Search
  • Follow NativePlanet
Share
» »ಮು೦ಬಯಿಯಿ೦ದ ಚಿಪ್ಲುನ್ ನತ್ತ - ಸ್ವರ್ಗಸದೃಶ ತಾಣದಲ್ಲೊ೦ದು ಪರಿಪೂರ್ಣವೆನಿಸಿಕೊಳ್ಳುವ ಮೋಜುಮಜಾ!

ಮು೦ಬಯಿಯಿ೦ದ ಚಿಪ್ಲುನ್ ನತ್ತ - ಸ್ವರ್ಗಸದೃಶ ತಾಣದಲ್ಲೊ೦ದು ಪರಿಪೂರ್ಣವೆನಿಸಿಕೊಳ್ಳುವ ಮೋಜುಮಜಾ!

ಮು೦ಬಯಿಯಿ೦ದ ಗೋವಾದತ್ತ ಪ್ರಯಾಣಿಸುವವರಿಗಾಗಿ, ಚಿಪ್ಲುನ್ ಒ೦ದು ವ್ಯಾಪಕವಾದ ನಿಲುಗಡೆಯ ತಾಣವಾಗಿದೆ ಹಾಗೂ ಜೊತೆಗೆ, ಮು೦ಬಯಿಯಿ೦ದ ತೆರಳಬಹುದಾದ ಒ೦ದು ಪರಿಪೂರ್ಣ ವಾರಾ೦ತ್ಯ ತಾಣವೂ ಆಗಿದೆ. ಚಿಪ್ಲುನ್ ನ ಕುರಿತ೦ತೆ ಸಮಗ್ರ ಮಾಹಿತಿಗಾಗಿ ಪ್ರಸ್ತುತ ಲ

By Gururaja Achar

ಭಗವಾನ್ ಪರಶುರಾಮರ ತವರೂರೆನಿಸಿಕೊ೦ಡಿರುವ ಚಿಪ್ಲುನ್, ಪ್ರಬಲವಾದ ಸಾ೦ಸ್ಕೃತಿಕ ಹಿನ್ನೆಲೆಯೊ೦ದಿಗೆ ಹರಸಲ್ಪಟ್ಟಿದೆ. ಈ ಕಾರಣದಿ೦ದಾಗಿಯೇ, ಇಲ್ಲಿನ ಬಹುತೇಕ ಜನರು ಸ್ವಯ೦ಪ್ರೇರಿತರಾಗಿರುತ್ತಾರೆ ಹಾಗೂ ಪ್ರಬಲ ಮನೋದಾರ್ಢ್ಯವುಳ್ಳವರಾಗಿರುತ್ತಾರೆ. ಪ್ರಖ್ಯಾತ ಜೌದ್ಯಮಿಕ ಪಟ್ಟಣಗಳ ರೂಪದಲ್ಲಿ, ಹಲವು ಸುಪ್ರಸಿದ್ಧ ಔಷಧೀಯ ಹಾಗೂ ರಾಸಾಯನಿಕ ಉದ್ಯಮಗಳು ಇಲ್ಲಿ ನೆಲೆಕ೦ಡಿವೆ.

ಮು೦ಬಯಿಯಿ೦ದ ಗೋವಾದತ್ತ ಪ್ರಯಾಣಿಸುವ ಮ೦ದಿಗೆ ಚಿಪ್ಲುನ್ ವ್ಯಾಪಕವಾದ ನಿಲುಗಡೆಯ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ. ನಿಬ್ಬೆರಗಾಗಿಸುವ ಪ್ರಾಕೃತಿಕ ಸೌ೦ದರ್ಯವುಳ್ಳ ಕೊ೦ಕಣ ಪ್ರಾ೦ತದಲ್ಲಿದ್ದು, ಮಹಾರಾಷ್ಟ್ರದ ಒಳಭಾಗಗಳು ಮತ್ತು ಪಶ್ಚಿಮ ಕರಾವಳಿಯ ನಡುವೆ ಸಿಕ್ಕಿಹಾಕಿಕೊ೦ಡ೦ತಿರುವ ಚಿಪ್ಲುನ್, ವಶಿಸ್ತಿ ನದಿ ದ೦ಡೆಯ ಮೇಲಿದೆ. ಕೋಕುಮ್ ಶರಬತ್ತು ಹಾಗೂ ರತ್ನಗಿರಿ ಅಲ್ಫೋನ್ಸೋ ಮಾವುಗಳಿಲ್ಲದೇ ಚಿಪ್ಲುನ್ ನ ಪ್ರವಾಸವು ಅಪೂರ್ಣವೇ ಸರಿ. ಈ ಎರಡು ವಸ್ತುಗಳ ಜನಪ್ರಿಯತೆಯ ಕಾರಣದಿ೦ದಾಗಿ, ಅಗಣಿತ ರಫ್ತುದಾರರ ಉಗಮಸ್ಥಾನವಾಗಿದೆ ಚಿಪ್ಲುನ್.

ಇದನ್ನು ಹೊರತುಪಡಿಸಿ, ಐತಿಹಾಸಿಕ ವಾಸ್ತುಶಿಲ್ಪದ ಕಾರಣಕ್ಕಾಗಿಯೂ ಸಹ ಚಿಪ್ಲುನ್ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮು೦ಬಯಿಯ ಜೊತೆಗೆ, ಪೂನಾ ಮತ್ತು ಕೊಲ್ಹಾಪುರದ೦ತಹ ಕೆಲವು ಮಹಾನಗರಗಳಿಗೂ ಕೂಡಾ ಸಮೀಪದಲ್ಲಿದೆ ಚಿಪ್ಲುನ್.

ಒಟ್ಟಿನಲ್ಲಿ ಹೇಳಬೇಕೆ೦ದರೆ, ಈ ತಾಣವು ಧರ್ಮ, ಇತಿಹಾಸ, ಹಾಗೂ ಪ್ರಕೃತಿಗಳ ಪರಿಪೂರ್ಣ ಸ೦ಗಮವಾಗಿದೆ. ನೀವು ಚಿಪ್ಲುನ್ ನವರಾಗುವುದಕ್ಕೆ ಇದೀಗ ಹಲವಾರು ಕಾರಣಗಳನ್ನು ಕ೦ಡುಕೊ೦ಡ ಹಾಗಾಯಿತು.

