ಮಳೆಗಾಲವು ಚಿಪ್ಲುನ್ ನಗರಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯ. ಅಲ್ಲದೆ ಇಲ್ಲಿನ ಕಡಲ ತೀರಗಳಲ್ಲಿ ಉಳಿದ ಬೀಚ್ ಗಳಂತೆ ಯಾವುದೆ ನಿರ್ಬಂಧಗಳಿರುವುದಿಲ್ಲ.
ಕರಾವಳಿಯ ಭಾಗವಾದ ಚಿಪ್ಲುನ್ ನಲ್ಲಿ ತಕ್ಕಮಟ್ಟಿಗೆ ಬಿರುಗಾಳಿಯ ವಾತಾವರಣವಿರುತ್ತದೆ. ಮತ್ತು ತಾಪಮಾನ ಬೇಸಿಗೆಯಲ್ಲಿ ಹೆಚ್ಚು ಏರುವುದಿಲ್ಲ. ಇಲ್ಲಿನ ತಾಪಮಾನವು ಬೇಸಿಗೆಯಲ್ಲಿ 28 ಡಿ. ಸೆ ನಿಂದ 33 ಡಿ.ಸೆ ನಷ್ಟು ದಾಖಲಾಗುತ್ತದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಮಳೆಯು ಅಧಿಕವಾಗಿರುತ್ತವೆ. ಈ ಸಮಯದಲ್ಲಿ ಇಲ್ಲಿ 19 -25 ಡಿ. ಸೆ ತಾಪಮಾನವನ್ನು ನಿರೀಕ್ಷಿಸಬಹುದು.
ಚಿಪ್ಲುನ್ ನಲ್ಲಿ ಚಳಿಗಾಲವು ತುಸು ಹೆಚ್ಚಾಗಿಯೆ ಇರುತ್ತದೆ. ಇಲ್ಲಿನ ಕೈಗಾರಿಕಾ ಚಟುವಟಿಕೆಗಳು ಒಟ್ಟಾರೆಯಾಗಿ ಈ ಪ್ರದೇಶದ ತಾಪಮಾನವನ್ನು ನಿರೀಕ್ಷಿತ ಮಟ್ಟಕ್ಕಿಂತ ಸ್ವಲ್ಪ ಜಾಸ್ತಿಯಾಗಿ ಇರಿಸಲು ಪ್ರಯತ್ನಿಸುತ್ತವಾದರೂ, ಕೆಲವೊಮ್ಮೆ ಉಷ್ಣತೆಯು 14 ಡಿಗ್ರಿ ಸೆಲ್ಶಿಯಸ್ ಗೆ ಕುಸಿಯುವುದು ಉಂಟು.