Search
  • Follow NativePlanet
Share
» »900 ದೇವಾಲಯ ಒಂದೇ ಪರ್ವತದಲ್ಲಿ, ದರ್ಶನದಿಂದ ಪುಣ್ಯ ಫಲ...

900 ದೇವಾಲಯ ಒಂದೇ ಪರ್ವತದಲ್ಲಿ, ದರ್ಶನದಿಂದ ಪುಣ್ಯ ಫಲ...

ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್ಲಿನ ಒಂದೇ ಕ್ಷೇತ್ರದಲ್ಲಿ ಮಾತ್ರ 900 ದೇವಾಲಯಗಳಿವೆ.

ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್ಲಿನ ಒಂದೇ ಕ್ಷೇತ್ರದಲ್ಲಿ ಮಾತ್ರ 900 ದೇವಾಲಯಗಳಿವೆ.

ಅದು ಕೂಡ ಒಂದೇ ಒಂದು ಪರ್ವತದಲ್ಲಿ. ಆ ದೇವಾಲಯವನ್ನು ಸುಂದರವಾದ ಕಲ್ಲಿನಿಂದ ನಿರ್ಮಾಣ ಮಾಡಿರುವುದು ವಿಶೇಷ. ಅದರಲ್ಲಿ ಒಂದು ದೇವಾಲಯದಲ್ಲಿ ಅತಿ ಪ್ರಾಚೀನವಾದ ಬಂಗಾರದ ಆಭರಣಗಳನ್ನು ಭದ್ರಪಡಿಸಿದ್ದಾರೆ. ಇದು ಹೀಗೆ ಇದ್ದರೆ, ಆ ಕ್ಷೇತ್ರವು ಸಸ್ಯಹಾರಿ ನಗರ ಎಂದು ಗುರುತಿಸಿಕೊಂಡಿದೆ.

ಇಷ್ಟು ವಿಶಿಷ್ಟತೆಗಳನ್ನು ಹೊಂದಿರುವ ಆ ನಗರವು ಜೈನರಿಗೆ ಪರಮ ಪವಿತ್ರವಾದ ಕ್ಷೇತ್ರವಾಗಿದೆ. ಜೀವನದಲ್ಲಿ ಹಿಂದುಗಳು ಕಾಶಿಯನ್ನು ಒಮ್ಮೆ ಹೇಗೆ ದರ್ಶಿಸಬೇಕು ಎಂದು ಭಾವಿಸುತ್ತಾರೆಯೋ ಹಾಗೆಯೇ ಜೈನರು ಕೂಡ ಈ ಕ್ಷೇತ್ರವನ್ನು ಒಮ್ಮೆಯಾದರು ದರ್ಶಿಸಬೇಕು ಎಂದು ಕೋರಿಕೊಳ್ಳುತ್ತಾರೆ. ಅಂತಹ ಪವಿತ್ರವಾದ ನಗರ ವಿಶೇಷಗಳ ಬಗ್ಗೆ ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳೊಣ.

1.ಅತಿ ಪುರಾತನವಾದ ಪಟ್ಟಣ

1.ಅತಿ ಪುರಾತನವಾದ ಪಟ್ಟಣ

PC:YOUTUBE

ಗುಜರಾತ್‍ದಲ್ಲಿನ ಭಾವ್ ನಗರ್ ಜಿಲ್ಲೆಯಲ್ಲಿನ ಅತಿ ಪುರಾತನವಾದ ಪಟ್ಟಣವೇ ಪಾಲಿಟಾನಾ. ಪ್ರಪಂಚದಲ್ಲಿಯೇ ಮೊದಲ ಸಸ್ಯಹಾರಿ ನಗರ ಪಾಲಿಟಾನ್ ಎಂದು ಗುರುತಿಸಿಕೊಂಡಿದೆ. ಪ್ರಪಂಚದಲ್ಲಿನ 900 ದೇವಾಲಯಗಳನ್ನು ಹೊಂದಿರುವ ಹಿಲ್ ಸ್ಟೇಷನ್ ಕೂಡ ಈ ಪಾಲಿಟಾನ್ ಆಗಿರುವುದು ಗಮನಾರ್ಹ.