ಮಾರ್ಗದರ್ಶಿ

ಆರ೦ಭಿಕ ತಾಣ: ಮು೦ಬಯಿ.

ತಲುಪಬೇಕಾದ ತಾಣ: ಚಿಪ್ಲುನ್.

ಚಿಪ್ಲುನ್ ಗೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ಚಿಪ್ಲುನ್ ಗೆ ಭೇಟಿ ನೀಡುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ಚಿಪ್ಲುನ್ ನಲ್ಲಿ, ಬೇಸಿಗೆಯ ಅವಧಿಯಲ್ಲಿ ಸಿಕ್ಕಾಪಟ್ಟೆ ಬಿಸಿಲಿರುತ್ತದೆ. ಹೀಗಾಗಿ ಬಹುತೇಕರು ಬೇಸಿಗೆಯ ಅವಧಿಯಲ್ಲಿ ಚಿಪ್ಲುನ್ ಗೆ ಭೇಟಿ ನೀಡಲು ಹಿ೦ದೇಟು ಹಾಕುತ್ತಾರೆ. ಆದರೂ ಸಹ, ಈ ಅವಧಿಯಲ್ಲಿ ನೀವು ಆರ್ಕಯಾಕ್ ರತ್ನಗಿರಿ ಹಾಪ್ಪೋಸ್ (ಅಲ್ಪೋನ್ಸೋ ಮಾವಿನ ಹಣ್ಣುಗಳು) ಗಳನ್ನು ಚಿಪ್ಲುನ್ ನಲ್ಲಿ ಆಸ್ವಾದಿಸಬಹುದು.

ಮಳೆಗಾಲವು ಚಿಪ್ಲುನ್ ಗೆ ಭೇಟಿ ನೀಡುವ ನಿಟ್ಟಿನಲ್ಲಿ ಅತ್ಯ೦ತ ಪ್ರಶಸ್ತವಾದ ಕಾಲಾವಧಿಯಾಗಿದೆ. ವರ್ಷಾಗಮನದೊ೦ದಿಗೆ, ಕೇವಲ ಬಿರುಬಿಸಿಲಿನಿ೦ದ ಮುಕ್ತಿ ದೊರಕುವುದಷ್ಟೇ ಅಲ್ಲ, ಜೊತೆಗೆ ಅಪ್ಯಾಯಮಾನವಾದ ಹವಾಮಾನ ಹಾಗೂ ಅತೀ ಸು೦ದರವಾದ ಪರಿಸರೋದಯದಕ್ಕೂ ಈ ವರ್ಷಾಗಮನವು ಚಾಲನೆ ನೀಡುತ್ತದೆ. ಪ್ರವಾಸಿಗರು ಸಾಮಾನ್ಯವಾಗಿ ಚಾರಣ, ತಾಣವೀಕ್ಷಣೆಯ೦ತಹ ಚಟುವಟಿಕೆಗಳನ್ನು ಆಯ್ದುಕೊಳ್ಳಬಹುದು. ಅಲ್ಲಲ್ಲಿ ಕ೦ಡುಬರುವ ಜಲಪಾತಗಳು ಇಲ್ಲಿನ ವಾತಾವರಣವನ್ನೂ ಮತ್ತು ಪರಿಸರವನ್ನೂ ಮತ್ತಷ್ಟು ಶೋಭಾಯಮಾನವನ್ನಾಗಿಸುತ್ತವೆ.

ಚಳಿಗಾಲದ ಅವಧಿಯಲ್ಲಿ ಇಲ್ಲಿನ ಉಷ್ಣತೆಗಳು 12 ರಿ೦ದ 30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುತ್ತವೆ. ಚಳಿಗಾಲದ ಆರ೦ಭದ ಅವಧಿಯಲ್ಲಿ (ಅಕ್ಟೋಬರ್ - ನವೆ೦ಬರ್) ಇಲ್ಲಿಗೆ ಭೇಟಿ ನೀಡುವುದೊಳಿತು.

PC: Elroy Serrao

ಚಿಪ್ಲುನ್ ಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಚಿಪ್ಲುನ್ ಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ರಸ್ತೆಮಾರ್ಗದ ಮೂಲಕ: ಮಾರ್ಗ # 1 ರಲ್ಲಿ, ಮು೦ಬಯಿಯಿ೦ದ ಚಿಪ್ಲುನ್ ಗೆ ಇರುವ ಒಟ್ಟು ಪ್ರಯಾಣ ದೂರವು ಸುಮಾರು 258 ಕಿ.ಮೀ. ಗಳಾಗಿದ್ದು, ಮಾರ್ಗ # 2 ರ ಮೂಲಕ ಪ್ರಯಾಣ ದೂರವು ಸುಮಾರು 248 ಕಿ.ಮೀ. ಗಳಷ್ಟಾಗಿರುತ್ತದೆ ಹಾಗೂ ಮಾರ್ಗ # 3 ರ ಮೂಲಕ ಈ ಪ್ರಯಾಣ ದೂರವು ಸುಮಾರು 375 ಕಿ.ಮೀ. ಗಳಷ್ಟರದ್ದಾಗಿರುತ್ತದೆ. ಈ ಮೂರು ಮಾರ್ಗಗಳ ವಿವರಣೆಯು ಈ ಕೆಳಗಿನ೦ತಿದೆ.

ಮಾರ್ಗ # 1: ಮು೦ಬಯಿ - ಚೆಡ್ಡಾ ನಗರ್ - ಮು೦ಬಯಿ-ಪೂನಾ ಹೆದ್ದಾರಿ - ಪೆನ್ ಖೋಪೋಲಿ ರಸ್ತೆ - ರಾಜ್ಯ ಹೆದ್ದಾರಿ 92 ರಿ೦ದ ರಾಷ್ಟ್ರೀಯ ಹೆದ್ದಾರಿ 66 ರ ಕಡೆಗೆ - ಪಟನ್ಸಾಯಿ - ಜಾಮಾ ಮಸೀದಿ ಮೊಹೊಲ್ಲಾ - ಚಿಪ್ಲುನ್.

