಗಿಯೂ ಶ್ರೀರಂಗನ ದೇವಾಲಯದಿಂದಾಗಿ ಪ್ರಖ್ಯಾತಿಗಳಿಸಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಒಂದು ಸೇತುವೆ. ಸಂದರ್ಭ : 1870

ಚಿತ್ರಕೃಪೆ: commons.wikimedia

ಅರಮನೆ

ಅರಮನೆ

ಟಿಪ್ಪುವಿನ ಅರಮೆನೆಯಾಗಿದ್ದ ಶ್ರೀರಂಗಪಟ್ಟಣದಲ್ಲಿರುವ ದರಿಯಾ ದೌಲತ್ ಬಾಗ್. ಸಂದರ್ಭ : 1870

ಚಿತ್ರಕೃಪೆ: commons.wikimedia

ಮೈಸೂರು

ಮೈಸೂರು

ಸಾಂಸ್ಕೃತಿಕ ನಗರ ಮೈಸೂರು ಪ್ರಮುಖವಾಗಿ ತನ್ನಲ್ಲಿರುವ ಅಂಬಾ ವಿಲಾಸ ಅಥವಾ ಮೈಸೂರು ಅರಮನೆಯಿಂದಾಗಿಯೆ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಮೈಸೂರು ಅರಮನೆ. ಸಂದರ್ಭ : 1932-1940

ಚಿತ್ರಕೃಪೆ: commons.wikimedia

ಚಾಮುಂಡಿ ಬೆಟ್ಟ

ಚಾಮುಂಡಿ ಬೆಟ್ಟ

ಮೈಸೂರು ಬಳಿಯಿರುವ ಪ್ರಸಿದ್ಧ ಚಾಮುಂಡಿ ಬೆಟ್ಟ ತಾಣದಲ್ಲಿರುವ ಬಸವಣ್ಣನ ಪ್ರತಿಮೆ. ಸಂದರ್ಭ : 1870

ಚಿತ್ರಕೃಪೆ: commons.wikimedia

ಕಣ್ಮನ ಸೆಳೆವ

ಕಣ್ಮನ ಸೆಳೆವ

ಇಂದು ಭವ್ಯಾತಿ ಭವ್ಯ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಹ ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಭುತವಾಗಿ ನಿರ್ಮಿಸಲಾಗಿರುವ ಬೆಂಗಳೂರು ಅರಮನೆ. ಸಂದರ್ಭ : 1890

ಚಿತ್ರಕೃಪೆ: commons.wikimedia

ಸಸ್ಯಕಾಶಿ

ಸಸ್ಯಕಾಶಿ

ಬೆಂಗಳೂರಿನ ಇಂದಿನ ಗುರುತರ ಪ್ರವಾಸಿ ಆಕರ್ಷಣೆಯಾದ ಹಾಗೂ ಸಸ್ಯಕಾಶಿ ಎಂದೆ ಜನಜನಿತವಾದ ಲಾಲ್ ಬಾಗ್ ಬಟಾನಿಕಲ್ ಉದ್ಯಾನ. ಸಂದರ್ಭ : 1860

ಚಿತ್ರಕೃಪೆ: commons.wikimedia

ಹೀಗಿತ್ತು!

ಹೀಗಿತ್ತು!

ಕರ್ನಾಟಕ ಹೈಕೋರ್ಟ್ ಬಳಿ ಇರುವ ಪ್ರಸಿದ್ಧ ಕಬ್ಬನ್ ಉದ್ಯಾನ ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆ. ಸಾಕಷ್ಟು ದಟ್ಟವಾದ ಹಸಿರಿನಿಂದ ಕಂಗೊಳಿಸುವ ಈ ಸುಂದರ ಉದ್ಯಾನ ಹಿಂದೊಮ್ಮೆ ಈ ರೀತಿ ಇತ್ತು. ಸಂದರ್ಭ : 1870

ಚಿತ್ರಕೃಪೆ: commons.wikimedia

ಕೇರಳ

ಕೇರಳ

ಕೇರಳದ ಅಲಪುಳಾ ಅಥವಾ ಪ್ರಸಿದ್ಧವಾಗಿ ಎಲ್ಲರಿಗೂ ಚಿರಪರಿಚಿತವಾಗಿರುವ ಹೆಸರಿನ ಅಲೆಪ್ಪಿ ಹಿನ್ನೀರು ಇರುವ ಒಂದು ಸುಂದರ ಪ್ರವಾಸಿ ತಾಣ. ಸಂದರ್ಭ : 1900

ಚಿತ್ರಕೃಪೆ: commons.wikimedia

ಮಾಪಿಲಾ

ಮಾಪಿಲಾ

ಕೇರಳದ ಕಣ್ಣೂರಿನಲ್ಲಿರುವ ಮಾಪಿಲಾ ಕರಾವಳಿ ತೀರ. ಇದನ್ನು ಕಣ್ಣೂರು ಕರಾವಳಿ ಅಥವಾ ಕಣ್ಣೂರು ಬೇ ಎಂತಲೂ ಸಹ ಕರೆಯುತ್ತಾರೆ. ಸಂದರ್ಭ : 1913

