Search
  • Follow NativePlanet
Share
» »ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?

ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?

ಸ್ವಾಮಿ ನಿತ್ಯಾನಂದನ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇದೆ. ಇತನನ್ನು ಹಿಂದೂ ಆಧ್ಯಾತ್ಮಿಕ ನಾಯಕನೆಂದು ಆತನ ಭಕ್ತರು ಆರಾಧಿಸುತ್ತಾರೆ. ಈತ ಭಾರತದ ಮೂಲನವನಾಗಿದ್ದು, ಧ್ಯಾನಪೀಠಂ ಎಂಬ ಸಂಸ್ಥಾಪಕನಾಗಿದ್ದಾನೆ. ಈತನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಕ್ತರನ್ನು ಹೊಂದಿದ್ದಾನೆ. ನಿತ್ಯಾನಂದ ಧ್ಯಾನಪೀಠವು ಯುನೈಟೆಡ್ ಸ್ಟೇಟ್, ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಸೇರಿದಂತೆ ಅನೇಕ ದೇಶದಲ್ಲಿ ಇತನು ಹಿಂದುತ್ವಕ್ಕೆ ಸಂಬಂಧಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಇತನು 2 ಗಿನ್ನಿಸ್ ವಿಶ್ವ ದಾಖಲೆಯನ್ನು ಹೊಂದಿದ್ದಾನೆ. ಅವುಗಳು ಯಾವುವೆಂದರೆ ಒಂದು ರೋಪ್ ಯೋಗ ಮತ್ತೊಂದು ಪೋಲ್ ಯೋಗ (ಮಲ್ಲಖಂಬ). ಇತನು ನಿತ್ಯಾನಂದ ಧ್ಯಾನಪೀಠಂ ಸ್ಥಾಪಕನಾಗಿದ್ದು, ಅದ್ವೈತ ಸಿದ್ಧಾಂತವನ್ನು ಅನುಸರಿಸುತ್ತಾರೆ. 1978 ರ ಜನವರಿ 1 ರಂದು ತಿರುವಣ್ಣಾಮಲೈನಲ್ಲಿ ಜನಿಸಿದನು. ಅಷ್ಟಕ್ಕೂ ಇತನ ಆಶ್ರಮದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ನಿಮಗೆ ಗೊತ್ತ?

1.ನಿತ್ಯಾನಂದ ಆಶ್ರಮ

1.ನಿತ್ಯಾನಂದ ಆಶ್ರಮ

PC: Official site

ನಿತ್ಯಾನಂದ ಅಶ್ರಮದ ಬಗ್ಗೆ ವೆಬ್ಸೈಟ್‍ನ ಮಾಹಿತಿಯ ಪ್ರಕಾರ, ಈ ಆಶ್ರಮವನ್ನು ಏಕೀಕೃತವಾದ ಆಧ್ಯಾತ್ಮಿಕ ಪವಿತ್ರವಾದ ಪುಣ್ಯ ಸ್ಥಳ ಎಂದು ಕರೆಯಲಾಗುತ್ತದೆ. ಇತನ ಆಶ್ರಮದಲ್ಲಿ ಜನರ ಕೊಂದುಕೊರತೆಗಳನ್ನು ನಿವಾರಣೆಗೊಳಿಸುತ್ತಾರಂತೆ. ಧ್ಯಾನ ಮತ್ತು ಮನಃಪೂರ್ವಕ ಕಲೆಗಳನ್ನು ಇಲ್ಲಿ ಹ್ಯಾಂಡಿಕ್ಯಾಪ್ ಎಂಬ ಹೆಸರಿನಿಂದ ಕಲಿಸಿಕೊಡಲಾಗುತ್ತದೆ. ನಿರಂತರ ವ್ಯಾಯಾಮಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸುವುದು ಅವರ ಮೂಲ ಉದ್ದೇಶವಾಗಿದೆ ಎಂದು ನಿತ್ಯಾನಂದ ಹಾಗು ಆತನ ಶಿಷ್ಯರು ಹೇಳುತ್ತಾರೆ.

