Search
  • Follow NativePlanet
Share
» »ಸಮುದ್ರಮಂಥನದಲ್ಲಿ ಬಂದ ವಿಷವನ್ನು ಶಿವ ಸೇವಿಸಿದ್ದು ಇಲ್ಲೇ

ಸಮುದ್ರಮಂಥನದಲ್ಲಿ ಬಂದ ವಿಷವನ್ನು ಶಿವ ಸೇವಿಸಿದ್ದು ಇಲ್ಲೇ

ನೀಲಕಂಠ ಮಹಾದೇವ ದೇವಾಲಯವು ಪುರಾತನ ದೇವಸ್ಥಾನವಾಗಿದ್ದು, 1675 ಮೀಟರ್ ಎತ್ತರದ ಬೆಟ್ಟದ ಮೇಲೆ ಇದೆ. ಶಿವಲಿಂಗವನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ದೇವಸ್ಥಾನದ ಮುಖ್ಯ ದೇವತೆ ಶಿವನನ್ನು ನೀಲಕಂಠ ಎಂದು ಪೂಜಿಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಸಾಗರದಿಂದ ಹೊರ ಬಂದ ವಿಷವನ್ನು ಸೇವಿಸಿದ ಕಾರಣ ಆತನ ಗಂಟಲು ನೀಲಿ ಬಣ್ಣಕ್ಕೆ ತಿರುಗಿದೆ, ಹಾಗಾಗಿ ಆತನನ್ನು ನೀಲಕಂಠ ಎಂದು ಕರೆಯುತ್ತಾರೆ.

 ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Rahuldewangan

ನೀಲಕಂಠ ಮಹಾದೇವ್ ದೇವಸ್ಥಾನವು ರಿಷಿಕೇಶನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ ಮತ್ತು ಸಾವಿರಾರು ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯವು ರಿಷಿಕೇಶದಿಂದ 20 ಕಿ.ಮೀ ದೂರದಲ್ಲಿದೆ ಮತ್ತು ನರ-ನಾರಾಯಣ ಬೆಟ್ಟದ ಪಕ್ಕದಲ್ಲಿದೆ. ಪಂಕಾರಾ ನದಿ ಮತ್ತು ಮಧುಮತಿ ನದಿಯ ಸಂಗಮವು ಇಲ್ಲಿಂದ ಸ್ವಲ್ಪವೇ ದೂರದಲ್ಲಿದೆ.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

PC:Unknown

ಹಿಂದೂ ಪುರಾಣಗಳ ಪ್ರಕಾರ, ನೀಲಕಂಠ ಮಹಾದೇವ ದೇವಸ್ಥಾನವು ಸಮುದ್ರ ಮಂಥನದಲ್ಲಿ ಹೊರ ಬಂದ ವಿಷವನ್ನು ಸೇವಿಸಿದ ಸ್ಥಳ ಎನ್ನಲಾಗುತ್ತದೆ. ನೀಲಕಂಠ ಎಂದರೆ ನೀಲಿ ಗಂಟಲನ್ನು ಹೊಂದಿದಾತ ಎಂದರ್ಥ.

ತೀರ್ಥದಲ್ಲಿ ಸ್ನಾನ

ತೀರ್ಥದಲ್ಲಿ ಸ್ನಾನ

PC:Anurodhraghuwanshi

ದೇವಾಲಯ ಪ್ರವೇಶಿಸುವ ಮೊದಲು, ಭಕ್ತರು ಆವರಣದಲ್ಲಿರುವ ನೈಸರ್ಗಿಕ ತೀರ್ಥದಲ್ಲಿ ಸ್ನಾನ ಮಾಡುತ್ತಾರೆ. ತೆಂಗಿನಕಾಯಿ, ಜೇನು, ಹಣ್ಣುಗಳು, ಹೂವುಗಳು, ಹಾಲು ಮತ್ತು ಪವಿತ್ರ ನೀರನ್ನು ಈ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ದೇವಸ್ಥಾನದ ಶಿಖರವು ವಿವಿಧ ದೇವತೆಗಳ ಮತ್ತು ಅಸುರರ ಶಿಲ್ಪಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. ನೀಲಕಂಠ ಮಹಾದೇವ ದೇವಾಲಯದ ಮುಖ್ಯ ದೇವತೆ ಶಿವಲಿಂಗ ರೂಪದಲ್ಲಿಇದ್ದಾರೆ .

