ಮೈಸೂರು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಸುಂದರವಾದ ಐತಿಹಾಸಿಕ ನಗರ. ಈ ನಗರವು ಭವ್ಯವಾದ ಮತ್ತು ಅದ್ಭುತವಾದ ಅರಮನೆಗಳಿಗೆ ಹೆಸರುವಾಸಿಯಾಗಿದೆ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಸಹ ಕರೆಯಲಾಗುತ್ತದೆ. ದೇಶ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಅರಮನೆಗಳು, ಬೃಂದಾವನ ಉದ್ಯಾನ, ಮೈಸೂರು ಮೃಗಾಲಯ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಇಲ್ಲಿಗೊಮ್ಮೆ ಭೇಟಿ ನೀಡಿದ ನಂತರವೇ ಜನರು ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ವಿಶೇಷವೆಂದರೆ ಮೈಸೂರು ಸುತ್ತಮುತ್ತಲೂ ಅನೇಕ ಅದ್ಭುತ ಸ್ಥಳಗಳಿದ್ದು, ನೀವಿಲ್ಲಿಗೂ ಭೇಟಿ ನೀಡಿ ಡಬಲ್ ಎಂಜಾಯ್ ಮಾಡಬಹುದು. ಹಾಗಾದರೆ ಬನ್ನಿ ನಗರದ ಸಮೀಪದಲ್ಲಿರುವ ಆ ಸ್ಥಳಗಳು ಯಾವುವು ಒಮ್ಮೆ ನೋಡೋಣ...

ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಮೈಸೂರು ನಗರವನ್ನು ನೋಡಿದ ನಂತರ ಅನೇಕ ಜನರು ಮೊದಲು ಭೇಟಿ ನೀಡಲು ಇಷ್ಟಪಡುವುದು ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಸುಂದರವಾದ ಉದ್ಯಾನವನಗಳಲ್ಲಿ ಒಂದಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ತನ್ನ ಸೌಂದರ್ಯ ಮತ್ತು ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಇದನ್ನು 1973 ರಲ್ಲಿ ಹುಲಿ ಅಭಯಾರಣ್ಯವೆಂದು ಘೋಷಿಸಲಾಯಿತು. ಹುಲಿ, ಚಿರತೆ, ಆನೆ, ಕರಡಿ, ಚಿಂಕೆ ಸೇರಿದಂತೆ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಈ ಉದ್ಯಾನವನದಲ್ಲಿ ಕಾಣಬಹುದು. ಇಲ್ಲಿ ನೀವು ಕುಟುಂಬ, ಸ್ನೇಹಿತರು ಅಥವಾ ಲೈಫ್ ಪಾರ್ಟನರ್ ಜೊತೆ ಜಂಗಲ್ ಸಫಾರಿಯನ್ನು ಸಹ ಆನಂದಿಸಬಹುದು. ಆದರೆ ಟಿಕೆಟ್ ಪಡೆಯಬೇಕು. ಜಂಗಲ್ ಸಫಾರಿಗೆ ಪ್ರತ್ಯೇಕ ಶುಲ್ಕವಿದೆ. ಉದ್ಯಾನವನವು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಮೈಸೂರಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸುಮಾರು 72 ಕಿ.ಮೀ.ದೂರವಿದೆ.

