• Follow NativePlanet
Share
» »ಮಹಾಭಾರತ ನಡೆದ ಸ್ಥಳಗಳು ಎಲ್ಲಿವೆ? ಅವು ಯಾವುವು ಎಂದು ನಿಮಗೆ ಗೊತ್ತ?

ಮಹಾಭಾರತ ನಡೆದ ಸ್ಥಳಗಳು ಎಲ್ಲಿವೆ? ಅವು ಯಾವುವು ಎಂದು ನಿಮಗೆ ಗೊತ್ತ?

Written By:

ನಮ್ಮ ಮಹಾಭಾರತದ ಕುರುಕ್ಷೇತ್ರವು ಎಂದಿಗೂ ಅಜರಾಮರವಾಗಿ ಉಳಿಯುವಂತಹ ಘಟನೆಯಾಗಿದೆ. ಪಾಂಡವರ, ಕೌರವ ಮಧ್ಯೆ ಇದ್ದ ಭಿನ್ನಭಿಫ್ರಾಯಗಳು, ಯುದ್ಧ, ದ್ವೇಷಗಳು, ಬಾಂಧವ್ಯಗಳು, ಕುತಂತ್ರಗಳು, ವನವಾಸ, ಅವಮಾನಗಳನ್ನು ನಾವು ಮಾಹಾಭಾರತದಲ್ಲಿ ಕಾಣಬಹುದಾಗಿದೆ. ಯುಗವನ್ನೇ ತನ್ನ ಕೈಯಲ್ಲಿ ಹಿಡಿದ್ದಿದ್ದ ಯುಗ ಪುರುಷ ಶ್ರೀ ಕೃಷ್ಣನನ್ನು ನಾವು ಮಾಹಾ ಭಾರತದಲ್ಲಿ ಮರೆಯುವಂತೆ ಇಲ್ಲ.

ಹಿಂದೂ ಧರ್ಮಿಯರಿಗೆ ಒಳ್ಳೆಯ ದಾರಿ ತೋರಿದ ಭಗವತ್ ಗೀತೆ, ಪ್ರಪಂಚ ಎಂದೂ ಯೋಚಿಸಿರದ ಮಾಹಾ ಸಂಗ್ರಾಮವೆಲ್ಲವನ್ನು ನಾವು ಈ ಮಹಾಭಾರತದಲ್ಲಿ ಕಾಣಬಹುದು. ಮಹಾ ಭಾರತ ಯುದ್ಧ ನಡೆದಿದ್ದು, ನಮ್ಮ ಭಾರತ ದೇಶದಲ್ಲಿಯೇ ಹಾಗಾದರೆ ಕೌರವರ ಮತ್ತು ಪಾಂಡವರು ಸಾಮ್ರಾಜ್ಯ ಎಲ್ಲಿತ್ತು? ಪಾಂಡವರು ವನವಾಸಕ್ಕೆ ಎಲ್ಲಿ ಹೋಗಿದ್ದರು?

ಮಹಾ ಭಾರತ ಯುದ್ಧ ನಡೆದಿದ್ದಾದರೂ ಎಲ್ಲಿ ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ಆ ಪುಣ್ಯ ಸ್ಥಳಗಳ ಬಗ್ಗೆ ತಿಳಿಯಿರಿ.

ಅಫಘಾನಿಸ್ತಾನ (ಗಾಂದರ ದೇಶ)

ಅಫಘಾನಿಸ್ತಾನ (ಗಾಂದರ ದೇಶ)

ಮಹಾ ಭಾರತದಲ್ಲಿನ ಗಾಂದರ ದೇಶವನ್ನು ಇಂದಿನ ಅಫಘಾನಿಸ್ತಾನದ ಕಾಂದರ ದೇಶವಾಗಿ ಮಾರ್ಪಟಾಗಿದೆ. ಆ ದೇಶದ ಮುಖ್ಯ ನಗರವಾಗಿ ತಕ್ಷಶಿಲ ಪ್ರಸಿದ್ಧಿ ಹೊಂದಿದೆ. ಈ ಸ್ಥಳವು ಪ್ರಸ್ತುತ ಪಾಕಿಸ್ತಾನದಲ್ಲಿದೆ. ಈ ರಾಜ್ಯದಿಂದಾಗಿಯೇ ದೃತರಾಷ್ಟ್ರನ ಪತ್ನಿಯಾದ ಗಾಂಧರಿ ಮತ್ತು ಕೌರವರ ಮಾವನಾದ ಶಕುನಿ ಬಂದರು.

