Search
  • Follow NativePlanet
Share
» »ಕರ್ನಾಟಕದ ಅತ್ಯಂತ ಹೆಸರುವಾಸಿಯಾದ 10 ಐತಿಹಾಸಿಕ ಸ್ಥಳಗಳು

ಕರ್ನಾಟಕದ ಅತ್ಯಂತ ಹೆಸರುವಾಸಿಯಾದ 10 ಐತಿಹಾಸಿಕ ಸ್ಥಳಗಳು

ಕರ್ನಾಟಕವು ವಸಾಹತು ಅವಧಿಯಲ್ಲಿ ಹಲವಾರು ಮಹತ್ವದ ಘಟನೆಗಳನ್ನು ಕಂಡಿದೆ ಅಲ್ಲದೆ ವಿದೇಶೀ ಸಂಸ್ಕೃತಿಗಳೊಂದಿಗೆ ಸಹಬಾಳ್ವೆ ನಡೆಸಿರುವ ಇದು ಕಾಲಾನಂತರದಲ್ಲಿ ನಮಗೆ ಈಗ ತಿಳಿದಿರುವ ಒಂದು ಉತ್ತಮ ರಾಜ್ಯವಾಗಿ ಮಾರ್ಪಟ್ಟಿತು. ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ಐತಿಹಾಸಿಕ ಸ್ಮಾರಕಗಳ ಸ್ವರ್ಗ ಎಂದರೆ ತಪ್ಪಾಗಲಾರದು.

ಹಲವಾರು ಕೋಟೆಗಳು, ದೇವಾಲಯಗಳು, ಬರಹಗಳು, ಸ್ಮಾರಕಗಳು ಮತ್ತು ಸಾಂಸ್ಕೃತಿಕ ಕಲೆಗಳು ಇತ್ಯಾದಿಗಳು ಕರ್ನಾಟಕದ ಇತಿಹಾಸದ ಮುಡಿಯಲ್ಲಿ ಕಾಣಸಿಗುತ್ತದೆ. ಇತಿಹಾಸದ ಬಗ್ಗೆ ತಿಳಿಯುವ ಕನಸುಳ್ಳ ಪ್ರತಿಯೊಬ್ಬ ಇತಿಹಾಸಕಾರನಿಗೂ ಕರ್ನಾಟಕ್ಕೆ ಭೇಟಿ ಕೊಡುವುದು ಸ್ವರ್ಗವೇ ಸರಿ. ಇದಕ್ಕೆ ಪ್ರತಿರೂಪವಾಗಿ ನಾವು ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ 10 ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

1. ಮೈಸೂರು ಅರಮನೆ-ಮೈಸೂರು

1. ಮೈಸೂರು ಅರಮನೆ-ಮೈಸೂರು

ಮೈಸೂರಿನ ಹೃದಯಭಾಗದಲ್ಲಿ ಚಾಮುಂಡಿ ಬೆಟ್ಟಕ್ಕೆ ಪೂರ್ವಾಭಿಮುಖವಾಗಿ ಈ ರಾಜಮನೆತನದ ಮೈಸೂರು ಅರಮನೆ ಇದೆ. ಇದು ಒಡೆಯರ್ ರಾಜವಂಶದ ಅಧಿಕೃತ ನಿವಾಸ ಹಾಗೂ ಕರ್ನಾಟಕದ ಅತ್ಯಂತ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರತೀವರ್ಷ ಸುಮಾರು 8 ಮಿಲಿಯನ್ ಪ್ರಯಾಣಿಕರು ಭೇಟಿ ನೀಡುತ್ತಾರೆ.

2. ಬೀದರ್ ಕೋಟೆ- ಬೀದರ್

2. ಬೀದರ್ ಕೋಟೆ- ಬೀದರ್

ಕರ್ನಾಟಕದ ಪ್ರಾಚೀನ ರಾಜವಂಶದ ಅಧಿಕೃತ ವಾಸ್ತು ಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಷಿಣಭಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪಗಳಲ್ಲಿ ಬೀದರ್ ಕೋಟೆಯೂ ಒಂದು. ಈ ಕೋಟೆಯನ್ನು ಈಗ ಭಾರತದ ಒಂದು ಅಪರೂಪದ ಸ್ಥಳವೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ರೋಮಾಂಚಕ ಇತಿಹಾಸವನ್ನು ಹೊಂದಿದೆ. ಅಲ್ಲದೆ ಕಾಕತೀಯರು, ಚಾಲುಕ್ಯರು, ಸತ್ವವಾಹನರು, ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶಗಳ ಏಳು ಬೀಳುಗಳನ್ನು ಕಂಡಿದೆ ಇವರ ಪತನದ ನಂತರ ಇದು ಮೊಘಲರು ಮತ್ತು ನಿಜಾಮರಿಂದ ಆಳಲ್ಪಟ್ಟಿತು.