ಬಲಮುರಿ ಜಲಪಾತ
ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ಬಲಮುರಿ ಜಲಪಾತವು ಮೈಸೂರಿನ ಇತರ ಪ್ರವಾಸಿ ತಾಣಗಳಷ್ಟೇ ಸುಂದರ ಹಾಗೂ ಜನಪ್ರಿಯ. ಈ ಸುಂದರವಾದ ಜಲಪಾತವು ಕಾವೇರಿ ನದಿಯಿಂದ ಮಾಡಲ್ಪಟ್ಟಿದೆ. ಪ್ರವಾಸಿಗರು ಮಳೆಗಾಲದಲ್ಲಿ ಹೆಚ್ಚು ನೋಡಲು ಬರುತ್ತಾರೆ. ಜಲಪಾತದ ನೀರು 100 ಮೀಟರ್ ಎತ್ತರದಿಂದ ಬಿದ್ದಾಗ ಸುತ್ತಮುತ್ತಲಿನ ನೋಟ ಸುಂದರವಾಗಿ ಕಾಣುತ್ತದೆ. ಇಲ್ಲಿ ಸುತ್ತಲು ಕಾಣುವ ಪರ್ವತಗಳು ಮತ್ತು ಹಸಿರು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಹಲವು ಕನ್ನಡ ಮತ್ತು ಹಿಂದಿ ಚಿತ್ರಗಳ ಹಾಡುಗಳನ್ನು ಸಹ ಇಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತದೆ. ವಾರಾಂತ್ಯದಲ್ಲಿ ಪಿಕ್ನಿಕ್ ಮಾಡಲು ಅನೇಕ ಜನರು ಇಲ್ಲಿಗೆ ಬರುತ್ತಾರೆ. ಮೈಸೂರಿನಿಂದ ಬಲಮುರಿ ಜಲಪಾತವು ಸುಮಾರು 18 ಕಿ.ಮೀ. ದೂರದಲ್ಲಿದೆ.
ಕೂರ್ಗ್ ಗಿರಿಧಾಮ
ಮೈಸೂರಿಗೆ ಭೇಟಿ ನೀಡಿದ ನಂತರ ನೀವು ಸಮೀಪದಲ್ಲಿರುವ ಹಾಗೂ ಭವ್ಯವಾದ ಮತ್ತು ವಿಶ್ವ ಪ್ರಸಿದ್ಧ ಗಿರಿಧಾಮಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಕೂರ್ಗ್ ಅನ್ನು ನೋಡಲೇಬೇಕು. ಕೂರ್ಗ್ ಅನ್ನು ದೇಶದ ಪ್ರಮುಖ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಮುದ್ರ ಮಟ್ಟದಿಂದ ಸುಮಾರು 2 ಸಾವಿರ ಮೀಟರ್ ಎತ್ತರದಲ್ಲಿರುವ ಕೂರ್ಗ್ ಅನ್ನು ಪ್ರಕೃತಿ ಪ್ರಿಯರ ಸ್ವರ್ಗವೆಂದು ಪರಿಗಣಿಸಲಾಗಿದೆ. ಕೂರ್ಗ್‌ನ ಸೌಂದರ್ಯವು ಎಷ್ಟು ಜನಪ್ರಿಯವಾಗಿದೆ ಎಂದರೆ ಇದನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂದು ಕರೆಯಲಾಗುತ್ತದೆ. ನೀವು ಚಹಾ ಮತ್ತು ಕಾಫಿ ತೋಟಗಳು, ಮಾಂದಲಪಟ್ಟಿ ಶಿಖರ, ಹೊನ್ನಮನ ಕೆರೆ ಮತ್ತು ಅಬ್ಬೆ ಜಲಪಾತಗಳಂತಹ ಅದ್ಭುತ ಸ್ಥಳಗಳನ್ನು ಅನ್ವೇಷಿಸಬಹುದು. ಮೈಸೂರಿನಿಂದ ಕೂರ್ಗ್ ಸುಮಾರು 117 ಕಿ.ಮೀ. ದೂರದಲ್ಲಿದೆ.

ಊಟಿ
ಯಾರೇ ಆಗಲಿ ಗಿರಿಧಾಮದ ಹೆಸರು ಪಟ್ಟಿ ಮಾಡುವಾಗ ಮೊದಲು ಊಟಿಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ದಕ್ಷಿಣ ಭಾರತದ ಊಟಿ ಗಿರಿಧಾಮವನ್ನು ಬೆಟ್ಟಗಳ ರಾಣಿ ಎಂದು ಕರೆಯಲಾಗುತ್ತದೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಊಟಿ ತನ್ನ ಸೌಂದರ್ಯ ಹಾಗೂ ಅನೇಕ ಅದ್ಭುತ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಊಟಿ ಸರೋವರ, ದೊಡ್ಡಬೆಟ್ಟ ಶಿಖರ, ಬೊಟಾನಿಕಲ್ ಗಾರ್ಡನ್, ಕಾಮರಾಜ್ ಸಾಗರ್ ಸರೋವರ ಮತ್ತು ಪೈಕರ ಜಲಪಾತದಂತಹ ಅದ್ಭುತ ಸ್ಥಳಗಳನ್ನು ಅನ್ವೇಷಿಸಬಹುದು. ಊಟಿಯಲ್ಲಿ ನೀವು ಆಟಿಕೆ ರೈಲು ಸವಾರಿಯನ್ನು ಸಹ ಆನಂದಿಸಬಹುದು. ಮೈಸೂರಿನಿಂದ ಊಟಿ ಸುಮಾರು 124 ಕಿ.ಮೀ. ದೂರದಲ್ಲಿದೆ.
ಈ ಸ್ಥಳಗಳನ್ನು ಸಹ ಅನ್ವೇಷಿಸಿ
ಮೈಸೂರಿನ ಸುತ್ತಲೂ ನೀವು ಅನ್ವೇಷಿಸಬಹುದಾದ ಇನ್ನೂ ಅನೇಕ ಅದ್ಭುತ ಸ್ಥಳಗಳಿವೆ. ಉದಾಹರಣೆಗೆ, ನೀವು 18 ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ, 23 ಕಿಮೀ ದೂರದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು, 172 ಕಿಮೀ ದೂರದಲ್ಲಿರುವ ಚಿಕ್ಕಮಗಳೂರು ಮತ್ತು 150 ಕಿಮೀ ದೂರದಲ್ಲಿರುವ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯವನ್ನು ಸಹ ಮಿಸ್ ಮಾಡದೆ ನೋಡಿ.


Click it and Unblock the Notifications



















