Search
  • Follow NativePlanet
Share
» »ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ಚೆನ್ನೈನ ಮರೀನಾ ಬೀಚ್‌ ಬಗ್ಗೆ ನಿಮಗೆ ಗೊತ್ತೇ ಇದೆ. ಚೆನ್ನೈ ಪ್ರವಾಸಕ್ಕೆ ಹೋಗಿರುವವರು ಚೆನ್ನೈನ ಮರೀನಾ ಬೀಚ್‌ನ್ನು ನೋಡಿರುತ್ತಾರೆಯೇ. ಇದು ಚೆನ್ನೈನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇದೀಗ ಕರುಣಾನಿಧಿಯವರ ಸಮಾಧಿಯನ್ನು ಮರೀನಾ ಬೀಚ್‌ನಲ್ಲೇ ನಿರ್ಮಿಸಲಾಗಿದೆ . ಹಾಗಾದರೆ ಮರೀನಾ ಬೀಚ್‌ನ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಮರೀನಾ ಬೀಚ್‌ ಬಗ್ಗೆ ಒಂದಿಷ್ಟು

ಮರೀನಾ ಬೀಚ್‌ ಬಗ್ಗೆ ಒಂದಿಷ್ಟು

PC: L.vivian.richard

ಮರೀನಾ ಬಿಚ್ ವಿಶ್ವದ ಅತ್ಯಂತ ಕಡಲ ತೀರಗಳಲ್ಲಿ ಒಂದಾಗಿದೆ. 13 ಕಿ.ಮಿ ಉದ್ದವಿರುವ ಸಮುದ್ರ ತೀರಗಳ ಭಾರತೀಯ ನಗರಗಳಲ್ಲಿ ಒಂದಾಗಿದೆ, ಅದು ಭಾರತದ ಪೂರ್ವ ತೀರದಲ್ಲಿದೆ. ಮರೀನಾ ಬೀಚ್‍ನಲ್ಲಿ ಸ್ನಾನ ಮಾಡುವುದು ಮತ್ತು ಈಜುವುದು ಕಾನೂನು ಬಾಹಿರವಾಗಿದೆ ಏಕೆಂದರೆ ಆ ಸಮುದ್ರ ತೀರದಲ್ಲಿ ನೀರಿನ ಅಡಿಯಲ್ಲಿ ಅಂತಃ ವಿದ್ಯುತ್ ಆವರಿಸುತ್ತದೆ ಮತ್ತು ಇಲ್ಲಿ ಜೀವ ರಕ್ಷಕರು ಇರುವುದಿಲ್ಲ.

ಜಯಲಲಿತಾರ ಸಮಾಧಿ

ಜಯಲಲಿತಾರ ಸಮಾಧಿ

ಇತ್ತೀಚೆಗಷ್ಟೇ ಜಯಲಲಿತಾರ ಸಮಾಧಿಯನ್ನು ಮರೀನಾ ಬೀಚ್‌ನಲ್ಲೇ ನಿರ್ಮಿಸಲಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತಿರುವಂತಹದ್ದೇ. ಇದೀಗ ಜಯಲಲಿತಾ ಸಮಾಧಿ ಸಮೀಪದಲ್ಲಿ ಕರುಣಾನಿಧಿ ಸಮಾಧಿಯು ನಿರ್ಮಾಣವಾಗಿದೆ. ಮರೀನಾ ಬೀಚ್‌ನಲ್ಲಿರುವ ಅಣ್ಣಾ ಮೆಮೋರಿಯಲ್‌ನಲ್ಲೇ ಸಮಾಧಿ ನಿರ್ಮಾಣವಾಗಿದೆ.

ಮರೀನಾ ಬೀಚ್ ಎನ್ನುವ ಹೆಸರು ಬಂದಿದ್ದು ಹೇಗೆ?

ಮರೀನಾ ಬೀಚ್ ಎನ್ನುವ ಹೆಸರು ಬಂದಿದ್ದು ಹೇಗೆ?

