Search
  • Follow NativePlanet
Share
» »ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

ದೀರ್ಘ ಸುಮಂಗಲಿಯಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ!

ಯಾವ ಮಹಿಳೆಯರು ತಾನೇ ದೀರ್ಘ ಸುಮಂಗಲಿಯಾಗಿರಲು ಬಯಸೋದಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಮಗಳಿಗೆ ತನ್ನ ಗಂಡನ ಆಯಸ್ಸು ಗಟ್ಟಿಯಾಗಿರಬೇಕು. ಜೀವನದವಿಡೀ ಆತನೊಂದಿಗೆ ಕೂಡಿ ಬಾಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದಕ್ಕೆ ಅನೇಕ ವೃತ ಪೂಜೆಗಳನ್ನೆಲ್ಲಾ ಮಾಡುತ್ತಾರೆ.

ಸಾವಿತ್ರಿ ವೃತ

ಸಾವಿತ್ರಿ ವೃತ

PC: Ssriram mt
ಮಹಿಳೆಯರು ದೀರ್ಘ ಸುಮಂಗಲಿಯರಾಗಿರಲು ಈ ದೇವಸ್ಥಾನಕ್ಕೆ ಹೋಗಬೇಕಂತೆ. ದೀರ್ಘ ಸುಮಂಗಲಿಯರಾಗಿರಲು, ತನ್ನ ಪತಿಯ ಆಯಸ್ಸು ಗಟ್ಟಿಯಾಗಿರಲು ವೃತ ಮಾಡುತ್ತಾರೆ. ತಮಿಳು ತಿಂಗಳು ಎಂದು ಹೇಳಲಾಗುವ ಮಾರ್ಚ್ ಮಧ್ಯದಲ್ಲಿ ಒಂದು ತಿಂಗಳ ವೃತ ಮಾಡುತ್ತಾರೆ. ಆ ವೃತವನ್ನು ಸಾವಿತ್ರಿ ವೃತ ಎನ್ನುತ್ತಾರೆ. ಒಂದು ವೇಳೆ ಅವರಿಗೆ ಈ ವೃತ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ಈ ದೇವಸ್ಥಾನಗಳಿಗೆ ಹೋದರೆ ಅವರ ವೃತ ಪೂರ್ತಿಯಾಗುತ್ತದಂತೆ.

 ಪಂಚ ಮಂಗಳ ಕ್ಷೇತ್ರ

ಪಂಚ ಮಂಗಳ ಕ್ಷೇತ್ರ

PC: Ssriram mt
ಆ ದೇವಸ್ಥಾನ ಯಾವುದೆಂದರೆ ಪಂಚ ಮಂಗಳ ಸ್ಥಳ. ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿದೆ. ಇದು ಮಂಗಳ ಕುಡಿ ಎನ್ನುವ ಊರು, ಇಲ್ಲಿರುವ ದೇವರು ಮಂಗಳಾಂಬಿಕೆ, ಗೋಪುರ ಮಂಗಳ ವಿಮಾನ, ಇಲ್ಲಿನ ಗಣೇಶನನ್ನು ಮಂಗಳ ವಿನಾಯಕ ಹಾಗೂ ಇಲ್ಲಿನ ತೀರ್ಥ ಮಂಗಳ ತೀರ್ಥ ಎಂದು ಕರೆಯಲಾಗುತ್ತದೆ. ಹಾಗಾಗಿ ಇದನ್ನು ಪಂಚ ಮಂಗಳ ಸ್ಥಳ ಎನ್ನುತ್ತಾರೆ.

ಸೂರ್ಯ ಚಂದ್ರ ತೀರ್ಥ

ಸೂರ್ಯ ಚಂದ್ರ ತೀರ್ಥ

PC: Ssriram mt
ಇಲ್ಲಿ ಸೂರ್ಯ ತೀರ್ಥ ಹಾಗೂ ಚಂದ್ರ ತೀರ್ಥ ಎನ್ನುವ ಎರಡು ತೀರ್ಥಗಳಿವೆ. ಶಿವನ ದೇವಸ್ಥಾನದ ಮುಂದುಗಡೆ ದ್ವಾರಪಾಲಕರ ಬದಲು ಲಕ್ಷ್ಮೀ ಹಾಗೂ ಸರಸ್ವತಿ ಪದ್ಮಾಸನ ಭಂಗಿಯಲ್ಲಿ ಕುಳಿತಿರುವುದು ಕಾಣಿಸುತ್ತದೆ. ಈ ದೇವಸ್ಥಾನದಲ್ಲಿ ಮಹಿಳೆಯರು ಐದು ಸೋಮವಾರ ಬರಬೇಕು.