ಗಾಂದರ ದೇಶ

ಗಾಂದರ ದೇಶ

ಮಹಾಭಾರತದಲ್ಲಿ ಕೆಕಾಯ ಪ್ರದೇಶದ ಬಗ್ಗೆ ಉಲ್ಲೇಖವಿದೆ. ಆ ಕಾಲದಲ್ಲಿ ಈ ಪ್ರದೇಶವನ್ನು ಜಯಸೇನ ಎಂಬ ಚಕ್ರವರ್ತಿಯು ಆಳ್ವಿಕೆ ಮಾಡುತ್ತಿದ್ದನು. ಆತನ ಕುಮಾರನಾದ ವಿಂದನು ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರವಾಗಿ ನಿಂತು ವೀರ ಮರಣವನ್ನು ಹೊಂದಿದನು ಎಂಬುದು ಮಾಹಾ ಭಾರತವನ್ನು ಪರೀಶಿಲಿಸಿದರೆ ತಿಳಿದು ಬರುತ್ತದೆ.

ಹಿಮಾಲಯದ (ಮಾದ್ರ)

ಹಿಮಾಲಯದ (ಮಾದ್ರ)

ಮಹಾಭಾರತದಲ್ಲಿನ ಮತ್ತೊಂದು ಮುಖ್ಯವಾದ ರಾಜ್ಯ ಮಾದ್ರ. ಈ ರಾಜ್ಯದಿಂದಲೇ ಪಾಂವ ರಾಜನ 2 ನೇ ಪತ್ನಿಯಾದ ಮಾದ್ರಿ ಬಂದಳು. ಮಾದ್ರಿ ನಕುಲ ಮತ್ತು ಸಹದೇವರ ತಾಯಿಯಾಗಿದ್ದಳು. ಮಾದ್ರಿಯ ಸಹೋದರನಾದ ಶಲ್ಯನು ಮಾದ್ರ ರಾಜ್ಯಕ್ಕೆ ರಾಜನಾಗಿದ್ದನು.

ಹಿಮಾಲಯದ (ಮಾದ್ರ)

ಹಿಮಾಲಯದ (ಮಾದ್ರ)

ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಪರವಾಗಿ ನಿಂತಿದ್ದರೂ ಕೂಡ ಕರ್ಣನ ಸಾವಿಗೆ ಕಾರಣನಾದನು. ಆ ನಂತರ ಧರ್ಮರಾಜನ ಕೈಯಲ್ಲಿ ಸಾವನ್ನಪ್ಪಿದನು. ಈ ಮಾದ್ರ ರಾಜ್ಯವು ಹಿಮಾಲಯದ ಸಮೀಪದಲ್ಲಿ ಚೈನ ಹಾಗು ಟಿಬೇಟ್‍ಗೂ ಕೂಡ ಸ್ವಲ್ಪ ಭಾಗ ವಿಸ್ತರಿಸಿದೆ ಎಂದು ಹೇಳುತ್ತಾರೆ.

ಉತ್ತರ ಪ್ರದೇಶ (ಉಜ್ಜನಕ)

ಉತ್ತರ ಪ್ರದೇಶ (ಉಜ್ಜನಕ)

ಈ ಪ್ರದೇಶವು ಉತ್ತರ ಪ್ರದೇಶ ರಾಜ್ಯದ ನೈನಿತಾಲ್ ಜಿಲ್ಲೆಯಲ್ಲಿ ಕಾಶಿಗೆ ಸಮೀಪದಲ್ಲಿ ಇತ್ತು. ಈ ಪ್ರದೇಶದಲ್ಲಿಯೇ ದ್ರೂಣ ಚಾರ್ಯರು ಪಾಂಡವರಿಗೆ ಹಾಗು ಕೌರವರಿಗೆ ಶಾಸ್ತ್ರಾಸ್ತ್ರ ವಿದ್ಯೆಯನ್ನು ಕಲಿಸಿಕೊಡುತ್ತಿದ್ದರು.

