Search
  • Follow NativePlanet
Share
» »ಶಿವತಾಂಡವವನ್ನು ಸ್ವಯಂ ಬ್ರಹ್ಮದೇವನೆ ಚಿತ್ರಿಸಿದ ಸ್ಥಳವಿದು...

ಶಿವತಾಂಡವವನ್ನು ಸ್ವಯಂ ಬ್ರಹ್ಮದೇವನೆ ಚಿತ್ರಿಸಿದ ಸ್ಥಳವಿದು...

ಪ್ರಕೃತಿ ಸಂಪತ್ತಿಗೆ ನಿಲಯವಾದ ಆ ಪ್ರದೇಶ ಅನೇಕ ಪುರಾಣ ಕಥೆಗಳಿಗೆ ಸಾಕ್ಷ್ಯಿ. ಅಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ಣಾರೆ ಕಾಣಬೇಕೆ ಹೊರತು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಾಗದು. ಇನ್ನು ಆ ಕ್ಷೇತ್ರದಲ್ಲಿ ಶಿವನು ಆನಂದ ತಾಂಡವವನ್ನು ಮಾಡಿದನಂತೆ. ಅಷ್ಟೇ ಅಲ್ಲದೇ, ಬ್ರಹ್ಮನು ಸ್ವಯಂ ತನ್ನ ಕೈಯಿಂದ ಗೋಡೆಯ ಮೇಲೆ ಚಿತ್ರಿಸಿದ್ದಾನಂತೆ.

ವರ್ಷಕ್ಕೆ ಒಮ್ಮೆ ಅಲ್ಲಿ ನಡೆಯುವ ವಿಶಿಷ್ಟವಾದ ಪೂಜೆಗೆ ತ್ರಿಮೂರ್ತಿಗಳು ತಪ್ಪದೇ ಹಾಜರಾಗುತ್ತಾರಂತೆ. ಇನ್ನು ಶುಂಭ, ನಿಶುಂಭರ ಗುರುವನ್ನು ಕೂಡ ಆ ಪ್ರದೇಶದಲ್ಲಿಯೇ ಆ ಆದಿಪರಾಶಕ್ತಿಯ ಕೈಯಲ್ಲಿ ಸಂಹಾರವಾದನಂತೆ. ಇಲ್ಲಿರುವ ಪರಮೇಶ್ವರನಿಗೆ ಆ ಗಂಗಾದೇವಿಯೇ ಸ್ವಯಂವಾಗಿ ತನ್ನ ಕೈಯಲ್ಲಿ ಅಭಿಷೇಕ ಮಾಡಿದಳಂತೆ.

ಮುಖ್ಯವಾಗಿ ಶಿವನು, ವಿಷ್ಣುವು ಬೇರೆ-ಬೇರೆ ಅಲ್ಲ ಎಂದು ನಿರೂಪಿಸುವ ಪುಣ್ಯಕ್ಷೇತ್ರ ಕೂಡ ಇದೆ. ಹಾಗೆಯೇ ಇಲ್ಲಿರುವ ಪುರಾತನ ವಸ್ತು ಸಂಗ್ರಹಾಲಯವನ್ನು ಕೂಡ ನಾವು ಕಾಣಬಹುದು. ಇಷ್ಟು ವಿಶೇಷತೆಗಳನ್ನು ಹೊಂದಿರುವ ಪುಣ್ಯಕ್ಷೇತ್ರದ ಬಗ್ಗೆ ತಪ್ಪದೇ ತಿಳಿದುಕೊಳ್ಳಲೇಬೇಕು ಅಲ್ಲವೇ?

