Search
  • Follow NativePlanet
Share
» »ನಾಗರಹೊಳೆ ನ್ಯಾಷನಲ್ ಪಾರ್ಕ್‍ನಲ್ಲಿನ ವನ್ಯಜೀವಿಗಳ ಸೌಂದರ್ಯ

ನಾಗರಹೊಳೆ ನ್ಯಾಷನಲ್ ಪಾರ್ಕ್‍ನಲ್ಲಿನ ವನ್ಯಜೀವಿಗಳ ಸೌಂದರ್ಯ

ನಾಗರಹೊಳೆ ನ್ಯಾಷನಲ್ ಪಾರ್ಕ್ ಅಥವಾ ನಾಗರ ಹೊಳೆ ಉದ್ಯಾನವನ ದಕ್ಷಿಣ ಭಾರತದ ಅತ್ಯುತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿನ ವನ್ಯಜೀವಿಗಳಿಗೆ ಉತ್ತಮವಾದ ಸ್ಥಳ ಇದಾಗಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎ

ನಾಗರಹೊಳೆ ನ್ಯಾಷನಲ್ ಪಾರ್ಕ್ ಅಥವಾ ನಾಗರ ಹೊಳೆ ಉದ್ಯಾನವನ ದಕ್ಷಿಣ ಭಾರತದ ಅತ್ಯುತ್ತಮವಾದ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿನ ವನ್ಯಜೀವಿಗಳಿಗೆ ಉತ್ತಮವಾದ ಸ್ಥಳ ಇದಾಗಿದೆ. ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಸಹ ಕರೆಯುತ್ತಾರೆ. ಈ ಅಭಯಾರಣ್ಯವು ಮೈಸೂರು ಹಾಗೂ ಕೊಡಗು ಜಿಲ್ಲೆಗಳಾದ್ಯಂತ ವ್ಯಾಪಿಸಿದೆ.

ಮೂಲತಃ ಈ ಅರಣ್ಯ ಪ್ರದೇಶವು ಮೈಸೂರು ಮಹಾರಾಜರ ಖಾಸಗಿ ಬೇಟೆಯಾಡುವ ಸ್ಥಳವಾಗಿತ್ತು. ನಾಗರಹೊಳೆ ಅರಣ್ಯ ಪ್ರದೇಶವು 1955 ರಲ್ಲಿ 258 ಚ.ಕಿ.ಮೀ ಪ್ರದೇಶವನ್ನು ಒಳಗೊಂಡಿತ್ತು. ಆದರೆ ಈಗ 643 ಚ.ಕಿ.ಮೀ ಪ್ರದೇಶವನ್ನು ವಿಸ್ತರಿಸಿದೆ. ಇಲ್ಲಿ ಹಲವಾರು ವನ್ಯಜೀವಿಗಳನ್ನು ನೀವು ಕಾಣಬಹುದಾಗಿದೆ. ವನ್ಯಜೀವಿಗಳೇ ಅಲ್ಲದೇ ದಟ್ಟವಾದ ಕಾಡು, ಹೊಳೆಗಳು, ಕಣಿವೆಗಳು ಮತ್ತು ಜಲಪಾತವನ್ನು ನೀವು ಇಲ್ಲಿ ಆನಂದಿಸಬಹುದಾಗಿದೆ.

ಪ್ರಸ್ತುತ ಲೇಖನದ ಮೂಲಕ ನಾಗರ ಹೊಳೆಯಲ್ಲಿ ನೀವು ನೋಡಲೇಬೇಕಾದ 2 ಪ್ರಸಿದ್ಧವಾದ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ.

ವೇನಾಡು ವೈಲ್ಡ್ ಲೈಫ್

ವೇನಾಡು ವೈಲ್ಡ್ ಲೈಫ್

ಈ ಅಭಯಾರಣ್ಯವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಕೇವಲ 12 ಕಿ,ಮೀ ದೂರದಲ್ಲಿದೆ. ಇದೊಂದು ಆನೆಯ ರಿಸರ್ವ್. ಇದು ಕೇರಳದ ವನ್ಯಜೀವಿಗಳ ಪ್ರಮುಖವಾದ ಸ್ಥಳಗಳಲ್ಲಿ ಒಂದಾಗಿದೆ. ಜೀಪ್ ಸಫಾರಿಯ ಭಾಗವಾಗಿ ಮಾತ್ರ ಇಲ್ಲಿ ಪ್ರವೇಶ ನೀಡಲಾಗುತ್ತದೆ. ಇಲ್ಲಿನ ಪ್ರವಾಸಿಗರಿಗೆ ತಮ್ಮದೇ ವಾಹನಗಳನ್ನು 20 ನಿಮಿಷಗಳ ಕಾಲ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡುತ್ತಾರೆ.


PC:Neil Turner

ವೇನಾಡು ವೈಲ್ಡ್ ಲೈಫ್

ವೇನಾಡು ವೈಲ್ಡ್ ಲೈಫ್

ಈ ಅಭಯಾರಣ್ಯವನ್ನು 2 ಪ್ರತ್ಯೇಕವಾದ ಭಾಗಗಳಾಗಿ ವಿಭಾಗಿಸಲಾಗಿದೆ. ಇಲ್ಲಿ ಸರಿಸುಮಾರು 900 ಆನೆಗಳು ಇವೆ. ವನ್ಯಜೀವಿಗಳಾದ ಕಾಡು ನಾಯಿ, ಹುಲಿ, ಚಿರತೆ, ಕೋತಿಗಳು, ಕರಡಿಗಳು, ಹಾವುಗಳು, ಹಲವಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಪ್ರವೇಶ ನೀಡಲಾಗುತ್ತದೆ.


