Search
  • Follow NativePlanet
Share
» »ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ?

ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ?

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಗರದಲ್ಲಿರುವ ನಾಗರಾಜ ಮಂದಿರವು ಹಾವುಗಳ ರಾಜ ವಾಸುಕಿಗೆ ಸಮರ್ಪಿತವಾದ ಮಂದಿರವಾಗಿದೆ. ಈ ಮಂದಿರದ ಮುಖ್ಯ ದೇವತೆಯು ಐದು ಮುಖದ ನಾಗರಾಜ. ಈ ಮಂದಿರವು ರಾಜ್ಯದ ಪ್ರಸಿದ್ಧ ಹಾಗೂ ಅದ್ಭುತ ಮಂದಿರಗಳಲ್ಲಿ ಒಂದಾಗಿದೆ. ಪ್ರತಿದಿನ ಇಲ್ಲಿ ನೂರಾರು ಭಕ್ತರು ಆಗಮಿಸುತ್ತಾರೆ. ವಿಶೇಷ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಹಾವಿನ ನಾಲಗೆ ಇಬ್ಬಾಗವಾಗಿರುವ ರಹಸ್ಯ

ಹಾವಿನ ನಾಲಗೆ ಇಬ್ಬಾಗವಾಗಿರುವ ರಹಸ್ಯ

ಹಿಂದೂ ಧರ್ಮದ ಪ್ರಕಾರ ನಾಗನನ್ನು ಕಶ್ಯಪ ಹಾಗು ಕಂದ್ರೂ ಸಂತಾನ ಎನ್ನಲಾಗುತ್ತದೆ. ಹಿಂದೂ ಧರ್ಮದ ಪ್ರಮುಖ ನಾಗ ದೇವಿ, ದೇವತೆ ಮನಸ, ಶೇಷನಾಗ ಹಾಗು ವಾಸುಕಿ. ಕೇರಳದ ನಾಯರ್ ವಂಶದ ಉತ್ಪತ್ತಿಯು ನಾಗ ರಾಜವಂಶದಿಂದಲೇ ಆಗಿದ್ದು . ಪೌರಾಣಿಕ ಕಥೆಯ ಪ್ರಕಾರ ನಾಗ ತನ್ನ ಜೊತೆಗೆ ಅಮೃತವನ್ನು ಹಿಡಿದುಕೊಂಡು ಹೋಗುತ್ತಾನೆ. ಗರುಡ ಒಮ್ಮೆ ನಾಗನಿಂದ ಅಮೃತವನ್ನು ತೆಗೆದುಕೊಂಡು ಬಂದಿದ್ದ. ಆ ಅಮೃತವನ್ನು ಒಂದು ಪಾತ್ರೆಯಲ್ಲಿ ಹಾಕಿ ನೆಲದಮೇಲೆ ಇಟ್ಟಿದ್ದ ಆದರೆ ಆ ಅಮೃತವನ್ನು ಇಂದ್ರ ತೆಗೆದುಕೊಂಡು ಹೋಗಿದ್ದ. ಆದರೆ ಆದರೆ ಅಮೃತದ ಕೆಲವು ಬಿಂದು ನೆಲದ ಮೇಲೆ ಬಿದ್ದಿತ್ತು. ಆ ಅಮೃತದ ಹನಿಯನ್ನು ಹಾವು ನೆಕ್ಕಿತ್ತು. ಅಂದಿನಿಂದ ಹಾವಿನ ನಾಲಗೆ ಎರಡು ಭಾಗಗಳಾಗಿ ತುಂಡಾಗಿದೆ ಎನ್ನಲಾಗುತ್ತದೆ.

ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ಅಷ್ಟನಾಗ ಯಾರು ?

ಅಷ್ಟನಾಗ ಯಾರು ?

PC:Raja Ravi Varma

ನೀವು ಅಷ್ಟನಾಗನ ಬಗ್ಗೆ ಕೇಳಿರಬಹುದು. ಯಾರನ್ನು ಅಷ್ಟನಾಗ ಎನ್ನಲಾಗುತ್ತದೆ ಎನ್ನುವುದು ನಿಮಗೇನಾದರೂ ಗೊತ್ತಾ? ಎಂಟು ಸಮ್ಮಾನಿತ ನಾಗಗಳ ಸಮೂಹಿಕ ರೂಪವನ್ನು ಅಷ್ಟನಾಗ ಎನ್ನಲಾಗುತ್ತದೆ. ಅವುಗಳಲ್ಲಿ ಶೇಷನಾಗ, ವಾಸುಕಿ, ತಕ್ಷಕ್‌ನಾಗ, ಕಾರ್ಕೋಟಕ, ಶಂಖಪಾಲ, ಗುಲಿಕ, ಪದ್‌ನಾಗ ಹಾಗು ಮಹಾಪಂಪಾ ಸೇರಿಕೊಂಡಿದೆ.
ನಾಗಗಳ ಬಣ್ಣಗಳ ಬಗ್ಗೆ ಹೇಳುವುದಾದರೆ ವಾಸುಕಿಯ ಬಣ್ಣ ಮುತ್ತಿನಂತ ಬಿಳಿ, ತಕ್ಷಕ್‌ ಕೆಂಪು, ಕಾರ್ಕೋಟ ಮೂರು ಬಿಳಿಯ ಗೆರೆಯೊಂದಿಗೆ ಕಪ್ಪು ಬಣ್ಣ, ಪದ್‌ ಬಿಳಿ ಹಾಗು ಗುಲಾಬಿ ಬಣ್ಣ, ಮಹಾಪಂಪ್ ಟ್ರಯಿಡೆಂಟ್ ಮಾರ್ಕ್ ಜೊತೆ ಬಿಳಿ ಬಣ್ಣ, ಶಂಖಪಲ್ ಬಿಳಿ ಗರೆಯೊಂದಿಗೆ ಹಳದಿ ಹಾಗು ಗುಲಿಕ್ ಕ್ರಿಸೆಂಟ್ ಮಾರ್ಕ್‌ನೊಂದಿಗೆ ಕೆಂಪು ಬಣ್ಣ ದಲ್ಲಿದೆ.

