• Follow NativePlanet
Share
» »ಮಧ್ಯಪ್ರದೇಶದಲ್ಲಿ ಭೇಟಿ ನೀಡಲೇಬೇಕಾದ ಜಲಪಾತಗಳು

ಮಧ್ಯಪ್ರದೇಶದಲ್ಲಿ ಭೇಟಿ ನೀಡಲೇಬೇಕಾದ ಜಲಪಾತಗಳು

Posted By: Manjula Balaraj Tantry

ಮಧ್ಯಪ್ರದೇಶವು ಭಾರತದ ಹೃದಯ ಎಂದೂ ಕರೆಯಲ್ಪಡುತ್ತದೆ.ಇದು ಭಾರತದ ಶ್ರೀಮಂತ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭೂಮಿಯೆನಿಸಿದೆ.ನಾವೆಲ್ಲರೂ ಭಾರತದ ಈ ಸಾಂಸ್ಕೃತಿಕ ರಾಜ್ಯವನ್ನು ಇದರ ಪ್ರಾಚೀನ ಕಟ್ಟಡಗಳು, ಅದ್ಬುತವಾದ ವಾಸ್ತುಶಿಲ್ಪಗಳು ಮತ್ತು ಆಧುನಿಕ ನಗರಗಳ ರೂಪದಲ್ಲಿ ಕಂಡುಬರುತ್ತದೆ ಆದುದರಿಂದ ಈ ಋತುವಿನಲ್ಲಿ ಈ ನೈಸರ್ಗಿಕ ಸೌಂದರ್ಯವನ್ನು ಏಕೆ ಅನ್ವೇಷಿಸಬಾರದು?

ಐತಿಹಾಸಿಕ ಮಹತ್ವದ ಹೊರತಾಗಿಯೂ ಮಧ್ಯಪ್ರದೇಶ ಇದರ ಸುಂದರವಾದ ದೃಶ್ಯ ಮತ್ತು ರಾಜ್ಯದಾದ್ಯಂತ ಚದುರಿರುವ ಬೆರಗುಗೊಳಿಸುವ ಭೂದೃಶ್ಯಗಳು ಮತ್ತು ಸುಮಧುರವಾದ ನಾದದಿಂದ ಹರಿಯುವ ನದಿಗಳು ಸುಂದರವಾದ ಜಲಪಾತಗಳು ಮತ್ತು ಬೆರಗುಗೊಳಿಸುವ ಬೆಟ್ಟಗಳು ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಭೇಟಿ ನೀಡಬೇಕಾದ ಜಲಪಾತಗಳನ್ನು ನೋಡೋಣ. ಇದು ಒಂದು ದಿನ ಭೇಟಿಗಿಂತ ಹೆಚ್ಚು ಯೋಗ್ಯವಾಗಿದೆ.

ದುವಾಂಧರ್ ಜಲಪಾತ

ದುವಾಂಧರ್ ಜಲಪಾತ

PC- Abhishek Jain

ಅಭಿಷೇಕ್ ಜೈನ್ ನರ್ಮದಾ ನದಿಯ ನೀರಿನಿಂದ 30 ಮೀಟರ್ ಎತ್ತರದಿಂದ ಬೀಳುವ ದುವಾಂಧರ್ ಜಲಪಾತವು ಮಧ್ಯ ಪ್ರದೇಶದ ಅತ್ಯಂತ ಸುಂದರ ಜಲಪಾತಗಳಲ್ಲೊಂದಾಗಿದೆ. ಮತ್ತು ಇಲ್ಲಿಯ ಕಲ್ಲು ಬಂಡೆಗಳು ನಿಸ್ಸಂಶಯವಾಗಿ ಈ ಜಲಪಾತ ಮೇಲಿಂದ ಕೆಳಗೆ ಬೀಳುವಾಗ ಅದರ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸುತ್ತಲೂ ತಮ್ಮ ಸೌಂದರ್ಯವನ್ನು ಹರಡುತ್ತವೆ.

