Search
  • Follow NativePlanet
Share
» »ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!

ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದೃಶ್ಯಗಳಲ್ಲಿ ಪಕ್ಷಿಗಳ ಕಲರವಗಳನ್ನು

ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದೃಶ್ಯಗಳಲ್ಲಿ ಪಕ್ಷಿಗಳ ಕಲರವಗಳನ್ನು, ತಂಪಾದ ಗಾಳಿಯನ್ನು, ಕೋಳಿಯು ಬೆಳಗಾಗಿದೆ ಏಳಿ ಎಂದು ಏಳಿಸುವ ಕೂಗು, ಸುಪ್ರಭಾತ ಇವೆಲ್ಲಾ ಸೂರ್ಯಾ ದೇವ ಉದಯಿಸುತ್ತಿದ್ದಾನೆ ಎಂಬುದಕ್ಕೆ ಸಂಕೇತವಾಗಿದೆ.

ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ಆದರೆ ಈ ಸೂರ್ಯೋದಯ, ಸೂರ್ಯಸ್ತಮಗಳ ದೃಶ್ಯವನ್ನು ಕಾಣಬೇಕಾದರೆ ಪ್ರವಾಸಿಗರು ಗ್ರಾಮಗಳ ತನಕ ಭೇಟಿ ನೀಡುವುದಿಲ್ಲ. ಆದರೆ ನಗರಗಳಲ್ಲಿಯೇ ಆ ದೃಶ್ಯಗಳನ್ನು ಕಂಡು ಆನಂದಿಸುತ್ತಾರೆ. ಇಂಥಹ ಅನುಭವಗಳನ್ನು ಪಡೆಯಲು ಪ್ರಕೃತಿ ಪ್ರೇಮಿಗಳು, ಉತ್ಸಾಹಿಗಳು, ಫೋಟು ಗ್ರಾಫರ್‍ಗಳು ಹೆಚ್ಚಾಗಿ ಆಸ್ತಕಿಯನ್ನು ತೋರಿಸುತ್ತಿರುತ್ತಾರೆ. ನಮ್ಮ ಭಾರತ ದೇಶದಲ್ಲಿ ಇಂಥಹ ಅದ್ಭುತವಾದ ದೃಶ್ಯವನ್ನು ಸೊರೆಗೊಳಿಸಿಕೊಳ್ಳಲು ಕೆಲವು ಸುಂದರವಾದ ಪ್ರದೇಶಗಳು ಇವೆ. ಅಲ್ಲಿ ಸೂರ್ಯೋದಯ, ಸೂರ್ಯಸ್ತಮಗಳ ದೃಶ್ಯವನ್ನು ಅಸ್ವಾಧಿಸಬಹುದು.

ಅವುಗಳಲ್ಲಿ ಬೀಚ್‍ಗಳು, ಗಿರಿಧಾಮಗಳು, ಚಾರಿತ್ರಿಕ ಕಟ್ಟಡಗಳಂತಹ ರಮಣೀಯ ಪ್ರದೇಶದಲ್ಲಿ ಕಾಣುವುದು ಇನ್ನೂ ಅಮೋಘವಾದ ದೃಶ್ಯವೇ ಆಗಿರುತ್ತದೆ. ಹಾಗಾಗಿ ಆ ಸೂರ್ಯೋದಯ, ಸೂರ್ಯಸ್ತಮಗಳನ್ನು ಎಲ್ಲಿ? ಯಾವ ಪ್ರದೇಶದಲ್ಲಿ ಕಂಡರೆ ರೋಮಾಂಚನಕಾರಿ ಅನುಭೂತಿ ಪಡೆಯಬಹುದು ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ವರ್ಕಲ

ವರ್ಕಲ

ಕೇರಳ ರಾಜ್ಯದಲ್ಲಿಯೇ ತಿರುವನಂತಪುರಂ ನಗರಕ್ಕೆ ಸಮೀಪದಲ್ಲಿರುವ ಪ್ರದೇಶವೇ ವರ್ಕಲ. ಈ ಪ್ರದೇಶದ ಪ್ರತ್ಯೇಕವಾದ ಅರೇಬಿಯಾ ಸಮುದ್ರ ಪರ್ವತದ ಅಂಚಿನಲ್ಲಿ ಅನನ್ಯವಾಗಿದೆ. ಇಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮವನ್ನು ಕಾಣಬಹುದು. ಆ ಸಮಯದಲ್ಲಿ ಸಮುದ್ರತೀರದಲ್ಲಿನ ಮರಳಿನ ದಿಬ್ಬಗಳು ಚಿನ್ನದ ಬಣ್ಣಕ್ಕೆ ತಿರುಗುತ್ತದೆ.

ಮಂಗಳೂರು

ಮಂಗಳೂರು

ಮಂಗಳೂರು ಕರ್ನಾಟಕ ರಾಜ್ಯದ ಅತ್ಯಂತ ಪ್ರಸಿದ್ಧವಾದ ತಾಣ ಮಾತ್ರವಲ್ಲದೇ ಮುಖದ್ವಾರ ಕೂಡ ಆಗಿದೆ. ಒಂದೆಡೆ ಅರೇಬಿಯನ್ ಸಮುದ್ರ ಮತ್ತು ಇನ್ನೊಂದೆಡೆ ಪಶ್ಚಿಮಕೋನಗಳು ಇಲ್ಲಿ ಇದ್ದು, ಈ ಪ್ರದೇಶದ ಅತಿ ಮುಖ್ಯವಾದ ಆಕರ್ಷಣೆ ಇದಾಗಿದೆ. ಪ್ರಖ್ಯಾತವಾದ ಉಲ್ಲಾಲ್ ಸೇತುವೆಯಿಂದ ಪ್ರವಾಸಿಗರು ಅದ್ಭುತ ಸೂರ್ಯೋದಯ, ಸೂರ್ಯಸ್ತ ದೃಶ್ಯವನ್ನು ನೋಡಬಹುದು.

