India
Search
  • Follow NativePlanet
Share
» »ಅಂತರಾಷ್ಟ್ರೀಯ ಹುಲಿದಿವಸ 2022 ರ ಪ್ರಯುಕ್ತ: ಭಾರತದಲ್ಲಿರುವ ಹುಲಿ ಅಭಯಾರಣ್ಯಗಳ ಪಟ್ಟಿ

ಅಂತರಾಷ್ಟ್ರೀಯ ಹುಲಿದಿವಸ 2022 ರ ಪ್ರಯುಕ್ತ: ಭಾರತದಲ್ಲಿರುವ ಹುಲಿ ಅಭಯಾರಣ್ಯಗಳ ಪಟ್ಟಿ

ಹುಲಿಯು ಈಗ ಭೂಮಿಯಲ್ಲಿರುವ ಅತ್ಯಂತ ಹೆಚ್ಚು ಅಳಿವಂಚಿನಲ್ಲಿರುವ ಪ್ರಾಣಿ ಪ್ರಭೇದಗಳಲ್ಲಿ ಒಂದಾಗಿದೆ. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಹಲವಾರು ಪ್ರಮುಖ ತಾಣಗಳನ್ನು ಹುಲಿ ಸಂರಕ್ಷಣಾ ತಾಣವನ್ನಾಗಿಸಿದೆ. ಭಾರತವು ವೈವಿಧ್ಯಮಯವಾದ ಶ್ರೇಣಿಯಲ್ಲಿ ಹುಲಿಗಳ ನೆಲೆಯಾಗಿರುವುದರ ಜೊತೆಗೆ 53ಕ್ಕೂ ಹೆಚ್ಚಿನ ಹುಲಿ ಅಭಯಾರಣ್ಯಗಳನ್ನು ಹೊಂದಿದೆ.

2010 ರಲ್ಲಿ ಅಂತರಾಷ್ಟ್ರೀಯ ಹುಲಿ ದಿವಸವನ್ನು ಆಚರಿಸಲು ಪ್ರಾರಂಭಿಸಿದ್ದು ಇದರ ಮುಖ್ಯ ಉದ್ದೇಶವೇನೆಂದರೆ ಹುಲಿಯನ್ನು ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಲ್ಲದೆ ಈ ಹುಲಿಗಳನ್ನು ರಕ್ಷಿಸುವ ಸಲುವಾಗಿ ಶ್ರಮಿಸಿದ ಹಲವಾರು ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ವಿಶ್ವದಲ್ಲಿ ಸುಮಾರು 3,900 ಹುಲಿಗಳು ಈಗ ಉಳಿದಿದ್ದು ಅವುಗಳಲ್ಲಿ ಭಾರತವು ವಿಶ್ವದ ಹುಲಿ ಜನಸಂಖ್ಯೆಯ 70% ರಷ್ಟು ಸಂಖ್ಯೆಯಲ್ಲಿ ಹುಲಿಗಳಿಗೆ ನೆಲೆಯಾಗಿದೆ. ಹುಲಿ ಗಣತಿಯ ಪ್ರಕಾರ, ಭಾರತವು ಸರಿಸುಮಾರು 2,960 ಹುಲಿಗಳನ್ನು ಹೊಂದಿದೆ. ಭಾರತದಲ್ಲಿ ಹುಲಿ ಮೀಸಲು 1973 ರಲ್ಲಿ ದೇಶದಲ್ಲಿ ಕೇವಲ 9 ಹುಲಿ ಮೀಸಲುಗಳೊಂದಿಗೆ ಪ್ರಾರಂಭವಾಗಿ, ಆದರೆ ಈಗ ಭಾರತವು 50ಕ್ಕಿಂತಲೂ ಹೆಚ್ಚಿನ ಹುಲಿ ಮೀಸಲು ಪ್ರದೇಶಗಳನ್ನು ಹೊಂದಿದೆ.