1.ಬಡವರ ಊಟಿ

1.ಬಡವರ ಊಟಿ

PC:YOUTUBE

ತಮಿಳುನಾಡಿನ ಕುಟ್ರಾಲ ಎಂಬ ಹೆಸರು ಕೇಳುತ್ತಿದ್ದಂತೆ ಅನೇಕ ಮಂದಿಗೆ ನೆನಪಿಗೆ ಬರುವುದೇ ಬಡವರ ಊಟಿ ಎಂಬ ಭಾವನೆ ಉಂಟಾಗುತ್ತದೆ. ಅದಕ್ಕೆ ತಕ್ಕಂತೆಯೇ ಆ ಪ್ರದೇಶವು ಹಚ್ಚ-ಹಸಿರಿನಿಂದ ಕೂಡಿರುವ ಬೆಟ್ಟಗಳು, ಜಲಧಾರೆಗಳು, ಸುಂದರವಾದ ಜಲಪಾತಗಳು ಎಂಥಹ ಪ್ರವಾಸಿಗರಿಗೆ ಆಗಲಿ ಆಕರ್ಷಿಸದೇ ಇರುದು.

2.ಪುರಾಣ ಕಥೆಗಳಿಗೆ ನಿಲಯ

2.ಪುರಾಣ ಕಥೆಗಳಿಗೆ ನಿಲಯ

PC:YOUTUBE

ಆದರೆ ಈ ಕುಟ್ರಾಲವು ಅನೇಕ ದೇವಾಲಯಗಳ ಪುರಾಣ ಕಥೆಗಳಿಗೂ ಕೂಡ ಪ್ರಸಿದ್ಧಿಯನ್ನು ಹೊಂದಿದೆ. ಶಿವನ ತಾಂಡವವನ್ನು ಬ್ರಹ್ಮ ಸ್ವಯಂವಾಗಿ ಚಿತ್ರೀಕರಿಸಿದನು ಎಂದು ಹೇಳುತ್ತಾರೆ. ವೇದವ್ಯಾಸನು ರಚಿಸಿದ ಒಂದು ಗ್ರಂಥದಲ್ಲಿ ಈ ಕುಟ್ರಾಲದ ವಿಶೇಷತೆಯ ಬಗ್ಗೆ ವರ್ಣಿಸಿದ್ದಾರೆ.

3.ಒಬ್ಬ ರಾಜ

3.ಒಬ್ಬ ರಾಜ

PC:YOUTUBE

ಅದರಲ್ಲಿರುವ ವಿಷಯಗಳನ್ನು ಅನುಸರಿಸಿ...ಪೂರ್ವದಲ್ಲಿ ಈ ಪುಣ್ಯಭೂಮಿ ಪೃಥವು ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು. ಆತನ ಆಳ್ವಿಕೆಯಲ್ಲಿ ಈ ಪ್ರದೇಶದಲ್ಲಿನ ಪ್ರಜೆಗಳೆಲ್ಲಾ ಸುಖ-ಸಂತೋಷದಿಂದ ಹಾಗು ಶಾಂತಿಯುತವಾದ ಜೀವನವನ್ನು ನಡೆಸುತ್ತಿದ್ದರಂತೆ.

4.ಬೃಹಸ್ಪತಿ

4.ಬೃಹಸ್ಪತಿ

PC:YOUTUBE

ಈ ರಾಜ್ಯದಲ್ಲಿ ದೇವಗುರುವಾದ ಬೃಹಸ್ಪತಿಯ ವಂಶಕ್ಕೆ ಸೇರಿದ ರೋಚಿಷ್ಮಾನನು, ಸುರಿಚಿ ಎಂಬ ಇಬ್ಬರು ಸಹೋದರರು ಇದ್ದರಂತೆ. ಇವು ನಾಲ್ಕು ವೇದಗಳ ಜೊತೆಗೆ ಸಕಲ ಶಾಸ್ತ್ರಗಳನ್ನು ಕಲಿತುಕೊಂಡು ಪ್ರಜೆಗಳಿಗೆ ದೈವ ಚಿಂತನೆಯ ಪ್ರಾಮುಖ್ಯತೆಯನ್ನು ವಿವರಿಸುತ್ತಿದ್ದರು. ಆದರೆ ಅವರು ಪರಮ ವಿಷ್ಣುಭಕ್ತರು.