ಪ್ರಾಣನಾಥೇಶ್ವರ ದೇವಾಲಯ

ಪ್ರಾಣನಾಥೇಶ್ವರ ದೇವಾಲಯ

ಔದುತುರೈನಿಂದ 2 ಕಿ.ಮೀ ದೂರದಲ್ಲಿ ಕುಂಬಕೋಣಂ ತಲುಪಿದರೆ, ನಾವು ಈ ತಿರುಮಂಗಲಂ ತಲುಪಬಹುದು. ಇಲ್ಲಿ ಶಿವನ ದೇವಾಲಯವಿದೆ ಇದನ್ನು ಪ್ರಾಣನಾಥೇಶ್ವರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಪತಿಯ ದೀರ್ಘಾಯಸ್ಸಿಗಾಗಿ ಉಪವಾಸ ಹಿಡಿಯುತ್ತಾರೆ. ಪೂಜೆ ಮಾಡುತ್ತಾರೆ.

ಚೋಳರು ನಿರ್ಮಿಸಿರಬೇಕೆಂಬ ನಂಬಿಕೆ

ಚೋಳರು ನಿರ್ಮಿಸಿರಬೇಕೆಂಬ ನಂಬಿಕೆ

PC: Ssriram mt
ಇಲ್ಲಿ ಕಂಡುಬರುವ ಶಾಸನಗಳು ಚೋಳರು, ಪಲ್ಲವರು ಮತ್ತು ವಿಜಯನಗರ ರಾಜರ ಆಳ್ವಿಕೆಯನ್ನು ಉಲ್ಲೇಖಿಸುತ್ತವೆ. ಆದರೆ ಈ ದೇವಸ್ಥಾನವನ್ನು ಯಾರು ನಿರ್ಮಿಸಿದರು ಎನ್ನುವ ಯಾವುದೇ ಮಾಹಿತಿಯಿಲ್ಲ. ಚೋಳರು ಅಥವಾ ಪಲ್ಲವರಲ್ಲಿ ಈ ದೇವಾಲಯವನ್ನು ನಿರ್ಮಿಸಿರಬಹುದು ಎಂದು ನಂಬಲಾಗಿದೆ.

ಕಲ್ಯಾಣ ಭಾಗ್ಯ ಒದಗಿಬರುತ್ತದಂತೆ

ಕಲ್ಯಾಣ ಭಾಗ್ಯ ಒದಗಿಬರುತ್ತದಂತೆ

ಇಲ್ಲಿಗೆ ಹೋದರೆ ವಿವಾಹವಾಗದವರಿಗೆ ಕಲ್ಯಾಣ ಭಾಗ್ಯ ಒದಗಿಬರುತ್ತದೆ. ಮಾಂಗಲ್ಯ ಗಟ್ಟಿಯಾಗಿರುತ್ತದೆ ಎನ್ನಲಾಗುತ್ತದೆ. ಮಕ್ಕಳ ಭಾಗ್ಯ ದೊರೆಯುತ್ತದೆ. ಇಲ್ಲಿಂದ ಅರ್ಧ ಕಿ.ಮೀ ದೂರದಲ್ಲಿ ಸೂರ್ಯನ ದೇವಸ್ಥಾನವಿದೆ. ಅಲ್ಲಿಂದ ೩ ಕಿ.ಮೀ ದೂರದಲ್ಲಿ ವಿಶಾಲಾಕ್ಷಿ ದೇವಾಲಯವಿದೆ. ಕಾಶಿ ಶಿವ ದೇವಾಲಯವು 6 ಕಿ.ಮೀ ದೂರದಲ್ಲಿದೆ ಮತ್ತು ಅಡುತುರೈ ಶಿವ ದೇವಸ್ಥಾನ ಇಲ್ಲಿಂದ 2 ಕಿ.ಮೀ ದೂರದಲ್ಲಿದೆ.

ಹೋಗುವುದು ಹೇಗೆ ?

ಹೋಗುವುದು ಹೇಗೆ ?

ಚೆನ್ನೈಗೆ ತಲುಪಿ ಅಲ್ಲಿಂದ-ತಿರುಚೆಂಡೂರ್ ದೇವಾಲಯ ತಿರುಚಿರಾಪಲ್ಲಿಯಿಂದ 25 ಕಿ.ಮೀ. ದೂರದಲ್ಲಿದೆ. ಉಲ್ಲಂದೂರು ಪೇಟ, ಮಂಗಲಂಪಟ್ಟಿ ಮತ್ತು ವಿಜಯಂಗಂಗರ್ ಮಾರ್ಗವಾಗಿ ಮಂಗಲಂಪೆಟ್, ಪತ್ತಿ ಮತ್ತು ಎರುಮೂರ್ ಮೂಲಕ ಇನ್ನೊಂದು ಮಾರ್ಗವನ್ನು ತಲುಪಬಹುದು.

More News

Read more about: temple chennai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+