Search
  • Follow NativePlanet
Share
» »ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!

ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡದ ಬಗ್ಗೆ ಕೇಳಿದ್ದೀರಾ? ಈ ತಿಪ್ಪೇರುದ್ರ ಸ್ವಾಮಿಯನ್ನು ಬೇಡಿಕೊಂಡರೆ ಬೇಡಿಕೆ ಈಡೇರುತ್ತದಂತೆ. ಅದಕ್ಕಾಗಿ ದೂರದೂರುಗಳಿಂದಲೂ ಭಕ್ತರು ಈ ಗುರುವಿನ ದರ್ಶನ ಪಡೆಯಲು ಬರುತ್ತಾರೆ. ಈ ಮಹಿಮಾನ್ವಿತ ತಾಣ ಎಲ್ಲಿದೆ ಅನ್ನೋದನ್ನು ನಾವು ತಿಳಿಯೋಣ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC:Masterzatak

ಪವಾಡ ಪುರುಷ ತಿಪ್ಪೇರುದ್ರ ಸ್ವಾಮಿ ದೇವಸ್ಥಾನವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿ ಹಳ್ಳಿಯಲ್ಲಿದೆ. 15 ನೇ ಶತಮಾನದಲ್ಲಿ ಪವಾಡವನ್ನು ತೋರಿಸಿದ ಪವಾಡ ಪುರುಷನೇ ತಿಪ್ಪೇರುದ್ರ ಸ್ವಾಮಿ. ಜನರ ಬೇಡಿಕೆಗಳನ್ನು ಈಡೇರಿಸಿದರು, ಊರಿಗೆ ಕೆರೆಯನ್ನು ನಿರ್ಮಿಸಿದರು. ಬೇಡಿದ ವರವನ್ನು ಕರುಣಿಸಿದ ಮಹಾತ್ಮ, ಹಾಗಾಗಿ ಜನರು ಇವರನ್ನು ಆರಾಧಿಸುತ್ತಾರೆ.

11 ರೂ. ನಾಣ್ಯವನ್ನು ಇಲ್ಲಿನ ಹತ್ತಿ ಮರಕ್ಕೆ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ

ಆರಾಧನ ಸ್ಥಳಗಳು

ಆರಾಧನ ಸ್ಥಳಗಳು

PC: Facebook

ತಿಪ್ಪೆರುದ್ರ ಸ್ವಾಮಿ ಕಲ್ಯಾಣದಿಂದ ಬಂದವರು ಎನ್ನಲಾಗುತ್ತದೆ. ಆಗ ನಾಯಕನಹಟ್ಟಿ ಕುಗ್ರಾಮವಾಗಿತ್ತು, ಸ್ವಾಮಿಗಳು ಇಲ್ಲಿಗೆ ಬಂದದ್ದೇ ಗ್ರಾಮ ಅಭಿವೃದ್ಧಿಯಾಯಿತು. ಅನೇಕ ಪವಾಡಗಳನ್ನು ಸೃಷ್ಠಿಸಿ ಜನರ ಮನ ಗೆದ್ದಿದ್ದಾರೆ. ಎರಡು ಆರಾಧನ ಸ್ಥಳಗಳಿವೆ ಅವುಗಳನ್ನು ಒಳಮಟ್ಟ ಹಾಗೂ ಹೊರ ಮಟ್ಟ ಎನ್ನುತ್ತಾರೆ.

ಕಮಲದ ಮಂಟಪ

ಕಮಲದ ಮಂಟಪ

PC: Facebook

ಒಳಮಟ್ಟದಲ್ಲಿ ತಿಪ್ಪೆರುದ್ರ ಸ್ವಾಮಿ ವಾಸವಾಗಿದ್ದ ಸ್ಥಳವಂತೆ. ಒಳಮಟ್ಟದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದರು ಹಾಗಾಗಿ ಇಲ್ಲಿ ಬಹಳಷ್ಟು ಕಲ್ಲಿನ ಮಂಟಪಗಳನ್ನು ಕಾಣಬಹುದು. ಅಷ್ಟದಿಕ್ಪಾಲಕರ ಮಂಟಪವಿದೆ. ಅಲ್ಲಿ ನಿಂತು ಬೇಡಿದರೆ ಕಮಲದ ಮಂಟಪದ ಕೆಳಗೆ ಎಲ್ಲಾ ಉತ್ಸವಗಳು ನಡೆಯುತ್ತವೆ. ನಾಲ್ಕು ಕಲ್ಲಿನ ಮಂಟಪದ ಕೆಳಗೆ ಭುವನೇಶ್ವರಿ ಮಂಟಪ, ಗಿರಿಜ ಕಲ್ಯಾಣವನ್ನೆಲ್ಲಾ ಈ ಕಮಲದ ಮಂಟಪದಲ್ಲಿ ಕೆತ್ತಲಾಗಿದೆ.

ಈ ಊರಿನ ಒಳಗೆ ಹೋಗುವಾಗ ಚಪ್ಪಲಿ ಕೈಯಲ್ಲಿ ಹಿಡಿದು ನಡೆಯುತ್ತಾರಂತೆ ಜನ!

