Search
  • Follow NativePlanet
Share
» »ಮಳೆಗಾಲದಿ ಫಳ ಫಳನೆ ಕಳೆ ಪಡೆವ ಸ್ಥಳಗಳು

ಮಳೆಗಾಲದಿ ಫಳ ಫಳನೆ ಕಳೆ ಪಡೆವ ಸ್ಥಳಗಳು

By Vijay

ಬೇಸಿಗೆಯಲ್ಲಿ ನೆತ್ತಿಯ ಮೇಲಿರುವ ಸೂರ್ಯನ ಪ್ರಖರ ಕಿರಣಗಳು ಎಲ್ಲಿಗೊ ಕಾಣದ ಮಾಯಾ ಲೋಕಕ್ಕೆ ಪಯಣಿಸಿ, ಬಿಸುವ ಗಾಳಿಯ ಅಲೆಗಳು ಹನಿ ಹನಿ ನೀರಿನೊಂದಿಗೆ ಬೆರೆತು ಚಂದ್ರನಂತೆ ತಂಪಾಗಿ ವಾತಾವರಣದಲಿ ಪ್ರವಹಿಸುತ ಬಿಸಿಲಲಿ ಬಳಲಿ ಬೆಂಡಾದ ದೇಹ ಮನಗಳಿಗೆ ಉಪಚಾರ ಆರಂಭಿಸುತ್ತಿದ್ದಂತೆ ಆಗುವ ಮಳೆಗಾಲದ ಪ್ರಾರಂಭದ ಸೂಚನೆಗಳನ್ನು ಕಂಡಾಗ ಆಗುವ ಆನಂದ ಅಷ್ಟಿಷ್ಟಲ್ಲ.

ಕ್ಲಿಯರ್ ಟ್ರಿಪ್ ನಿಂದ ಫ್ಲೈಟ್ ಹಾಗೂ ಹೋಟೆಲ್ ಬುಕ್ಕಿಂಗ್ ಮೇಲೆ 1000 ರೂ. ಕಡಿತ

ಎಲ್ಲೆಡೆ ಶಾಖದಿಂದ ನಲುಗಿ ಹೋದ ಪ್ರಾಣಿ, ಪಕ್ಷಿಗಳಿಗೆ, ಒಣಗಿ ಹೋದ ಗಿಡ, ಮರ, ಬಳ್ಳಿಗಳಿಗೆ, ಬತ್ತಿ ಹೋದ ಕೆರೆ, ಕೊಳ, ಹಳ್ಳಗಳಿಗೆ ಮಳೆಗಾಲದ ಪ್ರಾರಂಭವು ಕಳೆದುಹೋದ ಉತ್ಸಾಹವನ್ನು ಮತ್ತೆ ಹುಡುಕಿ ಕರೆತರುವಲ್ಲಿ ತನ್ನ ಪ್ರಮುಖ ಪಾತ್ರವಹಿಸುತ್ತದೆ. ದಟ್ಟಕಾಡುಗಳು, ನದಿಗಳು, ಬೆಟ್ಟ ಪರ್ವತಗಳು ಕಳೆಗುಂದಿದ ತಮ್ಮ ವೈಭವವನ್ನು ಮತ್ತೆ ಪಡೆಯಲಾರಂಭಿಸುತ್ತವೆ.