2.ನಿತ್ಯಾನಂದನ ಧ್ಯಾನ ಎಲ್ಲಿ ನಡೆಯುತ್ತದೆ?

2.ನಿತ್ಯಾನಂದನ ಧ್ಯಾನ ಎಲ್ಲಿ ನಡೆಯುತ್ತದೆ?

PC: Official site

ಕರ್ನಾಟಕದ ಮೈಸೂರು ರಸ್ತೆಯಲ್ಲಿ ಇತನ ಆಶ್ರಮದ ಪ್ರಧಾನವಾದ ಕಚೇರಿ ಇದೆ. ಇದು ಬೆಂಗಳೂರು ಸೆಂಟ್ರಲ್ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಬಸ್ಸಿನಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275 ಕ್ಕೆ ಹೋದರೆ ಕೇವಲ 1 ಗಂಟೆಯೊಳಗೆ ತಲುಪಬಹುದು.

3.ಹೇಗೆ ಸಂಪರ್ಕಿಸಬೇಕು?

3.ಹೇಗೆ ಸಂಪರ್ಕಿಸಬೇಕು?

PC: Official site

ಈ ಆಶ್ರಮಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ಪ್ರಕ್ರಿಯೆಯು ಆಶ್ರಮದ ಅಧಿಕೃತ ವೆಬ್ಸೈಟ್‍ನಲ್ಲಿವೆ. ಇದು ಒಂದು ಆಶ್ರಮವಾಗಿದ್ದರು ಕೂಡ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅವುಗಳು ಯಾವುವು ಎಂದರೆ...

4.ವೈದ್ಯ ಸರೋವರ ಆನಂದ ಲಿಂಗ

4.ವೈದ್ಯ ಸರೋವರ ಆನಂದ ಲಿಂಗ

ಈ ಸುಂದರವಾದ ವೈದ್ಯ ಸರೋವರ ಆನಂದ ಲಿಂಗವು ಸುಮಾರು 21 ಅಡಿ ಎತ್ತರದ ಶಿವಲಿಂಗವಾಗಿದೆ. ಇದು ಆಶ್ರಮಕ್ಕೆ ಅತ್ಯಂತ ಸಮೀಪದಲ್ಲಿರುವ ಪ್ರವಾಸಿ ಆಕರ್ಷಣೆಯಾಗಿದೆ. ಇದರ ನಾಲ್ಕು ಭಾಗಗಳಲ್ಲಿಯೂ ಕೂಡ ಕಾರಂಜಿಯನ್ನು ಏರ್ಪಾಟು ಮಾಡಲಾಗಿದೆ. ಈ ಕಾರಂಜಿಯು ಯಾವಾಗಲೂ ಶಿವಲಿಂಗದ ಮೇಲೆ ಬೀಳುತ್ತಿರುತ್ತದೆ. ನವಬಸಾಣಂ ಎಂದರೆ 9 ವಿಧವಾದ ಗಿಡಮೂಲಿಕೆಗಳ ಸೃಷ್ಟಿ. ಇದು 1008 ಅಪರೂಪದ ಗಿಡಮೂಲಿಕೆಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಇಲ್ಲಿನ ಕೊಳದಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂದು ನಂಬಲಾಗಿದೆ.

5.400 ವರ್ಷ ಹಳೆಯದು

5.400 ವರ್ಷ ಹಳೆಯದು

ಈ ಪುರಾತನವಾದ ವೃಕ್ಷವು ಸುಮಾರು 400 ವರ್ಷ ಹಳೆಯದು. ಆಲದ ಮರವು ಬೆಂಗಳೂರಿನ ಹೃದಯಭಾಗದಲ್ಲಿದೆ. ಇಲ್ಲಿ ಪ್ರಸ್ತುತ ಅನೇಕ ಮರಗಳನ್ನು ಕಾಣಬಹುದಾಗಿದೆ. ಈ ಸುಂದರವಾದ ತಾಣವು ಬೆಂಗಳೂರಿನ ನಿವಾಸಿಗಳಿಗೆ ಅತ್ಯುತ್ತಮವಾದ ಪಿಕ್ನಿಕ್ ತಾಣವಾಗಿದೆ. ಕೆ.ಆರ್ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿದೆ. ಆನೇಕ ಬಸ್‍ಗಳು ಮಾರುಕಟ್ಟೆ ಬಸ್ ನಿಲ್ದಾಣದಿಂದ ನಿರ್ವಹಿಸಲಾಗಿದೆ.