ಜಬಲ್ ಪುರ ಜಿಲ್ಲೆಯಲ್ಲಿರುವ ದುವಾಂಧರ್ ಜಲಪಾತವು ಇಲ್ಲಿಯ ಸ್ಥಳೀಯರಲ್ಲಿ ಅತ್ಯಂತ ಪ್ರಸಿದ್ದಿಯನ್ನು ದೇಶದಾದ್ಯಂತದ ಅನೇಕ ಪ್ರವಾಸಿಗರಿಂದಲೂ ಈ ಜಲಪಾತವು ಹೆಸರನ್ನು ಪಡೆದಿದೆ. ದುವಾಂಧರ್ ಫಾಲ್ಸ್ ಇನ್ನೊಂದು ಬದಿಯಲ್ಲಿ ನೀವು ನೋಡಬೇಕಾದರೆ ಕೇಬಲ್ ಕಾರ್ ಸೇವೆ ಲಭ್ಯವಿದೆ. ನರ್ಮದಾ ನದಿಯ ಕಣಿವೆಗಳಲ್ಲಿ ಪ್ರಸಿದ್ಧ ಮಾರ್ಬಲ್ ಬಂಡೆಗಳ ಹಿಂದೆ ಹರಿಯುವ ನೀರಿನಲ್ಲಿ ಬೋಟ್ ರೈಡ್ ಸಹ ನೀವು ಮಾಡಬಹುದು.

ರಾನೇಹ್ ಜಲಪಾತ

ರಾನೇಹ್ ಜಲಪಾತ

PC- Syedzohaibullah

ಜಲಪಾತಗಳು ಹಲವು ತಂತಿಗಳ ರೂಪದಷ್ಟು ಉದ್ದವಾಗಿದ್ದು ಮೇಲಿನ ಆಳವಾದ ನದಿ ನೀರಿನಿಂದ ಬೀಳುವಂತವಾಗಿದ್ದು ಈ ಜಲಪಾತವು ಮಧ್ಯಪ್ರದೇಶದ ಚತ್ತರ್‍ ಪುರ ಜಿಲ್ಲೆಯಲ್ಲಿದೆ. ಈ ಕಣಿವೆಯಲ್ಲಿಯ ಸಣ್ಣ ಜಲಪಾತಗಳು ಒಂದು ವರ್ಷವಿಡೀ ಆಕರ್ಷಣೆಯಾಗಿದೆ ಉಳಿಸಿಕೊಂಡಿದ್ದರೆ,ದೊಡ್ಡದೊಡ್ಡ ಜಲಪಾತಗಳು ಮಾನ್ಸೂನ್ ಮಳೆಗಾಲದಲ್ಲಿ ಕಾಣಸಿಗುತ್ತವೆ.

ಜೋರಾಗಿ ಮಳೆಯಾದಾಗ ಬತ್ತಿ ಹೋದ ಗುಂಡಿಗಳು ತುಂಬಲ್ಪಡುತ್ತವೆ ಇವು ಇದು ಗ್ರಾನೈಟ್ ಮತ್ತು ಡಾಲಮೈಟ್ ಅಗ್ನಿ ಶಿಲೆಗಳ ರೂಪದಲ್ಲಿ ಮಾಡಲಾಗುತ್ತದೆ.ನೀವು ಒಂದು ನಿರ್ದಿಷ್ಟವಾದ ನಿಲುಗಡೆಗೆ ಹುಡುಕುತ್ತಿದ್ದರೆ 30 ಮೀಟರ್ ಎತ್ತರದಿಂದ ಬೀಳುವ,ರಾನೇಹ್ ಜಲಪಾತವು ಒಂದು ಸೂಕ್ತ ಸ್ಥಳವಾಗಿದೆ.

ಪಾತಾಳ್ ಪಾನಿ ಜಲಪಾತ

ಪಾತಾಳ್ ಪಾನಿ ಜಲಪಾತ

PC- Anvesh Sharma

ಮಧ್ಯ ಪ್ರದೇಶದ ಅತೀ ಸುಂದರ ಜಲಪಾತವೆಂದರೆ ಅದು ಬೇರೆ ಯಾವುದೂ ಅಲ್ಲ ಅದೇ ಪಾತಲ್ ಪಾನೀ ಜಲಪಾತ.ಇದು ಅತೀ ಎತ್ತರ ಅಂದರೆ 300 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ ಮತ್ತು ಇದು ಇಂದೋರ್ ಜಿಲ್ಲೆಯ ಹಸಿರುಮಯ ಪರಿಸರದ ಮಧ್ಯೆ ನೆಲೆಸಿದೆ.

ಸುತ್ತಲೂ ಶ್ರೀಮಂತ ಸಸ್ಯವರ್ಗದಿಂದ ಸುತ್ತುವರೆದಿದ್ದು ಶಾಂತಯುತವಾದ ಮತ್ತು ನಿರಾಳವಾದ ವಾತಾವರಣವನ್ನು ಹೊಂದಿರುವ ಪಾತಲ್ ಪಾನಿ ಜಲಪಾತವು ಈ ಜಾಗವನ್ನು ಪಿಕ್ನಿಕ್ ಪ್ರಿಯರು ಮತ್ತು ಚಾರುಣಿಗರಿಗೆ ಒಂದು ಆದರ್ಶಕರವಾಗಿ ಮಾಡಿದೆ.

