Search
  • Follow NativePlanet
Share
» » ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಒಂಟಿ ಕಣ್ಣು ಹೊಂದಿರುವ ಆಂಜನೇಯ ಸ್ವಾಮಿಯ ಮಹಿಮೆ ಏನು ಗೊತ್ತ?

ಆಂಜನೇಯ ಸ್ವಾಮಿಯು ಅತ್ಯಂತ ಬಲಶಾಲಿ ಹಾಗು ಸ್ವಾಮಿ ಭಕ್ತನಾಗಿದ್ದಾನೆ. ಒಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಒಂದೇ ಕಣ್ಣನ್ನು ಹೊಂದಿದ್ದಾನೆ. ಭಕ್ತರು ಮೊದಲು ಒಂಟಿ ಕಣ್ಣು ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಂಡ ನಂತರ ದೇವಾಲಯದ ಸಮೀಪದಲ್ಲಿಯೇ

ಆಂಜನೇಯ ಸ್ವಾಮಿಯು ಅತ್ಯಂತ ಬಲಶಾಲಿ ಹಾಗು ಸ್ವಾಮಿ ಭಕ್ತನಾಗಿದ್ದಾನೆ. ಒಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಒಂದೇ ಕಣ್ಣನ್ನು ಹೊಂದಿದ್ದಾನೆ. ಭಕ್ತರು ಮೊದಲು ಒಂಟಿ ಕಣ್ಣು ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಂಡ ನಂತರ ದೇವಾಲಯದ ಸಮೀಪದಲ್ಲಿಯೇ ಇರುವ ಗುಡ್ಡದ ಮೇಲೆ ನೆಲೆಸಿರುವ ಬಾಲ ಆಂಜನೇಯ ಸ್ವಾಮಿಯನ್ನು ದರ್ಶನ ಮಾಡಿಕೊಳ್ಳುವುದು ಪದ್ಧತಿಯಾಗಿದೆ. ಪ್ರಧಾನ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಒಂದು ಗುಡ್ಡದ ಮೇಲೆ ಇರುವ ಕಾಶಿ ವಿಶ್ವೇಶ್ವರ ದೇವಾಲಯ ಕೂಡ ಇದೆ.

ಇನ್ನು ಆಂಧ್ರ ಪ್ರದೇಶದ ಕಸಾಪುರಂದಿಂದ ಗುಂತಕಲ್‍ಗೆ ತೆರಳುವ ಮಾರ್ಗದಲ್ಲಿ ಶನೀಶ್ವರ ದೇವಾಲಯ ಮತ್ತು ಆಯ್ಯಪ್ಪ ದೇವಾಲಯ ಕೂಡ ಇವೆ. ನಿಮಗೆ ಸಮುಯವಿದ್ದರೆ 14 ಕಿ.ಮೀ ದೂರದಲ್ಲಿನ ಚಿಪ್ಪಗಿರಿಯಲ್ಲಿ ಶ್ರೀ ಭೋಗೇಶ್ವರ ಸ್ವಾಮಿಯವರ ದೇವಾಲಯ ಕೂಡ ಇದೆ. ಕಸಾಪುರದಲ್ಲಿ ಒಂಟಿ ಕಣ್ಣಿನ ಆಂಜನೇಯ ಸ್ವಾಮಿ ದೇವಾಲಯದ ಮಹತ್ವದ ವಿಷಯಕ್ಕೆ ಬಂದರೆ....