ಪ್ರಮುಖ ಉತ್ಸವಗಳು

ಪ್ರಮುಖ ಉತ್ಸವಗಳು

PC: Anurodhraghuwanshi

ಮಹಾ ಶಿವರಾತ್ರಿ ದೇವಸ್ಥಾನದಲ್ಲಿ ಆಚರಿಸಲಾಗುವ ಅತ್ಯಂತ ಪ್ರಮುಖ ಉತ್ಸವವಾಗಿದೆ. ಹಬ್ಬದ ಸಮಯದಲ್ಲಿ ಹಲವಾರು ಭಕ್ತರು ದೇವಾಲಯಕ್ಕೆ ಬರುತ್ತಾರೆ. ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಭೇಟಿಕೊಡುವ ಭಕ್ತರು ಬಿಲ್ವಪತ್ರೆ, ತೆಂಗಿನಕಾಯಿ, ಹೂವುಗಳು, ಹಾಲು, ಜೇನು, ಹಣ್ಣುಗಳು ಮತ್ತು ನೀರನ್ನು ಶಿವನಿಗೆ ಅರ್ಪಿಸುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಎರಡು ಉತ್ಸವಗಳನ್ನು ಮುಖ್ಯವಾಗಿ ಆಚರಿಸಲಾಗುತ್ತದೆ ಒಂದು ಶಿವರಾತ್ರಿ, ಇನ್ನೊಂದು ಶಿವರಾತ್ರಿ ಶ್ರಾವಣ. ಈ ಸಂದರ್ಭದಲ್ಲಿ ಭಕ್ತರು ಹರಿದ್ವಾರದಿಂದ ಋಷಿಕೇಶ್‌ವರೆಗೆ ಪಾದಯಾತ್ರೆ ಮಾಡುತ್ತಾರೆ.

ಅಶ್ವಥ ಮರ

ಅಶ್ವಥ ಮರ

PC:Wiki-uk

ದೇವಸ್ಥಾನದ ಆವರಣದಲ್ಲಿ ಒಂದು ಅಶ್ವಥ ಮರವಿದೆ. ಈ ಮರದ ಕಾಂಡಕ್ಕೆ ದಾರವನ್ನು ಕಟ್ಟಿ ಮನಪೂರ್ವಕವಾಗಿ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಈಡೇರುತ್ತವಂತೆ. ಹಾಗಾಗಿ ಸಾಕಷ್ಟು ಭಕ್ತರು ಈ ಅಶ್ವಥ ಮರಕ್ಕೆ ದಾರವನ್ನು ಕಟ್ಟುತ್ತಾರೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Abhishek Harne

ಈ ದೇವಸ್ಥಾನವು ವರ್ಷವಿಡೀ ಭಕ್ತರಿಗಾಗಿ ತೆರೆದಿರುತ್ತದೆ. ಸಾಧ್ಯವಾದರೆ ನೀವು ಶಿವರಾತ್ರಿ ಉತ್ಸವದ ಸಮಯದಲ್ಲೇ ಇಲ್ಲಿಗೆ ಭೇಟಿ ನೀಡಿ. ಅಲ್ಲಿನ ಆಚರಣೆಯು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Asis K. Chatterjee

ರಾಮ ಸೇತುವೆ, ಲಕ್ಷ್ಮಣ ಸೇತುವೆ, ತೇರಹ್ ಮನ್‌ಜಿಲ್ ದೇವಸ್ಥಾನ, ರಾಜಾಜಿ ನ್ಯಾಷನಲ್ ಪಾರ್ಕ್, ತ್ರಿವೇಣಿ ಘಾಟ್, ಗೀತಾ ಭವನ, ಶಿವಾನಂದ ಆಶ್ರಮ, ಲಕ್ಷ್ಮಣ ದೇವಸ್ಥಾನ, ಬೀಟಲ್ ಆಶ್ರಮ, ಭೂತನಾಥ ದೇವಸ್ಥಾನ ಋಷಿಕೇಶದ ಸುತ್ತಮುತ್ತಲಿರುವ ಪ್ರಮುಕ ಆಕರ್ಷಣೀಯ ತಾಣಗಳು.

ತಲುಪುವುದು ಹೇಗೆ?

ನೀಲಕಂಠ ಮಹಾದೇವ ದೇವಾಲಯವು ರಿಷಿಕೇಶ ಬಸ್‌ನಿಲ್ದಾಣದಿಂದ ಸುಮಾರು 32ಕಿ.ಮೀ ದೂರದಲ್ಲಿದೆ. ನೀವು ಇಲ್ಲಿಂದ ಖಾಸಗಿ ವಾಹನಗಳು ಅಥವಾ ಟ್ಯಾಕ್ಸಿಯನ್ನು ಬುಕ್ ಮಾಡಬಹುದು. ಇಲ್ಲವಾದಲ್ಲಿ ನೀವು ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸಬಹುದು, ಇದು ನಿಮ್ಮನ್ನು ದೇವಸ್ಥಾನದ ಬಳಿ ಕೆರದೊಯ್ಯುತ್ತದೆ. ನೀವು ಸ್ವಲ್ಪ ಸಾಹಸವನ್ನು ಇಷ್ಟಪಡುತ್ತೀರೆಂದಾದರೆ ರಾಮಜುಲಾ ಅಥವಾ ಸೇತುವೆಯಿಂದ 22 ಕಿ.ಮಿ ಚಾರಣವನ್ನು ಕೈಗೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more