ಭಾರತದಲ್ಲಿಯ ಹುಲಿಗಳ ಸಂರಕ್ಷಿತ ಪ್ರದೇಶಗಳ ಪಟ್ಟಿ ಈ ಕೆಳಗಿನಂತಿವೆ

ನಾಗಾರ್ಜುನಸಾಗರ - ಶ್ರೀಶೈಲಮ್ ಹುಲಿ ಅಭಯಾರಣ್ಯ, ಆಂಧ್ರ ಪ್ರದೇಶ

ನಾಗಾರ್ಜುನಸಾಗರ - ಶ್ರೀಶೈಲಮ್ ಹುಲಿ ಅಭಯಾರಣ್ಯ, ಆಂಧ್ರ ಪ್ರದೇಶ

ನಾಗಾರ್ಜುನಸಾಗರ್- ಶ್ರೀಶೈಲಮ್ ಹುಲಿ ಅಭಯಾರಣ್ಯವು 1983 ರಲ್ಲಿ ಸ್ಥಾಪಿತವಾಗಿದ್ದು, ಭಾರತದ ಅತೀ ದೊಡ್ಡ ಹುಲಿ ಸಂರಕ್ಷಿತ ಅಭಯಾರಣ್ಯಗಳಲ್ಲಿ ಒಂದಾಗಿದೆ. ಆಂಧ್ರಪದೇಶದಲ್ಲಿ ಸುಮಾರು 3,728 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಮೆಹಬೂಬ್ ನಗರ ಜಿಲ್ಲೆ, ಗುಂಟೂರು ಜಿಲ್ಲೆ, ಪ್ರಕಾಶಂ ಜಿಲ್ಲೆ, ನಲಗೊಂದ ಜಿಲ್ಲೆ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಇದು ಹರಡಿದೆ. ಈ ಭೂಭಾಗವು ಕೆಲವು ಗುಡ್ಡಪ್ರದೇಶಗಳೊಂದಿಗೆ ಕೆಲವು ಕಣಿವೆಗಳು ಮತ್ತು ದೊಡ್ಡದಾದ ನಿತ್ಯಹರಿದ್ವರ್ಣ ಕಾಡು ಪ್ರದೇಶಗಳನ್ನು ಒಳಗೊಂಡಿವೆ.

ಈ ಸ್ಥಳವು ಭಾರತದ ಅತೀ ಪ್ರಮುಖವಾದ ಹುಲಿಗಳನ್ನು ಸಂರಕ್ಷಿಸುವ ಸ್ಥಳವಾಗಿದ್ದು ನಿರಂತರವಾಗಿ ವನ್ಯಜೀವಿ ಪ್ರೇಮಿಗಳ ಜೊತೆಗೆ ಹುಲಿಗಳ ಹಾಗೂ ಅವುಗಳ ನೈಸರ್ಗಿಕ ವಾಸಸ್ಥಳವನ್ನು ನೋಡ ಬಯಸುವ ಹಲವಾರು ಅಂತರಾಷ್ಟ್ರೀಯ ಅತಿಥಿಗಳಿಂದ ಭೇಟಿ ನೀಡಲ್ಪಡುತ್ತದೆ. ಈ ಅಭಯಾರಣ್ಯವು ಹುಲಿಗಳು ಮಾತ್ರವಲ್ಲದೆ, ಆನೆಗಳು, ಗೌರ್, ಸಂಬಾರ್, ಸೋಮಾರಿ ಕರಡಿಗಳು, ಮತ್ತು ರಣಹದ್ದುಗಳು ಮತ್ತು ವಿಧದ ಬಗೆಯ ಹೂಗಳು ಮತ್ತು ಸಸ್ಯಗಳನ್ನು ಶ್ರೀಮಂತವಾಗಿ ಹೊಂದಿದೆ.

ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ - ಜೂನ್ ವರೆಗೆ.