2.ಶತ್ರುಂಜಯ ಪರ್ವತ

2.ಶತ್ರುಂಜಯ ಪರ್ವತ

PC:YOUTUBE

ಈ ಪಾಲಿಟಾನ್‍ಗೆ ಅತಿ ಸಮೀಪದಲ್ಲಿರುವ ಶತ್ರುಂಜಯ ಪರ್ವತಗಳಿವೆ. ಜೈನ ಧರ್ಮಕ್ಕೆ ಈ ಶತ್ರುಂಜಯ ಪರ್ವತವು ಭಕ್ತರಿಗೆ ಅತ್ಯಂತ ಪವಿತ್ರವಾದ ಪುಣ್ಯಸ್ಥಳವಾಗಿದೆ. ಜೈನರ ಮೊದಲ ತೀರ್ಥಕರರನಾದ ಅದಿನಾಥನು ಈ ಶತ್ರುಂಜಯ ಪರ್ವತದ ಮೇಲೆ ಧ್ಯಾನ ಮಾಡುತ್ತಿದ್ದನು ಎಂದು ನಂಬಲಾಗಿದೆ.

3.ಒಟ್ಟು 3 ಸಾವಿರ ದೇವಾಲಯಗಳಲ್ಲಿ 900

3.ಒಟ್ಟು 3 ಸಾವಿರ ದೇವಾಲಯಗಳಲ್ಲಿ 900

PC:YOUTUBE

ಪಾಟಲಿನಾಲ್‍ನಲ್ಲಿಯೇ
ಇಲ್ಲಿ ಅನೇಕ ದೇವಾಲಯಗಳನ್ನು ನಿರ್ಮನ ಮಾಡಿದ್ದಾರೆ. ಈ ಪರ್ವತ ಪಂಕ್ತಿಯಲ್ಲಿ ಒಟ್ಟು 3 ಸಾವಿರ ದೇವಾಲಯಗಳಿದ್ದರೆ ಅವುಗಳಲ್ಲಿ ಪಾಟಲಿನಾಲ್‍ನಲ್ಲಿ ಮಾತ್ರವೇ 900 ದೇವಾಲಯಗಳು ಇವೆ. ಈ ಎಲ್ಲಾ ದೇವಾಲಯಗಳಲ್ಲಿ ಪ್ರಧಾನವಾದುದು ವೃಷಭನಾಥ ದೇವಾಲಯ.

4.ಬಂಗಾರದ ಅಭರಣಗಳನ್ನು ಭದ್ರಪಡಿಸಿದ್ದಾರೆ

4.ಬಂಗಾರದ ಅಭರಣಗಳನ್ನು ಭದ್ರಪಡಿಸಿದ್ದಾರೆ

PC:YOUTUBE

ಈ ವೃಷಭನಾಥ ದೇವಾಲಯದ ಜೊತೆಗೆ ಇಲ್ಲಿರುವ ಸುಮಾರು ಎಲ್ಲಾ ದೇವಾಲಯಗಳು ತಂಪಾಗಿರುವ ಅಮೃತಶಿಲೆಗಳಿಂದ ನಿರ್ಮಿತವಾದುದೆ. ಮುಖ್ಯವಾಗಿ ಕುಮಾರ ಪಾಲ್, ವಿಮಲ್ ಷಾ, ಸಂಪ್ರಿತಿ ದೇವಾಲಯಗಳು ಮುಖ್ಯವಾದುವು. ಕುಮಾರ್ ಪಾಲ್ ದೇವಾಲಯದಲ್ಲಿ ಅನೇಕ ಪುರಾತನವಾದ ಬಂಗಾರ ಆಭರಣಗಳನ್ನು ಭದ್ರಪಡಿಸಿದ್ದಾರೆ.

5.3,800 ಮೆಟ್ಟಿಲುಗಳು

5.3,800 ಮೆಟ್ಟಿಲುಗಳು

PC:YOUTUBE

ಪ್ರತ್ಯೇಕವಾದ ಅನುಮತಿಯನ್ನು ಪಡೆದು ಈ ಆಭರಣಗಳನ್ನು ಕಾಣಬಹುದು. ಇಲ್ಲಿರುವ ಶಿಲ್ಪ ಸಂಪತ್ತು ಕೂಡ ಅತ್ಯಂತ ಮನೋಹರವಾಗಿದೆ. ಜೈನ ಧರ್ಮದವರು ಈ ಪುಣ್ಯಕ್ಷೇತ್ರವನ್ನು ಜೀವನದಲ್ಲಿ ಒಮ್ಮೆಯಾದರು ದರ್ಶಿಸಿಕೊಳ್ಳುತ್ತಾರೆ. ಈ ಪರ್ವತದ ಪಾದದಿಂದ ಪರ್ವತದ ಶಿಖರದ ಮೇಲಿನ ತನಕ ಸುಮಾರು 3,800 ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ.