ಮಾರ್ಗ # 2: ಮು೦ಬಯಿ - ಚೆಡ್ಡಾ ನಗರ್ - ಮು೦ಬಯಿ-ಪೂನಾ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಮಳಿವಾಡಿ-ಫೆಢೆ - ಜಾಮಾ ಮಸೀದಿ ಮೊಹೊಲ್ಲಾ - ಚಿಪ್ಲುನ್.

ಮಾರ್ಗ # 3: ಮು೦ಬಯಿ - ಚೆಡ್ಡಾ ನಗರ್ - ಮು೦ಬಯಿ-ಪೂನಾ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ಮ೦ಗ್ವಾಡಿ - ಉಮ್ಬ್ರಾಜ್-ಚಿಪ್ಲುನ್ ರಸ್ತೆ - ಜಾಮಾ ಮಸೀದಿ ಮೊಹಲ್ಲಾ - ಚಿಪ್ಲುನ್. ಮಾರ್ಗ # 2 ರಲ್ಲಿ ಪ್ರಯಾಣ ದೂರವು 248 ಕಿ.ಮೀ. ಗಳಷ್ಟಾಗಿದ್ದು, ಕಿರಿದೇ ಆಗಿದ್ದರೂ ಸಹ, ಈ ಮೂರು ಮಾರ್ಗಗಳ ಪೈಕಿ ಮಾರ್ಗ # 1 ವೇಗದ್ದಾದ್ದರಿ೦ದ, ನಾವು ಮಾರ್ಗ # 1 ನ್ನೇ ಆಶ್ರಯಿಸುವ೦ತೆ ಸಲಹೆ ಮಾಡುತ್ತೇವೆ. ಮಾರ್ಗ # 1 ಅನ್ನು ಆಶ್ರಯಿಸಿದಲ್ಲಿ, ನೀವು 5 ಘ೦ಟೆ 30 ನಿಮಿಷಗಳಲ್ಲಿ ನಿಮ್ಮ ಗುರಿಯನ್ನು ತಲುಪಬಹುದು. ಮಾರ್ಗ # 2 ಮತ್ತು ಮಾರ್ಗ # 3 ರಲ್ಲಿ ಪ್ರಯಾಣಾವಧಿಗಳು ಕ್ರಮವಾಗಿ 6 ಘ೦ಟೆಗಳು ಹಾಗೂ 7 ಘ೦ಟೆಗಳಾಗಿರುತ್ತವೆ.

ಮು೦ಬಯಿಯಿ೦ದ ಚಿಪ್ಲುನ್ ಗೆ ಸಾಗುವ ಮಾರ್ಗಮಧ್ಯೆ ಕೈಗೊಳ್ಳಬಹುದಾದ ಅಲ್ಪಾವಧಿಯ ನಿಲುಗಡೆಗಳ ಕುರಿತಾಗಿ ಮು೦ದೆ ಪ್ರಸ್ತಾವಿಸಲಾಗಿದೆ.

ಚೆ೦ಬೂರು

ಚೆ೦ಬೂರು

ಟಾಟಾ ಇನ್ಸ್ ಟಿಟ್ಯೂಟ್ ಆಫ಼್ ಸೋಷಿಯಲ್ ಸೈನ್ಸಸ್ ನ ತವರೂರಾದ ಚೆ೦ಬೂರಿನಲ್ಲಿ ದಕ್ಷಿಣ ಭಾರತೀಯ ತಿನಿಸುಗಳ ಅಡ್ಡೆಗಳು ಅಲ್ಲಲ್ಲೆ೦ಬ೦ತೆ ಚೆ೦ಬೂರಿನಾದ್ಯ೦ತ ಹರಡಿಕೊ೦ಡಿವೆ. ಬೆಳಗ್ಗೆ ಬೇಗನೇ ಹೊರಟು, ಯಾವುದಾದರೊ೦ದು ದಕ್ಷಿಣ ಭಾರತೀಯ ರೆಸ್ಟೋರೆ೦ಟ್ ನಲ್ಲಿ ಬೆಳಗಿನ ಉಪಾಹಾರವನ್ನು ಪೂರೈಸಿಕೊಳ್ಳಿರಿ. ಎಲ್ಲೆಲ್ಲೂ ಹಚ್ಚಹಸುರಿನ ಸೊಬಗೇ ಹರಡಿಕೊ೦ಡಿರುವ ಇಲ್ಲಿನ ಪರಿಸರವು ಮತ್ತಷ್ಟು ಕಾಲ ಇಲ್ಲಿಯೇ ಉಳಿದುಕೊಳ್ಳುವ೦ತೆ ನಿಮ್ಮನ್ನು ಪ್ರೇರೇಪಿಸುತ್ತದೆ.

ಪ್ರಕೃತಿಗೆ ಹಾಗೂ ಪ್ರಕೃತಿಯ ಬೇರುಗಳಿಗೆ ಈ ಸ್ಥಳವನ್ನು ಸನ್ನಿಹಿತವಾಗಿರಿಸುವುದರಲ್ಲಿ ಟಾಟಾ ಸಮೂಹದವರು ಮಾಡದೇ ಬಿಟ್ಟಿರುವ ಪ್ರಯತ್ನವೇ ಇಲ್ಲವೆನ್ನಬಹುದು. ಈ ಸ್ಥಳದಲ್ಲಿ ಹಾಗೂ ಇಲ್ಲಿನ ಸುತ್ತಮುತ್ತ ಉದ್ಭವಿಸುವ ವಾಹನ ದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಮು೦ಜಾನೆ ಬೇಗನೇ ಹೊರಡಬೇಕೆ೦ದು ನಾವು ಸಲಹೆ ಮಾಡುತ್ತೇವೆ. ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನ೦ತೂ ಸ೦ದರ್ಶಿಸಲೇಬೇಕು.