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಆಂಧ್ರ ಪ್ರದೇಶದಲ್ಲಿರುವ ಆಂಜನೇಯಸ್ವಾಮಿ ಭಕ್ತರಿಗೆ ಸುಪರಿಚಿತವಾದ ದೇವಾಲಯವೇ ಒಂಟಿ ಕಣ್ಣು ಆಂಜನೇಯ ಸ್ವಾಮಿ ದೇವಾಲಯ. ಇದು ಅನಂತಪುರ ಜಿಲ್ಲೆಯಲ್ಲಿನ ಗುಂತಕಲ್ ಪಟ್ಟಣದಲ್ಲಿನ ಕಸಾಪುರಂ ಎಂಬ ಗ್ರಾಮದಲ್ಲಿದೆ. ಈ ಆಂಜನೇಯಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ಕೇವಲ ಆಂಧ್ರ ಪ್ರದೇಶದ ಭಕ್ತರೇ ಅಲ್ಲದೇ ಅನೇಕ ರಾಜ್ಯಗಳಿಂದಲೂ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಈ ಮಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದಲ್ಲಿನ ಅತ್ಯಂತ ದೊಡ್ಡ ಹನುಮಾನ್ ದೇವಾಲಯವಾಗಿದೆ. ಈ ದೇವಾಲಯದ ಚರಿತ್ರೆ ಅತ್ಯಂತ ದೊಡ್ಡದಾಗಿರುತ್ತದೆ. ಅದೆನೆಂದರೆ, ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಅಂದರೆ ಕ್ರಿ.ಶ 1521 ರಲ್ಲಿ ಶ್ರೀ ವ್ಯಾಸರಾಯರು ಬಹುದೊಡ್ಡ ಚಿತ್ರಗಾರರಾಗಿದ್ದರು. ಪ್ರತಿ ದಿನ ತಾನು ಧರಿಸುತ್ತಿದ್ದ ಗಂಧದಿಂದ ಎದುರಿಗೆ ಇರುವ ಒಂದು ಕಲ್ಲಿನ ಮೇಲೆ ಶ್ರೀ ಆಂಜನೇಯ ಸ್ವಾಮಿಯ ರೂಪವನ್ನು ಚಿತ್ರಿಸುತ್ತಿದ್ದ. ಹಾಗೆ ಚಿತ್ರವನ್ನು ರಚಿಸಿದ ಪ್ರತಿಬಾರಿ ಹನುಮನು ನಿಜರೂಪವನ್ನು ತಾಳಿ ದರ್ಶನವನ್ನು ನೀಡುತ್ತಿದ್ದನು.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಇದನ್ನು ಗಮನಿಸಿದ ವ್ಯಾಸ ರಾಯರು ಹನುಮಂತನ ಶಕ್ತಿಯು ಬೇರೆ ಯಾವುದೇ ಸ್ಥಳಕ್ಕೂ ತೆರಳಬಾರದು ಎಂಬ ಉದ್ದೇಶದಿಂದ, ಸ್ವಾಮಿಯನ್ನು ದ್ವಾದಶ ನಾಮಗಳ ಬೀಜಾಕ್ಷರದಿಂದ ಒಂದು ಯಂತ್ರ ತಯಾರು ಮಾಡಿ, ಅದರಲ್ಲಿ ಶ್ರೀ ಆಂಜನೇಯಸ್ವಾಮಿಯವರ ನಿಜರೂಪದ ಚಿತ್ರವನ್ನು ಮಾಡಿದರಂತೆ. ಅದರಿಂದಾಗಿ ಸ್ವಾಮಿಯು ಆ ಯಂತ್ರದಲ್ಲಿ ಬಂಧಿತನಾಗಿ, ಅಲ್ಲಿಯೇ ಉಳಿದನಂತೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಇಂದಿನ ಕರ್ನೂಲು ಜಿಲ್ಲೆಯಲ್ಲಿರುವ ಚಿಪ್ಪಗಿರಿ ಮಂಡಲದಲ್ಲಿರುವ ಶ್ರೀ ಭೋಗೇಶ್ವರಿ ಸ್ವಾಮಿಯವರ ದೇವಾಲಯದಲ್ಲಿ ಒಂದೇ ದಿನ ವ್ಯಾಸರಾಯರು ನಿದ್ರೆ ಮಾಡುವ ಸಮಯದಲ್ಲಿ ಆಂಜನೇಯ ಸ್ವಾಮಿಯು ಕನಸ್ಸಿನಲ್ಲಿ ಬಂದು " ನಾನು ಈ ಪ್ರದೇಶದಲ್ಲಿ ಇದ್ದೇನೆ, ನನಗೆ ಒಂದು ಗುಡಿಯನ್ನು ನಿರ್ಮಾಣ ಮಾಡು" ಎಂದು ಹೇಳಿದನು.