Search
  • Follow NativePlanet
Share
» » ಓಣಂ ಹಬ್ಬದಲ್ಲಿ ಸಾಂಪ್ರದಾಯಿಕ ಮಲೆಯಾಳಿ ಭೋಜನವನ್ನು ಎಲ್ಲಿ ಮಾಡಬಹುದು ?

ಓಣಂ ಹಬ್ಬದಲ್ಲಿ ಸಾಂಪ್ರದಾಯಿಕ ಮಲೆಯಾಳಿ ಭೋಜನವನ್ನು ಎಲ್ಲಿ ಮಾಡಬಹುದು ?

ಓಣಂ ಹಬ್ಬವು ಮಲೆಯಾಳಿಗರಿಗೆ ಒಂದು ಅತ್ಯಂತ ದೊಡ್ಡ ಹಬ್ಬವಾಗಿದೆ ಮತ್ತು ಈ ಸಂದರ್ಭದಲ್ಲಿ ವಿಷ್ಣುವಿನ ಅವತಾರವಾದ ವಾಮನ ದೇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಈ ಹಬ್ಬವು ಕೇರಳದ ಹಿಂದೂಗಳಿಗೆ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ ಮತ್ತು ಓಣಂ ಭೋಜನವು ಓಣಂ ಸಾಧ್ಯಾ ಎಂದು ಕೂಡಾ ಗುರುತಿಸಲ್ಪಡುತ್ತದೆ.

ಸಾಧ್ಯಾ ಎಂದರೆ ಮಲೆಯಾಳಂ ಭಾಷೆಯಲ್ಲಿ ಔತಣಕೂಟ ಎಂದು ಅರ್ಥೈಸುತ್ತದೆ ಮತ್ತು ಈ ಹಬ್ಬವು ಅನೇಕ ಶಾಖಾಹಾರಿ ಆಹಾರಗಳನ್ನೊಳಗೊಂಡ ಒಂದು ಹಬ್ಬವಾಗಿದೆ. ಜಗತ್ತಿನಾದ್ಯಂತದ ಪ್ರತೀ ವರ್ಷ ಓಣಂ ಆಚರಿಸುವ ಎಲ್ಲಾ ಮಹಿಳೆಯರು ಮತ್ತು ಪುರುಷರು ಓಣಂ ನ ಈ ಸಾಂಪ್ರದಾಯಿಕ ಸಾಧ್ಯಾದಲ್ಲಿ ಕುಳಿತುಕೊಳ್ಳುತ್ತಾರೆ. 2018ರ ಓಣಂ ಆಗಸ್ಟ್ 15 ರಿಂದ ಆಗಸ್ಟ್ 27 ರವರೆಗೆ ನಡೆಯಲಿದೆ. ಈ ವರ್ಷವೂ ಕೂಡಾ ಭಾರತದ ಕೆಲವು ರೆಸ್ಟೋರೆಂಟ್ ಗಳಲ್ಲಿ ಓಣಂನ ಸಾಂಪ್ರದಯಿಕ ಅಡುಗೆ ಗಳನ್ನು ತಯಾರಿಸಿ ಆಚರಿಸಲಾಗುತ್ತಿದೆ.

ಮಹಾಬೆಲ್ಲಿ, ದೆಹಲಿ

ಮಹಾಬೆಲ್ಲಿ, ದೆಹಲಿ

PC:Augustus Binu

ಸಾಕೇತ್ ನ ಡಿಎಲ್ ಎಫ್ ಸ್ಥಳದಲ್ಲಿರುವ ಮಹಾಬೆಲ್ಲಿ ಮಲೆಯಾಳಿ ಆಹಾರಗಳನ್ನು ತಯಾರಿಸುವ ದೆಹಲಿಯ ಒಂದು ಪ್ರಸಿದ್ದ ರೆಸ್ಟೋರೆಂಟ್ ಆಗಿದೆ. ಈ ವರ್ಷ ವಿಶೇಷವಾಗಿ ನೀವು ಸಾಧ್ಯಾ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಡಬಹುದು. ಈ ಹೋಟೇಲಿನಲ್ಲಿ ಸಾಧ್ಯಾವು ಆಗಷ್ಟ್ 24, 25, ಮತ್ತು 27 ರಂದು ನಡೆಯಲಿದೆ. ಇದು ವಾರಾಂತ್ಯದಲ್ಲಿ ಬರುತ್ತದೆ. ಓಣಂ ಸಾಧ್ಯಾದ ದರ ಪ್ರತಿ ವ್ಯಕ್ತಿಗೆ ತೆರಿಗೆ ಸಹಿತ 749 ರೂಪಾಯಿಗಳು ಆಗುವುದು.