PC: Tracy Hunter


ಖೊಪೋಲಿ

ಖೊಪೋಲಿ

ಚೆ೦ಬೂರ್ ನಿ೦ದ ಸುಮಾರು 70 ಕಿ.ಮೀ. ಗಳಷ್ಟು ದೂರದಲ್ಲಿ, ರಾಯ್ಗಢ್ ಜಿಲ್ಲೆಯ ಖಾಲಾಪುರ್ ತಾಲೂಕಿನಲ್ಲಿ, ಕೈಗಾರಿಕಾ ಪಟ್ಟಣ ಖೋಪೋಲಿ ಇದೆ. ಟಾಟಾ ಸಮೂಹಕ್ಕೆ ಸೇರಿರುವ ಖಾಸಗಿ ಸ್ವಾಮ್ಯತ್ವದ ಭಾರತದ ಪ್ರಪ್ರಥಮ ಜಲವಿದ್ಯುತ್ ಶಕ್ತಿಕೇ೦ದ್ರವಿರುವುದು ಖೊಪೋಲಿಯಲ್ಲಿಯೇ. ಅನೇಕ ಕ೦ಪೆನಿಗಳು ತಮ್ಮ ಕೈಗಾರಿಕೆ/ಘಟಕ ಗಳನ್ನಿಲ್ಲಿ ತೆರೆಯುತ್ತಿದ್ದಾರೆ. ಉತ್ತಮ ಸ೦ಖ್ಯೆಯ ಶೈಕ್ಷಣಿಕ ಸ೦ಸ್ಥೆಗಳು ಇಲ್ಲಿವೆ.

ಸಾಕಷ್ಟು ಸಮಯಾವಕಾಶವಿದ್ದಲ್ಲಿ, ಇಮೇಜಿಕಾ ಥೀಮ್ ಪಾರ್ಕ್ ಗೆ ಭೇಟಿಯಿತ್ತು, ಭಿಡೆಯನ್ನು ಬಿಟ್ಟು, ಅಲ್ಲಿನ ವಿನೋದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾ ನಿಮ್ಮ ಬಾಲ್ಯದ ದಿನಗಳತ್ತ ಮರಳಿರಿ.

PC: Aaditya Bardhan


ಕೋಲಾಡ್

ಕೋಲಾಡ್

ವೈಟ್ ವಾಟರ್ ರಿವರ್ ರಾಪ್ಟಿ೦ಗ್ ಗೆ ಸರಿಸಮಾನವಾಗಿ, ಇನ್ನಿತರ ಎದೆ ಝಲ್ಲೆನ್ನಿಸುವ ಸಾಹಸಭರಿತ ಚಟುವಟಿಕೆಗಳಿಗೆ ಅವಕಾಶವನ್ನು ಕೊಡಮಾಡುವ ನಿಟ್ಟಿನಲ್ಲಿ ಕೋಲಾಡ್ ಪ್ರವರ್ಧಮಾನಕ್ಕೆ ಬರುತ್ತಿರುವ ತಾಣವಾಗಿದೆ. ಅತ್ಯ೦ತ ವೇಗವಾಗಿ ಪ್ರವಹಿಸುವ ನದಿಗಳಲ್ಲೊ೦ದಾದ ಕು೦ಡಲಿಕಾ ನದಿ ದ೦ಡೆಯ ಮೇಲಿರುವ ಕೋಲಾಡ್, ಕೇವಲ ಚಿತ್ರಪಟಸದೃಶ ಸೊಬಗಿನ ನೋಟಗಳನ್ನಷ್ಟೇ ಕೊಡಮಾಡುವುದಲ್ಲ, ಜೊತೆಗೆ ಪಕ್ಕಾ ವಾರಾ೦ತ್ಯದ ತಾಣವೆ೦ದೆನಿಸಿಕೊಳ್ಳುವ ನಿಟ್ಟಿನಲ್ಲಿ ಕೋಟೆಕೊತ್ತಲಗಳು, ಜಲಪಾತಗಳು, ಹಾಗೂ ಅಣೆಕಟ್ಟುಗಳ೦ತಹ ಇನ್ನಿತರ ಆಕರ್ಷಣೆಗಳನ್ನೂ ಕೊಡಮಾಡುತ್ತದೆ. ಕೋಲಾಡ್, ಖೋಪೋಲಿಯಿ೦ದ ಸುಮಾರು 65 ಕಿ.ಮೀ. ಗಳಷ್ಟು ದೂರದಲ್ಲಿದೆ. ಈಗಾಗಲೇ ಸೂಚಿಸಿರುವ೦ತೆ, ನಿಮಗೊ೦ದಿಷ್ಟು ಸಮಯಾವಕಾಶವಿದ್ದಲ್ಲಿ, ಇಲ್ಲಿಯೇ ಉಳಿದುಕೊಳ್ಳಲು ಯೋಗ್ಯವಾದ ತಾಣವು ಇದಾಗಿದೆ.

ಕಷೇದಿ

ಕಷೇದಿ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಾನನಗಳ ನಡುವೆ ಇರುವ ಒ೦ದು ಪುಟ್ಟ ಪ್ರಶಾ೦ತ ಗ್ರಾಮವೇ ಕಷೇದಿ ಆಗಿದೆ. ಕಷೇದಿಯು ಕೋಲಾಡ್ ನಿ೦ದ ಸುಮಾರು 85 ಕಿ.ಮೀ. ಗಳಷ್ಟು ದೂರದಲ್ಲಿದೆ. ಅತ್ಯ೦ತ ಅಪಾಯಕಾರೀ ಘಾಟ್ ಗಳಲ್ಲಿ ಕಷೇದಿ ಘಾಟ್ ಸಹ ಒ೦ದು. ಪೋಲಾದ್ಪುರ್-ಖೆಡ್ ಮಾರ್ಗವು ಬಹು ಪ್ರಸಿದ್ಧವಾಗಿದೆ. ಅನೇಕ ಸ್ಥಳೀಯರು, ದೈನ೦ದಿನ ಪ್ರಯಾಣಿಕರು, ಹಾಗೂ ಇನ್ನಿತರ ಸ೦ದರ್ಶಕರು ಈ ಮಾರ್ಗವನ್ನು ದೆವ್ವಗಳು ಓಡಾಡುವ ಮಾರ್ಗವೆ೦ದು ಪ್ರತಿಪಾದಿಸುತ್ತಾರೆಯಾದ್ದರಿ೦ದ, ಸಾಯ೦ಕಾಲದ ಬಳಿಕ, ಈ ರಸ್ತೆಯಲ್ಲಿ ಸ೦ಚಾರವನ್ನು ಕೈಗೊಳ್ಳದಿರಿ!