ರಣಥಂಬೂರ್ ಹುಲಿ ಅಭಯಾರಣ್ಯ, ರಾಜಸ್ಥಾನ

ರಣಥಂಬೂರ್ ಹುಲಿ ಅಭಯಾರಣ್ಯ, ರಾಜಸ್ಥಾನ

1980ರಲ್ಲಿ ಸ್ಥಾಪಿತವಾದ ಈ ರಣಥಂಬೂರ್ ಹುಲಿ ಅಭಯಾರಣ್ಯವು ಭಾರತದ ರಾಜಸ್ಥಾನದ ಸವಾಯಿ ಮದೋಪುರದಲ್ಲಿ ನೆಲೆಸಿದೆ. ಇದು ಭಾರತದ ಅತ್ಯಂತ ಹಳೆಯ ಅಭಯಾರಣ್ಯಗಳಲ್ಲಿ ಒಂದಾಗಿದೆ ಮತ್ತು ದೇಶದ ಅತೀ ದೊಡ್ಡ ಅಭಯಾರಣ್ಯಗಳಲ್ಲೊಂದಾಗಿದೆ. ಈ ಅಭಯಾರಣ್ಯವು 1,334 ಚದರ ಕಿ.ಮಿ² ಪ್ರದೇಶಗಳಲ್ಲಿ ಹರಡಿಕೊಂಡಿದ್ದು 80 ಕ್ಕೂ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಬಂಗಾಳದ ಹುಲಿಗಳು ಮತ್ತು ಇತರ ಪ್ರಾಣಿಗಳಾದ ಆನೆಗಳು, ಚಿರತೆಗಳು, ಗೌರ್ (ಒಂದು ರೀತಿಯ ಕಾಡು ಹಸು), ಚಿತಾಲ್ (ಒಂದು ರೀತಿಯ ಕಾಡು ಬೆಕ್ಕು), ಸಾಂಬಾರ್ ಜಿಂಕೆ ಮತ್ತು ಮುಂಟ್ಜಾಕ್ ಜಿಂಕೆಗಳಿಗೆ ನೆಲೆಯಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ - ಜೂನ್

ಬಂಡೀಪುರ ಹುಲಿ ಅಭಯಾರಣ್ಯ - ಕರ್ನಾಟಕ

ಬಂಡೀಪುರ ಹುಲಿ ಅಭಯಾರಣ್ಯ - ಕರ್ನಾಟಕ

1974 ರಲ್ಲಿ ಭಾರತದ ಪ್ರಮುಖ ಹುಲಿ ಆವಾಸಸ್ಥಾನವನ್ನು ಮಾನವರ ಅತಿಕ್ರಮಣ ಪ್ರವೇಶ ಮತ್ತು ಅಭಿವೃದ್ಧಿಯಿಂದ ರಕ್ಷಿಸಲು ಬಂಡೀಪುರ ಅಭಯಾರಣ್ಯವನ್ನು ರಚಿಸಲಾಯಿತು. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿದೆ ಮತ್ತು ನೀಲಗಿರಿ ಬಯೋಸ್ಪಿಯರ್ ರಿಸರ್ವ್‌ನ ಅವಿಭಾಜ್ಯ ಅಂಗವಾಗಿದೆ.

ಬಂಡೀಪುರ ಹುಲಿ ಅಭಯಾರಣ್ಯವು ದಟ್ಟ ಮರಗಳು ಹಾಗೂ 30 ಮೀಟರ್ ಎತ್ತರದ ಉದ್ದನೆಯ ಮರಗಳನ್ನೊಳಗೊಂಡ ಕಾಡುಗಳನ್ನು ಹೊಂದಿದೆ. ಹಲವಾರು ನದಿಗಳು ಮತ್ತು ತೊರೆಗಳು ಈ ಅರಣ್ಯ ಪ್ರದೇಶದ ಮೂಲಕ ಹರಿಯುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಪ್ರದೇಶಗಳಲ್ಲಿ ತೇಗ, ಸಾಲ್ (ಶೋರಿಯಾ ರೋಬಸ್ಟಾ), ಆಲದ, ತೆಂಗಿನಕಾಯಿ (ಕೋಕೋಸ್ ನ್ಯೂಸಿಫೆರಾ) ಮತ್ತು ಬೇವು (ಅಜಾಡಿರಾಚ್ಟಾ ಇಂಡಿಕಾ) ಸೇರಿದಂತೆ 360 ಕ್ಕೂ ಹೆಚ್ಚು ಜಾತಿಯ ಮರಗಳು ಮತ್ತು ಸಸ್ಯಗಳಿವೆ.