ಉತ್ತರ ಪ್ರದೇಶ (ಉಜ್ಜನಕ)

ಉತ್ತರ ಪ್ರದೇಶ (ಉಜ್ಜನಕ)

ಈ ಪ್ರದೇಶಕ್ಕೆ ಸಮೀಪದಲ್ಲಿ ಸ್ವಯಂ ಭೀಮನೇ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಿದ್ದನು ಎಂದು ಅಲ್ಲಿನ ಸ್ಥಳ ಪುರಾಣವು ತಿಳಿಸುತ್ತದೆ. ಪ್ರಸ್ತುತ ಆ ಶಿವಲಿಂಗ ಇರುವ ಪ್ರದೇಶವನ್ನು ಭೀಮ ಶಂಕರ ಎಂದು ಕರೆಯುತ್ತಿದ್ದಾರೆ.

ಪಂಜಾಬ್ (ಶಿವಿ ನಗರ)

ಪಂಜಾಬ್ (ಶಿವಿ ನಗರ)

ಶಿವಿ ನಗರವು ಪ್ರಸ್ತುತವಿರುವ ಪಂಜಾಬಿಗೆ ಉತ್ತರ ದಿಕ್ಕಿಗೆ ಇದೆ. ಈ ಪ್ರದೇಶವನ್ನು ಶೈವ್ಯ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು ಎಂದು ಚರಿತ್ರೆ ಹೇಳುತ್ತದೆ. ಈತನ ಮಗಳು ದೇವಿಕಳನ್ನು ಪಾಂಡವರ ಆಗ್ರರಾಜನಾದ ಧರ್ಮರಾಜನಿಗೆ ನೀಡಿ ವಿವಾಹ ಮಾಡಿದ್ದಾಗಿ ಮಾಹಾಭಾರತದಲ್ಲಿ ತಿಳಿದು ಬರುತ್ತದೆ.

ಉತ್ತರ ಪ್ರದೇಶದ (ವರ್ಣವಟ್)

ಉತ್ತರ ಪ್ರದೇಶದ (ವರ್ಣವಟ್)

ವರ್ಣವಟ್ ಎಂಬ ಪ್ರದೇಶವು ಉತ್ತರ ಪ್ರದೇಶದ ಮೀರುಟ್ ನಗರಕ್ಕೆ ಸಮೀಪದಲ್ಲಿ ಗಂಗ ನದಿ ತೀರದಲ್ಲಿ ಇದೆ. ಕೌರವರು ಪಾಂಡವರ 5 ರಾಜ್ಯಗಳನ್ನು ಕೇಳಿದ ರಾಜ್ಯದಲ್ಲಿ ಇದು ಕೂಡ ಒಂದು. ಈ ಪ್ರದೇಶದಲ್ಲಿ ದುರ್ಯೋಧನನು ಪಾಂಡವರಿಗೆ ಸಾಯಿಸಲು ಲಕ್ಷ್ ಗೃಹ ಎಂಬ ಮೇಣದ ಮನೆಯನ್ನು ನಿರ್ಮಾಣ ಮಾಡಿಸಿದನು ಎಂದು ಚರಿತ್ರೆ ಹೇಳುತ್ತದೆ.

ಹಿಮಾಲಯ (ಪಾಂಚಾಲ ದೇಶ)

ಹಿಮಾಲಯ (ಪಾಂಚಾಲ ದೇಶ)

ಪಾಂಚಾಲ ದೇಶವು ಹಿಮಾಲಯದಲ್ಲಿನ ಚರ್ರಮನ್ ವಟಿ ಎಂಬಲ್ಲಿ ಇತ್ತು. ಈ ಪ್ರದೇಶವನ್ನು ದ್ರುಪದ ಮಹಾರಾಜ ಆಳ್ವಿಕೆ ಮಾಡಿದಂತೆ, ಆತನ ಮಗಳಾದ ದ್ರೌಪತಿಯನ್ನೇ ಪಾಂಡವರು ವಿವಾಹ ಮಾಡಿಕೊಂಡರು ಎಂದು ಮಾಹಾ ಭಾರತದಲ್ಲಿ ಉಲ್ಲೇಖವಿದೆ.

