Search
  • Follow NativePlanet
Share
» »ಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲ

ಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲ

ಬೆಂಗಳೂರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಂದಿಹಿಲ್ಸ್‌ ಕೂಡಾ ಒಂದು. ಸ್ನೇಹಿತರ ಜೊತೆ ವಾರಾಂತ್ಯ ಕಳೆಯಲು ಇದೊಂದು ಉತ್ತಮ ಸ್ಥಳವಾಗಿದೆ. ಸ್ನೇಹಿತರ ಜೊತೆ ಇಲ್ಲವಾದರೆ ಒಬ್ಬಂಟಿಯಾಗಿ ಈ ನಂದಿ ಹಿಲ್ಸ್‌ಗೆ ಹೋಗಿ ಬರುವವರು ಬಹಳಷ್ಟು ಮಂದಿ ಇದ್ದಾರೆ. ಹೀಗಿರುವಾಗ ಇದೀಗ ನಂದಿಹಿಲ್ಸ್‌ನ ರೂಲ್ಸ್‌ನಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಮಾಡಲಾಗಿದೆ.

ಒಂಟಿಯಾಗಿ ಹೋಗುವಂತಿಲ್ಲ

ಒಂಟಿಯಾಗಿ ಹೋಗುವಂತಿಲ್ಲ

RSHETTY93

ಅದೇನೆಂದರೆ ನಂದಿಹಿಲ್ಸ್‌ಗೆ ಇನ್ನುಮುಂದೆ ಯಾರೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ಒಬ್ಬಂಟಿಯಾಗಿ ಹೋಗುವವರನ್ನು ಬ್ಯಾನ್ ಮಾಡಲಾಗಿದೆ. ಆತ್ಮಹತ್ಯೆಗಳು ಹೆಚ್ಚುತ್ತವೆ ಎನ್ನುವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ನಂದಿ ಬೆಟ್ಟ

ನಂದಿ ಬೆಟ್ಟ

Vinodtiwari2608

ನಂದಿ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ದಕ್ಷಿಣ ಭಾರತದ ಪ್ರಾಚೀನ ಪರ್ವತ ಕೋಟೆಯಾಗಿದೆ. ಇದು ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿಮೀ ಮತ್ತು ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿದೆ.

ಆನಂದ ಗಿರಿ

ಆನಂದ ಗಿರಿ

Karthik.kgb1

ನಂದಿ ಬೆಟ್ಟದ ಮೂಲದ ಬಗ್ಗೆ ಅನೇಕ ಕಥೆಗಳು ಇವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಇದರ ಅರ್ಥ ಸಂತೋಷದ ಬೆಟ್ಟ. ಇದನ್ನು ನಂದಿ ದುರ್ಗಾ ಎಂದೂ ಕರೆಯಲಾಗುತ್ತದೆ. ಟಿಪ್ಪು ಸುಲ್ತಾನರ ಕಾಲದಲ್ಲಿ ನಿರ್ಮಿಸಲಾಗಿದ್ದ ಕೋಟೆ ಅಲ್ಲಿದೆ.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ನಂದಿ ದೇವಾಲಯ

ನಂದಿ ದೇವಾಲಯ

Tinucherian

ಈ ಬೆಟ್ಟದ ಮೇಲೆ 1300 ವರ್ಷ ಹಳೆಯ ದ್ರಾವಿಡ ಶೈಲಿಯ ನಂದಿ ದೇವಾಲಯವಿದೆ. ಪುರಾತನ ಶಿವ ಮತ್ತು ಪಾರ್ವತಿ ದೇವಾಲಯ ಕೂಡ ಈ ಬೆಟ್ಟದ ಮೇಲಿದೆ. ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದ್ದು ಇದು ಒಂಭತ್ತನೇ ಶತಮಾನದಷ್ಟು ಹಳೆಯದಾಗಿದೆ.