3. ಬಾದಾಮಿ - ಬಾಗಲಕೋಟೆ

3. ಬಾದಾಮಿ - ಬಾಗಲಕೋಟೆ

ಬಾದಾಮಿಯು ಗುಹಾಂತರ ದೇವಾಲಯಗಳ ಸಂಕೀರ್ಣವಾಗಿದ್ದುಇದು ನೋಡುಗರ ಗಮನ ಸೆಳೆಯುತ್ತದೆ. ಇಲ್ಲಿ ಹಿಂದುಗಳ 4 ಗುಹಾಂತಾರ ದೇವಾಲಯಗಳು ಇವೆ. ಇದನ್ನು 7ನೇ ಶತಮಾನದ ಹಿಂದಿನ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ಅದ್ಭುತ ಮಾದರಿಯೆಂದು ಪರಿಗಣಿಸಲಾಗಿದೆ. ಈ ಎಲ್ಲಾ ನಾಲ್ಕು ದೇವಾಲಯಗಳಲ್ಲಿಯೂ ವಿಭಿನ್ನ ಮಾದರಿಯ ವಿಷಯಗಳು ಮತ್ತು ಹಿಂದುಗಳ ದೇವತೆಗಳ ಶಿಲ್ಪಗಳನ್ನು ಹೊಂದಿದ್ದು ಅನ್ವೇಷಣೆ ಮಾಡಬಯಸುವವರಿಗೆ ಬೇಕಾದಷ್ಟು ಸಂಗತಿಗಳನ್ನು ಇದು ಒದಗಿಸುತ್ತದೆ.

4. ಹಂಪಿ - ಬಳ್ಳಾರಿ

4. ಹಂಪಿ - ಬಳ್ಳಾರಿ

ಪುರಾತತ್ವದ ಅನೇಕ ವಿಷಯಗಳನ್ನು ಒಳಗೊಂಡಿರುವ ಹಂಪೆಯನ್ನು ಅನ್ವೇಷಿಸಲು ಒಂದು ದಿನ ಸಾಕಾಗದು. ಇಲ್ಲಿಯ ಸ್ಮಾರಕಗಳನ್ನು ಹಿಂದೂ, ಮುಸಲ್ಮಾನರು ಮತ್ತು ಜೈನ ಎಂದು ವಿಂಗಡಿಸಲಾಗಿದೆ. ಇವುಗಳಲ್ಲಿ ದೇವಾಲಯಗಳು, ಬೆಟ್ಟ ಗೋಪುರಗಳು, ಆನೆಯ ಆಶ್ರಯಗಳು, ಮಸೀದಿಗಳು ಮತ್ತು ಸಮಾಧಿಗಳು, ಸ್ಮಾರಕಗಳು, ನೀರಿನ ಸಂಗ್ರಹಗಳು, ಕಾರಂಜಿಗಳು ಮತ್ತು ಸಮುದಾಯ ಅಡುಗೆಮನೆಗಳು ಇತ್ಯಾದಿಗಳನ್ನು ಒಳಗೊಂಡಿದೆ.

5. ಪಟ್ಟದಕಲ್- ಬಾಗಲಕೋಟೆ

5. ಪಟ್ಟದಕಲ್- ಬಾಗಲಕೋಟೆ

ಪಟ್ಟದಕಲ್ " ಮಾಣಿಕ್ಯಗಳ ನಗರ" ಎಂಬ ಹೆಮ್ಮೆಗೆ ಪಾತ್ರವಾಗಿರುವ ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲದೆ ಚಾಲುಕ್ಯ ಸ್ಮಾರಕಗಳಿಗೆ ಸಾಕ್ಷಿಯಾಗಿರುವ ಈ ಸ್ಥಳವು ವಿಶ್ವ ಪರಂಪರೆಯ ತಾಣವೂ ಹೌದು. ಈ ಸ್ಥಳವು ಮಲಪ್ರಭಾ ನದಿ ದಡದಲ್ಲಿರುವ ಒಂದು ಹಳ್ಳಿಯಾಗಿದ್ದು ಇಲ್ಲಿ ಹತ್ತು ದೇವಾಲಯಗಳ ನೆಲೆಯಾಗಿದೆ. ಮತ್ತು ಪ್ರತಿಯೊಂದೂ ತನ್ನದೇ ಆದ ಭವ್ಯತೆಯನ್ನು ಪ್ರದರ್ಶಿಸುತ್ತದೆ.