ಸಂಕ್ಷಿಪ್ತ ಇತಿಹಾಸ

ಸಂಕ್ಷಿಪ್ತ ಇತಿಹಾಸ

PC- Renebeto

ಇದೊಂದು ಪ್ರಾಚೀನ ಮಂದಿರವಾಗಿದೆ. ಆದರೆ ಇದು ಯಾವ ಕಾಲಕ್ಕೆ ಸಂಬಂಧಿಸಿದ್ದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಮಂದಿರಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಇತಿಹಾಸಗಾರರಿಗೆ ಸಿಕ್ಕಿಲ್ಲ. ಆದರೆ ಮಹರ್ಷಿ ವಾಲ್ಮಿಕಿಯ ರಾಮಾಯಣದಲ್ಲಿ ಕನ್ಯಾಕುಮಾರಿಯ ಮಹೇಂದ್ರಗಿರಿ ಪರ್ವತವನ್ನು ನಾಗನ ನಿವಾಸದ ರೂಪದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಈ ಮಂದಿರವು ಪೌರಾಣಿಕ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎನ್ನುವುದು ತಿಳಿಯುತ್ತದೆ.

ಮಂದಿರಕ್ಕೆ ಸಂಬಂಧಿಸಿದ ಪರಂಪರೆ

ಮಂದಿರಕ್ಕೆ ಸಂಬಂಧಿಸಿದ ಪರಂಪರೆ

ಈ ಮಂದಿರಕ್ಕೆ ಸಂಬಂಧಿಸಿದ ಒಂದು ಕಥೆಯೂ ಇದೆ. ಈ ಹಳ್ಳಿಯ ಒಬ್ಬಳು ಹುಡುಗಿ ಆ ಪ್ರದೇಶಕ್ಕೆ ಹುಲ್ಲು ಕೊಯ್ಯಲು ಹೋಗಿದ್ದಳು ಅಚಾನಕ್ಕಾಗಿ ಆಕೆಯ ಕುಡುಗೋಲಿನಿಂದ ರಕ್ತ ಸುರಿಯಲಾರಂಭಿಸುತ್ತದೆ. ಅದನ್ನು ಕಂಡ ಹುಡುಗಿ ಮರಳಿ ತನ್ನ ಊರಿಗೆ ಹೋಗಿ ನಡೆದ ಘಟನೆಯನ್ನು ತಿಳಿಸುತ್ತಾಳೆ. ಆಗ ಊರಿನ ಜನರು ಆಕೆಯೊಂದಿಗೆ ಹೋಗಿ ಆ ಸ್ಥಳವನ್ನು ಪರೀಕ್ಷಿಸುತ್ತಾರೆ. ಆಗ ಆಕೆಯ ಕಡುಗೋಲು ಐದು ತಲೆಯ ಹಾವಿಗೆ ತಗುಲಿದೆ ಹಾಗಾಗಿ ಅದರಿಂದ ರಕ್ತ ಸುರಿದಿದೆ ಎನ್ನುವುದು ತಿಳಿಯುತ್ತದೆ. ಆ ನಂತರ ಊರಿನವರೆಲ್ಲಾ ಸೇರಿ ಅಲ್ಲಿ ಹಾವಿಗೆ ಮಂದಿರವನ್ನು ನಿರ್ಮಿಸುತ್ತಾರೆ. ಆ ನಂತರ ದೂರದೂರದ ಊರಿನಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು

ಹೋಗುವುದು ಹೇಗೆ?

ಹೋಗುವುದು ಹೇಗೆ?

ನಾಗರಾಜ ಮಂದಿರವು ಕನ್ಯಾಕುಮಾರಿಯ ಜಿಲ್ಲೆಯ ನಾಗರಕೋಯಿಲ್ ನಗರದಲ್ಲಿದೆ. ಇಲ್ಲಿಗೆ ನೀವು ವಿಮಾನದ ಮೂಲಕ ಹೀಗುವುದಾದರೆ ತಿರುವನಂತಪುರ ಏರ್‌ಪೋರ್ಟ್ ಮೂಲಕ ಹೋಗಬೇಕು. ರೈಲಿನ ಮೂಲಕ ಹೋಗುವುದಾದರೆ ನಾಗರಕೊಯಿಲ್ ರೈಲು ನಿಲ್ದಾಣದ ಮೂಲಕ ತಲುಪಬಹುದು ಹಾಗೂ ರಾಜ್ಯದ ದೊಡ್ಡ ನಗರಗಳಿಂದ ನಾಗರಕೊಯಿಲ್‌ಗೆ ಅನೇಕ ಬಸ್‌ ವ್ಯವಸ್ಥೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X