PC: Darshan Simha

1881 ರಲ್ಲಿ ಗವರ್ನರ್ ಆಗಿದ್ದು ಸರ್‌ ಮೌಂಟ್‌ಸ್ಟೂಅರ್ಟ್ ಎಲ್ಫಿನ್‌ಸ್ಟೋನ್‌ರಿಗೆ ಈ ಬೀಚ್‌ಗೆ ಹೋಗೋದು, ಈ ಬೀಚ್‌ನ್ನು ನೋಡೋದಂದ್ರೆ ತುಂಬಾನೇ ಇಷ್ಟವಾಗುತ್ತಿತ್ತು. ತನ್ನ ಆಡಳಿತಾವಾಧಿಯಲ್ಲಿ ಈ ಬೀಚ್‌ನ್ನು ಇನ್ನಷ್ಟು ಸುಂದರವಾಗಿಸುವುದರ ಜೊತೆಗೆ ಕೆಲವು ಅಭಿವೃದ್ಧೀ ಕಾರ್ಯಗಳನ್ನು ಮಾಡಿದರು. ನಂತರ ಅದಕ್ಕೆ ಮರೀನಾ ಎನ್ನುವ ಹೆಸರನ್ನು ಇಟ್ಟರು. ಇದೊಂದು ಇಟಾಲಿಯನ್ ಪದವಾಗಿದ್ದು, ಮರೀನಾ ಎಂದರೆ ನೀರಿನಿಂದ ಕೂಡಿದ ಒಂದು ದಡ ಎಂದಾಗಿದೆ.

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ಹಲವಾರು ರಾಜಕಾರಣಿಗಳನ್ನು ಸಮಾಧಿ ಇಲ್ಲಿದೆ

ಹಲವಾರು ರಾಜಕಾರಣಿಗಳನ್ನು ಸಮಾಧಿ ಇಲ್ಲಿದೆ

PC: Rasnaboy

ಡಿಎಂಕೆಯ ಸಂಸ್ಥಾಪಕ ಅಣ್ಣಾದೊರೆಯನ್ನೂ ಕೂಡಾ ಇಲ್ಲೇ ಸಮಾಧಿ ಮಾಡಲಾಗಿತ್ತು. ಎಐಎಡಿಎಂಕೆ ಯ ಸ್ಥಾಪಕ ಎಂಜಿ ರಾಮಚಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾರನ್ನೂ ಕೂಡಾ ಇಲ್ಲೇ ಸಮಾಧಿ ಮಾಡಲಾಗಿದೆ.

ಐತಿಹಾಸಿಕ ಸ್ಮಾರಕಗಳಿವೆ

ಐತಿಹಾಸಿಕ ಸ್ಮಾರಕಗಳಿವೆ

PC:Ashwin Kumar

ಹೆಚ್ಚಿನ ಜನರಿಗೆ ಇದೊಂದು ಇತರ ಬೀಚ್‌ನಂತೆಯೇ ಕೇವಲ ಸಮುದ್ರದ ತೀರವಾಗಿದೆ. ಇದು ಕೇವಲ ಒಂದು ಬೀಚ್‌ ಎಂದು ತಿಳಿದಿದ್ದಾರೆ. ಆದರೆ ಈ ಬೀಚ್‌ನಲ್ಲಿರುವ ಅಕ್ವೇರಿಯಂ ಹಾಗೂ ಐಸ್‌ ಹೌಸ್‌ ಒಂದು ಪ್ರಮುಖ ಆಕರ್ಷಕ ಕೇಂದ್ರವಾಗಿದೆ. ೨೨೪ ವರ್ಷ ಪುರಾತನ ಅರಮನೆಯೂ ಇದೆ. ಸೆನಟ್‌ ಹೌಸ್, ಪಿಡಬ್ಲ್ಯೂಡಿ ಹೌಸ್‌, ಪ್ರೆಸಿಡೆಂಟ್‌ ಕಾಲೇಜ್ ಹಾಗೂ ಚೆನ್ನೈ ಯುನಿವರ್ಸಿಟಿ ಕೂಡಾ ಮರೀನಾ ಬಿಚ್‌ನ ತೀರದಲ್ಲೇ ಇದೆ.

ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್ ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್

ಗಣ್ಯ ವ್ಯಕ್ತಿಗಳ ಪುತ್ಥಳಿಗಳಿವೆ

ಗಣ್ಯ ವ್ಯಕ್ತಿಗಳ ಪುತ್ಥಳಿಗಳಿವೆ

PC: Balasubramanian G Velu

ಇಲ್ಲಿ ಮಹಾತ್ಮಗಾಂಧಿಯ ಪ್ರತಿಮೆ ಇದೆ. ಸ್ವಾಮಿ ವಿವೇಕಾನಂದ, ಡಾ. ಅನಿ ಬೆಸೆಂಟ್, ಸುಬ್ರಮಣಿಯ ಭಾರತೀಯರ್, ಸರ್‌ ಥಾಮಸ್‌ ಮಾನರ್, ಶಿವಾಜಿ ಗಣೇಶನ್‌ , ಎಮ್‌ಜಿ ರಾಮಚಂದ್ರ ಸೇರಿದಂತೆ ಅನೇಕ ಮಹಾನ್‌ ವ್ಯಕ್ತಿಗಳ ಪ್ರತಿಮೆಗಳನ್ನು ಇಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X