ದೆಹಲಿ (ಇಂದ್ರ ಪ್ರಸ್ಥ)

ದೆಹಲಿ (ಇಂದ್ರ ಪ್ರಸ್ಥ)

ಇಂದ್ರ ಪ್ರಸ್ಥವನ್ನು ಪಾಂಡವರು ನಿರ್ಮಾಣ ಮಾಡಿದ ಮೊದಲ ನಗರ ಎಂದು ಹೇಳಬಹುದು. ಪ್ರಸ್ತುತ ಈ ನಗರವು ಭಾರತ ದೇಶದ ರಾಜಧಾನಿಯಾದ ದೆಹಲಿಗೆ ದಕ್ಷಿಣ ದಿಕ್ಕಿಗೆ ಇತ್ತು ಎಂದು ಚಾರಿತ್ರಿಕ ಆಧಾರ ಮೂಲಕ ತಿಳಿಯುತ್ತದೆ.

ಉತ್ತರ ಪ್ರದೇಶ (ಮಥುರ)

ಉತ್ತರ ಪ್ರದೇಶ (ಮಥುರ)

ಬಾಲರಾಮ, ಶ್ರೀಕೃಷ್ಣನು ಮೊದಲು ಪಾಲಿಸಿದ ರಾಜ್ಯ ಮಥುರ ಎಂಬುದು ಸಾಮಾನ್ಯವಾಗಿ ಎಲ್ಲಿರಿಗೂ ಗೊತ್ತು. ತನ್ನ ಮಾವ ಕಂಸನನ್ನು ಸಂಹಾರ ಮಾಡಿದ ನಂತರ ಮಥುರವನ್ನು ಪಾಲನೆ ಮಾಡಿದನು ಶ್ರೀ ಕೃಷ್ಣನು. ಈಗ ಈ ಪ್ರದೇಶವು ಉತ್ತರ ಪ್ರದೇಶದ ಆಗ್ರಾಕ್ಕೆ ಸಮೀಪದಲ್ಲಿದೆ.

ಉತ್ತರ ಪ್ರದೇಶ (ಮಥುರ)

ಉತ್ತರ ಪ್ರದೇಶ (ಮಥುರ)

ಜರಾಸಂದನ ಜೊತೆ ನಡೆದ ಯುದ್ಧದಿಂದ ತನ್ನ ಪ್ರಜೆಗಳನ್ನು ಕಾಪಾಡಲು ಗುಜರಾತಿನ ಸಮುದ್ರ ತೀರದಲ್ಲಿ ದ್ವಾರಕ ನಗರವನ್ನು ನಿರ್ಮಾಣ ಮಾಡಿದ ಹಾಗೆ ಮಾಹಾಭಾರತದಲ್ಲಿ ಉಲ್ಲೇಖವಿದೆ. ಆದರೆ ಶ್ರೀ ಕೃಷ್ಣ ನಿರ್ಮಾಣ ಮಾಡಿದ ದ್ವಾರಕ ಪ್ರಸ್ತುತ ಸಮುದ್ರದಲ್ಲಿ ಅಡಗಿರುವ ಸತ್ಯ ಪುರಾತತ್ವ ಶಾಖೆಯವರಿಂದ ತಿಳಿದು ಬಂದಿದೆ.

ಉತ್ತರ ಪ್ರದೇಶ (ಅಂಗ ದೇಶ)

ಉತ್ತರ ಪ್ರದೇಶ (ಅಂಗ ದೇಶ)

ಅಂಗ ದೇಶವನ್ನು ದುರ್ಯೋಧನನು ಕರ್ಣನಿಗೆ ಬಹುಮಾನವಾಗಿ ನೀಡಿದ ಹಾಗೆ ಚರಿತ್ರೆ ತಿಳಿಸುತ್ತದೆ. ಈ ನಗರವು ಉತ್ತರ ಪ್ರದೇಶದ ಗೋಂಡ ಜಿಲ್ಲೆಯಲ್ಲಿದೆ ಎಂದು ಚಾರಿತ್ರಿಕ ಆಧಾರದ ಮೂಲಕ ತಿಳಿಯುತ್ತದೆ.

