Search
  • Follow NativePlanet
Share
» »ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !

ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !

ಭಾರತ ದೇಶದಲ್ಲಿ ಎಷ್ಟೆಲ್ಲಾ ದೇವಾಲಯಗಳಿವೆ. ಒಂದೊಂದು ಕ್ಷೇತ್ರಕ್ಕೂ ಒಂದೊಂದು ಕಥೆ ಇದೆ. ಅಲ್ಲಿನ ಆಚರಣೆಗಳು ಕೂಡಾ ಭಿನ್ನವಾಗಿರುತ್ತವೆ. ಅವುಗಳಲ್ಲಿ ಕೆಲವು ದೇವಾಲಯಗಳು ಮಾತ್ರ ಎಷ್ಟೇ ವರ್ಷಗಳಾದರೂ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಇವುಗಳಲ್ಲಿ ಕೇವಲ ಮಂದಿರಗಳು ಮಾತ್ರವಲ್ಲ. ದರ್ಗಾಗಳೂ ಸೇರಿವೆ. ಇಲ್ಲಿನ ರಹಸ್ಯವನ್ನು ಯಾರಿಂದಲೂ ಭೇಧಿಸಲು ಸಾಧ್ಯವಾಗಿಲ್ಲ.

ಮೋದಿ ದೇವಸ್ಥಾನ v/s ಸೋನಿಯಾ ದೇವಸ್ಥಾನ...ಎಲ್ಲಿದೆ ಈ ದೇವಸ್ಥಾನ?

ಬಿಲ್ವಪತ್ರೆಯಿಂದ ಪೂಜಿಸುವ ಹಾವು

ಬಿಲ್ವಪತ್ರೆಯಿಂದ ಪೂಜಿಸುವ ಹಾವು

PC: youtube

ತಮಿಳುನಾಡಿನ ತೆಪ್ಪರುಮನಲ್ಲೂರು ಶಿವಾಲಯ ದೇವಸ್ಥಾನದಲ್ಲಿ ಬಹಳ ಆಶ್ಚರ್ಯಕರ ಸಂಗತಿ ನಡೆಯುತ್ತದೆ. ಎಲ್ಲಿಂದಲೋ ಹಾವು ಬಂದು ಅಲ್ಲಿರುವ ಶಿವಲಿಂಗದ ಮೇಲೆ ಕೂರುತ್ತದೆ. ನಂತರ ಅಲ್ಲಿರುವ ಬಿಲ್ವಪತ್ರೆಯ ಮೂಲಕ ಪೂಜೆ ಮಾಡುತ್ತದೆ. ಈ ಘಟನೆಯನ್ನು ಅನೇಕರು ನೋಡಿದ್ದಾರೆ. ಆ ಹಾವು ಯಾಕೆ ಹಾಗೇ ಮಾಡಿತು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಪ್ರತಿದಿನ ಮಾವಿನಕಾಯಿ

ಪ್ರತಿದಿನ ಮಾವಿನಕಾಯಿ

PC: Syed Shiyaz Mirza

ಪಂಜಾಬ್‍ನಲ್ಲಿ ಒಂದು ಗುರುದ್ವಾರವಿದೆ. ಈ ಗುರುದ್ವಾರದಲ್ಲಿ ಒಂದು ಮಾವಿನ ಮರವಿದೆ. ಅದರಲ್ಲಿ ಪ್ರತಿದಿನವೂ ಮಾವಿನ ಕಾಯಿ ಇರುತ್ತದೆ. ಸಾಮಾನ್ಯವಾಗಿ ಮಾವಿಗೆ ಒಂದು ಸೀಸನ್ ಇರುತ್ತದೆ. ಆದರೆ ಇಲ್ಲಿ ಮಾತ್ರ ಎಲ್ಲಾ ಸೀಸನ್‍ನಲ್ಲೂ ಮಾವಿನಹಣ್ಣು ಇರುತ್ತದೆ.