6.ದೊಡ್ಡ ಆಲದ ಮರಕ್ಕೆ ಹೇಗೆ ತೆರಳಬೇಕು?

6.ದೊಡ್ಡ ಆಲದ ಮರಕ್ಕೆ ಹೇಗೆ ತೆರಳಬೇಕು?

ದೊಡ್ಡ ಆಲದ ಮರವು ಬೆಂಗಳೂರಿನ ಪ್ರಸಿದ್ಧವಾದ ಪ್ರವಾಸಿತಾಣವಾಗಿದ್ದು ಬೆಂಗಳೂರಿನ ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ತನ್ನ ವಾರಾಂತ್ಯವನ್ನು ಕಳೆಯುವ ಸಲುವಾಗಿ ಭೇಟಿ ನೀಡುತ್ತಿರುತ್ತಾರೆ. ಈ ದೊಡ್ಡ ಆಲದ ಮರಕ್ಕೆ ಭೇಟಿ ನೀಡಬೇಕಾದರೆ ಬೆಂಗಳೂರಿನಿಂದ ಕೇವಲ ಒಂದು ಗಂಟೆಗಳು ಪ್ರಯಾಣ ಮಾಡಬೇಕಾಗುತ್ತದೆ.

7.ಸಮೀಪದ ಪ್ರವಾಸಿ ತಾಣಗಳು

7.ಸಮೀಪದ ಪ್ರವಾಸಿ ತಾಣಗಳು

ಇಲ್ಲಿ ಅನೇಕ ಪ್ರವಾಸಿ ತಾಣಗಳು ಇದ್ದು, ಅವುಗಳಲ್ಲಿ ಮುಕ್ತಿನಾಗ ದೇವಾಲಯ, ಗಂಗಮ್ಮ ದೇವಾಲಯ, ಶನೀಶ್ವರ ದೇವಾಲಯ, ಮುಕ್ತಮ್ಮ ದೇವಾಲಯ ಇನ್ನು ಅನೇಕ ಸುಂದರವಾದ ಹಾಗು ಹಳೆಯ ದೇವಾಲಯಕ್ಕೂ ಕೂಡ ಭೇಟಿ ನೀಡಬಹುದಾಗಿದೆ.

8.ನಿತ್ಯಾನಂದೇಶ್ವರ ದೇವಾಲಯ

8.ನಿತ್ಯಾನಂದೇಶ್ವರ ದೇವಾಲಯ

ಈ ದೇವಾಲಯವನ್ನು ನಿತ್ಯಾನಂದೇಶ್ವರ ದೇವಾಲಯ ಎಂದೇ ಕರೆಯುತ್ತಾರೆ. ಇದು ಮೈಸೂರು ರಸ್ತೆಯಲ್ಲಿಯೇ ಇದೆ. ಈ ದೇವಾಲಯಕ್ಕೆ ಭೇಟಿ ನೀಡುವವರು ಹೆಚ್ಚು ಕಾಸ್ಮಿಕ್ ಎಂಬ ಶಕ್ತಿ ಅನುಭವಿಸುತ್ತಾರೆ ಎಂದು ಹೇಳಲಾಗಿದೆ. ಮನಸ್ಸಿನ ಆಧಾರಿತ ಸಮಸ್ಯೆಗಳನ್ನು ಪರಿಹರಿಸಲು ಇದು ಪವಿತ್ರವಾದ ಸ್ಥಳವೆಂದೇ ನಂಬಲಾಗಿದೆ. ಇದು ನಿತ್ಯಾನಂದ ಆಶ್ರಮದ ಸಮೀಪದಲ್ಲಿರುವ ಒಂದು ದೇವಾಲಯವು ಆಗಿದೆ.

