Search
  • Follow NativePlanet
Share
» »ಆಲಿಕಲ್ಲು ಮಳೆಯಲ್ಲ ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ !

ಆಲಿಕಲ್ಲು ಮಳೆಯಲ್ಲ ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ !

ವಿಶ್ವದಲ್ಲಿ ಏನೆಲ್ಲಾ ಅದ್ಭುತ, ಚಮತ್ಕಾರಗಳು ನಡೆಯುತ್ತವೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಇಂದು ನಾವು ವಿಶೇಷ ಮಳೆಯ ಬಗ್ಗೆ ತಿಳಿಸಲಿದ್ದೇವೆ. ನೀವು ಈ ವರೆಗೆ ಯಾವೆಲ್ಲಾ ರೀತಿಯ ಮಳೆಯನ್ನು ನೋಡಿದ್ದೀರಿ? ಕೇಳಿದ್ದೀರಿ? ಆಲಿಕಲ್ಲು ಮಳೆ, ಮೀನಿನ ಮಳೆಯನ್ನು ನೀವು ನೋಡಿರುವಿರಿ ಇಂದು ನಾವು ಹೇಳ ಹೊರಟಿರುವುದು ಕೇಸರಿ ಹಾಗೂ ಚಂದನದ ಮಳೆಯ ಬಗ್ಗೆ.

ವಿಶೇಷ ಕ್ಷೇತ್ರ

ವಿಶೇಷ ಕ್ಷೇತ್ರ

PC: Anubarto

ಹೌದು ಇದೊಂದು ಧಾರ್ಮಿಕ ಕ್ಷೇತ್ರ. ಇಲ್ಲಿ ಕೇಸರಿ ಹಾಗೂ ಚಂದನ ಮಳೆ ಆಗುತ್ತದೆ. ಅಷ್ಟೇ ಅಲ್ಲದೆ ಮುತ್ತಿನ ಮಳೆಯೂ ಆಗುತ್ತದೆ. ಇದಕ್ಕೆ ಹಲವಾರು ಜನರು ಸಾಕ್ಷಿಯಾಗಿದ್ದಾರೆ. ಈ ವಿಶೇಷ ಕ್ಷೇತ್ರ ಎಲ್ಲಿದೆ. ಹಾಗೂ ಯಾವಾಗ ಕೇಸರಿ , ಚಂದನ ಮಳೆಯಾಗುತ್ತದೆ ಎನ್ನುವುದುನ್ನು ತಿಳಿಯೋಣ .

ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಎಲ್ಲಿದೆ ಈ ಪ್ರದೇಶ?

ಎಲ್ಲಿದೆ ಈ ಪ್ರದೇಶ?

PC: Anubarto

ಮಧ್ಯಪ್ರದೇಶದ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಮುಕ್ತಗಿರಿ ಪ್ರದೇಶವು ದಿಗಂಬರ ಜೈನ ಮುನಿಗಳ ತೀರ್ಥ ಸ್ನಾನವಾಗಿದೆ. 250 ಫೀಟ್ ಎತ್ತರಿಂದ ನೀರು ಸುರಿಯುತ್ತದೆ. ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತದೆ ಎನ್ನಲಾಗುತ್ತದೆ. ಹಚ್ಚಹಸಿರಿನ ನಡುವೆ ಈ ಕ್ಷೇತ್ರವಿದೆ.

ಮೇಂಡಾಗಿರಿ ಎನ್ನುತ್ತಾರೆ

ಮೇಂಡಾಗಿರಿ ಎನ್ನುತ್ತಾರೆ

PC: Anubarto

ಈ ಸ್ಥಳವನ್ನು ಮೇಂಡಾಗಿರಿ ಎಂದೂ ಕರೆಯುತ್ತಾರೆ. ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ಜೈನ ಮುನಿ ಧ್ಯಾನ ಮಾಡುತ್ತಿರುತ್ತಾರೆ. ಅವರ ಮುಂದೆ ಸಂತ ಕಪ್ಪೆಯೊಂದು ಬಂದು ಬೀಳುತ್ತದೆ. ಅದನ್ನು ಕಂಡ ಮುನಿ ಕಪ್ಪೆಯ ಕಿವಿಯಲ್ಲಿ ಮಂತ್ರವನ್ನು ಪಟಿಸುತ್ತಾರೆ. ತಕ್ಷಣ ಕಪ್ಪೆಗೆ ಮರು ಜೀವ ಬರುತ್ತದೆ. ಆದರಿಂದ ಇದನ್ನು ಮೇಂಡಾಗಿರಿ ಎನ್ನುತ್ತಾರೆ.

ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?

ಈ ಕ್ಷೇತ್ರದಲ್ಲಿ 10ನೇ ತೀರ್ಥಂಕರ

ಈ ಕ್ಷೇತ್ರದಲ್ಲಿ 10ನೇ ತೀರ್ಥಂಕರ

ದಿಗಂಬರ ಜೈನ ಸಂಪ್ರದಾಯದ 52 ಮಂದಿರವಿದೆ. ಇಲ್ಲಿ ಮಾನವಸ್ಥಂಭ್ ಮನಸ್ಸಿಗೆ ಶಾಂತಿ ನೀಡುತ್ತದೆ. ಮುಕ್ತಗಿರಿಯಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಮನೋಕಾಮನೆ ಪೂರ್ಣಗೊಳ್ಳುತ್ತದೆ ಎನ್ನಲಾಗುತ್ತದೆ. ಮುಕ್ತ ಗಿರಿಯಲ್ಲಿ ಮುತ್ತಿನ ಮಳೆಯಾದ ಕಾರಣ ಇದನ್ನು ಮುಕ್ತಗಿರಿ ಎನ್ನಲಾಗುತ್ತದೆ.

ಕೇಸರಿ ಹಾಗೂ ಚಂದನದ ಮಳೆ

ಕೇಸರಿ ಹಾಗೂ ಚಂದನದ ಮಳೆ

PC:Thushar bhushan

ನಿರ್ವಾಣ ದಿನ ಎಂದೂ ಕರೆಯುತ್ತಾರೆ. ಈ ದಿನದಂದು ದೇವತೆಗಳು ಮಳೆ ಸುರಿದಿದ್ದರಂತೆ ಹಾಗಾಗಿ ಇಲ್ಲಿ ಪ್ರತಿ ಅಷ್ಟಮಿಯಂದು ಕೇಸರಿ ಹಾಗೂ ಚಂದನದ ಮಳೆಯಾಗುತ್ತದೆ. ಇಲ್ಲಿನ ಕೇಸರಿ ಹಾಗೂ ಮುತ್ತಿನ ಮಳೆಯನ್ನು ನೋಡಲು ಅನೇಕ ಜನರು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X