ದ ಟೆರೆಸ್, ಲೀಲಾ ಕೋವಲಂ , ಕೇರಳ

ದ ಟೆರೆಸ್, ಲೀಲಾ ಕೋವಲಂ , ಕೇರಳ

PC: Vishnu Kunnathully

ಈಗ ನಾವು ಮೂಲತ: ಓಣಂ ಹಬ್ಬವನ್ನು ಆಚರಿಸುವ ನಾಡಿಗೆ ಬರೋಣ, ಕೇರಳದಲ್ಲಿ ನೀವು ಪಕ್ಕಾ ಸಾಂಪ್ರದಾಯಿಕ ಶೈಲಿಯ ಓಣಂ ಸಾಧ್ಯಾದ ಅನುಭವವನ್ನು ಪಡೆಯಬೇಕೆಂದಿದ್ದು ಮತ್ತು ಇಲ್ಲಿ ನಿಮಗೆ ಯಾರೂ ಪರಿಚಯದವರು ಇಲ್ಲದೆ ಇದ್ದಲ್ಲಿ 'ದ ಟೆರೆಸ್' ಗೆ ಭೇಟಿ ಕೊಡಿ. ಲೀಲಾ ಕೋವಲಂ ನಲ್ಲಿ ನೆಲೆಸಿರುವ 'ದ ಟೆರೆಸ್' ಸಾಂಪ್ರದಾಯಿಕ ಓಣಂ ಸಾಧ್ಯಾವು ಆಗಸ್ಟ್ 25,ರಂದು ನಡೆಸುತ್ತದೆ.

ಇಲ್ಲಿ ಇದರ ದರ ತೆರಿಗೆ ಸೇರಿ 1200 ರೂಪಾಯಿಗಳು ಆಗಿರುತ್ತದೆ. ಇಲ್ಲಿ ಊಟವು ಮಧ್ಯಾಹ್ನ ಊಟದ ಸಮಯದಲ್ಲಿ ಇದ್ದು ಅದು ಮಧ್ಯಾಹ್ನ 12:30 ರಿಂದ ಸಂಜೆ 3:30ರ ವರೆಗೆ ಇರುತ್ತದೆ. ಇಲ್ಲಿ ನಿಮಗಾಗಿ ಟೇಬಲ್ ಅನ್ನು ಕಾಯ್ದಿರಿಸಬೇಕಾಗಬಹುದು.

ದಕ್ಷಿಣ್ ಕೋಸ್ಟಲ್ ಐಟಿಸಿ ಗ್ರಾಂಡ್ ಮರಾಠ , ಮುಂಬೈ

ದಕ್ಷಿಣ್ ಕೋಸ್ಟಲ್ ಐಟಿಸಿ ಗ್ರಾಂಡ್ ಮರಾಠ , ಮುಂಬೈ

PC: Jiteshgt

ನೀವು ಮುಂಬೈನಲ್ಲಿ ಓಣಂ ಸಾಧ್ಯಾದ ಉತ್ತಮ ಶೈಲಿಯ ಆಹಾರವನ್ನು ಆನಂದಿಸಬೇಕೆಂದಿದ್ದಲ್ಲಿ ದಕ್ಷಿಣ್ ಕೋಸ್ಟಲ್ ಐಟಿಸಿ ಗ್ರಾಂಡ್ ಮರಾಠ ನಿಮ್ಮ ಸೇವೆಗಾಗಿ ಹಾಜರಿದ್ದು ಮಲೆಯಾಳಿ ಆಹಾರವನ್ನು ಅನುಕರಣೆ ಮಾಡುತ್ತದೆ ಅಲ್ಲದೆ ಹಬ್ಬದ ಸಮಯದಲ್ಲಿ ಸ್ವಲ್ಪಹೆಷ್ಷು ಖರ್ಚು ಮಾಡಬೇಕಾಗುವುದು. ಈ ರೆಸ್ಟೋರೆಂಟ್ ನಲ್ಲಿ ಓಣಂ ಸಾಧ್ಯಾವು ಆಗಸ್ಟ್ 24 ಮತ್ತು 25ರಂದು ಇದ್ದು ಇದು ಮಧ್ಯಾಹ್ನ ಹಾಗೂ ರಾತ್ರಿಯಲ್ಲಿಯೂ ಭೋಜನದ ವ್ಯವಸ್ಥೆಯನ್ನು ಮಾಡುತ್ತದೆ. ಇಲ್ಲಿ ಪ್ರತಿ ಊಟಕ್ಕೆ ಪ್ರತಿವ್ಯಕ್ತಿಗೆ ತೆರಿಗೆ ಸಹಿತ ತಲಾ 3000 ರೂಪಾಯಿಗಳು ಆಗುತ್ತದೆ. ಇಲ್ಲಿ ಬಾರ್ ಕೂಡಾ ಇದ್ದು ನೀವು ಊಟದ ಜೊತೆಗೆ ಇಲ್ಲಿಗೂ ಕೂಡಾ ಆದೇಶಿಸಬಹುದಾಗಿದೆ.

