Search
  • Follow NativePlanet
Share
» »ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

ಎಲ್ಲರನ್ನೂ ಹರಸುತ್ತ ಬತುಕಮ್ಮ ನೆಲೆಸಿರುವ ಪದ್ಮಾಕ್ಷಿ ಗುಟ್ಟ!

By Vijay

ಇದೊಂದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಬಸದಿ ಹಾಗೂ ತೀರ್ಥಂಕರರ ವಿಗ್ರಹವಿದ್ದರೆ, ಹಿಂದು ಧರ್ಮಕ್ಕೆ ಸಂಬಂಧಿಸಿದಂತೆ ಪದ್ಮಾಕ್ಷಿಯ ನೆಲೆಯಿರುವ ದೇವಾಲಯವಿದೆ.

ಚಿತ್ರ, ವಿಚಿತ್ರ ಶಿಲಾರಚನೆಗಳ ಓರ್ವಕಲ್ಲು!

ಈ ತಾಣವು ಮೂಲತಃ ತೆಲಂಗಾಣ ರಾಜ್ಯದಲ್ಲಿದೆ ಹಾಗೂ ಇದು ರಾಜ್ಯದ ಉತ್ಸವವಾದ ಬತುಕಮ್ಮ ಪಂಡುಗ ಹಬ್ಬಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಉತ್ಸವದ ವೈಭವವನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಅದನ್ನು ಈ ಸ್ಥಳಕ್ಕೆ ತೆರಳಿಯೆ ಅನುಭವಿಸಬೇಕು.

ಸಾಕಷ್ಟು ಪುರಾತನವಾಗಿರುವ ಈ ಗುಡ್ಡ ದೇವಾಲಯವು ಇಂದು ಎಲ್ಲರೂ ಇಷ್ಟ ಪಟ್ಟು ವರ್ಷಪೂರ್ತಿ ಭೇಟಿ ನೀಡುವ ಐತಿಹಾಸಿಕ ಆಕರ್ಷಣೆಯಾಗಿಯೂ ಗಮನ ಸೆಳೆಯುತ್ತಿದೆ. ಇದನ್ನು ಮತ್ತಷ್ಟು ಜನಪ್ರೀಯಗೊಳಿಸಲೆಂದು ತೆಲಂಗಾಣ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಹನ್ನೇರಡನೇಯ ಶತಮಾನದಲ್ಲಿ ಇಂದಿನ ತೆಲಂಗಾಣ ಪ್ರದೇಶವನ್ನು ಆಳುತ್ತಿದ್ದ ಕಾಕತೀಯರಿಂದ ಈ ಗುಡ್ಡ ದೇವಾಲಯ ನಿರ್ಮಿತವಾಗಿದೆ. ಅದಕ್ಕೂ ಮೊದಲು ಇಲ್ಲಿ ಜೈನ ಶಿಲ್ಪಕಳೆಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Sharma.ND

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಜೈನ ಬಸದಿ, ತೀರ್ಥಂಕರರ ವಿಗ್ರಹ ಹೀಗೆ ಹಲವು ಜೈನ ಕುರುಹುಗಳನ್ನು ಕಾಣಬಹುದು. ಆ ನಂತರ ಆಳಿದ ಕಾಕತೀಯರು ಇಲ್ಲಿ ಪದ್ಮಾಕ್ಷಿಯನ್ನು ಪ್ರತಿಷ್ಠಾಪಿಸಿದರು. ತೆಲಂಗಾಣದಲ್ಲಿ ಕಾಕತೀಯರ ವೈಭವ ಸಾರುವ ಹಲವು ದೇವಾಲಯಗಳ ಪೈಕಿ ಇದೂ ಸಹ ಒಂದು.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಈ ತಾಣವು ಬೆಟ್ಟ ಗುಡ್ಡಗಳಿರುವ ಪ್ರದೇಶದಲ್ಲಿ ನೆಲೆಸಿದ್ದು ಸಾಕಷ್ಟು ಪ್ರಶಾಂತಮಯವಾಗಿದೆ. ವಿಶಾಲವಾದ ಬಂಡೆಗಲ್ಲಿನ ಬೆಟ್ಟವೊಂದರ ಮೇಲೆ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ಏರಬಹುದು.