ಭೇಟಿ ಕೊಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಮಾರ್ಚ್ ವರೆಗೆ

ಜಿಮ್ ಕೋರ್ಬೆಟ್ ಹುಲಿ ಸಂರಕ್ಷಿತ ಅಭಯಾರಣ್ಯ ಉತ್ತರಾಖಂಡ್

ಜಿಮ್ ಕೋರ್ಬೆಟ್ ಹುಲಿ ಸಂರಕ್ಷಿತ ಅಭಯಾರಣ್ಯ ಉತ್ತರಾಖಂಡ್

1936ರಲ್ಲಿ ಸ್ಥಾಪಿತವಾದ ಈ ರಾಷ್ರೀಯ ಉದ್ಯಾನವನವು ಉತ್ತರಾಖಂಡ್ ನ ನೈನಿತಾಲ್ ಜಿಲ್ಲೆಯಲ್ಲಿದೆ. ಇದು ಭಾರತದ ಮೊದಲ ರಾಷ್ಟ್ರೀಯ ಉದ್ಯಾನವಾಗಿದೆ. ಮೊದಲು ಈ ಉದ್ಯಾನವನವು ಹೈಲಿ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು 1956, ರಲ್ಲಿ ಬೇಟೆಗಾರ ಮತ್ತು ಪರಿಸರವಾದಿಯಾಗಿದ್ದ ಜಿಮ್ ಕಾರ್ಬೆಟ್ ಅವರ ಹೆಸರನ್ನಿಡಲಾಯಿತು. ಈ ಸುಂದರ ಹುಲಿ ಸಂರಕ್ಷಿತ ಪ್ರದೇಶವು 1,318 ಚದರ ಕಿ.ಮೀ ಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ.

ಜಿಮ್ ಕಾರ್ಬೆಟ್ ಹುಲಿ ಅಭಯಾರಣ್ಯವನ್ನು ಈ ದೊಡ್ಡ ಬೆಕ್ಕುಗಳೊಂದಿಗೆ ನಿಕಟವಾಗಿ ಮತ್ತು ವೈಯಕ್ತಿಕವಾಗಿ ಅನುಭವ ಪಡೆಯ ಬಯಸಿದರೆ ಭೇಟಿ ಕೊಡಲು ಉತ್ತಮ ಸ್ಥಳವಾಗಿದೆ, ಆದರೆ ಹುಲಿಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಲು ಬಯಸುವ ಜನರಿಗೆ ಇದು ಅತ್ಯಂತ ಜನಪ್ರಿಯ ತಾಣವಾಗಿದೆ. ಇಲ್ಲಿರುವ ವನ್ಯಜೀವಿಗಳಲ್ಲಿ ಹುಲಿಗಳು, ಆನೆಗಳು, ಚಿರತೆಗಳು ಮತ್ತು ಘೇಂಡಾಮೃಗಗಳು ಮತ್ತು ಮಂಗಗಳು ಮತ್ತು ಜಿಂಕೆಗಳು ಸೇರಿದಂತೆ ಹಲವು ಜಾತಿಗಳು ಸೇರಿವೆ. ಉದ್ಯಾನದ ಕೆಲವು ಭಾಗಗಳು ಅರಣ್ಯದಿಂದ ಕೂಡಿದ್ದರೆ ಇನ್ನು ಕೆಲವು ತೆರೆದ ಹುಲ್ಲುಗಾವಲುಗಳಾಗಿವೆ.

