Search
  • Follow NativePlanet
Share
» »ಇದು ದೇವತೆಗಳು ಉಗುರಿನಿಂದ ಕೊರೆದು ಮಾಡಿದ ಸರೋವರವಂತೆ

ಇದು ದೇವತೆಗಳು ಉಗುರಿನಿಂದ ಕೊರೆದು ಮಾಡಿದ ಸರೋವರವಂತೆ

ನಕ್ಕಿ ಸರೋವರ ಮೌಂಟ್ ಅಬುವಿನ ಅತ್ಯಂತ ಪ್ರಸಿದ್ಧ ಸರೋವರಗಳಲ್ಲಿ ಒಂದಾಗಿದೆ. ಇದು ಒಂದು ಕೃತಕ ಸರೋವರವಾಗಿದ್ದು ಬೋಟಿಂಗ್‌ನ್ನು ಹೊಂದಿದೆ. ಇದಲ್ಲದೆ, ಸರೋವರದ ದಡದ ಉದ್ದಕ್ಕೂ ಕುದುರೆ ಸವಾರಿಯನ್ನು ನೀವು ಆನಂದಿಸಬಹುದು. ಖಂಡಿತವಾಗಿಯೂ ನಿಮಗಿದು ಮರೆಯಲಾಗದ ಅನುಭವವಾಗಲಿದೆ.

ಏಕೈಕ ಕೃತಕ ಸರೋವರ

ಏಕೈಕ ಕೃತಕ ಸರೋವರ

PC:Faiyaz Hawawala

ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿಕೊಡುವ ನಕ್ಕಿ ಕೆರೆಯು 1200 ಮೀಟರ್ ಎತ್ತರದಲ್ಲಿದ್ದು ಭಾರತದ ಏಕೈಕ ಕೃತಕ ಕೆರೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇದು ಪ್ರಶಾಂತವಾದ ಮತ್ತು ನಯನಮನೋಹರವಾದ ಬೆಟ್ಟಗಳ ಹಿನ್ನಲೆಯಲ್ಲಿ ನೆಲೆಗೊಂಡಿದೆ.

ಪ್ರವಾಸಿ ಆಕರ್ಷಣೆಗಳು

ಪ್ರವಾಸಿ ಆಕರ್ಷಣೆಗಳು

PC: Arunsbhat

ಮೌಂಟ್ ಅಬುದಲ್ಲಿನ ಸುಂದರವಾದ ಆಕರ್ಷಣೆ ಮತ್ತು ವೈಭವದಿಂದಾಗಿ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಒಂದು ಪ್ರವಾಸಿ ಆಕರ್ಷಣೆ ನಕ್ಕಿ, ಮೌಂಟ್ ಅಬುವಿನ ಸರೋವರ. ಮೌಂಟ್ ಅಬುವಿನ ಹಲವಾರು ಇತರ ಕೆರೆಗಳು ಮತ್ತು ಉದ್ಯಾನಗಳಲ್ಲಿ ಈ ಸರೋವರವು ಅತ್ಯುತ್ತಮವಾದದ್ದು. ಮೌಂಟ್ ಅಬು ವಿವಿಧ ಪ್ರವಾಸಿ ತಾಣಗಳನ್ನು ಹೊಂದಿದೆ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

PC: Koshy Koshy

ಒಂದು ದಂತಕಥೆಯ ಪ್ರಕಾರ, ಮೌಂಟ್ ಅಬುವಿನ ಬಳಿಯಿರುವ ಈ ಕೆರೆಗೆ ' ನಕ್ಕಿ' ಎಂಬ ಹೆಸರು ಒಂದು ದಂತಕಥೆಯ ಸಲುವಾಗಿ ಬಂದಿದೆ. ಅದರ ಪ್ರಕಾರ ಈ ಕೆರೆಯನ್ನು ದೇವತೆಗಳು ತಮ್ಮನ್ನು ತಾವು ದುಷ್ಟ ರಾಕ್ಷಸರಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ನಖಗಳಿಂದ (ಉಗುರು) ತೋಡಿದರಂತೆ. ಅನೇಕ ಹಿಂದೂಗಳಿಗೆ, ಈ ಸರೋವರವು ತುಂಬಾ ಪವಿತ್ರವಾಗಿದೆ. ಈ ಸರೋವರದ ಭೌಗೋಳಿಕ ಅದ್ಭುತ ಮತ್ತು ಭೂವಿಜ್ಞಾನಿಗಳಿಗೆ ಆಸಕ್ತಿಯ ವಿಷಯವಾಗಿದೆ.