ಆತ್ಮಹತ್ಯೆ ಹೆಚ್ಚುತ್ತಿದೆ

ಆತ್ಮಹತ್ಯೆ ಹೆಚ್ಚುತ್ತಿದೆ

Tsenapathy

ಜನರು ಸುತ್ತಾಡಲೆಂದು ನಂದಿಹಿಲ್ಸ್‌ಗೆ ಬಂದರೆ ಕೆಲವರು ಆತ್ಮಹತ್ಯೆಮಾಡಿಕೊಳ್ಳಲೆಂದೇ ನಂದಿಹಿಲ್ಸ್‌ಗೆ ಬರುತ್ತಾರೆ. ನಂದಿಹಿಲ್ಸ್‌ನ ಟಿಪ್ಪುಡ್ರಾಪ್‌ನಲ್ಲಿ ಆತ್ಮಹತ್ಯೆ ಹೆಚ್ಚುತ್ತಿದೆ.

ವಾಪಾಸ್‌ ಕಳಿಸಲಾಗುವುದು

ವಾಪಾಸ್‌ ಕಳಿಸಲಾಗುವುದು

RSHETTY93

ಮುಂದಿನ ದಿನಗಳಲ್ಲಿ ಯಾರಾದರೂ ಒಬ್ಬಂಟಿಯಾಗಿ ಸುತ್ತಾಡಲು ನಂದಿಹಿಲ್ಸ್‌ಗೆ ಬಂದರೆ ಅವರನ್ನು ಟಿಕೇಟ್‌ ಕೌಂಟರ್‌ ಬಳಿಯೇ ವಾಪಾಸ್ ಕಳಿಸಲಾಗುವುದು. ಹಾಗಾಗಿ ನೀವು ನಂದಿಹಿಲ್ಸ್‌ ಸುತ್ತಾಡಲು ಒಬ್ಬಂಟಿಯಾಗಿ ಹೋಗುವಂತಿಲ್ಲ.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ಟಿಪ್ಪು ಡ್ರಾಪ್‌

ಟಿಪ್ಪು ಡ್ರಾಪ್‌

RSHETTY93

ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಯಾರಾದರೂ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗಿ ಅವರನ್ನು ಈ ಟಿಪ್ಪು ಡ್ರಾಪ್‌ನಿಂದ ಕೆಳಗ್ಗೆ ಎಸೆಯಲಾಗುತ್ತಿತ್ತು. ಹಾಗಾಗಿ ಇಲ್ಲಿಗೆ ಟಿಪ್ಪು ಡ್ರಾಪ್ ಎನ್ನುವ ಹೆಸರು ಬಂದಿದೆ.

ಪೊಲೀಸ್ ಕೌನ್ಸಿಲಿಂಗ್

ಪೊಲೀಸ್ ಕೌನ್ಸಿಲಿಂಗ್

hash whole.studios

ಅಲ್ಲಿಗೆ ಬಂದಿರುವ ವ್ಯಕ್ತಿಗಳು ಏನಕ್ಕೆ ಬಂದಿದ್ದಾರೆ ಎಂದು ಅವರ ಮುಖನೋಡಿದ್ರೆ ಗೊತ್ತಾಗುತ್ತದೆ ಎನ್ನುತ್ತಾರೆ ಸ್ಥಳೀಯ ಪೊಲೀಸರು. ಅಂತಹ ವ್ಯಕ್ತಿಗಳು ಕಂಡುಬಂದರೆ ಅವರ ಮೇಲೆ ಅನುಮಾನ ಉಂಟಾದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಮಾಡಲಾಗುತ್ತದೆ.

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಏರ್‌ಪೋರ್ಟ್‌ಗೆ ಸಮೀಪದಲ್ಲಿದೆ

ಏರ್‌ಪೋರ್ಟ್‌ಗೆ ಸಮೀಪದಲ್ಲಿದೆ

RSHETTY93

ಇದು ಸಮುದ್ರ ಮಟ್ಟಕ್ಕಿಂತ 4,851 ಅಡಿ ಎತ್ತರದಲ್ಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ದೇವನಹಳ್ಳಿ ಪಟ್ಟಣದ ನಂತರ ರಾಷ್ಟ್ರೀಯ ಹೆದ್ದಾರಿ (NH-7) ನಿಂದ 20 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X