Search
  • Follow NativePlanet
Share
» »ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?

ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?

ಕರ್ನಾಟಕ ಹಾಗೂ ತಮಿಳ್ನಾಡು ಜನರಿಗೆ ಕಾವೇರಿ ನದಿಯೇ ಜೀವನಾಡಿ. ಈ ಎರಡು ರಾಜ್ಯಗಳು ಕುಡಿಯುವ ನೀರಿಗಾಗಿ ಇದನ್ನೇ ಅವಲಂಭಿಸಿದೆ. ಈ ನದಿಯ ತೀರದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಇದು ಶ್ರೀರಂಗಪಟ್ಟಣಂನಿಂದ ಕೇವಲ 2 ಕಿ.ಮೀ ದೂರಲ್ಲಿ ಈ ನದಿ ತೀರವಿದೆ. ಇಲ್ಲಿನ ದೇವಿಯನ್ನು ನಿಮಿಷಾ ದೇವಿ ಅಥವಾ ನಿಮಿಷಾಂಭ ಎಂದು ಕರೆಯುತ್ತಾರೆ. ಇಲ್ಲಿ ದೇವಿಗೆ ಸಮರ್ಪಿಸಲಾದ ನಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಹೋದಲ್ಲಿ ಭಕ್ತರ ಮನೋಕಾಮನೆ ಎಲ್ಲಾ ಈಡೇರುತ್ತದೆ ಎನ್ನಲಾಗುತ್ತದೆ.

ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

PC: Prof tpms

ಪುರಾಣ ಕಥೆಗಳ ಪ್ರಕಾರ ಶ್ರೀರಂಗಪಟ್ಟಣದಲ್ಲಿ ಓರ್ವ ರಾಜನಿದ್ದ ಅವನು ದೊಡ್ಡ ಶಿವ ಭಕ್ತರು. ಆತ ಲೋಕ ಕಲ್ಯಾಣಕ್ಕಾಗಿ ಒಂದು ಯಾಗವನ್ನು ಕೈಗೊಳ್ಳುತ್ತಾನೆ. ಆದರೆ ಯಾಗದಿಂದ ತಮಗೆ ತೊಂದರೆಯಾಗಬಹುದೆಂದು ತಿಳಿದ ರಾಕ್ಷಸರು ಯಾಗಕ್ಕೆ ಅನೇಕ ತೊಂದರೆಗಳನ್ನು ಮಾಡುತ್ತಾರೆ.

ನಿಮಿಷಾಂಭ ಎನ್ನುವ ಹೆಸರು ಹೇಗೆ ಬಂತು?

ನಿಮಿಷಾಂಭ ಎನ್ನುವ ಹೆಸರು ಹೇಗೆ ಬಂತು?

PC: Prof tpms

ಎಷ್ಟೇ ಪ್ರಯತ್ನಪಟ್ಟರೂ ಆ ರಾಕ್ಷಸನ ಅಟ್ಟಹಾಸವನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಯದಾಗಿ ರಾಜನು ತನ್ನ ಪರಮ ಆರಾಧ್ಯದೈವವಾದ ಪರಶಿವನನ್ನು ಕೋರಿಕೊಳ್ಳುತ್ತಾನೆ. ಶಿವನು ಪಾರ್ವತಿ ದೇವಿ ಯಾಗ ಕುಂಡದಿಂದ ಹೊರಬಂದು ಆಯುಧದಿಂದ ರಾಕ್ಷಸನನ್ನು ಒಂದೇ ನಿಮಿಷದಲ್ಲಿ ಸಂಹರಿಸುತ್ತಾಳೆ. ಹಾಗಾಗಿ ಈ ದೇವಸ್ಥಾನಕ್ಕೆ ನಿಮಿಷಾಂಭ ಎನ್ನುವ ಹೆಸರು ಬಂದಿದೆ.

ನಿಂಬೆಕಾಯಿ ಅರ್ಪಿಸುವ ಭಕ್ತರು

ನಿಂಬೆಕಾಯಿ ಅರ್ಪಿಸುವ ಭಕ್ತರು

ಇಲ್ಲಿ ಭಕ್ತರು ಗಾಜಿನ ಬಳೆ ಹಾಗೂ ನಿಂಬೆಕಾಯಿಯನ್ನು ಅರ್ಪಿಸುತ್ತಾರೆ. ಪೂಜೆ ಮುಗಿದ ನಂತರ ಆ ನಿಂಬೆಕಾಯಿಯನ್ನು ಭಕ್ತರು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ನಿಮ್ಮ ಕೋರಿಕೆಗಳು ಅತೀ ಶೀಘ್ರದಲ್ಲಿ ನೆರವೇರುತ್ತವೆ ಎನ್ನಲಾಗುತ್ತದೆ. ಹಾಗಾಗಿ ದೂರದೂರದ ಊರುಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಬಲಿ ಭೋಜನಂ

ಬಲಿ ಭೋಜನಂ

ಈ ದೇವಾಲಯದಲ್ಲಿ ಬಲಿ ಭೋಜನವನ್ನು ಹಾಕುತ್ತಾರೆ. ಕಾಗೆಗಳು ಬಂದು ಈ ಆಹಾರವನ್ನು ತಿನ್ನುತ್ತವೆ. ಬಹಳ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಅನೇಕ ನಿಮಿಷಾಂಭ ದೇವಾಲಯಗಳಿವೆ

ಅನೇಕ ನಿಮಿಷಾಂಭ ದೇವಾಲಯಗಳಿವೆ

ನಿಮಿಷಾಂಭ ಹೆಸರಿನಲ್ಲಿ ದೇಶದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಪಾರ್ವತಿ ದೇವಿ ರಾಕ್ಷಸನನ್ನು ಸಂಹರಿಸಿದ ದೇವಾಲಯ ಶ್ರೀರಂಗಪಟ್ಟಣದಿಂದ 2 ಕಿ.ಮೀ ದೂರದಲ್ಲಿರುವ ಗಂಜಮ್‌ನಲ್ಲಿ ಎನ್ನುವುದು ಭಕ್ತರ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X