ಕೇರಳ ಕೆಫೆ , ದೆಹಲಿ

ಕೇರಳ ಕೆಫೆ , ದೆಹಲಿ

PC: Rheadavid123

ಮಯೂರ್ ವಿಹಾರ್ ನಲ್ಲಿ ನೆಲೆಸಿರುವ ಕೇರಳ ಕೆಫೆ ಒಂದು ಸಣ್ಣ ಮತ್ತು ಸ್ನೇಹಶೀಲ ರೆಸ್ಟೋರೆಂಟ್ ಆಗಿದ್ದು ಇದು ಕೆಲವು ರುಚಿಕರ ಮಲೆಯಾಳಿ ಆಹಾರಕ್ಕೆ ಹೆಸರುವಾಸಿಯಾಗಿದೆ. ಈ ಹೋಟೆಲು ಕೂಡಾ ಓಣಂ ಸಾದ್ಯಾವನ್ನು ಆಗಸ್ಟ್ 25 ರಂದು ನೆರವೇರಿಸುತ್ತದೆ . ನೀವು ಇಲ್ಲಿಯೇ ಸೇವಿಸಬಹುದು ಅಥವಾ ಪ್ಯಾಕ್ ಕೂಡಾ ಮಾಡಿಕೊಳ್ಳಬಹುದು. ಇಲ್ಲಿ ಪ್ಯಾಕ್ ಕೂಡಾ ಸಾಂಪ್ರದಾಯಿಕ ಎಲೆ ಮತ್ತು ಪ್ಲೇಟುಗಳಲ್ಲಿ ಮಾಡಿಕೊಡಲಾಗುತ್ತದೆ. ಸಾಧ್ಯಾ ಸಮಯದಲ್ಲಿ ಇಲ್ಲಿಯೇ ಊಟ ಮಾಡುವುದಾದರೆ 300 ರೂಪಾಯಿಗಳು ಮತ್ತು ಪ್ಯಾಕಿಂಗ್ ಮಾಡುವುದಾದರೆ 400ರೂಪಾಯಿಗಳು ಶುಲ್ಕವಾಗಿರುತ್ತದೆ.

ಸೌತ್ ಆಫ್ ವಿಂಧ್ಯಾಸ್ - ದ ಆರ್ಚಿಡ್ , ಮುಂಬೈ

ಸೌತ್ ಆಫ್ ವಿಂಧ್ಯಾಸ್ - ದ ಆರ್ಚಿಡ್ , ಮುಂಬೈ

PC:Manojk

ಈ ರೆಸ್ಟೋರೆಂಟ್ ಅತ್ಯುತ್ತಮವಾದ ದಕ್ಷಿಣ ಭಾರತೀಯ ಆಹಾರಗಳಿಗೆ ಹೆಸರುವಾಸಿಯಾಗಿದ್ದು ಇದು ಮುಂಬೈನ ಆರ್ಚಿಡ್ ಹೋಟೇಲಿನಲ್ಲಿದೆ. ಈ ರೆಸ್ಟೋರೆಂಟ್ ಓಣಂ ಸಾಧ್ಯಾವನ್ನು ಆಗಸ್ಟ್ 24, 25,ಮತ್ತು 26 ರಂದು ನಡೆಸುತ್ತದೆ. ಇಲ್ಲಿ ಪ್ರತೀ ಊಟದ ದರವು ತೆರಿಗೆ ಸೇರಿ ಪ್ರತಿ ವ್ಯಕ್ತಿಗೆ ತಲಾ 1499 ರೂಪಾಯಿಗಳು ಆಗಿರುತ್ತದೆ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತಿನಲ್ಲಿಯೂ ಊಟದ ವ್ಯವಸ್ಥೆಯನ್ನು ಹೊಂದಿರುತ್ತದೆ. ಇಲ್ಲಿ ಸುಸಜ್ಜಿತ ವಾದ ಆಯ್ಕೆಗಳನ್ನು ಹೊಂದಿದ ಬಾರ್ ಕೂಡ ಇರುತ್ತದೆ.

