
ಭಾರತ ದೇಶದಲ್ಲಿರುವ ದೇವಾಲಯಗಳು, ಪುಣ್ಯಕ್ಷೇತ್ರಗಳು, ಪವಿತ್ರ ಸ್ಥಳಗಳು ಯಾವುದೊ ಒಂದು ಕಾಲಕ್ಕೆ ಸೇರಿದ್ದು. ಆದರೆ ಕೆಲವು ಕ್ಷೇತ್ರಗಳು ಮಾತ್ರ ಕೃತಯುಗಕ್ಕೆ, ತ್ರೇತಾಯುಗಕ್ಕೆ, ದ್ವಾರಪಯುಗಕ್ಕೆ ಹಾಗು ಕಲಿಯುಗಕ್ಕೆ ಕೂಡ ಸೇರಿದ್ದಾಗಿರುತ್ತದೆ. ಅಂಥಹ ಪ್ರದೇಶಕ್ಕೆ ಸೇರಿದ್ದೇ ನಾವು ಇಂದು ಲೇಖನದ ಮೂಲಕ ತಿಳಿದುಕೊಳ್ಳೊಣ.
ದಾನವರ ಮೇಲೆ ದೇವತೆಗಳು ವಿಜಯ ಸಾಧಿಸಲು ಅವಶ್ಯಕವಾದ ವಜ್ರಾಯುಧ ತಯಾರಾದ ಪ್ರದೇಶ ಇದೆ. ಅದೇ ವಿಧವಾಗಿ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಅಶ್ವಮೇಧ ಯಾಗಕ್ಕೆ ಆಯ್ದುಕೊಂಡ ಪ್ರದೇಶ ಕೂಡ ಇದೆಯಂತೆ. ಇನ್ನು ದ್ವಾಪರ ಯುಗದಲ್ಲಿ ಬಲರಾಮನಿಗೆ ಅಂಟಿಕೊಂಡಿದ್ದ ಬ್ರಹ್ಮಹತ್ಯೆಪಾತಕವನ್ನು ಕಳೆದುಕೊಂಡ ಪ್ರದೇಶ ಕೂಡ ಇದೆ. ಕಲಿಯುಗದಲ್ಲಿ ಪಾಪಗಳನ್ನು ನಾಶ ಮಾಡುವ ಪುಣ್ಯಕ್ಷೇತ್ರ ಎಂದು ಕೂಡ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ಗೋಮತಿ ನದಿ ತೀರ
PC:YOUTUBE
ನಿಮಿ ಎಂದರೆ ಚಕ್ರ, ಅರಣ್ಯ ಎಂದರೆ ಅರಣ್ಯ. ಒಂದು ದೊಡ್ಡ ಚಕ್ರ ಅರಣ್ಯ ಪ್ರದೇಶದಲ್ಲಿ ಬಂದು ಮುರಿದುಹೋದ ಪ್ರದೇಶವಾದ್ದರಿಂದ ಇದನ್ನು ನೈಮಿಶಾರಣ್ಯವಾಯಿತು. ನೈಮಿಶಾರಣ್ಯ ಉತ್ತರ ಪ್ರದೇಶದಲ್ಲಿನ ಸೀತಾಪುರ ಜಿಲ್ಲೆಯಲ್ಲಿ ಲಕ್ಕೊಯಿOದ 94 ಕಿ.ಮೀ ದೂರದಲ್ಲಿ ಗೋಮತಿ ನದಿ ಇದೆ.

2.ಕಲಿಯುಗ ಪ್ರಭಾವ ಇಲ್ಲದ ಪ್ರದೇಶ
PC:YOUTUBE
ಈ ಪ್ರದೇಶಕ್ಕೆ ಈ ಹೆಸರು ಬರುವುದಕ್ಕೆ ಅನೇಕ ಕಥೆಗಳಿವೆ. ಅವುಗಳಲ್ಲಿ ಹೆಚ್ಚು ಪ್ರಚಾರದಲ್ಲಿರುವ ಕಥೆ ಎಂದರೆ, ಪುರಾಣದ ಪ್ರಕಾರ ಮಹಾಭಾರತ ಯುದ್ಧ ಮುಗಿದ ನಂತರ, ಕಲಿಯುಗ ಪ್ರಾರಂಭವಾಗುವ ಸಮಯದಲ್ಲಿ ಸಾನಕಾದಿ ಮಹಾಮುನಿಗಳು ಪವಿತ್ರವಾದ ಯಾಗವನ್ನು ನಿರ್ವಹಿಸಲು ಸ್ಥಳವನ್ನು ತೋರಿಸು ಎಂದು ಪ್ರಾರ್ಥನೆ ಮಾಡಿದರು.

