Search
  • Follow NativePlanet
Share
» »ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ

ಶ್ರೀರಂಗಪಟ್ಟಣದಲ್ಲಿರುವ ಪ್ರಸಿದ್ದ ನಿಮಿಷಾಂಬ ದೇವಾಲಯಕ್ಕೆ ಭೇಟಿ ಕೊಡಿ

"ನಿಮಿಷ" ಎಂಬುದು ಗಡಿಯಾರದ ನಿಮಿಷವನ್ನು ಸೂಚಿಸುತ್ತದೆ. ಈ ದೇವಾಲಯದ ಒಳಗೆ ನೆಲೆಸಿರುವ ದೇವಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಒಂದು ನಿಮಿಷದಲ್ಲಿ ಪೂರೈಸುತ್ತಾಳೆ ಎಂದು ನಂಬಲಾಗುತ್ತದೆ.

ನಿಮಿಷಾಂಬ ಪಾರ್ವತಿ ದೇವಿಯ ಇನ್ನೊಂದು ರೂಪವಾಗಿದ್ದು, ಈ ದೇವಾಲಯವು ಕಾವೇರಿ ನದಿ ದಂಡೆಯ ಮೇಲೆ ನೆಲೆಸಿದೆ

c

nimishambha

ನಿಮಿಷಾಂಭ ದೇವಾಲಯದ ಇತಿಹಾಸ

ಈ ದೇವಾಲಯವು ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಿಸಲಾಗಿದ್ದು, ಇದಕ್ಕೆ ಸುಮಾರು 400 ವರ್ಷಗಳ ಹಿಂದಿನ ಇತಿಹಾಸವಿದೆ. ಇಲ್ಲಿರುವ ಕಲ್ಲಿನಲ್ಲಿ ಅಚ್ಚೊತ್ತಿರುವ ಶ್ರೀಚಕ್ರವಿದ್ದು ಅದನ್ನು ದೇವಿಯ ಮುಂದೆ ಇಡಲಾಗಿದೆ. ದೇವಾಲಯವು ಏಳು ಅಂತಸ್ತಿನ ಭವ್ಯ ಪ್ರವೇಶ ಗೋಪುರದೊಂದಿಗೆ ತುಲನಾತ್ಮಕವಾಗಿ ಚಿಕ್ಕ ಗರ್ಭಗುಡಿಯನ್ನು ಹೊಂದಿದೆ.

ಶ್ರೀ ಚಕ್ರವನ್ನು ಮುಕ್ತರಾಜ ಎಂಬ ರಾಜನು ಕಲ್ಲಿನ ಮೇಲೆ ಕೆತ್ತಿಸಿದನೆಂದು ನಂಬಲಾಗಿದೆ, ಅವನು ನಂತರ ಸ್ವಯಂ-ಮರಣಕ್ಕೆ ಶರಣಾದನೆಂದು ಹೇಳಲಾಗುತ್ತದೆ.

nimishamba1

ಇಲ್ಲಿರುವ ಜನ ಸಾಮಾನ್ಯರ ನಂಬಿಕೆ

ಇಲ್ಲಿಗೆ ಭಕ್ತರು ನಿಂಬೆಹಣ್ಣು ಮತ್ತು ಅದರ ಹಾರವನ್ನು ದೇವಿಗೆ ಅರ್ಪಿಸುತ್ತಾರೆ. ಅರ್ಚಕರು ಭಕ್ತರಿಂದ ಪಡೆದ ನಿಂಬೆಹಣ್ಣನ್ನು ತೆಗೆದುಕೊಂಡು ಅವುಗಳನ್ನು ಶ್ರೀಚಕ್ರದ ಮೇಲೆ ಮತ್ತು ದೇವಿಯ ಪಾದದ ಕೆಳಗೆ ಇಡುತ್ತಾರೆ ಹಾಗೂ ಹೀಗೆ ಅರ್ಪಿಸಲಾದ ನಿಂಬೆಹಣ್ಣನ್ನು ಭಕ್ತರಿಗೆ ಆಶೀರ್ವಾದದ ರೂಪದಲ್ಲಿ ಹಿಂತಿರುಗಿಸುತ್ತಾರೆ

ಹೀಗೆ ಆಶೀರ್ವಾದದ ರೂಪದಲ್ಲಿ ಕೊಡಲಾಗುವ ನಿಂಬೆಹಣ್ಣನ್ನು ಮನೆಯ ದೇವರಕೋಣೆಯಲ್ಲಿ ಹೇಳಲಾಗುವ ನಿರ್ಧಿಷ್ಟ ಕಾಲಗಳವರೆಗೆ ಇಟ್ಟು ನಂತರ ಅದನ್ನು ಹರಿಯುವ ನೀರಿನಲ್ಲಿ ಅಥವಾ ಬಾವಿ ನೀರಿನಲ್ಲಿ ಬಿಡಲು ಅರ್ಚಕರು ಭಕ್ತರಿಗೆ ಹೇಳುತ್ತಾರೆ. ಅಥವಾ ಈ ನಿಂಬೆಹಣ್ಣನ್ನು ಪಾನಕ ಮಾಡಿ ಕುಡಿಯಲೂ ಸಹ ಹೇಳಲಾಗುತ್ತದೆ ಇದರಿಂದ ಸಮೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ.