ಚಿತ್ರಕೃಪೆ: Sharma.ND

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಬೆಟ್ಟ ಹತ್ತಲು ಮೆಟ್ಟಿಲುಗಳನ್ನು ಕೊರೆಯಲಾಗಿದ್ದು ಪ್ರವಾಸಿಗರು/ಭಕ್ತರು ಬೆಟ್ಟ ಏವುದನು ಇದು ಇನ್ನಷ್ಟು ಸುಗಮಗೊಳಿಸಿದೆ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ದೇವಾಲಯದ ಗೋಡೆಯ ಮೇಲೆ ಪದ್ಮಾಕ್ಷಿಯ ವರ್ಣಚಿತ್ರವಿದ್ದು ಸ್ಥಳೀಯರು ಆಕೆಯನ್ನು ಬತುಕಮ್ಮ ಅಥವಾ ಪದ್ಮಾಕ್ಷಮ್ಮ ಎಂದೆ ಆರಾಧಿಸುತ್ತಾರೆ. ಒಂದು ಕಥೆಯಂತೆ ಹಿಂದೆ ಚೋಳ ರಾಜನಾದ ಧರ್ಮಾಂಗದನಿಗೆ ಒಂದು ಸಂತಾನವೂ ಇರಲಿಲ್ಲ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಆ ರಾಜ ದಂಪತಿಗಳು ಎಲ್ಲ ಗುಡಿ-ಗುಂಡಾರಗಳನ್ನು ಸುತ್ತಿದರು, ಹರಕೆ ಕಟ್ಟಿಕೊಂಡರು, ಪೂಜೆಗಳನ್ನು ಮಾಡಿದರು. ಆ ನಂತರ ಬಹು ಸಮಯದ ನಂತರ ಅವರಿಗೆ ಹೆಣ್ಣು ಸಂತಾನವಾಯಿತು. ಆ ಸಂತಾನ ಹುಟ್ಟಿದಾಗಿನಿಂದಲೂ ಸಾಕಷ್ಟು ಅವಗಢ/ಅಪಘಾತಗಳಿಗೆ ಒಳಗಾದರೂ ಪವಡವೆಂಬಂತೆ ಬದುಕಿದಳು. ಹೀಗಾಗಿ ಅವಳನ್ನು ಬತುಕಮ್ಮ (ಬದುಕಮ್ಮ) ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: padmakshi.org

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ತೆಲಂಗಾಣದ ರಾಜ್ಯ ಮಟ್ಟದ ಉತ್ಸವವಾಗಿರುವ ಬತುಕಮ್ಮ ಪಂಡುಗವನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಉತ್ಸವವು ಸೆಪ್ಟಂಬರ್-ಅಕ್ಟೋಬರ್ ಸಮಯದಲ್ಲಿ ಬರುತ್ತದೆ. ವಿಶೇಷವೆಂದರೆ ಈ ಉತ್ಸವವು ಮಹಿಳೆಯರಿಂದ ಮಾತ್ರವೆ ಆಚರಿಸಲ್ಪಡುವುದು. ರಾಜ್ಯದ ಎಲ್ಲ ಭಾಗಗಳಲ್ಲಿ ಇದು ಆಚರಿಸಲ್ಪಡುತ್ತದೆ. ಆದರೆ ಪದ್ಮಾಕ್ಷಿ ಗುಟ್ಟದ ಉತ್ಸವ ಸಾಕಷ್ಟು ವಿಶೇಷವಗಿರುತ್ತದೆ.