9.ಪ್ರವಾಸಿ ಆಕರ್ಷಣೆ

9.ಪ್ರವಾಸಿ ಆಕರ್ಷಣೆ

ಈ ಪ್ರದೇಶದ ಸುತ್ತ ಹಲವಾರು ದೇವಾಲಯಗಳು ಮತ್ತು ಆಧ್ಯಾತ್ಮಿಕ ಸ್ಥಳಗಳಿವೆ. ಅವುಗಳೆಂದರೆ ಮಾಯಮ್ಮ ದೇವಾಲಯ, ಗೋಪಾಲಸ್ವಾಮಿ ದೇವಾಲಯ, ಬಸವ ದೇವಾಲಯ, ಮಹಾದೀಶ್ವರ ದೇವಾಲಯ ಇನ್ನು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

10.ರಾಮನಗರ

10.ರಾಮನಗರ

ರಾಮನಗರವು ಸಿಲ್ಕ್ ಸಿಟಿ ಎಂದು ಕರೆಯಲ್ಪಡುತ್ತದೆ. ಇದು ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿರುವ ರಾಮನಗರ ಆಶ್ರಮದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ರಾಮನಗರವು ಮಿನಿ ವಿಧಾನ ಸೌಧವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದು ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಳ ಸಿದ್ದೇಶ್ವರ, ಸಿಡಿಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯವಾದ ಬೆಟ್ಟಗಳಿಂದ ಸುತ್ತವರಿದಿದೆ. ರಾಮನಗರದಲ್ಲಿ ಪ್ರವಾಸಿ ಆಕರ್ಷಣೆ ಹಲವಾರು ಇವೆ.

11.ಪ್ರಯಾಣ

11.ಪ್ರಯಾಣ

PC:Vaibhavcho

ರಾಮನಗರವು ದೊಡ್ಡ ದೊಡ್ಡ ಪರ್ವತಗಳಿಂದ ಆವೃತವಾಗಿದ್ದು ಸುತ್ತಲೂ ದೊಡ್ಡ ಕಣಿವೆಗಳು ಮತ್ತು ಪರ್ವತ ಆರೋಹಿಗಳಿಗೆ (ಟ್ರೆಕ್ಕಿಂಗ್ ಪ್ರೇಮಿಗಳಿಗೆ) ಸಾಹಸಮಯಕ್ಕೆ ಸೂಕ್ತವಾದ ಸ್ಥಳವೇ ಆಗಿದೆ. ಇಲ್ಲಿನ ಪ್ರವಾಸಿ ತಾಣಗಳು 1960 ರಿಂದಲೂ ಪ್ರಸಿದ್ಧವಾದುದು ಎಂದೇ ಹೇಳಬಹುದು.

12.ಇನೂವೇಟಿವ್ ಫಿಲ್ಮ ಸಿಟಿ

12.ಇನೂವೇಟಿವ್ ಫಿಲ್ಮ ಸಿಟಿ

PC: Rameshng

ಈ ಸುಂದರವಾದ ಉದ್ಯಾನವನದಲ್ಲಿ ನವೀನ ಚಲನಚಿತ್ರಗಳ ನಗರವೇ ಆಗಿದೆ. ಮೈಸೂರು ದಾರಿಯಲ್ಲಿ ನಗರದ ಹೊರವಲಯದಲ್ಲಿ ಸುಮಾರು 40 ಕಿ.ಮೀ ದೂರದಲ್ಲಿದೆ. ಸುಮಾರು 58 ಎಕರೆಗಳನ್ನು ನೋಡಲು ಈ ಚಲನಚಿತ್ರದ ಪಟ್ಟಣವು 2008 ರಲ್ಲಿ ಪ್ರಾರಂಭವಾಯಿತು. ಇಲ್ಲಿನ ಪ್ರದೇಶವನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವು ಪಾರ್ಕ್, ಮ್ಯೂಸಿಯಂ ಮತ್ತು ಸವಾರಿಗಳು ಇವೆ. ಮತ್ತೊಂದು ಭಾಗದಲ್ಲಿ ಚಲನಚಿತ್ರಗಳು ಮತ್ತು ಜಾಹೀರಾತುಗಳನ್ನು ಚಿತ್ರೀಕರಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಜಲವಾಸಿ ಪ್ರದೇಶ, ಡಿನೋ ಪಾರ್ಕ್ ಮತ್ತು ಡೆಮಿ ಹೌಸ್‍ಗೂ ಕೂಡ ಭೇಟಿ ನೀಡಬಹುದಾಗಿದೆ.