ಇಲ್ಲಿ ನಿಮಿಷಾಂಬ ದೇವಿಯ ಜೊತೆಗೆ ಮುಕ್ತೇಶ್ವರ (ಶಿವ), ಗಣೇಶ, ಲಕ್ಷ್ಮೀ ನಾರಾಯಣ ಮತ್ತು ಹನುಮಂತನಿಗೆ ಸಮರ್ಪಿತವಾದ ಇತರ ದೇವಾಲಯಗಳಿವೆ.

nimishamba3

ಇಲ್ಲಿ ನಡೆಯುವ ದೊಡ್ಡ ಹಬ್ಬಗಳು

ವರಮಹಾಲಕ್ಷ್ಮಿ ಮತ್ತು ದಸರಾ ಸಮಯದಲ್ಲಿ ನಡೆಯುವ ದುರ್ಗಾಷ್ಟಮಿ ಇಲ್ಲಿ ನಡೆಯುವ ಪ್ರಮುಖ ಹಬ್ಬಗಳಾಗಿದ್ದು ಶುಕ್ರವಾರದ ಹೊರತಾಗಿ ಈ ಹಬ್ಬಗಳ ಸಮಯದಲ್ಲಿ ಈ ದೇವಾಲಯವು ಅಸಂಖ್ಯಾತ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಾಲಯವು ಪ್ರವಾಸಿಗರಿಂದ ಒಮ್ಮೆಲೇ ಭೇಟಿಕೊಡಲ್ಪಡುವ ಹೊರತಾಗಿ ಅಷ್ಟೇನು ಜನದಟ್ಟಣೆಯಿಂದ ಕೂಡಿರುವುದಿಲ್ಲ.

ಸಮಯ

ಬೆಳಿಗ್ಗೆ 6:30 ರಿಂದ ಸಾಯಂಕಾಲ 8:30ರವರೆಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ದೇವಾಲಯವು ಬೆಳಿಗ್ಗೆ 4:30 ಗೆ ತೆರೆಯುತ್ತದೆ.

ನಿಮಿಷಾಂಬ ದೇವಾಲಯವಿರುವ ಸ್ಥಳ

ಈ ದೇವಾಲಯವಿರುವ ಸ್ಥಳವು ಶ್ರೀರಂಘ ಪಟ್ಟಣಕ್ಕೆ 2 ಕಿ.ಮೀ ಅಂತರದಲ್ಲಿದ್ದು ಮೈಸೂರಿನಿಂದ 17 ಕಿ.ಮೀ ದೂರದಲ್ಲಿದೆ. ಮತ್ತು ಬೆಂಗಳೂರಿನಿಂದ 125 ಕಿ.ಮೀ ಅಂತರದಲ್ಲಿದೆ. ನೀವು ಈ ಸ್ಥಳಕ್ಕೆ ತಲುಪಲು ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸಹಾಯ ಪಡೆಯಬಹುದು ಇವು ಮೈಸೂರಿನಿಂದ ಹಾಗೂ ಬೆಂಗಳೂರಿನಿಂದಲೂ ಸತತವಾಗಿ ಪ್ರಯಾಣಿಸುತ್ತದೆ. ಅಥವಾ ನೀವು ನಿಮ್ಮ ಸ್ವಂತದ ವಾಹನದಲ್ಲಿಯೂ ಇಲ್ಲಿಗೆ ಪ್ರಯಾಣಿಸಬಹುದಾಗಿದೆ. ನೀವು ರಾತ್ರಿ ತಂಗಲು ಸ್ಥಳವನ್ನು ಹುಡುಕುತ್ತಿದ್ದರೆ, ನೀವು ಶ್ರೀರಂಗಪಟ್ಟಣದಲ್ಲಿರುವ ಮಯೂರ ರಿವರ್ ವ್ಯೂ ಅಥವಾ ಅಂಬೇಲೀ ಹೋಟೆಲ್ ರೆಸಾರ್ಟ್‌ಗೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X