ವಿಶೇಷ ಲೇಖನ : ಇದೆ ಮಳೆಗಾಲದ ಮಹಾರಾಷ್ಟ್ರ

ಶಾಖದಿಂದ ಕುದಿಯುತ್ತಿದ್ದ ಭೂತಾಯಿಯ ಮಡಿಲು ಚಿಮು ಚಿಮು ಮಳೆ ಹನಿಗಳ ತಂಪಾದ ಅಪ್ಪುಗೆಯಿಂದ ಚೇತರಿಸಕೊಳ್ಳ ತೊಡಗುತ್ತಾಳೆ. ಇದೆಲ್ಲವೂ ಮಳೆಗಾಲದ ವಿಶೇಷ. ಮಳೆಗಾಲದಲ್ಲಿ ಪ್ರಕೃತಿಯ ಅಂದ ಚೆಂದವನ್ನು ನೋಡುವುದೆ ಒಂದು ವಿಸ್ಮಯಕರವಾದ ಅನುಭವ. ಮಳೆಗಾಲಕ್ಕೆಂದೆ ಕೆಲ ಸ್ಥಳಗಳು ಸಿಂಗರಿಸಿಕೊಂಡು ಪ್ರವಾಸಿಗರನ್ನು ನೇರವಾಗಿ ಚುಂಬಕದಂತೆ ಸೆಳೆಯುತ್ತವೆ.

ಕೇರಳದ ಸಮಗ್ರ ಪ್ರವಾಸಿ ತಾಣಗಳು

ಹಾಗಾದರೆ ಮಳೆಗಾಲದಲ್ಲಿ ನೀವು ಪ್ರವಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಈ ಲೇಖನದ ಮೂಲಕ ಭಾರತದ ಯಾವೇಲ್ಲ ಸ್ಥಳಗಳು ಮಳೆಗಾಲದಲ್ಲಿ ಭೇಟಿ ನೀಡಬೇಕಾದ ಅದ್ವಿತೀಯ ತಾಣಗಳಾಗಿವೆ ಎಂಬುದನ್ನು ತಿಳಿದುಕೊಳ್ಳಿ ಹಾಗೂ ಬರುತಿರುವ ಮಳೆಗಾಲದಲ್ಲಿ ಇವುಗಳಲ್ಲಿನ ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಮಾಡಲು ಯೋಜಿಸಿ. ಈ ಪ್ರವಾಸ ಖಂಡಿತ ನಿಮಗೆ ಮೋಸಗೊಳಿಸುವುದಿಲ್ಲ.

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಮುನ್ನಾರ್: ಕೇರಳ ರಾಜ್ಯದ ಬಹುಭಾಗವು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ಸಿಂಗರಿಸಿಕೊಳ್ಳುತ್ತವೆ. ಈ ರಾಜ್ಯದಲ್ಲಿರುವ ಹಲವಾರಿ ಪ್ರವಾಸಿ ಪ್ರಖ್ಯಾತಿಯ ಸ್ಥಳಗಳು ಮಳೆಗಾಲದಲ್ಲಿ ಹೆಚ್ಚಿನ ಹಸಿರುಯುಕ್ತವಾಗಿ, ವಾತಾವರಣವು ತಂಪಾದ ಹಾಗೂ ತಾಜಾಗಾಳಿಯಿಂದ ಹಿತಕರವಾಗತೊಡಗುತ್ತದೆ. ಮುನ್ನಾರ್ ಸಹ ಇದಕ್ಕೆ ಹೊರತಾಗಿಲ್ಲ. ಗಿರಿಧಾಮ ಪ್ರದೇಶವಾದರೂ ಸಹ ಮಳೆಗಾಲದಲ್ಲಿ ಹೆಚ್ಚಿನ ಮೆರುಗನ್ನು ಪಡೆಯುತ್ತದೆ. ಹಾಯಾಗಿ ಕುಳಿತು ಪ್ರಕೃತಿಯನ್ನು ತನ್ನ ಮೈನೊರೆದ ಸ್ಥಿತಿಯಲ್ಲಿ ನೋಡುವ ಅವಕಾಶ ಮುನ್ನಾರ್ ನಲ್ಲಿದ್ದಾಗ ಲಭಿಸುತ್ತದೆ. ಮುನ್ನಾರ್ ಕುರಿತು ಓದಿ.