ಅತ್ಯುತ್ತಮ ಪಿಕ್ನಿಕ್ ತಾಣ

ಅತ್ಯುತ್ತಮ ಪಿಕ್ನಿಕ್ ತಾಣ

PC:Sanyam Bahga

ನಕ್ಕಿ ಸರೋವರ, ಮೌಂಟ್ ಅಬು ಅತ್ಯುತ್ತಮ ಪಿಕ್ನಿಕ್ ತಾಣವಾಗಿದೆ ಮತ್ತು ಸುತ್ತಮುತ್ತಲಿನ ವಿಸ್ಮಯಕಾರಿ ವೀಕ್ಷಣೆಗಳನ್ನು ನೀಡುತ್ತದೆ. ಬೋಟಿಂಗ್ ಮತ್ತು ಇತರ ಸಾಹಸಗಳಿಗಾಗಿ ಹೋಗುವುದು ಸೂಕ್ತ ಸ್ಥಳ. ಮೌಂಟ್ ಅಬುವಿನ ಸುತ್ತಮುತ್ತಲಿನ ನಕ್ಕಿ ಸರೋವರವು ಸುಂದರ ಬೆಟ್ಟಗಳು, ಸುಂದರವಾದ ಉದ್ಯಾನವನಗಳು ಮತ್ತು ವಿಲಕ್ಷಣವಾದ ಬಂಡೆಗಳಿಂದ ಆವೃತವಾಗಿದೆ. ಪ್ರವಾಸಿಗರು ಐಷಾರಾಮಿ ಮತ್ತು ಅತ್ಯಾಕರ್ಷಕ ಬೇಸಿಗೆಯ ಮನೆಗಳನ್ನು ಕೂಡಾ ಕಾಣಬಹುದು. ಅದು ಹಿಂದೆ ಮಹಾರಾಜರು ಮತ್ತು ಅವರ ಕುಟುಂಬಸ್ಥರು ಕಾಲಕಳೆಯುತ್ತಿದ್ದ ಮನೆಗಳಾಗಿವೆ. ಸರೋವರದ ಮೂಲಕ ಹಿಂದೂ ದೇವತೆ ರಘುನಾಥ್‌ಜೀಗೆ ಸಮರ್ಪಿತವಾದ ದೇವಸ್ಥಾನ ಕೂಡ ಇದೆ.

ಗಾಂಧಿ ಘಾಟ್ ಸ್ಮಾರಕ

ಗಾಂಧಿ ಘಾಟ್ ಸ್ಮಾರಕ

PC: Chirag mac 84

ಪ್ರವಾಸಿಗರು ಇಲ್ಲಿರುವ ಮಹಾತ್ಮ ಗಾಂಧೀಜಿಯವರ ಗಾಂಧಿ ಘಾಟ್ ಸ್ಮಾರಕಕ್ಕೆ ಭೇಟಿಕೊಡಬಹುದು. ಫೆಬ್ರವರಿ 12,1948 ರಂದು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಈ ಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಕೆರೆಯ ಬಳಿಯಲ್ಲಿ ಹಲವಾರು ಕಲ್ಲಿನ ಬೆಟ್ಟಗಳಿವೆ. ಇವು ಪ್ರವಾಸಿಗರಿಗೆ ಮತ್ತು ಸಾಹಸಿಗರಿಗೆ ಶಿಲಾರೋಹಣದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೆ ನಕ್ಕಿ ಕೆರೆಯ ಶಾಂತವಾದ ಮತ್ತು ಸೌಮ್ಯವಾದ ವಾತಾವರಣದಲ್ಲಿ ದೋಣಿಯಾನ ಮಾಡುತ್ತ ಕಾಲ ಕಳೆಯುವ ಅವಕಾಶ ಇಲ್ಲಿ ಎಲ್ಲರಿಗೂ ಲಭಿಸುತ್ತದೆ.

ಬೋಟಿಂಗ್ ಶುಲ್ಕ

ಬೋಟಿಂಗ್ ಶುಲ್ಕ

PC: Mustafa Khargonewala

30 ನಿಮಿಷದ ಪೆಡಲ್ ಬೋಟಿಂಗ್‌ಗೆ ಒಬ್ಬರಿಗೆ 50 ರೂ. ಯಿಂದ 100ರೂ. ಇನ್ನೂ ಶಿಕಾರಾ ದೋಣಿ ಸವಾರಿಗೆ ಒಬ್ಬರಿಗೆ ಪ್ರತೀ 30 ನಿಮಿಷಕ್ಕೆ 100ರೂ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Camaal Mustafa Sikander aka Lens Naayak

ಮಾರ್ಚ್-ಜೂನ್ ನಡುವೆ ಭೇಟಿ ಮಾಡುವುದನ್ನು ತಪ್ಪಿಸುವುದು ಉತ್ತಮ. ಜುಲೈ ನಿಂದ ಜನವರಿ ವರೆಗೆ ನೀವು ಈ ಸರೋವರವನ್ನು ಅನ್ವೇಷಿಸಲು ಬಯಸಬಹುದು. ನಕ್ಕಿ ಸರೋವರವು ಮೌಂಟ್ ಅಬುವಿನ ಮುಖ್ಯ ಮಾರುಕಟ್ಟೆಯ ಬಳಿ ಗಣೇಶ ರಸ್ತೆಯಲ್ಲಿದೆ. ಇದನ್ನು ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ತಲುಪಬಹುದು. ನೀವು ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more