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಆ ಪ್ರದೇಶವು ಎಲ್ಲಿದೆ ಎಂಬುದನ್ನು ಉಪದೇಶಿಸು ಎಂದು ವ್ಯಾಸರಾಯರು ಸ್ವಾಮಿಗೆ ಕೋರಿದರು. ಅದಕ್ಕೆ ಸ್ವಾಮಿಯು "ದಕ್ಷಿಣ ದಿಕ್ಕಿಗೆ ತೆರಳಿದರೆ ಒಂದು ಒಣಗಿದ ಬೇವಿನ ಮರವು ಕಾಣಿಸುತ್ತದೆ. ಅದಕ್ಕೆ ಸಮೀಪದಲ್ಲಿ ತೆರಳಿದರೆ ಅಲ್ಲಿನ ಭೂಮಿಯಲ್ಲಿಯೇ ನಾನು ಇದ್ದೇನೆ" ಎಂದು ಹೇಳುತ್ತಾನೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಮರುದಿನ ಮುಂಜಾನೆಯೇ ಎದ್ದು, ದಕ್ಷಿಣ ದಿಕ್ಕಿಗೆ ವ್ಯಾಸ ರಾಯರು ಪ್ರಯಾಣವನ್ನು ಬೆಳಸಿದನು. ಕೊನೆಗೆ ಒಣಗಿದ ಬೇವಿನ ಮರದ ಸ್ಥಳವನ್ನು ವ್ಯಾಸ ರಾಯರು ಕಂಡು ಹಿಡಿದರು. ರಾಯರು ಆ ಮರದ ಬಳಿ ಹೋಗುತ್ತಿದ್ದಂತೆ ಒಣಗಿದ ಮರವು ಸ್ವಲ್ಪ ಚಿಗುರಿತು.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಆಶ್ಚರ್ಯಚಕಿತರಾದ ವ್ಯಾಸರಾಯರು ತಕ್ಷಣ ಅಲ್ಲಿನ ಭೂಮಿಯನ್ನು ಅಗೆಯಲು ಪ್ರಾರಂಭ ಮಾಡಿದನು. ಅಗೆಯುವ ಸಮಯದಲ್ಲಿ ಒಂದೇ ಕಣ್ಣು ಹೊಂದಿರುವ ಆಂಜನೇಯಸ್ವಾಮಿಯ ವಿಗ್ರಹ ಕಾಣಿಸುತ್ತದೆ. ರಾಯರು ಆ ವಿಗ್ರಹವನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪ್ರತಿಷ್ಟಾಪಿಸಿ, ನಿರ್ಮಾಣ ಮಾಡಿದರು.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಒಂದೇ ಕಣ್ಣನ್ನು ಇಲ್ಲಿನ ಆಂಜನೇಯ ಸ್ವಾಮಿಯು ಹೊಂದಿದ್ದಾನೆ. ಸ್ವಾಮಿಗೆ ಬಲಗಣ್ಣು ಮಾತ್ರವೇ ಇದೆ. ಭಕ್ತರಿಗೆ ಈತನೇ "ಕಲ್ಪತರು" ಮತ್ತು "ವರಪ್ರದಾತ" ಕೂಡ ಆಗಿದ್ದಾನೆ. ಪ್ರತಿದಿನ ಸಾವಿರಾರು ಭಕ್ತರು ದರ್ಶನ ಮಾಡಿಕೊಳ್ಳುವ ಈ ದೇವಾಲಯದಲ್ಲಿ ಭೂತ, ಪ್ರೇತ, ದುಷ್ಟ ಗ್ರಹಪೀಡೆ ನಿವಾರಣ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಈ ಒಂಟಿ ಕಣ್ಣು ಆಂಜನೇಯಸ್ವಾಮಿ ದೇವಾಲಯದಲ್ಲಿ ಸಾವಿರಾರು ಮಂದಿ ಭಕ್ತರು ಕಾಷಾಯ ವಸ್ತ್ರವನ್ನು ಧರಿಸಿ ಹನುಮಾನನ ದೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಹನುಮಾನನ ವ್ರತಕ್ಕೆ, ಪೂಜೆಗಳಿಗೆ ಕೂಡ ಈ ದೇವಾಲಯ ಪ್ರಸಿದ್ಧಿಯಾಗಿದೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಪ್ರತಿ ವರ್ಷ ಒಬ್ಬ ಚಪ್ಪಲಿಯನ್ನು ತಯಾರು ಮಾಡುವವನು, ಬ್ರಹ್ಮಚರ್ಯವನ್ನು ಪಾಲಿಸುತ್ತ ಆಂಜನೇಯ ಸ್ವಾಮಿಗೆ ಒಂದು ಜೊತೆ ಚಪ್ಪಲಿ ತಯಾರು ಮಾಡಿ ಸಮರ್ಪಿಸುತ್ತಿದ್ದನು. ಮರುದಿನ ಬಂದು ನೋಡಿದರೆ ಅದು ಯಾರೋ ಧರಿಸಿದಂತೆ ಇರುತ್ತಿತ್ತು. ಅದಕ್ಕೆ ಅರ್ಥ ಸ್ವಾಮಿ ಆ ಚಪ್ಪಲಿಯನ್ನು ರಾತ್ರಿಯ ಸಮಯದಲ್ಲಿ ವಿಹಾರಕ್ಕೆ ತೆರಳುವಾಗ ಧರಿಸಿಕೊಳ್ಳುತ್ತಿದ್ದರು ಎಂದು ಭಕ್ತರ ನಂಬಿಕೆಯಾಗಿದೆ.