ಚಿತ್ರಕೃಪೆ: Ramkumar

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಅಲೆಪ್ಪಿ: ಹಿನ್ನೀರು, ದೋಣಿ ಮನೆಗಳಿಗೆ ಪ್ರಖ್ಯಾತವಾಗಿರುವ ಕೇರಳದ ಅಲೆಪ್ಪಿಯು ಮಳೆಗಾದ ಸಂದರ್ಭದಲ್ಲಿ ಇನ್ನಷ್ಟು ಅಚುಕಟ್ಟಾಗಿ ಕಾಣಿಸುತ್ತದೆ. ಭರ ಭರನೆ ಧರೆಗುರುಳುವ ಮಳೆಯ ಹನಿಗಳು ಅಲೆಪ್ಪಿಯ ಪ್ರಕೃತಿಯನ್ನು ಮತ್ತಷ್ಟು ಶುಚಿತ್ವಗೊಳಿಸಿ ಅನನ್ಯವಾದ ಅನುಭವವನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಅಲೆಪ್ಪಿ ಕುರಿತು ಓದಿ.

ಚಿತ್ರಕೃಪೆ: Saad Faruque

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಆಗುಂಬೆ: ಭಾರತದಲ್ಲಿರುವ ಬಲು ಅಪರೂಪದ ಮಳೆಗಾಡುಗಳಲ್ಲಿ ಪಶ್ಚಿಮ ಘಟ್ಟಗಳ ದಟ್ಟಾರಣ್ಯದಲ್ಲಿರುವ ಆಗುಂಬೆಯೂ ಸಹ ಒಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಸುಂದರ ಸ್ಥಳವು ಬಾಹರತದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಪಡೆಯುವ ಬೆರಳೆಣಿಕೆಯ ಸ್ಥಳಗಳಲ್ಲಿ ಒಂದಾಗಿರುವುದು ವಿಶೇಷ. ಮಳೆಗಾಲು ಸಂಶೋಧನಾ ಸಂಸ್ಥೆಗೆ ತವರಾಗಿರುವ ಆಗುಂಬೆಯು ಮಳೆಗಾಲದಲ್ಲಿ ತನ್ನ ಅದ್ವಿತೀಯ ಸೌಂದರ್ಯಕ್ಕೆ ಸಾಕ್ಷಿಯಾಗುತ್ತದೆ. ಆಗುಂಬೆ ಕುರಿತಿ ತಿಳಿಯಿರಿ.

ಚಿತ್ರಕೃಪೆ: Karunakar Rayker

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕೊಡಗು: ಸಾಂಪ್ರದಾಯಿಕ ವೀರ ಸೈನಿಕ ಸಂಪ್ರದಾಯ, ಚಹಾ ಮತ್ತು ಕಾಫಿ ತೋಟಗಳಿಗೆ ಹೆಸರಾಗಿರುವ ಕೊಡವನಾಡು ಕೊಡಗು ಮಳೆಗಾಲದಲ್ಲಿ ನೋಡಬೇಕಾದಂತಹ ಕರ್ನಾಟಕದ ಮತ್ತೊಂದು ಸುಂದರ ಗಿರಿಧಾಮ ಪ್ರದೇಶ. ಹಿತಕರವಾದ ವಾತಾವರಣ, ನಳ ನಳಿಸುವ ಪ್ರಕೃತಿ ವೈಭವ, ಮುತ್ತಿನಂತೆ ಕಂಗೊಳಿಸುವ ನೀರಿನ ಹನಿಗಳ ಚಿತ್ತಾರ ಎಂತಹವರನ್ನೂ ಸಹ ಮೂಕವಿಸ್ಮಿತರನ್ನಾಗಿಸುತ್ತದೆ. ಕೊಡಗಿನ ಕುರಿತು ಓದಿ.