PC:Chester Zoo

ವೇನಾಡು ವೈಲ್ಡ್ ಲೈಫ್

ವೇನಾಡು ವೈಲ್ಡ್ ಲೈಫ್

ಈ ಅಭಯಾರಣ್ಯಕ್ಕೆ ತೆರಳಲು ಮಾರ್ಚ್ ತಿಂಗಳಲ್ಲಿ ಭೇಟಿ ನೀಡುವುದು ಉತ್ತಮವಾದ ಸಮಯವಾಗಿದೆ. ಮಳೆಗಾಲದ ಸಮಯದಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಈ ಅಭಯಾರಣ್ಯವನ್ನು ಮುಚ್ಚಲಾಗಿರುತ್ತದೆ. ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ.

PC:jgphaneuf

ಇರುಪ್ಪು ಜಲಪಾತ

ಇರುಪ್ಪು ಜಲಪಾತ

ಈ ಇರುಪ್ಪು ಜಲಪಾತವು ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇದು ಕೇರಳದ ವಯನಾಡ್ ಜಿಲ್ಲೆಯ ಗಡಿಭಾಗದಲ್ಲಿದೆ. ಕರ್ನಾಟಕ ರಾಜ್ಯದಲ್ಲಿನ ಕೊಡಗು ಜಿಲ್ಲೆಯ ಶ್ರೀಮಂಗಲ ಮತ್ತು ಕುಟ್ಟದ ನಡುವೆ ಇರುವ ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ಇರುಪ್ಪಿ ಜಲಪಾತವಿದೆ. ಈ ಜಲಪಾತವನ್ನು ಕಾಣಬೇಕಾದರೆ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


PC:Rameshng

ಇರುಪ್ಪು ಜಲಪಾತ

ಇರುಪ್ಪು ಜಲಪಾತ

ಇದು ಕರ್ನಾಟಕದ ಅತ್ಯುತ್ತಮವಾದ ಹಾಗು ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತದ ಸೌಂದರ್ಯವನ್ನು ಕಾಣಲು ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಈ ಇರುಪ್ಪು ಜಲಪಾತವನ್ನು ಲಕ್ಷ್ಮಣ ತೀರ್ಥ ಎಂದೂ ಸಹ ಕರೆಯಲಾಗುತ್ತದೆ. ಈ ಜಲಪಾತಕ್ಕೆ ಒಂದು ಸುಂದರವಾದ ದಂತಕಥೆ ಇದೆ.

ಇರುಪ್ಪು ಜಲಪಾತ

ಇರುಪ್ಪು ಜಲಪಾತ

ಅದೆನೆಂದರೆ ಸಹೋದರರಾದ ರಾಮ ಹಾಗೂ ಲಕ್ಷ್ಮಣರು ಸೀತಾದೇವಿಯನ್ನು ಹುಡುಕಿಕೊಂಡು ಬ್ರಹ್ಮಗಿರಿಗೆ ಸಾಗುತ್ತಿದ್ದರು. ಆ ಸಮಯದಲ್ಲಿ ದಾಣಿವಾಗಿದ್ದ ರಾಮನು ತನ್ನ ಸಹೋದರನಿಗೆ ನೀರನ್ನು ತೆಗೆದುಕೊಂಡು ಬರಲು ತಿಳಿಸಿದನು.

ಆ ಕ್ಷಣವೇ ಲಕ್ಷ್ಮಣ ತನ್ನ ಬಾಣಗಳಿಂದ ಬೆಟ್ಟಗಳ ಮಧ್ಯೆ ಹುಡೆದು ಲಕ್ಷ್ಮಣ ತೀರ್ಥವನ್ನು ರಾಮನಿಗೆ ತಂದು ಕೊಟ್ಟನಂತೆ. 170 ಅಡಿ ಎತ್ತರದಿಂದ ಬೀಳುವ ಈ ಜಲಪಾತವು ಪಶ್ಚಿಮ ಘಟ್ಟದ ದಟ್ಟವಾದ ಕಾಡಿನ ನಡುವೆ ನೆಲೆಗೊಂಡಿದೆ.


PC:Balaji 40055

ಪ್ರಯಾಣ

ಪ್ರಯಾಣ

ಈ ಸುಂದರವಾದ ನಾಗರ ಹೊಳೆ ಪ್ರದೇಶಕ್ಕೆ ಮೈಸೂರಿನಿಂದ 88 ಕಿ.ಮೀ, ಮಡಿಕೇರಿಯಿಂದ 88 ಕಿ,ಮೀ ಮತ್ತು ಬೆಂಗಳೂರಿನಿಂದ 218 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳಿದಾಗ ಈ ತಾಣಕ್ಕೂ ಕೂಡ ಒಮ್ಮೆ ಭೇಟಿ ಕೊಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X