Search
  • Follow NativePlanet
Share
» »ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 10 ರೂ. ನೋಟನ್ನು ನೀವೆಲ್ಲರೂ ನೋಡಿರಬಹುದು. ಅದರಲ್ಲಿರುವ ಒಂದು ಚಿತ್ರವನ್ನು ನೋಡಿರಬಹುದು. ಒಂದು ದೊಡ್ಡ ಚಕ್ರದ ಚಿತ್ರವನ್ನು 10 ರೂ. ನೋಟಿನಲ್ಲಿ ಅಳವಡಿಸಲಾಗಿದೆ. ಅದು ಎಲ್ಲಿಯ ಚಿತ್ರ ಎನ್ನುವುದು ನಿಮಗೇನಾದರೂ ಗೊತ್ತಾ? ಆ ಚಿತ್ರದ ಹಿನ್ನೆಲೆ ಏನು ಎನ್ನುವುದು ಗೊತ್ತಾ? ಇಲ್ಲ ಎಂದಾದರೆ ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್...

ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ!ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ!

10ರೂ.ನೋಟಿನಲ್ಲಿರುವ ಚಿತ್ರ ಯಾವುದು?

10ರೂ.ನೋಟಿನಲ್ಲಿರುವ ಚಿತ್ರ ಯಾವುದು?

10 ರೂ. ನೋಟಿನಲ್ಲಿ ಕಾಣುತ್ತಿರುವುದು ಕೋನಾರ್ಕ್ ಸೂರ್ಯ ದೇವಾಲಯದ ಚಿತ್ರ. ಇದು ಒಡಿಶಾ ರಾಜ್ಯದ ಪುರಿಯಿಂದ ಸುಮಾರು 35 ಕಿ.ಮೀ ಉತ್ತರ ದಿಕ್ಕಿನಲ್ಲಿದೆ.ಇದನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ಸೂರ್ಯ ದೇವಾಲಯ

ಸೂರ್ಯ ದೇವಾಲಯ

PC:Chaitali Chowdhury
ಇದು ವಿಶ್ವದ ಅತ್ಯಂತ ದೊಡ್ಡ ಸೂರ್ಯ ದೇವಾಲಯವಾಗಿದೆ. ನೂರು ಅಡಿ ಎತ್ತರದ ಕಲ್ಲಿನ ರಥ ಇದಾಗಿದೆ. ಈ ದೇವಸ್ಥಾನದಲ್ಲಿ ಖಜರಾಹೋ ಶಿಲ್ಪಾಕಲಾಕೃತಿಗಳನ್ನು ಕಾಣಬಹುದು. ಕೋನಾರ್ಕ್ ಸೂರ್ಯ ದೇವಾಲಯವು ಮಿಥುನ ಅಥವಾ ಶೃಂಗಾರ ರಸ ಉಕ್ಕಿಸುವ ಶಿಲ್ಪ ಕಲೆಗಳಿಂದಾಗಿಯೂ ಹೆಸರುವಾಸಿಯಾಗಿದೆ.

ಇದರ ನಿರ್ಮಾಣಕ್ಕೆ 12 ವರ್ಷಗಳೇ ಬೇಕಾಯಿತು

ಇದರ ನಿರ್ಮಾಣಕ್ಕೆ 12 ವರ್ಷಗಳೇ ಬೇಕಾಯಿತು

PC:Vinayreddym

ಗಂಗಾ ವಂಶದ ಅತ್ಯಂತ ಪ್ರಬಲವಾದ ರಾಜ ಮೊದಲನೇ ನರಸಿಂಹದೇವ ಈ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗಿದೆ. ಸುಮಾರು 1200 ಕಲಾವಿದರ ಸಹಾಯದಿಂದ 12 ವರ್ಷಗಳ ಕಾಲ ನಿರಂತರ ಈ ದೇವಾಲಯದ ಕಾರ್ಯ ನಡೆದಿದೆ. ಇದನ್ನು 13 ನೇ ಶತಮಾನ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ಕಳಿಂಗ ಶೈಲಿಯ ವಾಸ್ತುಶಿಲ್ಪ

ಕಳಿಂಗ ಶೈಲಿಯ ವಾಸ್ತುಶಿಲ್ಪ

PC:Subhrajyoti07

ಈ ದೇವಾಲಯವನ್ನು ಅತ್ಯಂತ ಉತ್ತಮವಾಗಿ ಕಳಿಂಗ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿದ್ದು, 10 ಮೀ ಸುತ್ತಳತೆಯೊಂದಿಗೆ 24 ಚಕ್ರಗಳು ಈ ದೇವಸ್ಥಾನಕ್ಕೆ ತಂಗುವಂತೆ ನಿರ್ಮಿಸಲಾಗಿದೆ. ಇಡೀ ದೇವಸ್ಥಾನವು ರಥದ ಮಾದರಿಯಲ್ಲಿ ನಿರ್ಮಿಸಲಾಗಿದ್ದು ಈ ರಥವನ್ನು 7 ಕುದುರೆಗಳು ಎಳೆಯುವಂತೆ ಆಯೋಜಿಸಲಾಗಿದೆ.

ಕಪ್ಪು ಪಗೋಡ ಎನ್ನಲಾಗುತ್ತಿತ್ತು

ಕಪ್ಪು ಪಗೋಡ ಎನ್ನಲಾಗುತ್ತಿತ್ತು

PC:Rohani24
ಈ ದೇವಾಲಯವು ಅಂದಿನ ಕಾಲದಲ್ಲಿ ಎಷ್ಟು ದೊಡ್ಡದಾಗಿತ್ತೆಂದರೆ ಸಮುದ್ರ ಮಾರ್ಗವಾಗಿ ಬರುವವರಿಗೆ ಇದು ಗುರುತು ಗೋಪುರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಾವಿಕರು ಇದನ್ನು ಕಪ್ಪು ಪಗೋಡ ಎಂಬ ಹೆಸರಿನಿಂದ ಗುರುತಿಸುತ್ತಿದ್ದರು. ಇದಕ್ಕೆ ವಿರುದ್ಧವೆಂಬಂತೆ ಪುರಿಯಲ್ಲಿರುವ ದೊಡ್ಡ ಜಗನ್ನಾಥನ ದೇವಸ್ಥಾನವು ಬಿಳಿ ಪಗೋಡ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.

Read more about: india temple odisha note
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X