ಬೆಳೆಯುತ್ತಿರುವ ನಂದಿ ವಿಗ್ರಹ

ಬೆಳೆಯುತ್ತಿರುವ ನಂದಿ ವಿಗ್ರಹ

PC: Saisumanth532

ಯಾಗಂಟಿಯಲ್ಲಿರುವ ನಂದಿ ವಿಗ್ರಹವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತದೆ. ಇದು ಶಾಸ್ತ್ರದಲ್ಲೂ ನಮೂದಿಸಲಾಗಿದೆ. ಆದರೆ ಆ ರೀತಿ ನಂದಿ ವಿಗ್ರಹ ದೊಡ್ಡದಾಗುತ್ತಾ ಹೋಗಲು ಕಾರಣ ಏನು ಎನ್ನುವುದು ಯಾರಿಗೂ ತಿಳಿದಿಲ್ಲ.

ಬೆರಳಿನಲ್ಲಿ ಎತ್ತುವ ಕಲ್ಲು

ಬೆರಳಿನಲ್ಲಿ ಎತ್ತುವ ಕಲ್ಲು

PC: youtube

ಪೂಣೆಯಲ್ಲಿ ಒಂದು ಹಜರತ್ ಆಲಿ ದರ್ಗಾವಿದೆ. ಇಲ್ಲಿ 90 ಕೆ.ಜಿ ತೂಗುವ ಕಲ್ಲೊಂದಿದೆ. ಈ ಕಲ್ಲನ್ನು 11 ಮಂದಿ ಸೇರಿ ತಮ್ಮ ಒಂದು ಬೆರಳಿನಿಂದ ಒಟ್ಟಾಗಿ ಮೇಲಕ್ಕೆಸೆಯುತ್ತಾರೆ. ಅಷ್ಟೊಂದು ಭಾರದ ಕಲ್ಲು ಈ 11 ಮಂದಿಯ ಒಂದೊಂದು ಬೆರಳಿನಿಂದ ಹೇಗೆ ಎತ್ತಲು ಸಾಧ್ಯ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಹಾವುಗಳಿಗೂ ಮನೆಯಲ್ಲಿ ಜಾಗ

ಹಾವುಗಳಿಗೂ ಮನೆಯಲ್ಲಿ ಜಾಗ

PC: youtube

ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಪ್ರತಿಮನೆಯಲಿ ಹಾವುಗಳಿಗೆ ಗುಡಿ ನಿರ್ಮಿಸಲಾಗಿದೆ. ಹಾವುಗಳು ಮನೆಯ ಸದಸ್ಯರಂತೆ ಕಾಣುತ್ತಾರೆ. ಮಕ್ಕಳು ಆಟವಾಡುತ್ತಾರೆ.

ಸ್ತ್ರೀ ರೂಪದ ನವಗ್ರಹಗಳು

ಸ್ತ್ರೀ ರೂಪದ ನವಗ್ರಹಗಳು

PC: Anant Shivaji Desai, Ravi Varma Press

ತಮಿಳುನಾಡಿನ ಧರ್ಮಪುರಿ ಸಮೀಪ ಅಭಿಷ್ಟ ವರದಸ್ವಾಮಿ ದೇವಾಲಯವಿದೆ. ಅಲ್ಲಿ ನವಗ್ರಹಗಳನ್ನು ಸ್ತ್ರೀ ರೂಪದಲ್ಲಿವೆ. ಇಂತಹ ವಿಗ್ರಹಗಳು ಭಾರತ ದೇಶದಲ್ಲಿ ಮಾತ್ರವಲ್ಲ, ಬೇರೆಲ್ಲೂ ಕಾಣಸಿಗುವುದಿಲ್ಲ.

ಲೇಪಾಕ್ಷಿ

ಲೇಪಾಕ್ಷಿ

PC: youtube

ಆಂಧ್ರಪ್ರದೇಶದ ಲೇಪಾಕ್ಷಿ ದೇವಸ್ಥಾನದಲ್ಲಿ ಗಾಳಿಯಲ್ಲಿ ತೇಲುವ ಕಂಬವೊಂದಿದೆ. ಆ ಕಂಬದ ಕೇಳಗಿನಿಂದ ಬಟ್ಟೆಯನ್ನು ತೆಗೆದರೆ ನಿಮ್ಮ ಮನೋಕಾಮನೆ ಪೂರೈಸುತ್ತದೆ ಎನ್ನಲಾಗುತ್ತದೆ.

Read more about: india travel temple ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more