ಚಿತ್ರಕೃಪೆ: commons.wikimedia

ಕ್ಯನಾಲ್

ಕ್ಯನಾಲ್

ಸಂಚಾರಕ್ಕೆಂದು ಮಾನವ ನಿರ್ಮಿತ ಕ್ಯಾನಲ್ ಅನ್ನು ಕೊಚ್ಚಿ ನಗರದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿತ್ತು. ಅಂತಹ ಒಂದು ಜಲಪಥ. ಕೊಚ್ಚಿ ನಗರ. ಸಂದರ್ಭ : ಸ್ವಾತಂತ್ರ್ಯಾಪೂರ್ವ ಸಮಯ.

ಚಿತ್ರಕೃಪೆ: commons.wikimedia

ಕಾಲಡಿ

ಕಾಲಡಿ

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕಾಲಡಿ ಕ್ಷೇತ್ರವು ಪ್ರಮುಖ ಧಾರ್ಮಿಕ ಮಹತ್ವದ ಸ್ಥಳವಾಗಿದೆ. ಅದ್ವೈತ ಮಥ ಸಂಸ್ಥಾಪಕರಾದ ಶ್ರೀ ಆದಿ ಗುರು ಶಂಕರಾಚಾರ್ಯರು ಜನಿಸಿದ ಸ್ಥಳವೆ ಕಾಲಡಿ. ಕಾಲಡಿಯ ದೇಗುಲ. ಸಂದರ್ಭ : ಸ್ವಾತಂತ್ರ್ಯಾಪೂರ್ವ ಸಮಯ.

ಚಿತ್ರಕೃಪೆ: commons.wikimedia

ಅಷ್ಟಮುಡಿ

ಅಷ್ಟಮುಡಿ

ಅಷ್ಟಮುಡಿ ಕೆರೆಯ ತಟದಲ್ಲಿರುವ ಕೇರಳದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಕೊಲ್ಲಂ ನಗರ. ಸಂದರ್ಭ : 1951

ಚಿತ್ರಕೃಪೆ: commons.wikimedia

ತಿರುವನಂತಪುರಂ

ತಿರುವನಂತಪುರಂ

ದೇಶದ ಅತಿ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿರುವ ಕೇರಳದ ರಾಜಧಾನಿ ನಗರ ತಿರುವನಂತಪುರಂ ನಗರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯ. ಸಂದರ್ಭ : 1895

ಚಿತ್ರಕೃಪೆ: commons.wikimedia

ಮದುರೈ

ಮದುರೈ

ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ನಗರಿಯಾದ ಮದುರೈನಲ್ಲಿರುವ ಮೀನಾಕ್ಷಿ ಅಮ್ಮನವರ ದೇವಾಲಯ. ಸಂದರ್ಭ: 1875

ಚಿತ್ರಕೃಪೆ: commons.wikimedia

ಪಾಂಡವ ಗುಹೆ

ಪಾಂಡವ ಗುಹೆ

ಚೆನ್ನೈಗೆ ಹತ್ತಿರದಲ್ಲಿರುವ ಒಂದು ಸುಂದರ ಕಡಲ ತಡಿಯ ಪ್ರವಾಸಿ ತಾಣ ಮಹಾಬಲಿಪುರಂ. ಇದು ಕಡಲ ತೀರದ ಪುರಾತನ ದೇವಾಲಯ ಹಾಗೂ ಇತರೆ ಬಂಡೆಯಲ್ಲಿ ಕಡಿಯಲಾದ ಗುಹಾ ರಚನೆಗಳಿಗೆ ಹೆಸರುವಾಸಿಯಾಗಿದೆ. ಪಾಂಡವ ಗುಹೆ. ಸಂದರ್ಭ : 1860

ಚಿತ್ರಕೃಪೆ: commons.wikimedia

ಗಿರಿಧಾಮಗಳ ರಾಣಿ

ಗಿರಿಧಾಮಗಳ ರಾಣಿ

ಗಿರಿಧಾಮಗಳ ರಾಣಿ ಎಂದೆ ಕರೆಯಲ್ಪಡುವ ಜನಪ್ರೀಯವಾದ ಊಟಿ ಗಿರಿಧಾಮದ ಒಂದು ಹಳೆಯ ಚಿತ್ರ. ಸಂದರ್ಭ : 1870

ಚಿತ್ರಕೃಪೆ: commons.wikimedia

ಚೆನ್ನೈ

ಚೆನ್ನೈ

ತಮಿಳುನಾಡಿನ ರಾಜಧಾನಿ ನಗರ ಚೆನ್ನೈನಲ್ಲಿರುವ ಪಾರ್ಥಸಾರಥಿ ದೇವಾಲಯ. ಸಂದರ್ಭ : 1870

ಚಿತ್ರಕೃಪೆ: commons.wikimedia

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X