5.ದೇಶ ಪರ್ಯಾಟನೆ

5.ದೇಶ ಪರ್ಯಾಟನೆ

PC:YOUTUBE

ಅದೇ ಸಮಯದಲ್ಲಿ ಶಿವನನ್ನು ಕಂಡರೇ ದ್ವೇಷಿಸುತ್ತಿದ್ದರು. ಈ ಕ್ರಮದಲ್ಲಿ ದೇಶ ಪರ್ಯಾಟನೆ ಮಾಡುತ್ತಾ ವಿಷ್ಣು ತತ್ವವನ್ನು ಬೋಧಿಸುತ್ತಾ, ಶಿವನನ್ನು ನಿಂದಿಸುತ್ತಾ ಇರುತ್ತಿದ್ದರು. ಇವರ ಮಾತುಗಳ ಪ್ರಭಾವಕ್ಕೆ ಅನೇಕ ಮಂದಿ ಶಿವನನ್ನು ಆರಾಧನೆ ಮಾಡುವುದನ್ನು ಬಿಟ್ಟು, ವೈಷ್ಣವಾಗಿ ಮಾರ್ಪಟಾಗುತ್ತಿದ್ದರು.

6.ಶಿವನನ್ನು ಭೇಟಿ ಮಾಡಿ

6.ಶಿವನನ್ನು ಭೇಟಿ ಮಾಡಿ

PC:YOUTUBE

ಈ ವಿಷಯವು ಪೃಥು ಮಹಾರಾಜನಿಗೆ ತಿಳಿದು ತೀವ್ರವಾಗಿ ನೊಂದುಕೊಂಡನು. ಇದರಿಂದಾಗಿ ಪೃಥುವು ನೇರವಾಗಿ ಕೈಲಾಸಕ್ಕೆ ತೆರಳಿ ಶಿವನೊಂದಿಗೆ ಈ ವಿಷಯವನ್ನು ತಿಳಿಸಿದನು. ಇದರಿಂದಾಗಿ ಶಿವನು ಆ ಸಮಯದಲ್ಲಿ ಅಗಸ್ತ್ಯ ಮಹಾಮುನಿಯ ಮೂಲಕ ಸಮಸ್ಯೆ ಪರಿಷ್ಕಾರವಾಗುತ್ತದೆ ಎಂದು ರಾಜನನ್ನು ಕಳುಹಿಸಿದನು.

7.ಅಗಸ್ತ್ಯ ಮಹಾಮುನಿ

7.ಅಗಸ್ತ್ಯ ಮಹಾಮುನಿ

PC:YOUTUBE

ಇದು ನಡೆದ ಕೆಲವು ದಿನಗಳ ನಂತರ ಅಗಸ್ತ್ಯ ಮಹಾಮುನಿಯು ಕುಟ್ರಾಲದಲ್ಲಿರುವ ವಿಷ್ಣುವಿನ ದೇವಾಲಯಕ್ಕೆ ಶಿವನ ವೇಷವನ್ನು ಧರಿಸಿ ಬಂದನು. ಇದರಿಂದಾಗಿ ಅಲ್ಲಿಯೇ ಇದ್ದ ರೋಚಿಷ್ಮನ ಹಾಗು ಸುರಿಚಿತರೊಂದಿಗಿದ್ದ ಇನ್ನು ಕೆಲವು ಮಂದಿ ವೈಷ್ಣವ ಭಕ್ತರು ಅಗಸ್ತ್ಯನನ್ನು ತಡೆಯುತ್ತಾರೆ.