ಭೇಟಿ ಕೊಡಲು ಉತ್ತಮ ಸಮಯ: ನವೆಂಬರ್ ನಿಂದ ಫೆಬ್ರವರಿವರೆಗೆ

ಸರಿಸ್ಕಾ ರಾಷ್ಟ್ರೀಯ ಉದ್ಯಾನವನ ರಾಜಸ್ಥಾನ

ಸರಿಸ್ಕಾ ರಾಷ್ಟ್ರೀಯ ಉದ್ಯಾನವನ ರಾಜಸ್ಥಾನ

ಭಾರತದ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕಾ ರಾಷ್ಟ್ರೀಯ ಉದ್ಯಾನವನವು ದೇಶದ ರಾಜಧಾನಿ ದೆಹಲಿ ಮತ್ತು ಜೈಪುರದ ಅತ್ಯಂತ ಸುಂದರವಾದ ವನ್ಯಜೀವಿ ಗೇಟ್ವೇಯೆನಿಸಿದೆ. ಇದು 1955ರಲ್ಲಿ ಸಾರಿಸ್ಕಾ ವನ್ಯಪ್ರದೇಶದಲ್ಲಿ ವನ್ಯಜೀವಿ ತಾಣವೆಂದು ಗುರುತಿಸಲ್ಪಟ್ಟು, 1979.ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು.

ಉದ್ಯಾನವನವು 881 ಚದರಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇದು ಹುಲ್ಲುಗಾವಲುಗಳು, ಕಾಡುಗಳು ಮತ್ತು ಜೌಗು ಪ್ರದೇಶಗಳನ್ನು ಒಳಗೊಂಡಂತೆ ಹಲವಾರು ಆವಾಸಸ್ಥಾನಗಳನ್ನು ಒಳಗೊಂಡಿದೆ. ಸರಿಸ್ಕಾ ರಾಷ್ಟ್ರೀಯ ಉದ್ಯಾನವನದ ಪ್ರಾಣಿಗಳಲ್ಲಿ ಹುಲಿಗಳು, ಚಿರತೆಗಳು, ಆನೆಗಳು, ಮೊಸಳೆಗಳು ಮತ್ತು ಜಿಂಕೆಗಳು ಸೇರಿವೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್-ಫೆಬ್ರವರಿ.

ಬಾಂಧವಘಡ್ ಹುಲಿ ಅಭಯಾರಣ್ಯ - ಮಧ್ಯಪ್ರದೇಶ

ಬಾಂಧವಘಡ್ ಹುಲಿ ಅಭಯಾರಣ್ಯ - ಮಧ್ಯಪ್ರದೇಶ

1993 ರಲ್ಲಿ ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಲಾಯಿತು ಈ ಪ್ರದೇಶವು ಅತ್ಯಧಿಕ ಸಂಖ್ಯೆಯಲ್ಲಿ ರಾಯಲ್ ಬಂಗಾಳಿ ಹುಲಿಗಳನ್ನು ಹೊಂದಿರುವುದಕ್ಕೆ ಪ್ರಸಿದ್ದವಾಗಿದೆ. ಇದು ಮದ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ನೆಲೆಸಿದ್ದು, 716 ಚದರ ಕಿ.ಮೀ ಗಳಿಂತಲೂ ಅಧಿಕ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಅಭಯಾರಣ್ಯವು ಹೇರಳ ಪ್ರಮಾಣದಲ್ಲಿ ಹುಲಿಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ ಅಲ್ಲದೆ ಇಲ್ಲಿ ಇತರ ವನ್ಯಜೀವಿಗಳಾದ ಚಿರತೆಗಳು ಚಿತಾಲ್, ಕಾಡು ಬೆಕ್ಕುಗಳು, ಮತ್ತು ಕಾಡುಹಂದಿಗಳನ್ನು ಕಾಣಬಹುದಾಗಿದೆ.