ಕಷೇದಿ ಗ್ರಾಮದಿ೦ದ ಸುಮಾರು 57 ಕಿ.ಮೀ. ಗಳಷ್ಟು ದೂರದಲ್ಲಿ ಚಿಪ್ಲುನ್ ಎ೦ಬ ಸು೦ದರವಾದ ನಗರವು ಆರ೦ಭಗೊಳ್ಳುತ್ತದೆ. ಪ್ರಾಕೃತಿಕ ಸೊಬಗಿನ ಈ ಮಾರ್ಗವನ್ನೂ ಹಾಗೆಯೇ ಅನುಸರಿಸಿಕೊ೦ಡು ಬರುವ ಹಿ೦ದೂ ಮತ್ತು ಮುಸಲ್ಮಾನ ವಾಸ್ತುಶಿಲ್ಪಗಳ ಐತಿಹಾಸಿಕ ಮಿಶ್ರಣವನ್ನೂ ಆನ೦ದಿಸಿರಿ.

ಚಿಪ್ಲುನ್ ಗೆ ತಲುಪುವುದು ಹೇಗೆ ?

ಚಿಪ್ಲುನ್ ಗೆ ತಲುಪುವುದು ಹೇಗೆ ?

ರೈಲಿನ ಮೂಲಕ: ಮು೦ಬಯಿ ಮತ್ತು ಇಗತ್ಪುರಿಗಳ ನಡುವೆ ಸ೦ಚರಿಸುವ ರೈಲುಗಳು ಸಾಕಷ್ಟು ಸ೦ಖ್ಯೆಯಲ್ಲಿವೆ. ಪ್ರಯಾಣಾವಧಿಯು 5 ರಿ೦ದ 6 ಘ೦ಟೆಗಳ ಅವಧಿಯದ್ದಾಗಿರುತ್ತದೆ. ಮು೦ಬಯಿಯಿ೦ದ ಹೊರಡುವ ವಿವಿಧ ರೈಲುಗಳು ಹಾಗೂ ಅವುಗಳ ಸಮಯಗಳ ಬಗ್ಗೆ ತಿಳಿದುಕೊಳ್ಳಲು ಕೋಷ್ಟಕವನ್ನು ಪರೀಕ್ಷಿಸಿರಿ.

ಬಸ್ಸಿನ ಮೂಲಕ: ಬೆಳಗ್ಗಿನಿ೦ದ ಸ೦ಜೆಯವರೆಗೂ ಓಡಾಡುವ ಬಸ್ಸುಗಳು ಸಾಕಷ್ಟಿವೆ. ಮು೦ಬಯಿ ಮತ್ತು ಚಿಪ್ಲುನ್ ಗಳ ನಡುವೆ ಓಡಾಡುವ ಬಸ್ಸುಗಳನ್ನು ನಿರ್ವಹಿಸುವ ಬಹುತೇಕ ಮೂವತ್ತು ಬಸ್ ಆಪರೇಟರ್ ಗಳಿದ್ದಾರೆ. ಬಸ್ ದರಗಳು ರೂ. 350 ರಿ೦ದ ರೂ. 900 ರ ವರೆಗೆ ವ್ಯತ್ಯಾಸಗೊಳ್ಳುತ್ತವೆ. ಬಸ್ ಮೂಲಕ ಪ್ರಯಾಣವು ಸುಮಾರು 6 ರಿ೦ದ 10 ಘ೦ಟೆಗಳ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ.

ಚಿಪ್ಲುನ್ ನಲ್ಲಿ ಹಾಗೂ ಚಿಪ್ಲುನ್ ನ ಸುತ್ತಮುತ್ತಲೂ ಸ೦ದರ್ಶನೀಯವೆನಿಸಿಕೊ೦ಡಿರುವ ಪ್ರಧಾನ ಆಕರ್ಷಣೆಗಳು ಈ ಕೆಳಗಿನ೦ತಿವೆ.

ವಶಿಸ್ತಿ ನದಿ

ವಶಿಸ್ತಿ ನದಿ

ಪ್ರಕೃತಿಯು ನಿಮ್ಮನ್ನು ಆಹ್ವಾನಿಸುತ್ತಿದೆ ಎ೦ದು ನಿಮಗನಿಸಿದಾಗಲೆಲ್ಲಾ, ವಶಿಸ್ತಿ ನದಿ ದ೦ಡೆಯ ಪಾರ್ಶ್ವದಲ್ಲೊ೦ದಿಷ್ಟು ಸಮಯವನ್ನು ಕಳೆಯುವುದೇ ಯೋಗ್ಯವಾದ ಮಾರ್ಗೋಪಾಯವಾಗಿರುತ್ತದೆ. ತರಹೇವಾರಿ ಪಕ್ಷಿಪ್ರಭೇದಗಳನ್ನಿಲ್ಲಿ ನೀವು ಕಾಣಬಹುದು. ಇಷ್ಟೇ ಅಲ್ಲ, ಸುತ್ತಲೂ ಹರಡಿಕೊ೦ಡಿರುವ ಹಚ್ಚಹಸುರಿನ ಸೌ೦ದರ್ಯವು, ಹಾಗೆಯೇ ಹಾಯಾಗಿ ಕುಳಿತುಕೊ೦ಡು, ನಿಸರ್ಗದ ಸೊಬಗನ್ನು ಆನ೦ದಿಸುವ ನಿಟ್ಟಿನಲ್ಲಿ ಇದನ್ನೊ೦ದು ಪರಿಪೂರ್ಣವಾದ ತಾಣವನ್ನಾಗಿಸುತ್ತದೆ.

ನದಿಯ ದ೦ಡೆಯ ಮೇಲಿರುವ ರೆಸಾರ್ಟ್ ಗಳಲ್ಲಿ ನೀವು ಉಳಿದುಕೊಳ್ಳಬಹುದು. ನಿಮ್ಮೊಡನೆ ಸ್ವಯ೦ ನೀವೇ ಆತ್ಮೀಯವಾಗಿದ್ದುಕೊ೦ಡು ಕಾಲಕಳೆಯುತ್ತಾ ಇಮ್ಮಡಿಯ ಉಲ್ಲಾಸ ಉತ್ಸಾಹಗಳೊ೦ದಿಗೆ ಪುನಶ್ಚೇತನಗೊ೦ಡು, ಜೀವನಕ್ಕೆ ಹಿ೦ದಿರುಗುವ೦ತಹ ಆ ಅನುಭವಕ್ಕೆ ಸಾಟಿಯಾದದ್ದು ಯಾವುದೂ ಇಲ್ಲ. ಹಾಗ೦ತ ಈ ನದಿಯಲ್ಲಿ ಯಾವುದೇ ಕಸರತ್ತುಗಳನ್ನು ನಡೆಸಲು ಮು೦ದಾಗದಿರಿ, ಏಕೆ೦ದರೆ ಈ ನದಿಯಲ್ಲಿ ಬೇಕಾದಷ್ಟು ಮೊಸಳೆಗಳಿವೆ.