8.8.ವಿಷ್ಣುವು ಭಕ್ತನ ವೇಶದಲ್ಲಿ

8.8.ವಿಷ್ಣುವು ಭಕ್ತನ ವೇಶದಲ್ಲಿ

PC:YOUTUBE

ಇದರಿಂದಾಗಿ ಅಂದಿನಿಂದ ಅಲ್ಲಿಂದ ತೆರಳಿದ ಅಗಸ್ತ್ಯ ಮಹಾಮುನಿ ವಿಷ್ಣುವಿನ ಭಕ್ತನಾಗಿ ವೇಷವನ್ನು ಧರಿಸಿಕೊಂಡು ಅದೇ ದೇವಾಲಯಕ್ಕೆ ಭೇಟಿ ನೀಡುತ್ತಾನೆ. ಇದರಿಂದಾಗಿ ಆ ಇಬ್ಬರು ಸಹೋದರರ ಜೊತೆಗೆ ಉಳಿದ ವೈಷ್ಣವ ಭಕ್ತರು ಕೂಡ ಅಗಸ್ತ್ಯನನ್ನು ಗೌರವದಿಂದ ದೇವಾಲಯದ ಗರ್ಭಗುಡಿಗೆ ತೆಗೆದುಕೊಂಡು ಹೋಗಿ ಪೂಜೆಯನ್ನು ಮಾಡಬೇಕು ಎಂದು ಕೋರಿಕೊಳ್ಳುತ್ತಾರೆ.

9.ವಿಷ್ಣುವಿನ ವಿಗ್ರಹ ಶಿವಲಿಂಗವಾಗಿ

9.ವಿಷ್ಣುವಿನ ವಿಗ್ರಹ ಶಿವಲಿಂಗವಾಗಿ

PC:YOUTUBE

ಗರ್ಭಗುಡಿಗೆ ತೆರಳಿದ ಅಗಸ್ತ್ಯನು, ಶಿವನನ್ನು ಧ್ಯಾನಿಸುತ್ತಾ ಪೂಜೆಯನ್ನು ಮಾಡುತ್ತಿದ್ದರಿಂದ ವಿಷ್ಣುವಿನ ವಿಗ್ರಹವನ್ನು ತಾಕುತ್ತಾನೆ. ಮರುಕ್ಷಣವೇ, ನಿಂತಿರುವ ಭಂಗಿಯಲ್ಲಿದ್ದ ಆ ವಿಷ್ಣುವಿನ ಪ್ರತಿಮೆಯು ಶಿವಲಿಂಗವಾಗಿ ಮಾರ್ಪಟಾಗುತ್ತದೆ. ಅದೇ ಸಮಯದಲ್ಲಿ ಆ ದೇವಾಲಯದ ಪ್ರಾಂಗಣದಲ್ಲಿದ್ದ ವಿಷ್ಣು ಭಕ್ತರೆಲ್ಲಾ ಶಿವ ಭಕ್ತರಾಗಿ ಮಾರ್ಪಟಾಗುತ್ತಾರೆ.

10.ವಿರುದ್ಧ

10.ವಿರುದ್ಧ

PC:YOUTUBE

ಇದರಿಂದಾಗಿ ಸುರಿಚಿ ಅಗಸ್ತ್ಯನ ಜೊತೆ ವಾದಕ್ಕೆ ಇಳಿಯುತ್ತಾನೆ. ಇವರಿಬ್ಬರ ವಾದಕ್ಕೆ ಸಾಕ್ಷಾತ್ತು ಆ ಪರಾಶಕ್ತಿ ಮಧ್ಯವರ್ತಿ ವಹಿಸುತ್ತದೆ. ವಿಷ್ಣು ತತ್ವವೇ ದೊಡ್ಡದು ಎಂದು ಸುರಿಚಿ ವಾದಿಸಿದರೆ, ಶೈವ ತತ್ವವೇ ದೊಡ್ಡದು ಎಂದು ಅಗಸ್ತ್ಯ ಮಹಾಮುನಿ ವಾದಿಸುತ್ತಾನೆ.

11.ಶಿವದೀಕ್ಷೆ

11.ಶಿವದೀಕ್ಷೆ

PC:YOUTUBE

ಹೀಗೆ ಸತತ 5 ದಿನಗಳ ಕಾಲ ಸಾಗಿದ ಈ ವಾದಗಳಲ್ಲಿ ಕೊನೆಗೆ ಅಗಸ್ತ್ಯ ಮಹಾಮುನಿ ವಿಜಯವನ್ನು ಸಾಧಿಸುತ್ತಾನೆ. ಇದರ ಫಲಿತವಾಗಿ ವಿಷ್ಣುಭಕ್ತರೆಲ್ಲಾರು ಅಗಸ್ತ್ಯ ಮಹಾಮುನಿಯ ಮೂಲಕ ಶಿವನ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ತದನಂತರ, ವಿಷ್ಣು ಹಾಗು ಪರಮೇಶ್ವರರು ಪ್ರತ್ಯಕ್ಷವಾದರು.