ಚಿತ್ರಕೃಪೆ: Randhirreddy

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಈ ಉತ್ಸವದ ಸಂದರ್ಭದಲ್ಲಿ ಪದ್ಮಾಕ್ಷಿ ಗುಟ್ಟದ ಸುತ್ತ ಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹೂವುಗಳಿಂದ ಮಾಡಲಾದ ಬದುಕಮ್ಮನ ಸಾಂಕೇತಿಕ ರೂಪವನ್ನು ತಮ್ಮ ತಲೆಯ ಮೇಲೆ ಹೊತ್ತಿಕೊಂಡು ಹಾಡುತ್ತ ಕುಣಿಯುತ್ತ ಪದ್ಮಾಕ್ಷಿ ಗುಟ್ಟಕ್ಕೆ ಬಂದು ಅಲ್ಲಿರುವ ಕೆರೆಯಲ್ಲಿ ಆ ಹೂಕುಂಡಗಳನ್ನು ತೇಲಿ ಬಿಡುತ್ತಾರೆ.

ಚಿತ್ರಕೃಪೆ: Karun138

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಈ ಸಂದರ್ಭದಲ್ಲಿ ಈ ಕೆರೆಯ ಮುಂದೆ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಜನಸಾಗರವನ್ನು ಕಂಡಾಗ ಕಣ್ಣಿಗೆ ಹಬ್ಬವುಂಟಾಗದೆ ಇರಲಾರದು.

ಚಿತ್ರಕೃಪೆ: padmakshi.org

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಹೀಗೆ ಉತ್ಸವದ ಸಂದರ್ಭದಲ್ಲಿ ಕ್ರಿಯಾಶೀಲವಾಗುವ ಪದ್ಮಾಕ್ಷಿ ಗುಟ್ಟವು ನಂತರ ಮತ್ತೆ ಪ್ರಶಾಂತಮಯ ವಾತಾವರಣವನ್ನು ಹೊಂದುತ್ತದೆ. ಈ ಸಮಯದಲ್ಲೂ ಒಂದು ದಿನದ ಹಾಯಾದ ಪ್ರವಾಸವನ್ನು ಇಲ್ಲಿಗೆ ಮಾಡಬಹುದು. ಕೆರೆಯ ತಟದ ಬೆಟ್ಟ ಹಾಗೂ ದೇವಾಲಯ ಮನಸ್ಸಿಗೆ ಮುದ ನೀಡುತ್ತದೆ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಪದ್ಮಾಕ್ಷಿ ಗುಟ್ಟದಲ್ಲಿರುವ ಕೆಲವು ಜೈನ ತೀರ್ಥಂಕರರ ವಿಗ್ರಹ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಪದ್ಮಾಕ್ಷಿ ಗುಟ್ಟವು ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯಲ್ಲಿರುವ ಹನುಮಕೊಂಡ ಪಟ್ಟಣದ ಹೃದಯ ಭಾಗದಲ್ಲಿರುವ ಬೆಟ್ಟವೊಂದರ ಮೇಲೆ ಸ್ಥಿತವಿದೆ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಬಂಡೆಗಳ ಬೆಟ್ಟದಲ್ಲಿ ಸ್ಥಿತವಿರುವ ಈ ದೇವಾಲಯಕ್ಕೆ ಹೋಗುವಾಗ ಅಂದಿ-ಸಂದಿಗಳ ಮೂಲಕ ಸಾಗಬೇಕಾಗಿರುವುದರಿಂದ ಪ್ರವಾಸಿಗರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ.

ಚಿತ್ರಕೃಪೆ: Adityamadhav83

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಕುತೂಹಲಕರ ಪದ್ಮಾಕ್ಷಿ ಗುಟ್ಟ:

ಪ್ರಶಾಂತವಾಗಿರುವ ಪರಿಸರದಲ್ಲಿ ನೆಲೆ ನಿಂತಿರುವುದರಿಂದ ಹಾಗೂ ಆಕರ್ಷಕ ಶಿಲ್ಪಕಲೆ, ವರ್ಣಕಲೆಯ ಕಲಾಕೃತಿಗಳ ಮೂಲಕ ಪದ್ಮಿನಿ ಗುಟ್ಟ ಪ್ರವಾಸಿಗರನ್ನು ನಿರಾಸೆಗೊಳಿಸುವುದಿಲ್ಲ.

ಚಿತ್ರಕೃಪೆ: Adityamadhav83

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more