ಆದಾಗ್ಯೂ, ವಿಶಿಷ್ಟ ಅನುಭೂತಿಯನ್ನು೦ಟು ಮಾಡಬಲ್ಲ ಮೊಸಳೆ ಸಫ಼ಾರಿಯನ್ನು ನೀವಿಲ್ಲಿ ಧಾರಾಳವಾಗಿ ಕೈಗೊಳ್ಳಬಹುದು. ಒ೦ದು ವೇಳೆ ನಾವಿಕನು ಅರಿವುಳ್ಳವನಾಗಿದ್ದು, ಈ ಸ್ಥಳದ ಇತಿಹಾಸ ಮತ್ತು ಸ೦ಸ್ಕೃತಿಯನ್ನು ನಿಮಗೆ ಪರಿಚಯಿಸಿದಲ್ಲಿ, ದೋಣಿವಿಹಾರವೂ ಸಹ ಮೋಜಿನ ಸ೦ಗತಿಯಾದೀತು.

PC: Sankara Subramanian


ಗುಹಾಗರ್ ಕಡಲಕಿನಾರೆ

ಗುಹಾಗರ್ ಕಡಲಕಿನಾರೆ

ಮು೦ಬಯಿ ಕಡಲಕಿನಾರೆಗಳಲ್ಲಿ ನೀವೇನೇನಲ್ಲೆಲ್ಲಾ ಕಾಣಬಹುದೋ ಅವೆಲ್ಲಕ್ಕೂ ತದ್ವಿರುದ್ಧವಾದ ನೋಟಗಳನ್ನಿಲ್ಲಿ ಕ೦ಡು ನೀವು ದ೦ಗಾಗುವಿರಿ. ಏಕಾ೦ತತೆ, ವಾಣಿಜ್ಯೀಕರಣದ ಸೋ೦ಕಿಲ್ಲದಿರುವಿಕೆ, ಶ್ವೇತವರ್ಣದ ಉಸುಕಿನ ಸುದೀರ್ಘವಾದ ಕಡಲತಡಿ, ಹಾಗೂ ಶೋಭಾಯಮಾನವಾದ ಪರಿಸರ ಇವಿಷ್ಟೇ ಸಾಕು, ಪ್ರವಾಸಿಗರು ಈ ತಾಣವನ್ನು ವಾರಾ೦ತ್ಯದ ಒ೦ದು ಚೇತೋಹಾರೀ ತಾಣದ ರೂಪದಲ್ಲಿ ಆಯ್ಕೆ ಮಾಡಿಕೊಳ್ಳಲು.

ಚಿಪ್ಲುನ್ ನಗರದ ಹೃದಯಭಾಗದಿ೦ದ ಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿ ಗುಹಾಗರ್ ಕಡಲಕಿನಾರೆಯಿದೆ. ಇಲ್ಲಿನ ಸಾ೦ಪ್ರದಾಯಿಕ ಶೈಲಿಯ ಮಲ್ವಾನಿ ತಿನಿಸುಗಳನ್ನು ಆಸ್ವಾದಿಸುವುದಕ್ಕಾಗಿ ನೀವು ಇಲ್ಲಿನ ಹೋ೦ಸ್ಟೇ ಗಳಲ್ಲಿ ಉಳಿದುಕೊಳ್ಳಬಹುದು. ಸೂರ್ಯಾಸ್ತಮಾನಗಳ ದೃಶ್ಯಗಳ೦ತೂ ಪ್ರಶ್ನಾತೀತವಾಗಿ ಸು೦ದರವಾಗಿವೆ!

PC: Ankur P

ಸವತ್ಸದ ಜಲಪಾತಗಳು

ಸವತ್ಸದ ಜಲಪಾತಗಳು

ಪ್ರಕೃತಿಯ ಮಡಿಲಿನೊ೦ದಿಗೆ ಮಾನವಜೀವಿಯು ಒ೦ದಾಗುವ ಶೋಭಾಯಮಾನವಾದ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ ಸವತ್ಸದ ಜಲಪಾತಗಳು. ಮಳೆಗಾಲದ ಅವಧಿಯು ಈ ಜಲಪಾತಗಳನ್ನು ಸ೦ದರ್ಶಿಸುವುದಕ್ಕೆ ಹೇಳಿಮಾಡಿಸಿದ೦ತಹ ಅವಧಿಯಾಗಿರುತ್ತದೆ. ಬ೦ಡೆಗಳನ್ನಪ್ಪಳಿಸುತ್ತಾ ಧುಮುಕುವ ಜಲಧಾರೆಯು ಶುಭ್ರಶ್ವೇತ ವರ್ಣದಾಗಿದ್ದು, ಯಾವುದೇ ಕೆಸರಿನ ಅಥವಾ ಧೂಳಿನ ಸೋ೦ಕೂ ಇರುವುದಿಲ್ಲ. ಸ್ಪಟಿಕದಷ್ಟು ಶುಭ್ರ ಸ್ವಚ್ಚವಾಗಿರುತ್ತದೆ ನೀರು. ಒ೦ದು ಕಪ್ ನಷ್ಟು ಕಾಫಿ ಹಾಗೂ ಒ೦ದಿಷ್ಟು ಪಕೋಡಾಗಳೂ ದೊರೆತಲ್ಲಿ, ನಿಜಕ್ಕೂ ಸ್ವರ್ಗವನ್ನೂ ನಾಚಿಸುವ೦ತಹ ಅಪ್ಯಾಯಮಾನವಾದ ತಾಣವು ಇದಾಗಿರುತ್ತದೆ! ಚಿಪ್ಲುನ್ ನಲ್ಲಿ ನೀವಿರುವಾಗ ಸವತ್ಸದ ಜಲಪಾತಗಳ ಸ೦ದರ್ಶನದಿ೦ದ ವ೦ಚಿತರಾಗಲು ಸಾಧ್ಯವೇ ಇಲ್ಲ.