6.ಕಠಿಣ ಉಪಾಸನೆ ದೀಕ್ಷೆ

6.ಕಠಿಣ ಉಪಾಸನೆ ದೀಕ್ಷೆ

PC:YOUTUBE

ಈ ಪರ್ವತದ ಮೇಲೆ ತಲುಪುವ ಸಮಯದಲ್ಲಿ ಜೈನರು ಆಹಾರವನ್ನು, ನೀರನ್ನು ಯಾವ ಪರಿಸ್ಥಿತಿಯಲ್ಲೇ ಆಗಲಿ ತೆಗೆದುಕೊಂಡು ಹೋಗುವುದಿಲ್ಲ. ನೀರನ್ನೇ ಆಗಲಿ, ಆಹಾರವನ್ನೇ ಆಗಲಿ ತಿನ್ನುವುದಿಲ್ಲ. ಕಠಿನವಾದ ಉಪಾಸನೆಯಿಂದ ಜೈನರು ಈ ತೀರ್ಥಯಾತ್ರೆಯನ್ನು ಪೂರ್ತಿಯಾಗಿ ಮಾಡುತ್ತಾರೆ. ಎಷ್ಟೇ ವೇಗವಾಗಿ ಹತ್ತಿದ್ದರು ಕೂಡ ಪರ್ವತ ಶಿಖರದ ಮೇಲಿನ ಭಾಗವನ್ನು ತಲುಪಲು ಸುಮಾರು 2 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆಯಂತೆ.

7.ಆನಂದ ಜಿ, ಕಲ್ಯಾಣ್ ಜಿ

7.ಆನಂದ ಜಿ, ಕಲ್ಯಾಣ್ ಜಿ

PC:YOUTUBE

ಈ ಪರ್ವತ ಶಿಖರದ ಮೇಲಿರುವ ಒಟ್ಟು ದೇವಾಲಯಗಳು 11 ನೇ ಶತಮಾನದಿಂದ 20ನೇ ಶತಮಾನದ ಮಧ್ಯ ಕಾಲದಲ್ಲಿ ನಿರ್ಮಾಣ ಆಗಿರಬಹುದೆಂದು ನಂಬಲಾಗಿದೆ. ಅದೇ ವಿಧವಾಗಿ 11 ನೇ ಶತಮಾನದಿಂದ ಇಂದಿನವರೆವಿಗೂ ಈ ದೇವಾಲಯದ ನಿರ್ಮಾಣವನ್ನು ಆನಂದ್ ಜೀ ಹಾಗು ಕಲ್ಯಾಣ್ ಜೀ ಎಂಬ ಸಂಸ್ಥೆಯಡಿಯಲ್ಲಿ ಅಭಿವೃದ್ಧಿಯಾಗುತ್ತಿದೆ.

8.ಹೇಗೆ ಸಾಗಬೇಕು?

8.ಹೇಗೆ ಸಾಗಬೇಕು?

PC:YOUTUBE

ಪಾಟಲಿನ್‍ಗೆ ಸಮೀಪದಲ್ಲಿ ಭಾವ್ ನಗರ ವಿಮಾನ ನಿಲ್ದಾಣವಿದೆ. ಇಲ್ಲಿಂದ ಪಾಟಲಿನ್‍ಗ್ ಖಾಸಗಿ ಟ್ಯಾಕ್ಸಿಗಳು ದೊರೆಯುತ್ತವೆ. ಪಾಟಲಿನ್‍ನಲ್ಲಿ ರೈಲ್ವೆ ನಿಲ್ದಾಣ ಕೂಡ ಇದೆ. ಭಾವ್ ನಗರದಿಂದ ಪಾಟಲಿನ್‍ಗೆ ಪ್ರತಿ ಗಂಟೆಗೆ ಒಂದು ಸರ್ಕಾರಿ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X