13.ರಿಷಿಭಾವತಿ ಅಣೆಕಟ್ಟು

13.ರಿಷಿಭಾವತಿ ಅಣೆಕಟ್ಟು

ಈ ರಿಷಿಭಾವತಿ ಅಣೆಕಟ್ಟು ನಿತ್ಯಾನಂದ ಆಶ್ರಮದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ನೀವು ಕೇವಲ 30 ನಿಮಿಷಗಳಲ್ಲಿ ಈ ಅಣೆಕಟ್ಟಿಗೆ ತಲುಪಬಹುದು. ಈ ಅಣೆಕಟ್ಟು ನೀರು ಸ್ನೇಹಿಯಾಗಿದ್ದು, ಕುಡಿಯುವ ನೀರು ಮತ್ತು ನೀರಾವರಿಗಾಗಿ ಈ ಅಣೆಕಟ್ಟು ತೆರೆದಿರುತ್ತದೆ. ಇಲ್ಲಿ ಒಂದು ಸುಂದರವಾದ ಗಾಳಿ ಆಂಜನೇಯ ಸ್ವಾಮಿಯ ದೇವಾಲಯವಿದೆ. ಇದು ತನ್ನದೇ ಆದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

14.ಗಾಳಿ ಅಂಜನೇಯ ಸ್ವಾಮಿ ದೇವಾಲಯ

14.ಗಾಳಿ ಅಂಜನೇಯ ಸ್ವಾಮಿ ದೇವಾಲಯ

ಈ ಸುಂದರವಾದ ದೇವಾಲಯವು ಸುಮಾರು 600 ವರ್ಷಗಳಷ್ಟು ಹಳೆಯದು. ಇದು ನಿತ್ಯಾನಂದ
ಆಶ್ರಮದಿಂದ ಸ್ವಲ್ಪವೇ ದೂರದಲ್ಲಿದೆ. ನೀವು ಈ ಸ್ಥಳವನ್ನು ಒಂದು ಗಂಟೆಯೊಳಗೆ ತಲುಪಬಹುದು.

15.ನಿತ್ಯಾನಂದ ಮಠದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಗೊತ್ತ?

15.ನಿತ್ಯಾನಂದ ಮಠದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಗೊತ್ತ?

ಬೆಳಿಗ್ಗೆ 4 ಗಂಟೆಯ ಸಮಯದಲ್ಲಿ ಯೋಗ ಮತ್ತು ವ್ಯಾಯಾಮ, ಧ್ಯಾನ ಕಾರ್ಯಕ್ರರ್ಮಗಳನ್ನು ಪ್ರತಿದಿನ ನಡೆಸಲಾಗುತ್ತದೆ.

6 ಗಂಟೆಗೆ ಸರಿಯಾಗಿ ಒಂದು ಪೂಜೆಯನ್ನು ಮಾಡಲಾಗುತ್ತದೆ.

ಬೆಳಿಗ್ಗೆ 7 ಗಂಟೆಗೆ ನಿತ್ಯಾನಂದ ಅವರ ನಾಯಕತ್ವದ ಸಲಹೆ ಪಡೆದು, ನಿತ್ಯಾನಂದ ದರ್ಶನ ಎಂಬ
ಆಚರಣೆಗೆ ಪ್ರತಿಯೊಬ್ಬರಿಗೂ ಆಶೀರ್ವಾದವನ್ನು ನೀಡಲಾಗುತ್ತದೆ. ಇವೆಲ್ಲಾ ನಿತ್ಯಾನಂದ
ಆಶ್ರಮದ ಅಧಿಕೃತ ವೆಬ್‍ಸೈಟ್‍ನಲ್ಲಿ ತೆಗೆದುಕೊಳ್ಳಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more