 ಕರಾವಳಿ , ಬೆಂಗಳೂರು

ಕರಾವಳಿ , ಬೆಂಗಳೂರು

ರೆಸಿಡೆನ್ಸಿ ರಸ್ತೆಯ ಗೇಟ್ ವೇ ಹೋಟೇಲಿನಲ್ಲಿರುವ ಈ ಹೋಟೇಲು ದಕ್ಷಿಣ ಭಾರತದ ಒಂದು ಅತ್ಯಂತ ಉತ್ತಮವಾದ ಆಹಾರವನ್ನು ಉಣಬಡಿಸುತ್ತದೆ. ಇಲ್ಲಿ ಸಾಂಪ್ರದಾಯಿಕ ಓಣಂ ಸಾಧ್ಯಾದ ಸಮಯದಲ್ಲಿ ಕೆಳಗೆ ಕುಳಿತು ಆಹಾರ ಸೇವಿಸಬಹುದಾಗಿದೆ, ಓಣಂ ಸಾಧ್ಯಾದ ಊಟಕ್ಕೆ ಪ್ರತಿಯೋರ್ವರಿಗೆ ತೆರಿಗೆ ಸೇರಿ ತಲಾ 1700 ರೂಪಾಯಿ ದರವಾಗಿರುತ್ತದೆ. ಈ ಬಾರಿ ಓಣಂ ಸಾಧ್ಯಾವು ಆಗಸ್ಟ್ 25ರಂದು ಆಗಿರುತ್ತದೆ ಆದುದರಿಂದ ಇದಕ್ಕಾಗಿ ನೀವು ನಿಮ್ಮ ಟೇಬಲ್ ಅನ್ನು ಮೊದಲೇ ಕಾಯ್ದಿರಿಸಿದರೆ ಉತ್ತಮ.

ಪೆಪ್ಪರ್ , ತಾಜ್ ಮಲ್ ಬಾರ್ ರೆಸಾರ್ಟ್ ಮತ್ತು ಸ್ಪಾ , ಕೊಚಿನ್ , ಕೇರಳ

ಪೆಪ್ಪರ್ , ತಾಜ್ ಮಲ್ ಬಾರ್ ರೆಸಾರ್ಟ್ ಮತ್ತು ಸ್ಪಾ , ಕೊಚಿನ್ , ಕೇರಳ

ಈ ಮಲ್ಟಿ- ಕಸಿನ್ ರೆಸ್ಟೋರೆಂದ್ ಇಲ್ಲಿಯ ತಾಜ್ ಮಲಬಾರ್ ರೆಸಾರ್ಟ್ ಆಂಡ್ ಸ್ಪಾ, ಕೊಚ್ಚಿನ್ ನಲ್ಲಿರುವ ಈ ಪೆಪ್ಪರ್ ಹಲವಾರು ವರ್ಷಗಳಿಂದಲು ಕೆಲವು ರುಚಿಕರವಾದ ಆಹಾರವನ್ನು ಉಣಬಡಿಸುತ್ತಾ ಬಂದಿದೆ. ಈ 2018 ರ ಓಣಂ ಸಮಯದಲ್ಲಿ ಈ ರೆಸ್ಟೋರೆಂಟ್ ಕಡೆಗೆ ನೀವು ಹೋಗಬಹುದು ಮತ್ತು ಓಣಂ ಸಾಧ್ಯಾದ ಒಂದು ಆಹಾರದ ರುಚಿಯನ್ನು ಸವಿಯಲೇ ಬೇಕು.