ಚಿತ್ರಕೃಪೆ: Sooraj Shajahan

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕೊಡಗು: ಸಾಂಪ್ರದಾಯಿಕ ವೀರ ಸೈನಿಕ ಸಂಪ್ರದಾಯ, ಚಹಾ ಮತ್ತು ಕಾಫಿ ತೋಟಗಳಿಗೆ ಹೆಸರಾಗಿರುವ ಕೊಡವನಾಡು ಕೊಡಗು ಮಳೆಗಾಲದಲ್ಲಿ ನೋಡಬೇಕಾದಂತಹ ಕರ್ನಾಟಕದ ಮತ್ತೊಂದು ಸುಂದರ ಗಿರಿಧಾಮ ಪ್ರದೇಶ. ಹಿತಕರವಾದ ವಾತಾವರಣ, ನಳ ನಳಿಸುವ ಪ್ರಕೃತಿ ವೈಭವ, ಮುತ್ತಿನಂತೆ ಕಂಗೊಳಿಸುವ ನೀರಿನ ಹನಿಗಳ ಚಿತ್ತಾರ ಎಂತಹವರನ್ನೂ ಸಹ ಮೂಕವಿಸ್ಮಿತರನ್ನಾಗಿಸುತ್ತದೆ. ಕೊಡಗಿನ ಕುರಿತು ಓದಿ.

ಚಿತ್ರಕೃಪೆ: Sooraj Shajahan

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಜೋಗ: ಶಿವಮೊಗ್ಗದ ಪ್ರಮುಖ ಪ್ರವಾಸಿ ಹೆಗ್ಗುರುತಾದ, ವಿಶ್ವವಿಖ್ಯಾತಿಗಳಿಸಿರುವ ಜೋಗದ ಜಲಪಾತ, ಮಳೆಗಾಲದ ಸಮಯದಲ್ಲಿ ಖಂಡಿತವಾಗಿಯೂ ನೋಡಲೇಬೇಕಾದ ಅದ್ಭುತ, ರೋಮಾಂಚನಗೊಳಿಸುವ ಆಕರ್ಷಣೆ. ಜೋಗದ ಕುರಿತು ಓದಿ.

ಚಿತ್ರಕೃಪೆ: Sarvagnya

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಗೋಕಾಕ್: ಬೆಳಗಾವಿ ಜಿಲ್ಲೆಯಲ್ಲಿರುವ "ನಯಾಗ್ರಾ ಜಲಪಾತ" ನೋಡಬೇಕೆ? ಹಾಗಿದ್ದರೊಮ್ಮೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಪಟ್ಟಣಕ್ಕೊಮ್ಮೆ ಭೇಟಿ ನೀಡಿ. ಘಟಪ್ರಭಾ ನದಿಯು ತನ್ನ ಗಾಂಭೀರ್ಯವನ್ನು ಪ್ರದರ್ಶಿಸುವ ಜಲಪಾತ ನೋಡಿ ಆವಾಕ್ಕಾಗಲು ಮರೆಯಬೇಡಿ. ಅಷ್ಟೆ ಅಲ್ಲ ಈ ನದಿಯು ಜಲಪಾತ ರೂಪ ಪಡೆದು ಭುವಿಗೆ ಧುಮುಕುವ ಜಾಗದ ಹತ್ತಿರದಲ್ಲೆ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ನಡೆದಾಗ ಮೈಯಲ್ಲಿ ನಡುಕ ಹುಟ್ಟದೆ ಇರದು. ಮಳೆಗಾಲದಲ್ಲಿದರ ಅಬ್ಬರ "ಬಬ್ಬರ್ ಶೇರ್" ನಂತಹವನನ್ನು ಮಬ್ಬಾಗಿ ಮಾಡುತ್ತದೆ.