12.ವಿಷ್ಣು, ಶಿವ

12.ವಿಷ್ಣು, ಶಿವ

PC:YOUTUBE

ನಾವಿಬ್ಬರು ಬೇರೆ-ಬೇರೆ ಅಲ್ಲ ಎಂದು, ಇಬ್ಬರು ಒಬ್ಬರೆ ಎಂದು ಹೇಳಿ ಮಾಯವಾಗುತ್ತಾರೆ. ಅಂದಿನಿಂದ ಆ ರಾಜ್ಯದಲ್ಲಿನ ಪ್ರಜೆಗಳು ಯಾರಿಗೆ ಯಾವ ದೇವರು ಇಷ್ಟವಾಗುತ್ತದೆಯೋ ಆ ದೈವಕ್ಕೆ ಪೂಜೆಯನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಮಾಡುತ್ತಿದ್ದರು. ಇನ್ನು ಮಧ್ಯವರ್ತಿ ವಹಿಸಿದ ಪರಾಶಕ್ತಿ ಕುಳಿತುಕೊಂಡ ಪೀಠವನ್ನು ಥರಣಿಪೀಠ ಎಂದು ಕರೆಯುತ್ತಾರೆ.

13.ಥರಣಿ ಪೀಠ

13.ಥರಣಿ ಪೀಠ

PC:YOUTUBE

ಈ ಥರಣಿ ಪೀಠವನ್ನು ನಾವು ಇಂದಿಗೂ ಕಾಣಬಹುದು. ಈ ಪೀಠವು ಸೃಷ್ಟಿ ಸ್ಥಿತಿ, ಲಯಕಾರನಿಗೆ ಚೆಹ್ನೆಯಾಗಿ ಹೇಳುತ್ತಾರೆ. ಅದ್ದರಿಂದಲೇ ಈ ಥರಣಿ ಪೀಠ ನಮಗೆ ಬಿಳಿ, ಕೆಂಪು, ಕಪ್ಪು ಬಣ್ಣಗಳು ಕಾಣಿಸುತ್ತವೆ. ಈ ಪೀಠದ ಮೇಲಿರುವ ದೇವಿಯನ್ನು ಧರಣಿಪೀಠ ನಾಯಕಿಯಾಗಿ ಪ್ರಜೆಗಳು ಪೂಜಿಸುತ್ತಾರೆ.

14.ಉದಂಬರ

14.ಉದಂಬರ

PC:YOUTUBE

ಇದು ಹೀಗೆ ಇದ್ದರೆ, ಶುಂಭ, ನಿಶುಂಭರ ಗುರುವಾದ ಉದಂಬರ ಇಲ್ಲಿನ ಗುಹೆಯಲ್ಲಿ ಇದ್ದು, ದೇವಿ ದರ್ಶನಕ್ಕೆ ಭೇಟಿ ನೀಡುವವರಿಗೆ ಸಂಹಾರಿಸಿ ತಿನ್ನುತ್ತಿದ್ದನು. ಅಷ್ಟೇ ಅಲ್ಲದೇ ಸುತ್ತಮುತ್ತಲ ಯಾರಾದರು ಯಾಗಗಳು ಮಾಡುತ್ತಾ ಇದ್ದರೆ ಅವರನ್ನು ಕೂಡ ಹಿಂಸಿಸುತ್ತಿದ್ದನು.

15.ಮೂರು ಕಿ.ಮೀ ದೂರ

15.ಮೂರು ಕಿ.ಮೀ ದೂರ

PC:YOUTUBE

ಇದರಿಂದಾಗಿ ಋಷಿಗಳು ದೇವಿಯನ್ನು ಪ್ರಾರ್ಥನಿ ಮಾಡಿ ಧರಣಿಪೀಠ ನಾಯಕಿ ಆ ರಾಕ್ಷಸಗುರುವನ್ನು ಯುದ್ಧದಲ್ಲಿ ಇಲ್ಲಿಯೇ ಸಂಹಾರ ಮಾಡಿದಳು ಎಂದು ಪುರಾಣ ಕಥೆಯು ಹೇಳುತ್ತದೆ. ಆ ಯುದ್ಧ ನಡೆದ ಪ್ರದೇಶವು ಕುಟ್ರಾಲ ಜಲಪಾತಕ್ಕೆ ಸುಮಾರು ಮೂರು ಕಿ.ಮೀ ದೂರದಲ್ಲಿದೆ.