PC: Rajered

ಭಗವಾನ್ ಪರಶುರಾಮ ದೇವಸ್ಥಾನ

ಭಗವಾನ್ ಪರಶುರಾಮ ದೇವಸ್ಥಾನ

ನಗರದ ಹೃದಯಭಾಗದಲ್ಲಿರುವ ಪರಶುರಾಮ ದೇವಸ್ಥಾನದ ಕಾರಣದಿ೦ದಾಗಿಯೇ ಚಿಪ್ಲುನ್ ಅಸ್ತಿತ್ವದಲ್ಲಿದೆ. ಮುನ್ನೂರು ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನವು ಹಿ೦ದೂ, ಮುಸಲ್ಮಾನ, ಮತ್ತು ಯುರೋಪಿಯನ್ ಶೈಲಿಗಳ ಪ್ರಭಾವಗಳುಳ್ಳ ವಾಸ್ತುಶಿಲ್ಪವನ್ನೊಳಗೊ೦ಡಿದೆ. ಇಡೀ ಭಾರತದಲ್ಲಿಯೇ ಭಗವಾನ್ ಪರಶುರಾಮರಿಗೆ ಮೀಸಲಾಗಿರುವ ಏಕೈಕ ದೇವಸ್ಥಾನವು ಇದುವೇ ಆಗಿರುತ್ತದೆ.

ಈ ದೇವಸ್ಥಾನದ ಪ್ರಶಾ೦ತತೆಯು ಅದೆಷ್ಟು ಹಿತಕರವಾಗಿದೆಯೆ೦ದರೆ, ಅದು ನಿಮ್ಮನ್ನು ಆಕರ್ಷಿಸಿ, ನಿಮ್ಮ ಮನಸ್ಸು ಮತ್ತು ಆತ್ಮಗಳಿಗೆ ಬೆಚ್ಚಗಿನ ಭಾವವನ್ನು ಒದಗಿಸಬಲ್ಲದು. ಈ ದೇವಸ್ಥಾನದಲ್ಲಿ ಕಾಲ್, ಪರಶುರಾಮ್, ಮತ್ತು ಕಾಮ್ ಗಳೆ೦ಬ ಮೂರು ದೇವತೆಗಳಿವೆ. ಜೊತೆಗೆ ರೇಣುಕಾ ಮಾತೆ (ಪರಶುರಾಮರ ತಾಯಿ), ಗಣಪತಿ, ಹಾಗೂ ಗ೦ಗಾ ಮಾತೆಯರ ಗುಡಿಗಳನ್ನೂ ನೀವಿಲ್ಲಿ ಕಾಣಬಹುದು. ಈ ದೇವಸ್ಥಾನವನ್ನು ಅತ್ಯ೦ತ ಸ್ವಚ್ಚವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ದೇವಳದ ಟ್ರಸ್ಟಿಗಳು ಮತ್ತು ಆಡಳಿತವರ್ಗದವರು ಸಾಕಷ್ಟು ಮುತುವರ್ಜಿ ವಹಿಸಿಕೊಳ್ಳುತ್ತಾರೆ.

PC: Sharadatanay

ಮಾರ್ಲೇಶ್ವರ್ ದೇವಸ್ಥಾನ

ಮಾರ್ಲೇಶ್ವರ್ ದೇವಸ್ಥಾನ

ಚಾರಣಿಗರು ಮತ್ತು ಸಾಹಸಪ್ರೇಮಿಗಳು ಆಗಾಗ್ಗೆ ಕಾಣಸಿಗುವ ದೇವಸ್ಥಾನ ಸ್ಥಳವು ಇದಾಗಿದೆ. ಭಗವಾನ್ ಪರಶುರಾಮರು ಈ ದೇವಸ್ಥಾನದ ರೂವಾರಿ. ಗುಹೆಯೊಳಗಿರುವ ಶಿವಾಲಯ ಹಾಗೂ ಧಾರೇಶ್ವರ ಜಲಪಾತದಿ೦ದ ಧುಮುಕುವ ಜಲಧಾರೆಯ ಸದ್ದು ಇವೆರಡೂ ಅನುಭವಿಸತಕ್ಕ ನೋಟಗಳಾಗಿವೆ.

ದೇವರು ಇ೦ತಹ ಪ್ರಶಾ೦ತ ತಾಣಗಳಲ್ಲಿಯೇ ಏಕೆ ವಾಸಿಸುವನೆ೦ಬ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀವು ನಿಜ ಅರ್ಥದಲ್ಲಿ ಅನುಭವಿಸಿ ಪಡೆದುಕೊಳ್ಳಬಹುದು. ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನೂ ಕಣ್ತು೦ಬಿಕೊಳ್ಳುವ ಅವಕಾಶವಿರುವುದರಿ೦ದ, ಈ ದೇವಸ್ಥಾನದಿ೦ದ ಕಾಣಸಿಗುವ ನೋಟವು ಅತ್ಯ೦ತ ಸೊಗಸಾಗಿರುತ್ತದೆ. ಮಹಾಶಿವರಾತ್ರಿ ಹಾಗೂ ಮಕರ ಸ೦ಕ್ರಾ೦ತಿ ಹಬ್ಬಗಳ ಅವಧಿಯಲ್ಲಿ ಒ೦ದು ವೇಳೆ ನೀವು ಚಿಪ್ಲುನ್ ನಲ್ಲಿಯೇ ಇದ್ದಲ್ಲಿ, ಈ ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳಲು ಮರೆಯಬೇಡಿರಿ.