ಕನ್ಯಾಕುಮಾರಿ

ಕನ್ಯಾಕುಮಾರಿ

ತಮಿಳುನಾಡಿನ ಕನ್ಯಾಕುಮಾರಿ ಸೂರ್ಯೋದಯ, ಸೂರ್ಯಸ್ತಕ್ಕೆ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದೆ. ಪ್ರತ್ಯೇಕವಾಗಿ ಹುಣ್ಣಿಮೆಯ ದಿನಗಳಲ್ಲಿ ಪ್ರವಾಸಿಗರು ಇಲ್ಲಿ ಬೆಳಗಿನ ಸೂರ್ಯೋದಯವನ್ನು ಹಾಗು ಸೂರ್ಯಾಸ್ತವನ್ನು ವೀಕ್ಷಿಸಲು ಬಯುಸುತ್ತಾರೆ. ಮುಖ್ಯವಾಗಿ ವಿವೇಕಾನಂದ ರಾಕ್ ಸ್ಮಾರಕ, ತಿರುವಳ್ಳುವರ್ ಪ್ರತಿಮೆ, ಕಡಲತೀರಗಳು, ಮ್ಯೂಸಿಯಂ, ದೇವಾಲಯ, ಕೋಟೆ ಇತ್ಯಾದಿಗಳನ್ನು ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ಪೂರಿ

ಪೂರಿ

ಪೂರಿ ಬೀಚ್ ನವ ಜೋಡಿಗಳಿಗೆ, ಕುಟುಂಬ ಸಭ್ಯರಿಗೆ, ಸ್ನೇಹಿತರಿಗೆ ಒಂದು ಸುಂದರವಾದ ವಿಹಾರ ಸ್ಥಳವಾಗಿದೆ. ಪ್ರವಾಸಿಗರು ಬೀಚ್‍ನಲ್ಲಿ ಕುಳಿತುಕೊಂಡು ಉದಯದ ಸಮಯದಲ್ಲಿ ಸೂರ್ಯೋದಯ, ಸೂರ್ಯಸ್ತವನ್ನು ಕಣ್ಣು ತುಂಬಿಕೊಳ್ಳಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಹೈದ್ರಾಬಾದ್

ಹೈದ್ರಾಬಾದ್

ತೆಲಂಗಾಣ ರಾಜಧಾನಿಯಾದ ಹೈದ್ರಾಬಾದ್‍ನಲ್ಲಿ ಹುಸ್ಸೇನ್ ಸಾಗರ್‍ನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಹಾಗಾದರೆ ಅಲ್ಲಿ ಸೂರ್ಯೋದಯ, ಸೂರ್ಯಸ್ತ ದೃಶ್ಯಗಳು ಅತ್ಯಂತ ಸುಂದರವಾಗಿರುತ್ತದೆ. ಹಾಗಾಗಿಯೇ ಇಲ್ಲಿಗೆ ಹಲವಾರು ಪ್ರವಾಸಿಗರು ಆಗಾಗ ಭೇಟಿ ನೀಡುತ್ತಿರುತ್ತಾರೆ.

ಆರೂರ್

ಆರೂರ್

ಆರೂರ್ ಕೇರಳ ರಾಜ್ಯದ ಅಲಪುಳ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ನಗರದ ಎಲ್ಲೆಡೆಯಿಂದ ಪ್ರವಾಸಿಗರು ಪಟ್ಟಣದಲ್ಲಿನ ಸೇತುವೆಯಿಂದ ಅದ್ಭುತವಾದ ಸೂರ್ಯೋದಯ, ಸೂರ್ಯಸ್ತ ದೃಶ್ಯಗಳನ್ನು ವೀಕ್ಷಿಸಲು ಭೇಟಿ ನೀಡುತ್ತಿರುತ್ತಾರೆ.

ಅಗುಂಬೆ

ಅಗುಂಬೆ

ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಪ್ರದೇಶಗಳು ಅತ್ಯಂತ ಮನೋಹರವಾದ ಸ್ಥಳಗಳೇ ಆಗಿವೆ. ಅವುಗಳಲ್ಲಿ ಆಗುಂಬೆ ಅತ್ಯಂತ ಸುಂದರವಾದ ಸ್ಥಳ ಎಂದೇ ಹೇಳಬಹುದು. ಈ ಸ್ಥಳದಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಯಾವುದದರೂ ಒಂದು ಶೋಟಿಂಗ್ ನಡೆಯುತ್ತಾಲೇ ಇರುತ್ತದೆ. ಇಲ್ಲಿನ ಸೂರ್ಯೋದಯ, ಸೂರ್ಯಸ್ತ ದೃಶ್ಯಗಳು ಮಾತ್ರ ವರ್ಣಿಸಲಾಗದಂತಹ ಅನುಭವವನ್ನು ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X