16.ಗಂಗಾದೇವಿ ಜೇನಿನಿಂದ ಅಭಿಷೇಕ

16.ಗಂಗಾದೇವಿ ಜೇನಿನಿಂದ ಅಭಿಷೇಕ

PC:YOUTUBE

ಅದೇ ವಿಧವಾಗಿ ಇಲ್ಲಿರುವ ತೀರ್ಥವನ್ನು ಶೆನ್ ಭರ್ಗತೀರ್ಥ ಎಂದು ಕರೆಯುತ್ತಾರೆ. ಇಲ್ಲಿನ ದೇವಿಗೆ ಚೈತ್ರಮಾಸಲ್ಲಿ ಅತ್ಯಂತ ವಿಜೃಂಬಣೆಯಾಗಿ ಉತ್ಸವಗಳನ್ನು ಮಾಡುತ್ತಾರೆ. ಇನ್ನು ಪರಮಶಿವನನ್ನು ಇಲ್ಲಿ ಗಂಗಾದೇವಿ ಜೇನಿನಿಂದ ಅಭಿಷೇಕ ಮಾಡಿದಳು. ಅದ್ದರಿಂದಲೇ ಇಲ್ಲಿರುವ ಜಲಪಾತಕ್ಕೆ ಶಿವಮಧುಗಂಗ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

17.ಕುಟ್ರಾಲ ಕೂಡ ಒಂದು

17.ಕುಟ್ರಾಲ ಕೂಡ ಒಂದು

PC:YOUTUBE

ಇನ್ನು ಮುಖ್ಯವಾಗಿ ಪರಮಶಿವನು ಈ ಪ್ರಪಂಚದ ಮೇಲೆ 5 ಸ್ಥಳಗಳಲ್ಲಿ ಆನಂದವಾಗಿ ಶಿವತಾಂಡವವನ್ನು ಮಾಡಿದ್ದಾನೆ ಎಂದು ಶಿವಪುರಾಣವು ಹೇಳುತ್ತದೆ. ಅದರಲ್ಲಿ ಕುಟ್ರಾಲ ಕೂಡ ಒಂದು. ಇಲ್ಲಿ ಶಿವನು ತಾಂಡವ ಮಾಡಿದ ಸಭೆಯನ್ನು ಚಿತ್ರ ಸಭ ಎಂಬ ಹೆಸರಿನಿಂದ ಕರೆಯುತ್ತಾರೆ.

18.ಚಿತ್ರ ರೂಪದಲ್ಲಿ

18.ಚಿತ್ರ ರೂಪದಲ್ಲಿ

PC:YOUTUBE

ಉಳಿದ ಸಭಾ ಸ್ಥಳಗಳಿಗಿಂತ ಈ ಸಭಾ ವಿಭಿನ್ನವಾದುದು. ಉಳಿದ ನಾಲ್ಕು ಸ್ಥಳಗಳಲ್ಲಿ ಶಿವನ ವಿಗ್ರಹ ರೂಪದಲ್ಲಿ ಇದ್ದರೆ, ಇಲ್ಲಿ ಮಾತ್ರ ನಮಗೆ ಚಿತ್ರದ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಶಿವತಾಂಡವದಲ್ಲಿ ಕೂಡ ವಿಶಿಷ್ಟವಾದುದು ಎಂದು ಹೇಳುವ ತ್ರಿಪುರ ತಾಂಡವ ಭಂಗಿಯನ್ನು ಬ್ರಹ್ಮ ದೇವನೆ ಇಲ್ಲಿ ಸ್ವಯಂವಾಗಿ ಚಿತ್ರಿಸಿದ್ದಾನಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more