ಈ ಸಂರಕ್ಷಿತ ಪ್ರದೇಶವು ತನ್ನಲ್ಲಿಯ ಶ್ರೀಮಂತವಾದ ಜೀವವೈವಿಧ್ಯಗಳಿಗೆ ಹೆಸರುವಾಸಿಯಾಗಿದ್ದು ಯಾವುದೇ ಭಾರತೀಯ ಮೀಸಲು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಸ್ತನಿಗಳಗಳನ್ನು ಹೊಂದಿದೆ. ಈ ಅಭಯಾರಣ್ಯವು ಇದು 350 ಜಾತಿಯ ಪಕ್ಷಿಗಳು, 38 ಜಾತಿಯ ಸರೀಸೃಪಗಳು, 26 ಉಭಯಚರ ಜಾತಿಗಳು, ಅನೇಕ ಜಾತಿಯ ಮೀನುಗಳು ಮತ್ತು ಹೆಚ್ಚಿನ ಸಂಖ್ಯೆಯ ಅಪರೂಪದ ಕೀಟಗಳನ್ನು ಹೊಂದಿದೆ.

ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ : ಅಕ್ಟೋಬರ್ ನಿಂದ ಮಾರ್ಚ್ ವರೆಗೆ

ಸುಂದರಬನ್ಸ್ ಹುಲಿ ಅಭಯಾರಣ್ಯ , ಪಶ್ಚಿಮ ಬಂಗಾಳ

ಸುಂದರಬನ್ಸ್ ಹುಲಿ ಅಭಯಾರಣ್ಯ , ಪಶ್ಚಿಮ ಬಂಗಾಳ

1984 ರಲ್ಲಿ ಸ್ಥಾಪಿಸಲಾದ ಈ ಅರಣ್ಯ ಪ್ರದೇಶವು, ಇದು 1,330 ಚಕಿಮೀ ವಿಸ್ತೀರ್ಣವನ್ನು ಹೊಂದಿದ್ದು ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪರಿಗಣಿಸಲ್ಪಟ್ಟಿದೆ. ಬಾಂಗ್ಲಾದೇಶದ ಗಡಿಯಲ್ಲಿರುವ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯ ಎಂದು ಕರೆಯಲಾಗುತ್ತದೆ. ಸುಂದರ್ಬನ್ಸ್ ಅರಣ್ಯವು ಒಂದು ಡೆಲ್ಟಾ ಅರಣ್ಯವಾಗಿದ್ದು, ಇದು ಬಂಗಾಳದ ಹುಲಿಗಳು, ಆನೆಗಳು ಮತ್ತು ಘೇಂಡಾಮೃಗಗಳಂತಹ ಹಲವಾರು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿದೆ.ಈ ಮೀಸಲು ಪ್ರದೇಶವು ತನ್ನ ವಿಶಿಷ್ಟ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳಿಂದಾಗಿ ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪೆರಿಯಾರ್ ಹುಲಿ ಅಭಯಾರಣ್ಯ , ಕೇರಳ