3.ಬ್ರಹ್ಮ ದೇವನು
PC:YOUTUBE
ಇದರಿಂದಾಗಿ ಬ್ರಹ್ಮದೇವನು ಒಂದು ದೊಡ್ಡದಾದ ಚಕ್ರವನ್ನು ಸೃಷ್ಟಿ ಮಾಡಿ ಆ ಚಕ್ರದ ಹಿಂದೆ ಹೋಗಿ ಎಂದು ಸೂಚಿಸುತ್ತಾನೆ. ಆ ಚಕ್ರ ಯಾವ ಪ್ರದೇಶದಲ್ಲಿ ಮುರಿಯುತ್ತದೆಯೋ ಆ ಪ್ರದೇಶವೇ ಅತ್ಯಂತ ಪವಿತ್ರವಾದುದು ಎಂದೂ, ಯಾಗವನ್ನು ಮಾಡುವುದಕ್ಕೆ ಆರ್ಹತೆಯನ್ನು ಹೊಂದಿರುವ ಪ್ರದೇಶ ಎಂದು ಹೇಳುತ್ತಾನೆ ಬ್ರಹ್ಮ ದೇವ.

4.ಲಿಂಗಾಕೃತಿಯಲ್ಲಿ
PC:YOUTUBE
ಇದರಿಂದಾಗಿ ಚಕ್ರವು ಪ್ರಸ್ತುತ ನೈಮಿಶರಣ್ಯವಿರುವ ಪ್ರದೇಶಕ್ಕೆ ಬಂದ ಕೂಡಲೆ ದೊಡ್ಡ ಶಬ್ಧವನ್ನು ಮಾಡಿ ಒಡೆಯಿತಂತೆ. ಅಷ್ಟೇ ಅಲ್ಲದೇ, ಆ ಚಕ್ರವು ಮುರಿದು ಹೋದ ಸ್ಥಳದಿಂದ ಪವಿತ್ರವಾದ ಜಲವು ಉದ್ಭವಿಸಿ ಲಿಂಗಾಕಾರದಲ್ಲಿ ಉಕ್ಕಿ ಪ್ರವಹಿಸಿತು.

5.ಲಲಿತಾ ದೇವಿ ದೇವಾಲಯ
PC:YOUTUBE
ಇದರಿಂದಾಗಿ ಮುನಿಗಳು ಆ ಆದಿ ಪರಾಶಕ್ತಿ ಪೂಜಿಸಿದ್ದರಿಂದ ಆ ಜಲವನ್ನು ನಿಲ್ಲಿಸುತ್ತಿತ್ತು. ಕಾಲ ಕ್ರಮೇಣದಲ್ಲಿ ಆ ಪವಿತ್ರ ಪ್ರದೇಶವಾದ ಸ್ಥಳವು ಶಕ್ತಿಪೀಠವಾಗಿ ಮಾರ್ಪಾಟಾಯಿತು. ಅಲ್ಲಿ ಲಲಿತಾ ದೇವಿ ದೇವಾಲಯವಾಗಿ ಹೆಸರುವಾಸಿಯಾಯಿತು. ಆ ಚಕ್ರವು ನಿಂತು ಮುರಿದುಹೋದ ಪ್ರದೇಶವಾದ್ದರಿಂದ ಚಕ್ರತೀರ್ಥವಾಯಿತು.

6.ಮಹಾಭಾರತ ರಚಿಸಿದ್ದು ಕೂಡ ಇಲ್ಲೇ
PC:YOUTUBE
ನೈಮಿಶಾರಣ್ಯದಲ್ಲಿಯೇ ವೇದವ್ಯಾಸನು ಮಹಾಭಾರತವನ್ನು ರಚಿಸಿದನು ಎಂದು ಪುರಾಣಗಳು ಹೇಳುತ್ತವೆ. ಮಹಾಭಾರತದ ಜೊತೆಗೆ ರಾಮಾಯಣ, ವಾಯುಪುರಾಣ, ವರಹಪುರಾಣದಲ್ಲಿಯೂ ಕೂಡ ನೈಮಿಶಾರಣ್ಯಯ ಪ್ರಸ್ತಾವನೆ ಇದೆ. ನೈಮಿಶಾರಣ್ಯ ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಒಂದು.

7.ವನರೂಪದಲ್ಲಿರುವ ಸ್ವಾಮಿ
PC:YOUTUBE
ನೈಮಿಶನಾಥ ದೇವಾಲಯದಲ್ಲಿ ಸ್ವಾಮಿಯು ನೆಲೆಸಿದ್ದಾನೆ. ವೆಂಕಟೇಶ್ವನ ವಿಗ್ರಹವನ್ನು ಹೋಲುವ ಕಪ್ಪು ಬಣ್ಣದ ವಿಗ್ರಹವನ್ನು ದರ್ಶಿಸಲು ಅತ್ಯಂತ ಮನೋಹರವಾಗಿರುತ್ತದೆ. ಶ್ರೀರಾಮನು ಅಶ್ವಮೇಧ ಯಾಗ ಮಾಡಿದ ಕ್ಷೇತ್ರ ಕೂಡ ಇದೆ ಎಂದು ಹೇಳುತ್ತಾರೆ.