ಕಲ್ಲಿನ ಕಂಬದ ವಿಗ್ರಹ

ಕಲ್ಲಿನ ಕಂಬದ ವಿಗ್ರಹ

PC:Masterzatak

ಗರ್ಭಿಣಿಯರು ಹೆರಿಗೆ ಸುಸೂತ್ರವಾಗಲಿಯೆಂದು ಕಲ್ಲಿನ ಕಂಬದಲ್ಲಿರುವ ನವನಾರಿ ತುಂಗ ವಿಗ್ರಹಕ್ಕೆ ಮನೆಯ ಯಜಮಾನಿ ನಾಲ್ಕು ಬಗೆಯ ಎಣ್ಣೆಯನ್ನು ಹಚ್ಚಿ ಸ್ವಾಮಿಗಳ ದರ್ಶನ ಮಾಡಿ ಬರುತ್ತಿದ್ದರಂತೆ, ಅಷ್ಟರಲ್ಲಿ ಆ ವಿಗ್ರಹದಿಂದ ಎಣ್ಣೆ ಹರಿದು ಕೆಳಕ್ಕೆ ಬೀಳುತ್ತದಂತೆ ಆ ಎಣ್ಣೆಯನ್ನು ಸಂಗ್ರಹಿಸಿ ಯಜಮಾನಿ ಮನೆಗೆ ಹೋಗಿ ದೀಪ ಬೆಳಗಿಸುತ್ತಿದ್ದರಂತೆ. ಹಾಗೆಯೇ ಇಲ್ಲಿ ಪಂಚನಾರಿ ತುರುಗ ಎನ್ನುವ ಇನ್ನೊಂದು ಕಂಬದ ವಿಗ್ರಹವಿದೆ. ಇದು ಹದಿಹರೆಯದ ಮಕ್ಕಳು ಮನೆಬಿಟ್ಟು ಹೋಗಿದ್ದರೆ ಅವರು ಮನೆಗೆ ಮರಳಿ ಬರಲಿ ಎಂದು ಮನೆಯ ಯಜಮಾನ ನಾಲ್ಕು ಬಗೆಯ ಎಣ್ಣೆಯನ್ನು ಈ ವಿಗ್ರಹಕ್ಕೆ ಹಚ್ಚಿ ಬೇಡಿಕೊಳ್ಳುತ್ತಿದ್ದರಂತೆ. ಒಂದೊಂದು ವಿಗ್ರಹಕ್ಕೆ ಅದರದ್ದೇ ಆದ ಶಕ್ತಿ ಇದೆ.

ಸಂತಾನಕ್ಕಾಗಿ ಬೇಡುತ್ತಾರೆ

ಸಂತಾನಕ್ಕಾಗಿ ಬೇಡುತ್ತಾರೆ

PC: Facebook

ಇಲ್ಲಿ ತಿಪ್ಪೇ ಸ್ವಾಮಿಯ ಶಯನಗ್ರಹವಿದೆ. ಮಕ್ಕಳಿಲ್ಲದ ದಂಪತಿಗಳು ಸಂತಾನಫಲಕ್ಕಾಗಿ ಈ ಸ್ವಾಮಿಯನ್ನು ಬೇಡಿಕೊಳ್ಳುತ್ತಾರೆ. ಚರ್ಮರೋಗ ನಿವಾರಣೆಗೂ ಈ ಸ್ವಾಮಿಯನ್ನು ಬೇಡಿಕೊಳ್ಳುತ್ತಾರೆ ಜನರು. ಜನರು ತಮ್ಮ ಬೇಡಿಕೆಯ ಈಡೇರಿಕೆಗೆ ಇಲ್ಲಿಗೆ ಆಗಮಿಸುತ್ತಾರೆ.

ಪುತ್ರ ಸಂತಾನಕ್ಕಾಗಿ ಅಸ್ಸಿ ಘಾಟ್‌ಗೆ ಬರುತ್ತಾರಂತೆ ದಂಪತಿಗಳು

ಒಳ ಮಠ

ಒಳ ಮಠ

PC:Masterzatak

ಒಳ ಮಠದಲ್ಲಿ ಪ್ರತಿ ನಿತ್ಯ ಪೂಜೆ ನಡೆಯುತ್ತದೆ. ಜೊತೆಗೆ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಬೆಳಗ್ಗೆ ೮ ಗಂಟೆಯಿಂದಲೇ ರುದ್ರಾಭಿಷೇಕ ನಡೆಯುತ್ತದೆ. ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ರುದ್ರಾಭಿಷೇಕ, ಮಂಗಳಾರತಿ, ವಾದ್ಯನಾದ ನಿತ್ಯ ಪೂಜೆ ನಡೆಯುತ್ತದೆ. ಸೋಮವಾರ ನಡೆಯುವ ಪೂಜೆಯಲ್ಲಿ ಭಾಗವಹಿಸಲು ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ.