ಇದು ಬೇಸಿಗೆಯಲ್ಲಿ ಇದು ಬತ್ತಿ ಹೋದರೂ ಕೂಡಾ ವರ್ಷ ಪೂರ್ತಿ ಚಾರುಣಿಗರಿಗೆ ಒಂದು ಪ್ರಿಯವಾದ ತಾಣವೆನಿಸಿದೆ.ಚಾರಣ ಮಾಡುವುದು ಮತ್ತು ಪಾತಲ್ ಪಾನಿ ಜಲಪಾತದ ಸುತ್ತ ಮುತ್ತ ಸುಂದರವಾದ ಪರಿಸರದಲ್ಲಿ ಸುತ್ತ ಮುತ್ತ ತಿರುಗಾಡುವ ಅನುಭವ ಹೇಗಿರಬಹುದು

ಕಿಯೋತಿ ಜಲಪಾತ

ಕಿಯೋತಿ ಜಲಪಾತ

ರೇವಾ ಪ್ರಸ್ಥಭೂಮಿಯ ಕೆಳಗೆ ಹರಿಯುವ ಈ ಕಿಯೋತಿ ಜಲಪಾತವು 322 ಅಡಿ ಎತ್ತರದಲ್ಲಿ ಹೊಂದಿರುವ ಉತ್ತರ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದು.ಈ ಅದ್ಭುತ ಜಲಪಾತ ಪ್ರಮುಖ ವಿಶೇಷತೆಯೆಂದರೆ ಇದು ಚಿತ್ರಕೂಟ ಬೆಟ್ಟಗಳ ತುದಿಯಲ್ಲಿ ಮಧ್ಯಪ್ರದೇಶದ ಈ ಕಲ್ಲಿನ ಪ್ರಸ್ಥಭೂಮಿ ತನ್ನ ಅತಿವಾಸ್ತವಿಕವಾದ ಸ್ಥಳದಲ್ಲಿ ನೆಲೆಸಿದೆ.

ಅನೇಕ ಉಪನದಿಗಳನ್ನು ಹೊಂದಿರುವ ಮಹಾನಾ ನದಿಯ ಒಂದು ಭಾಗವಾಗಿದುವ ಕಿಯೋತಿ ಜಲಪಾತವು ಇದರ ಪರಿಸರವನ್ನು ಶಾಂತಿಯುತವಾಗಿ ಮತ್ತು ಇದರ ಮೇಲಿಂದ ಕೆಳಗೆ ಬೀಳುವ ಸದ್ದು ಸಂಗೀತಮಯ ವಾತಾವರಣವನ್ನು ಸೃಷ್ಟಿಸುತ್ತದೆ.

ಪುರ್ವಾ ಜಲಪಾತ

ಪುರ್ವಾ ಜಲಪಾತ

ರೇವಾ ಜಿಲ್ಲೆಯ ಶ್ರೀಮಂತ ಪ್ರದೇಶದಲ್ಲಿ ಸುಂದರವಾಗಿ ಬೀಳುವ ಪೂರ್ವ ಜಲಪಾತವು ಟನ್ ಗಳಷ್ಟು ನದಿಯ ಮೇಲೆ ಮತ್ತು ಈ ಆಕರ್ಷಕ ಜಲಪಾತವು 70 ಮೀಟರ್ ಎತ್ತರದಿಂದ ಬೀಳುತ್ತದೆ.ಇದು ಮಧ್ಯಪ್ರದೇಶದ ರಾಜ್ಯದ ಭೇಟಿ ನೀಡಲೇ ಬೇಕಾದ ಜಲಪಾತವಾಗಿದೆ .

ನೀವು ಇಂತಹ ಪುನಶ್ಚೇತನಗೊಳಿಸುವ ವಾತಾವರಣವುಳ್ಳ ಪರಿಸರದಲ್ಲಿ ಆನಂದಪಡಬೇಕೆಂದಿದ್ದರೆ ಈ ಋತುವಿನಲ್ಲಿ ಪುರ್ವಾ ಜಲಪಾತವು ನೀವು ಭೇಟಿ ಕೊಡಲೇ ಬೇಕಾದ ಗಮ್ಯಸ್ಧಾನವಾಗಿದೆ. ಈ ಮನಮೋಹಕ ನೈಸರ್ಗಿಕ ಸೌಂದರ್ಯತೆಯನ್ನು ನೋಡುವುದಕ್ಕಿಂತ ಉತ್ತಮವಾದುದು ಇನ್ನೇನಿದೆ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