6. ಮೇಲುಕೋಟೆ- ಮಂಡ್ಯ

6. ಮೇಲುಕೋಟೆ- ಮಂಡ್ಯ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯು ಒಂದು ಪವಿತ್ರ ಸ್ಥಳವಾಗಿದೆ. ಯದುಗಿರಿ ಕಲ್ಲಿನ ಬೆಟ್ಟಗಳ ಮೇಲೆ ಇರುವ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯವಿದೆ. ಈ ಪಟ್ಟಣವು ವಿವಿಧ ಕೊಳಗಳು, ಮತ್ತು ದೇವಾಲಯಗಳ ನೆಲೆಯಾಗಿದೆ. ಅಲ್ಲದೆ ಇಲ್ಲಿ ಸಂಸ್ಕೃತ ಅಕಾಡಮಿಯನ್ನು ಹೊಂದಿದ್ದು, ಇಲ್ಲಿ ಸಾವಿರಾರು ಸಂಸ್ಕೃತ ಮತ್ತು ವೈದಿಕ ಹಸ್ತಪ್ರತಿಗಳ ಸಂಗ್ರಹವನ್ನು ಕಾಣಬಹುದಾಗಿದೆ.

7.ಬಿಜಾಪುರ ಕೋಟೆ- ಬಿಜಾಪುರ

7.ಬಿಜಾಪುರ ಕೋಟೆ- ಬಿಜಾಪುರ

ಬಿಜಾಪುರವು ದಕ್ಷಿಣ ಭಾರತದ ಆಗ್ರಾವೆಂದು ಪ್ರಸಿದ್ದಿ ಪಡೆದಿದ್ದು, ಇದು ಕರ್ನಾಟಕದ ಹೆಸರುವಾಸಿಯಾಗಿರುವ ಐತಿಹಾಸಿಕ ಸ್ಥಳಗಳ ನೆಲೆಗಳಲ್ಲಿ ಒಂದೆನಿಸಿದೆ. ಅವುಗಳಲ್ಲಿ ಕರ್ನಾಟಕದ ಬಿಜಾಪುರ ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ಬಿಜಾಪುರ ಕೋಟೆಯೂ ಒಂದು. ಇದನ್ನು 1566 ರ ಆದಿಲ್ ಷಾ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಯಿತು. ಈ ಕೋಟೆಯು ವಿಶಾಲವಾದ ವಿಸ್ತಾರದಲ್ಲಿ ಹರಡಿದೆ ಮತ್ತು 50 ಅಡಿ ದೊಡ್ಡ ಕಂದಕದೊಳಗೆ ಸುತ್ತುವರೆದಿದೆ.

8. ಬೆಳವಾಡಿ- ಚಿಕ್ಕಮಗಳೂರು

8. ಬೆಳವಾಡಿ- ಚಿಕ್ಕಮಗಳೂರು

ಬೆಳವಾಡಿಯು ಕರ್ನಾಟಕದ ಚಿಕ್ಕಮಗಳೂರಿನಲ್ಲಿದೆ. ಸಣ್ಣ ಪಟ್ಟಣವಾದ ಈ ಸ್ಥಳವು ಅನೇಕ ಮನಮೋಹಕ ದೇವಾಲಯಗಳನ್ನು ಹೊಂದಿದೆ. ಬೆಳವಾಡಿಯ ಆಸುಪಾಸಿನಲ್ಲಿರುವ ಎಲ್ಲಾ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿವೆ ಮತ್ತು ಚಕ್ರವ್ಯೂಹ ಕೆತ್ತನೆಗಳನ್ನು ಹೊಂದಿವೆ.ವಿಷ್ಣುವಿಗೆ ಅರ್ಪಿತವಾದ ವೀರನಾರಾಯಣ ದೇವಾಲಯವು ಇಲ್ಲಿನ ಅತ್ಯಂತ ಪ್ರಸಿದ್ಧ ರಚನೆಯಾಗಿದೆ. ಈ ದೇವಾಲಯದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಪ್ರತೀ ವರ್ಷ ಮಾರ್ಚ್ 23ರಂದು ಸೂರ್ಯನ ಕಿರಣಗಳು ನೇರವಾಗಿ ದೇವಾಲಯದ ಗರ್ಭ ಗುಡಿಯನ್ನು ಪ್ರವೇಶಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+