ತಿಪ್ಪೇರುದ್ರ ಸ್ವಾಮಿಯ ಗದ್ದುಗೆ

ತಿಪ್ಪೇರುದ್ರ ಸ್ವಾಮಿಯ ಗದ್ದುಗೆ

PC:Masterzatak

ತಿಪ್ಪೇ ರುದ್ರ ಸ್ವಾಮಿ ಜೀವಂತ ಸಮಾಧಿಯಾದ ಸ್ಥಳವೇ ಹೊರಮಠ . ಇದು ಸ್ವಾಮಿಯು ಯೋಗ ನಿದ್ರೆಯಲ್ಲಿರುವ ಮಠ. ಇಲ್ಲಿ ತಿಪ್ಪೇ ರುದ್ರ ಸ್ವಾಮಿಯ ಗದ್ದುಗೆ ಇದೆ.

ವಯನಾಡಿಗೆ ಹೋದಾಗ ಮೀನಮುಟ್ಟಿ ಜಲಪಾತವನ್ನು ನೋಡೋದನ್ನು ಮರೆಯಬೇಡಿ

ಜಾತ್ರಾ ಮಹೋತ್ಸವ

ಜಾತ್ರಾ ಮಹೋತ್ಸವ

PC: Facebook

ಪ್ರತೀ ವರ್ಷ ಪಾಲ್ಗುಣ ಮಾಸ ಚಿತ್ರ ನಕ್ಷದಲ್ಲಿ ತಿಪ್ಪೇರುದ್ರ ಸ್ವಾಮಿ ರಥೋತ್ಸವ ನಡೆಯುತ್ತದೆ. ಆ ದಿನವೇ ಸ್ವಾಮಿಯವರು ಜೀವಂತ ಸಮಾಧಿಯಾಗಿದ್ದಂತೆ. ಸುಮಾರು ೧೫ ದಿನಗಳ ಕಾಲ ಈ ರಥೋತ್ಸವ ನಡೆಯುತ್ತದೆ. ಮುಕ್ತ ಭಾವುಟವನ್ನು ಹರಾಜು ಮಾಡಲಾಗುತ್ತದೆ. ಭಕ್ತರು ಲಕ್ಷಾಂತರ ರೂ ನೀಡಿ ಅದನ್ನು ಹರಾಜಿನಲ್ಲಿ ಪಡೆಯುತ್ತಾರೆ. ರಥೋತ್ಸವದ ನಂತರ ಓಕುಳಿ ಉತ್ಸವ ನಡೆಯುತ್ತದೆ.

ಕೊಬ್ಬರಿ ಸುಡುವುದು

ಕೊಬ್ಬರಿ ಸುಡುವುದು

PC:Masterzatak

ಜಾತ್ರೆಯ ಸಂದರ್ಭ ಇಲ್ಲಿನ ಊರಿನವರು ತಮ್ಮ ಮನೆಯ ಮುಂದೆ ಕೊಬ್ಬರಿಯನ್ನು ಸುಟ್ಟು ಅದನ್ನು ಹಣೆಗೆ ಹಚ್ಚಿ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಒಂದು ವೇಳೆ ಈ ಜಾತ್ರೆಗೆ ಬರಲು ಸಾಧ್ಯವಾಗದಿದ್ದಲ್ಲಿ ಅವರು ತಮ್ಮ ಮನೆಯ ಮುಂದೆ ಸ್ವಾಮಿ ತಿಪ್ಪೇರುದ್ರ ಸ್ವಾಮಿಯ ಹೆಸರನ್ನು ಹೇಳಿ ವಿಭೂತಿನ್ನು ಹಣೆಗೆ ಹಚ್ಚಿ ಪ್ರಸಾದವನ್ನು ಸ್ವೀಕರಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ನಾಯನಹಟ್ಟಿ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. 10 ಕಿ.ಮೀ ಗಿಂತ ಕಡಿಮೆ ದೂರದಲ್ಲಿ ನಾಯಕನ ಹಟ್ಟಿಗೆ ಯಾವುದೇ ರೈಲು ನಿಲ್ದಾಣವಿಲ್ಲ. ಹಾಲಿಯುರು ರೈಲು ನಿಲ್ದಾಣ ಚಿತ್ರದುರ್ಗ ಬಳಿ ಇದೆ. ಮೊಲಕಾಲ್ಮುರು ರೈಲ್ವೆ ನಿಲ್ದಾಣಗಳ ಮೂಲಕ ನಾಯನಹಟ್ಟಿಗೆ ತಲುಪಬಹುದು.

ಚಲ್ಲಕೆರೆ, ಚಿತ್ರದುರ್ಗ, ಮೊಲಕಾಲ್ಮುರು ನಗರಗಳು ನಾಯಾಕನಹಟ್ಟಿಗೆ ಸಮೀಪದಲ್ಲಿದೆ .ಇಲ್ಲಿಂದ ನಾಯನಹಟ್ಟಿಗೆ ರಸ್ತೆ ಸಂಪರ್ಕವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more