 ದೇವಾಲಯದ ಚರಿತ್ರೆ

ದೇವಾಲಯದ ಚರಿತ್ರೆ

ಪ್ರತಿ ವರ್ಷ ವೈಶಾಖ, ಶ್ರಾವಣ, ಕಾರ್ತಿಕ, ಮಾಘ ಮಾಸದಲ್ಲಿ, ಶನಿವಾರದ ದಿನದಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯನ್ನು ದರ್ಶನ ಮಾಡಲು ಹಾಗು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಭೇಟಿ ನೀಡುತ್ತಾರೆ.

ಇಲ್ಲಿಗೆ ಹೇಗೆ ಸೇರಿಕೊಳ್ಳಬೇಕು?

ಇಲ್ಲಿಗೆ ಹೇಗೆ ಸೇರಿಕೊಳ್ಳಬೇಕು?

ವಿಮಾನ ಮಾರ್ಗದ ಮೂಲಕ: ಕಸಾಪೂರಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಬಳ್ಳಾರಿಯಲ್ಲಿನ ವಿಮಾನ ನಿಲ್ದಾಣವು ಸಮೀಪದ ವಿಮಾನ ನಿಲ್ದಾಣವಾಗಿದೆ. ಅಲ್ಲಿ ಇಳಿದು ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಮೂಲಕ ತೆರಳಬಹುದು.

ರೈಲ್ವೆ ಮಾರ್ಗದ ಮೂಲಕ: ಈ ಮಹಿಮಾನ್ವಿತ ದೇವಾಲಯಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಸಾಪುರದ ಸಮೀಪದಲ್ಲಿರುವ ಗುಂತಕಲ್ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X