ಈ ರೆಸ್ಟೋರೆಂಟ್ ನ ಉತ್ತಮವಾದಂತಹ ಅಂಶವೆಂದರೆ ಇಲ್ಲಿ ಮಾಂಸಾಹಾರದ ಅನೇಕ ವಿಧವಿಧ ದ ಆಹಾರಗಳನ್ನು ತಯಾರಿಸುವುದು ಮತ್ತು ಉಣಬಡಿಸುವುದು ಇಲ್ಲಿ ಸಾಧ್ಯಾದಲ್ಲಿ ಮೀನು ಮತ್ತು ಕೋಳಿಯ ಆಹಾರಗಳೂ ಸೇರಿರುತ್ತವೆ. ಇಲ್ಲಿ ಶಾಖಾಹಾರಿ ಸಾಧ್ಯಾದ ಆಹಾರಕ್ಕೆ ತೆರಿಗೆ ಸೇರಿಸಿ ತಲಾ ಪ್ರತಿವ್ಯಕ್ತಿಗೆ 1250 ರೂಪಾಯಿಗಳು ಮತ್ತು ಮಾಂಸಾಹಾರ ಆಹಾರಕ್ಕೆ ತೆರಿಗೆ ಸೇರಿ 1500 ರೂಪಾಯಿಗಳ ದರ ಇರುತ್ತದೆ. ಇಲ್ಲಿ ಸಾದ್ಯಾದ ಆಹಾರವು ಆಗಸ್ಟ್ 25ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಮಾತ್ರವಿರುತ್ತದೆ ಅದು ಸಂಜೆ 12:30ರಿಂದ 3:30ರವರೆಗೆ ಆಗಿರುತ್ತದೆ.

ವೆಂಬಾನಾಡ್ - ದ ಪೌಲ್ , ಬೆಂಗಳೂರು

ವೆಂಬಾನಾಡ್ - ದ ಪೌಲ್ , ಬೆಂಗಳೂರು

ಈ ಹೋಟೇಲು ದ ಪೌಲ್ ನಲ್ಲಿ ಬೆಂಗಳೂರಿನಲ್ಲಿದೆ. ಇಲ್ಲಿ ನೀವು ಓಣಂ ನ ಸಮಯದಲ್ಲಿ ಎರಡು ಬಾರಿ ಊಟ ಮಾಡಬಹುದಾಗಿದೆ. ಆಗಷ್ಟ್ 25 ರಂದು ನಡೆಯುವ ಸಾಂಪ್ರದಾಯಿಕ ಓಣಂ ಸಾಧ್ಯಾದಲ್ಲಿ ನೀವು ಇಲ್ಲಿ ಕೆಳಗೆ ಕುಳಿತುಕೊಂಡು ಆಹಾರವನ್ನು ಸವಿಯಬಹುದಾಗಿದೆ ಇದಕ್ಕಾಗಿ ಪ್ರತಿವ್ಯಕ್ತಿಗೆ ತೆರಿಗೆ ಸಹಿತ 1350ರೂಪಾಯಿಗಳು ಮತ್ತು ಆಗಷ್ಟ್ 26ರಂದು ನಡೆಯುವ ಕೂಟಕ್ಕೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ಸೇರಿ ಮಾಡಬಹುದು.

ಇದಕ್ಕೂ ಕೂಡ ಪ್ರತಿವ್ಯಕ್ತಿಗೆ ತೆರಿಗೆ ಸಹಿತ 1350ರೂಪಾಯಿ ದರವಾಗಿರುತ್ತದೆ. ಇಲ್ಲಿ ಉಪಹಾರವು ಮಧ್ಯಾಹ್ನ 12:30 ರಿಂದ ಸಾಯಂಕಾಲ 4ರವರೆಗೆ ಇರುತ್ತದೆ. ಓಣಂ ಸಾದ್ಯವು ಮಧ್ಯಾಹ್ನ ಊಟದ ಸಮಯದಲ್ಲಿ ಉಣಬಡಿಸಲಾಗುತ್ತದೆ ಅದು ಮಧಾಹ್ನ 12: 30ರಿಂದ ಸಾಯಂಕಾಲ 3:00ರವರೆಗೆ ಇರುತ್ತದೆ ಬ್ರಂಚ್ ನಲ್ಲಿ ಮಲೆಯಾಳಿ ಜನಪ್ರಿಯ ಮಾಂಸಾಹಾರಿ ಆಹಾರಗಳೂ ಕೂಡಾ ಸೇರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X