8.ಶ್ರೀರಾಮ
PC:YOUTUBE
ಅಷ್ಟೇ ಅಲ್ಲದೇ, ಶ್ರೀ ರಾಮ ಲವ-ಕುಶರನ್ನು ಭೇಟಿ ಮಾಡಿದ ಪ್ರದೇಶ ಕೂಡ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಸೀತಾ ದೇವಿಯ ಹೆಸರಿನಿಂದ ಶ್ರೀರಾಮನು ಬ್ರಾಹ್ಮಣರಿಗೆ ದಾನ ಮಾಡಿದ ಗ್ರಾಮವೇ ಇಂದಿನ ಸೀತಾಪುರ ಎಂದು ಹೇಳುತ್ತಾರೆ. ಶುಕ್ರಚಾರ್ಯರ ಮೂಲಕ ಈ ಕ್ಷೇತ್ರದ ಪವಿತ್ರತೆಯನ್ನು ತಿಳಿದುಕೊಂಡ ಪ್ರಹ್ಲಾದನು, ಇಲ್ಲಿನ ತೀರ್ಥಗಳನ್ನು ದರ್ಶಿಸಿದನಂತೆ.

9.ಮಹಾಭಾರತ
PC:YOUTUBE
ಇಲ್ಲಿ ಶೌನಕಾದಿ ಮಹರ್ಷಿಗಳು ಸೂತ ಮಹಾಮುನಿ ಮಹಾಭಾರತ ಕಥೆಯನ್ನು ಮೊದಲ ಬಾರಿಗೆ ಇಲ್ಲಿಯೇ ಹೇಳಿದನಂತೆ. ಕುರುಕ್ಷೇತ್ರ ಸಂಗ್ರಾಮಕ್ಕೆ ಸಿದ್ಧವಾಗುತ್ತಿದ್ದ ಸಮಯದಲ್ಲಿ ಬಲರಾಮನು ತಾನು ತಟಸ್ಥನಾಗಿರಬೇಕು ಎಂದು ನಿರ್ಣಯಿಸಿಕೊಂಡಿರುತ್ತಾನೆ.

10.ತೀರ್ಥಯಾತ್ರೆ
PC:YOUTUBE
ಇದಕ್ಕಾಗಿ ತೀರ್ಥಯಾತ್ರೆಗೆ ಹೊರಟನು. ಈ ಕ್ರಮದಲ್ಲಿಯೇ ನೈಮಿಶಾರಣ್ಯವನ್ನು ಸೇರಿಕೊಂಡನು. ಆ ಸಮುದಲ್ಲಿ ಮುನಿಗಳೆಲ್ಲಾರು ಆಧ್ಯಾತ್ಮಿಕ ವಿಷಯಗಳ ಮೇಲೆ ಸುಧೀರ್ಘವಾದ ಚರ್ಚೆಗಳಲ್ಲಿ ಮುಳುಗಿ ಹೋದರು. ಬಲರಾಮನನ್ನು ಕಂಡು ಎಲ್ಲರು ಎದ್ದು ನಮಸ್ಕರಿಸಿದರು.

11.ಶಿರಸ್ಸನ್ನು ಖಂಡಿಸುತ್ತಾನೆ
PC:YOUTUBE
ಆದರೆ ಸಭೆಗೆ ಆಚಾರ್ಯಪೀಠದಲ್ಲಿ ಇದ್ದ ರೋಮಹರ್ಷಣನು ಸಭೆಯ ಮರ್ಯಾದೆಯನ್ನು ಅನುಸರಿಸುವುದಿಲ್ಲ. ಇದನ್ನು ಬಲರಾಮನು ಅವಿಧೇಯವಾಗಿ ಭಾವಿಸಿ ಆತನ ಶಿರಸ್ಸನ್ನು ಖಂಡಿಸುತ್ತಾನೆ. ಇದರಿಂದಾಗಿ ಅಲ್ಲಿರುವ ಮುನಿಗಳು ಬಲರಾಮನನ್ನು ತೀವ್ರವಾಗಿ ನಿಂದಿಸುತ್ತಾರೆ.