PC:juggadery

ಬಿಹಾರ (ಮಗಧ)

ಬಿಹಾರ (ಮಗಧ)

ಮಗಧ ಪ್ರದೇಶವು ಪ್ರಸ್ತುತವಿರುವ ದಕ್ಷಿಣ ಬಿಹಾರ ಎಂದು ಕರೆಯುತ್ತಾರೆ. ಈ ಪ್ರದೇಶವನ್ನು ಜರಾಸಂದನು ಆಳ್ವಿಕೆ ನಡೆಸುತ್ತಿದ್ದನು ಎಂದು ಚಾರಿತ್ರಿಕ ಆಧಾರದ ಮೂಲಕ ತಿಳಿಯಬಹುದು.

ವಾರಾಣಾಸಿ (ಕಾಶಿ)

ವಾರಾಣಾಸಿ (ಕಾಶಿ)

ಮಹಾಭಾರತದಲ್ಲಿ ಕಾಶಿಯ ಬಗ್ಗೆ ಹಲವು ಬಾರಿ ಪ್ರಸ್ತಾವನೆ ಬಂದಿದೆ. ನಮಗೆಲ್ಲಾ ತಿಳಿದಿರುವಂತೆ ಕಾಶಿ ಇರುವುದು ಪವಿತ್ರವಾದ ವಾರಾಣಾಸಿಯಲ್ಲಿ.

PC:Juan Antonio Segal

ಬಿಹಾರ (ಏಕ ಚಕ್ರ ನಗರಿ)

ಬಿಹಾರ (ಏಕ ಚಕ್ರ ನಗರಿ)

ಏಕ ಚಕ್ರ ನಗರಿಯನ್ನು ಪ್ರಸ್ತುತ ಆರಾ ಎಂದು ಕರೆಯುತ್ತಾರೆ. ಇದು ಬಿಹಾರ ರಾಜ್ಯದ ಭೋಜ್‍ಪುರ್ ಜಿಲ್ಲೆಯಲ್ಲಿದೆ. ಮಹಾಭಾರತ ಕಾಲದಲ್ಲಿ ಪಾಂಡವರು ಈ ಸ್ಥಳದಲ್ಲಿ ಕೆಲವು ಕಾಲ ವಾಸವಿದ್ದರು ಎಂದು ತಿಳಿದುಬರುತ್ತದೆ.

ಅಸ್ಸಾಂ (ಪ್ರಾಗ್ ಜ್ಯೋತಿಷ್ ಪುರ್)

ಅಸ್ಸಾಂ (ಪ್ರಾಗ್ ಜ್ಯೋತಿಷ್ ಪುರ್)

ಪ್ರಾಗ್ ಜ್ಯೋತಿಷ್ ಪುರ್ ಪ್ರಸ್ತುತವಿರುವ ಅಸ್ಸಾಂ ರಾಜ್ಯದ ಗೌಹಟಿಗೆ ಸಮೀಪದಲ್ಲಿ ಇತ್ತು. ಮಹಾಭಾರತ ಕಾಲದಲ್ಲಿ ಅಸ್ಸಾಂನ ರಾಜಧಾನಿ ಪ್ರಾಗ್ ಜ್ಯೋತಿಷ್ ಪುರ್ ಆಗಿತ್ತು ಎಂದು ಚಾರಿತ್ರಿಕ ಆಧಾರದ ಪ್ರಕಾರ ತಿಳಿದು ಬರುತ್ತದೆ. ಈ ರಾಜ್ಯವನ್ನು ನರಕಾಸುರನು ಆಳ್ವಿಕೆ ಮಾಡುತ್ತಿದ್ದನು.

ರಾಜಸ್ಥಾನ ( ಮತ್ಸ್ಯ ದೇಶ)

ರಾಜಸ್ಥಾನ ( ಮತ್ಸ್ಯ ದೇಶ)

ಈ ಮತ್ಸ್ಯ ದೇಶವು ಪ್ರಸ್ತುತವಿರುವ ಉತ್ತರ ರಾಜಸ್ಥಾನದಲ್ಲಿದೆ. ಈ ಪ್ರದೇಶದ ರಾಜಧಾನಿ ವಿರಾಟನಗರ. ಈ ಪ್ರದೇಶದಲ್ಲಿಯೇ ಪಾಂಡವರು ಅಜ್ಞಾತವಾಸವನ್ನು ಕಳೆದರು ಎಂದು ಮಹಾಭಾರತ ಹೇಳುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