ಪೆರಿಯಾರ್ ಹುಲಿ ಅಭಯಾರಣ್ಯ , ಕೇರಳ

ಪೆರಿಯಾರ ಹುಲಿ ಅಭಯಾರಣ್ಯವು ಒಂದು ಸಂರಕ್ಷಿತ ಪ್ರದೇಶವಾಗಿದ್ದು, ಕೇರಳದ ಪಶ್ಚಿಮ ಘಟ್ಟ ವಲಯದಲ್ಲಿ ನೆಲೆಸಿದೆ. 1982 ರಲ್ಲಿ ಸ್ಥಾಪಿತವಾದ ಕೇರ್‍ಅಳದ ಈ ಮೀಸಲು ಪ್ರದೇಶವು 305 ಚದರ ಕಿ.ಮೀಗಳಷ್ಟು ಪ್ರದೇಶದಲ್ಲಿ ಹರಡಿಕೊಂದಿದೆ. ಈ ಅಭಯಾರಣ್ಯವು ಭಾರತದ ಅತ್ಯಂತ ಸುಂದರ ಹಾಗೂ ಅದ್ಬುತವಾದ ವನ್ಯಜೀವಿಗಳಿಗೆ ನೆಲೆಯಾಗಿದೆ. ಇವುಗಳ ಜೊತೆಗೆ ಇದು ಹುಲಿ ಮತ್ತು ಆನೆಗಳ ಸಂರಕ್ಷಿತ ಪ್ರದೇಶವೂ ಆಗಿದೆ.

ಪೆರಿಯಾರ್ ರಾಷ್ಟ್ರೀಯ ಉದ್ಯಾನವನವು 1200 ಕ್ಕಿಂತಲೂ ಹೆಚ್ಚಿನ ಜಾತಿಯ ಸಸ್ಯಗಳು ಮತ್ತು ಆನೆಗಳು, ಚಿರತೆಗಳು ಲಂಗೂರ್ (ಮಂಗನ ತರಹದ ಪ್ರಾಣಿ) ಹುಲಿಗಳು, ಜಿಂಕೆಗಲು ಮತ್ತು ನೀಲಗಿರಿ ತಹರ್ (ಕಾಡು ಮೇಕೆಗಳ ತರಹದ ಪ್ರಾಣಿ) ಮುಂತಾದ ಪ್ರಾಣಿಗಳಿಗೂ ನೆಲೆಯಾಗಿದೆ. ಪೆರಿಯಾರ್ ಸರೋವರವು ಈ ಉದ್ಯಾನವನದ ಉತ್ತರ ಭಾಗದಲ್ಲಿದ್ದು, ಇದು ಬೋಟ್ ಸವಾರಿಗೆ ಪ್ರಸಿದ್ದವಾಗಿದೆ.

ಕನ್ಹಾ ಹುಲಿ ಮೀಸಲು ಪ್ರದೇಶ, ಮಧ್ಯಪ್ರದೇಶ

ಕನ್ಹಾ ಹುಲಿ ಮೀಸಲು ಪ್ರದೇಶ, ಮಧ್ಯಪ್ರದೇಶ

ಕನ್ಹಾ ಹುಲಿ ಮೀಸಲು ಪ್ರದೇಶವು ಮಧ್ಯಪ್ರದೇಶದ ಮೈಕಾಲ್ ಶ್ರೇಣಿಯ ಸತ್ಪುರದಲ್ಲಿದೆ. ಇದು ಮಂಡಲ ಮತ್ತು ಕಾಲಘಾಟ್ ಎಂಬ ಎರಡು ಜಿಲ್ಲೆಗಳನ್ನು ಆವರಿಸಿಕೊಳ್ಳುತ್ತದೆ. ಇದು ಹಲವಾರು ವಲಯಗಳನ್ನು ಒಳಗೊಂಡಂತೆ, ಕನ್ಹಾ ಹುಲಿ ಮೀಸಲು ಪ್ರದೇಶವು ಒಟ್ಟು 1945 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಹುಲಿಗಳು ಕಂಡುಬರುತ್ತವೆ, ಇದು ಮಧ್ಯಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.