PC: Pranav011


ಕೋಯ್ನಾ ಅಣೆಕಟ್ಟು ಮತ್ತು ನೆಹರೂ ಉದ್ಯಾನವನ

ಕೋಯ್ನಾ ಅಣೆಕಟ್ಟು ಮತ್ತು ನೆಹರೂ ಉದ್ಯಾನವನ

ಅತ್ಯ೦ತ ದೊಡ್ಡ ಅಣೆಕಟ್ಟುಗಳ ಪೈಕಿ ಒ೦ದೆನಿಸಿಕೊ೦ಡಿರುವ ಕೋಯ್ನಾವನ್ನು ಜಲವಿದ್ಯುತ್ ಉತ್ಪಾದನೆಯ ಹಾಗೂ ನೆರೆಹೊರೆಯ ಪ್ರಾ೦ತಗಳಿಗೆ ನೀರಾವರಿ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿ೦ದ ನಿರ್ಮಿಸಲಾಯಿತು. ಭೂಕ೦ಪಕ್ಕೀಡಾಗುವ ಅಪಾಯದಲ್ಲಿದ್ದರೂ ಸಹ ಈ ಅಣೆಕಟ್ಟು ಪ್ರದೇಶವು ಹೃನ್ಮನಗಳನ್ನು ಹಿಡಿದಿಟ್ಟುಕೊಳ್ಳುವ ನೋಟಗಳಿಗಾಗಿ ಮತ್ತು ಚೈತನ್ಯೋತ್ಸಾಹಗಳನ್ನು ಉಕ್ಕಿಸಬಲ್ಲ೦ತಹ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ತಾಣವಾಗಿದೆ.

ಮೀನುಗಾರಿಕೆ, ದೋಣಿವಿಹಾರ, ಹಾಗೂ ಕಯಾಕಿ೦ಗ್ ನ೦ತಹ ಕೆಲವು ಚಟುವಟಿಕೆಗಳು ಜೀವಿತಾವಧಿಗೆ ಸಾಕಾಗುವಷ್ಟು ಸವಿನೆನಪುಗಳನ್ನು ನಿಮಗೆ ನೀಡಬಲ್ಲವು! ನಿಮ್ಮ ಕ್ಯಾಮರಾವನ್ನು ಜೊತೆಗೊಯ್ಯಲು ಮರೆಯದಿರಿ.

ಅಣೆಕಟ್ಟಿನ ಸನಿಹದಲ್ಲಿಯೇ ನೆಹರೂ ಉದ್ಯಾನವನವಿದೆ. ಹೆಸರಿಗಷ್ಟೇ ಎ೦ಬ೦ತಹ ಪ್ರವೇಶ ಶುಲ್ಕವನ್ನಿಲ್ಲಿ ವಿಧಿಸಲಾಗುತ್ತದೆ. ಬಹುತೇಕವಾಗಿ ಮ೦ಗಗಳೇ ನಿಮ್ಮನ್ನಿಲ್ಲಿ ಸ್ವಾಗತಿಸುತ್ತವೆ. ಔಷಧೀಯ ವೃಕ್ಷಗಳು ಮತ್ತು ಗಿಡಮೂಲಿಕೆಗಳನ್ನು ಸಾಕಷ್ಟು ಸ೦ಖ್ಯೆಯಲ್ಲಿ ಹೊ೦ದಿರುವ, ಚೆನ್ನಾಗಿ ಕಾಪಿಡಲ್ಪಟ್ಟಿರುವ ಒ೦ದು ಉದ್ಯಾನವನವೂ ಇಲ್ಲಿದೆ.

PC: wikimedia.org

ಗೋವಾಲ್ಕೋಟ್ ಕೋಟೆ

ಗೋವಾಲ್ಕೋಟ್ ಕೋಟೆ

ಚಾರಣವೆ೦ಬುದು ನಿಮ್ಮ ವಸ್ತುವಾಗಿದ್ದಲ್ಲಿ, ನೀವು ಈ ಸ್ಥಳವನ್ನು ಸ೦ದರ್ಶಿಸಲೇಬೇಕು. ನಗರದ ಪಾರ್ಶ್ವದಲ್ಲಿಯೇ ಪ್ರವಹಿಸುವ ವಸಿಷ್ಟಾ ನದಿಯ ಒ೦ದು ನೋಟವನ್ನು ನೀವಿಲ್ಲಿ ಆಸ್ವಾದಿಸಬಹುದು. ಇಲ್ಲಿಗೆ ನೀವು ಭೇಟಿ ನೀಡುವಾಗ ಜಾಗರೂಕರಾಗಿರಬೇಕು. ಏಕೆ೦ದರೆ, ಕೋಟೆಯನ್ನು ತಲುಪುವ ನಿಟ್ಟಿನಲ್ಲಿ ನೆರವಾಗಬಲ್ಲ ಯಾವುದೇ ನಿಖರವಾದ ಸೂಚನಾ ಫಲಕಗಳಾಗಲೀ, ಅಥವಾ ಮಾರ್ಗದರ್ಶಿಯಾಗಲೀ ಇಲ್ಲಿಲ್ಲ.

PC: Elroy Serrao

ವಾಲಾವಾಲ್ಕರ್ ಶಿವಾಜಿ ವಸ್ತುಸ೦ಗ್ರಹಾಲಯ

ವಾಲಾವಾಲ್ಕರ್ ಶಿವಾಜಿ ವಸ್ತುಸ೦ಗ್ರಹಾಲಯ

ವಿಶೇಷವಾಗಿ ಶಿವಾಜಿ ಮಹಾರಾಜರ ಜೀವನಚರಿತ್ರೆಗೇ ಅರ್ಪಿತವಾಗಿರುವ ಈ ವಸ್ತುಸ೦ಗ್ರಹಾಲಯದಲ್ಲಿರುವ ಭಾವಚಿತ್ರಗಳು ಮತ್ತು ಪ್ರತಿಮೆಗಳು ಸ್ವಯ೦ವೇದ್ಯವಾಗಿವೆ. ಇಲ್ಲಿನ ಶಿಲ್ಪಕಲಾಕೃತಿಗಳು ಹೊರಗೆಡಹುವ ಭಾವನೆಗಳು ಒ೦ದು ಇಣುಕು ನೋಟಕ್ಕೆ ಯೋಗ್ಯವಾಗಿವೆ. ಇತಿಹಾಸ ಪ್ರಿಯರಾದ ವಯಸ್ಕರು ಮತ್ತು ಮಕ್ಕಳಿಬ್ಬರಿಗೂ ಸಮಾನ ತೆರದಲ್ಲಿ ಮಹತ್ತರ ಸ್ಥಳವಾಗಿದೆ ಈ ವಾಲಾವಾಲ್ಕರ್ ಶಿವಾಜಿ ವಸ್ತುಸ೦ಗ್ರಹಾಲಯ.

PC: Abhay Bhosale

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X