12.ಮಾರ್ಗವನ್ನು ಸೂಚಿಸುತ್ತಾರೆ
PC:YOUTUBE
ತನ್ನ ತಪ್ಪನ್ನು ತಿಳಿದುಕೊಂಡ ಬಲರಾಮನು ಪ್ರಾಯಶ್ಚಿತ್ತವನ್ನು ಸೂಚಿಸು ಎಂದು ಬೇಡಿಕೊಳ್ಳುತ್ತಾನೆ. ಸ್ಥಳೀಯವಾಗಿರುವ ಒಬ್ಬ ರಾಕ್ಷಸನನ್ನು ಸಂಹಾರ ಮಾಡಿದರೆ ಬ್ರಹ್ಮಹತ್ಯೆಪಾತಕದಿಂದ ವಿಮುಕ್ತಿಯನ್ನು ಹೊಂದಬಹುದು ಎಂದು ಹೇಳುತ್ತಾರೆ.

13.ಚಕ್ರತೀರ್ಥ
PC:YOUTUBE
ಇದರಿಂದಾಗಿ ಅತ್ಯಂತ ಬಲವಂತನಾದ ಬಲರಾಮನು ತನ್ನ ಆಯುಧದಿಂದ ಆ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ತದನಂತರ ಮುನಿಗಳ ಸೂಚನೆಯ ಮೇರೆಗೆ ಇಲ್ಲಿನ ಚಕ್ರತೀರ್ಥದಲ್ಲಿ ಸ್ನಾನವನ್ನು ಮಾಡಿ ತನ್ನ ಬ್ರಹ್ಮ ಹತ್ಯೆಪಾತಕವನ್ನು ಕಳೆದುಕೊಳ್ಳುತ್ತಾನೆ. ಅದ್ದರಿಂದಲೇ ಈ ಚಕ್ರತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ಎಂಥಹ ಪಾಪಗಳೂ ಕಳೆದು ಹೋಗುತ್ತದೆ ಎಂದು ನಂಬಲಾಗಿದೆ.

14.ಅನೇಕ ದೇವಾಲಯ
PC:YOUTUBE
ಇಲ್ಲಿ ಅನೇಕ ಪವಿತ್ರವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಒಂದೊಂದು ಚರಿತ್ರೆ ಇದೆ. ಅದರಲ್ಲಿ ಭೂತೇಶ್ವರ ದೇವಾಲಯ, ವ್ಯಾಸಗದ್ದಿ ದೇವಾಲಯ, ಲಲಿತಾದೇವಿ ದೇವಾಲಯ, ಹನುಮಾನ್‍ರವರ ಪುರಾಣ ಪುರುಷ ದೇವಾಲಯಗಳು ಮುಖ್ಯವಾದುವು.

15.ದದಿಚಿ ಬೆಟ್ಟ
PC:YOUTUBE
ಇಲ್ಲಿ ಸಮೀಪದಲ್ಲಿಯೇ ಮಿಶ್ರಿಕ್ ಎಂಬ ಪ್ರದೇಶದಲ್ಲಿ ದದಿಚಿ ಎಂಬ ಬೆಟ್ಟವಿದೆ. ದದಿಚಿ ಎಂಬ ಮಹರ್ಷಿಯು ಇಂದ್ರನ ಕೋರಿಕೆಯ ಮೇರೆಗೆ ಆತ್ಮಾಹುತಿ ಮಾಡಿಕೊಂಡು ತನ್ನ ಬೆನ್ನಿನ ಮೂಳೆಯನ್ನು ವಜ್ರಾಯುಧವಾಗಿ ಮಾರ್ಪಾಟು ಮಾಡಿಕೊಂಡು ನೀಡುತ್ತಾನೆ. ಆ ಘಟನೆ ನಡೆದ ಪ್ರದೇಶ ಇದೆ. ಈ ಬೆಟ್ಟವನ್ನು ದರ್ಶನ ಮಾಡಿದರೆ ಕೋರಿಕೆಗಳು ನೆರವೇರುತ್ತವೆ ಎಂದು ನಂಬಲಾಗಿದೆ.

16.ಹೇಗೆ ಸಾಗಬೇಕು?
PC:YOUTUBE
ಲಕ್ಕೊ-ಬಾಲಾಮು ಮಧ್ಯೆದ ಶಾಂಡಿಲಾ ಸ್ಟೇಷನ್‍ನಿಂದ 35 ಕಿ.ಮೀ ದೂರದಲ್ಲಿ ನೈಮಿಶಾರಣ್ಯ ರೈಲ್ವೆ ಸ್ಟೇಷನ್ ಇದೆ. ಇಲ್ಲಿಗೆ ವಿವಿಧ ನಗರಗಳಿಂದ ನೇರವಾಗಿ ಬಸ್ಸು, ರೈಲು ಸೌಕರ್ಯಗಳು ಇವೆ. ನೈಮಿಶಾರಣ್ಯ ಸ್ಟೇಷನ್‍ನಿಂದ 3 ಕಿ.ಮೀ ಪರಿಧಿಯಲ್ಲಿ ಅನೇಕ ಸಂದರ್ಶನೀಯ ಸ್ಥಳಗಳಿವೆ.