ಕನ್ಹಾ ಹುಲಿ ಮೀಸಲು ಪ್ರದೇಶವು ಹುಲಿಗಳು, ಚಿರತೆಗಳು, ಆನೆಗಳು, ಸೋಮಾರಿ ಕರಡಿಗಳು, ಭಾರತೀಯ ಖಡ್ಗಮೃಗಗಳು ಸೇರಿದಂತೆ ಹಲವಾರು ದೊಡ್ಡ ಸಸ್ತನಿಗಳಿಗೆ ನೆಲೆಯಾಗಿದೆ ಮತ್ತು ಮಧ್ಯಪ್ರದೇಶದ ರಾಜ್ಯ ಪ್ರಾಣಿಯಾದ ಜೌಗು ಜಿಂಕೆ ಅಥವಾ ಬರಸಿಂಘಾ ಬ್ರಹ್ಮಿನಿಕೈಟ್ ಸೇರಿದಂತೆ ಹಲವಾರು ಅಪರೂಪದ ಪಕ್ಷಿಗಳು ಸಹ ಕಂಡುಬರುತ್ತವೆ.

ಭೇಟಿ ನೀಡಲು ಉತ್ತಮ ಸಮಯ: ಏಪ್ರಿಲ್ ಮತ್ತು ಮೇ.

ಮಾನಸ್ ರಾಷ್ಟ್ರೀಯ ಉದ್ಯಾನವನ , ಅಸ್ಸಾಂ

ಮಾನಸ್ ರಾಷ್ಟ್ರೀಯ ಉದ್ಯಾನವನ , ಅಸ್ಸಾಂ

ಅಸ್ಸಾಂ ನ ಮಾನಸ್ ರಾಷ್ರೀಯ ಉದ್ಯಾನವನವು ಅಸ್ಸಾಮಿನ ಒಂದು ಸಂರಕ್ಷಿತವಾದ ಪ್ರದೇಶವಾಗಿದೆ. ಇದು ಭಾರತದ ಅತ್ಯಂತ ಹಳೆಯ ರಾಷ್ರೀಯ ಉದ್ಯಾನವನವಾಗಿದ್ದು, ಭಾರತದಲ್ಲಿ ಸಂರಕ್ಷಿಸಲ್ಪಟ್ಟು ಅತೀ ದೊಡ್ಡ ಉದ್ಯಾನವನಗಳಲ್ಲಿ ಒಂದಾಗಿದ್ದು ಇದು 950ಚದರ ಕಿ.ಮೀ ವಿಸ್ತಾರವಾದ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಹಿಮಾಲಯದ ತಪ್ಪಲನ್ನು ಸ್ಪರ್ಶಿಸುತ್ತದೆ ಮತ್ತು ಭೂತಾನ್ ನ ರಾಯಲ್ ಮಾನಸ್ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದೆ.

ಈ ಉದ್ಯಾನವನದಲ್ಲಿ ಹುಲಿಗಳು, ಚಿರತೆಗಳು, ಆನೆಗಳು, ಖಡ್ಗಮೃಗಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಾಣಿಗಳಿವೆ. ಇಲ್ಲಿ ೪೦೦ ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಮಾನಸ್ ರಾಷ್ಟ್ರೀಯ ಉದ್ಯಾನವನವು ಕೆಲವು ಅಪರೂಪದ ಔಷಧೀಯ ಸಸ್ಯಗಳಿಗೆ ನೆಲೆಯಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಮೇ

ಪನ್ನಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ, ಪೆಂಚ್ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ, ಅಣ್ಣಾಮಲೈ ಹುಲಿ ಮೀಸಲು ಪ್ರದೇಶ, ತಮಿಳುನಾಡು, ರಾಜಾಜಿ ಹುಲಿ ಮೀಸಲು, ಉತ್ತರಾಖಂಡ, ಇಂದ್ರಾವತಿ ಹುಲಿ ಮೀಸಲು, ಛತ್ತೀಸ್ ಗಢ, ತಡೋಬಾ ರಾಷ್ಟ್ರೀಯ ಉದ್ಯಾನ, ಮಹಾರಾಷ್ಟ್ರ ಸೇರಿದಂತೆ ಭಾರತದಲ್ಲಿ ಹಲವಾರು ಇತರ ಹುಲಿ ಮೀಸಲು ಪ್ರದೇಶಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X