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಗೋವಾ: ಮೊದ ಮೊದಲು ಗೋವಾಗೆ ತೆರಳಲು ಚಳಿಗಾಲವೆ ಆದರ್ಶವೆಂದು ಭಾವಿಸಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಎಲ್ಲ ಋತುಮಾನಗಳಲ್ಲಿ ಗೋವಾಗೆ ಭೇಟಿ ಮಾಡಲಾಗುತ್ತಿರುವುದು ಬೆಳೆಯುತ್ತಿರುವ ಪ್ರವಾಸೋದ್ಯಮಕ್ಕೆ ಉದಾಹರಣೆಯಾಗುತ್ತಿದೆ. ಕಡಲ ತೀರಗಳ ರಾಣಿಯಾದ ಗೋವಾಗೂ ಸಹ ಮಳೆಗಾಲದಲ್ಲಿ ಭೇಟಿ ನೀಡಬಹುದಾಗಿದೆ. ಈ ಸಂದರ್ಭದಲ್ಲಿ ಗೋವಾದ ಹಲವಾರು ಕಡಲ ತೀರಗಳು ಉಗ್ರ ರೂಪ ಧರಿಸಿದರೂ ಕೂಡ ಅದರಲ್ಲಿಳಿಯದೆ ದೂರದಿಂದಲೆ ಅದು ಅಬ್ಬರಿಸುವ ನೋಟ ನೋಡುವುದೆ ಒಂದು ಚೆಂದದ ಅನುಭವವಾಗಿದೆ. ಅಲ್ಲದೆ ಕಡಲ ತೀರದ ಹೊರತಾಗಿ ಗೋವಾದ ಇತರೆ ಆಕರ್ಷಣೆಗಳು ಮಳೆಗಾಲದಲ್ಲಿ ಕಳೆ ಪಡೆಯುತ್ತವೆ. ಗೋವಾ ಕುರಿತು ಓದಿ.

ಚಿತ್ರಕೃಪೆ: ptwo

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕೊಲುಕ್ಕುಮಲೈ: ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ. ಮೂಲವಾಗಿ ಇದೊಂದು ಚಹಾ ಬೆಳೆಯುವ ತೋಟ. ಇದರ ವಿಶೇಷತೆ ಎಂದರೆ ಜಗತ್ತಿನ ಅತಿ ಎತ್ತರ ಪ್ರದೇಶದಲ್ಲಿ ಚಹಾ ಬೆಳೆಯಲಾಗುವ ತೋಟ ಹೊಂದಿರುವ ಎಸ್ಟೇಟ್ ಇದು. ಇದುವೆ ಕೊಲುಕ್ಕುಮಲೈ. ಬೇಸಿಗೆಯಲ್ಲಿ ತಂಪನ್ನು ಅರಸಿ ಬರುವವರಿಗೆ ತಂಪಾದ ಅನುಭವ ನೀಡುವ ಈ ತಾಣ ಮಳೆಗಾಲದಲ್ಲೂ ಸಹ ತನ್ನ ಅದ್ಭುತ ಪ್ರಕೃತಿ ಸೌಂದರ್ಯದಿಂದ ಭೇಟಿ ನೀಡುವವರ ಮನ ಕದಿಯುತ್ತದೆ. ಕೊಲುಕ್ಕುಮಲೈ ಹೆಚ್ಚಿನ ಓದು.

ಚಿತ್ರಕೃಪೆ: Husena MV

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಅತ್ತಿರಪಲ್ಲಿ: ಕೇರಳದ ತ್ರಿಶ್ಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಪಟ್ಟಣವು ತನ್ನಲ್ಲಿರುವ ರೋಮಾಂಚನಗೊಳಿಸುವಂತಹ ಮನಮೋಹಕವಾದ ಜಲಪಾತದಿಂದಾಗಿ ಹೆಚ್ಚು ಪ್ರಸಿದ್ಧಿಗಳಿಸಿದೆ. ಇದರ ವೈಭೋಗೆ ಎಷ್ಟಿದೆ ಎಂದರೆ ಈಗಾಗಲೇ ಕನ್ನಡವು ಸೇರಿದಂತೆ ಹಲವು ಭಾಷೆ ಚಿತ್ರಗಳ ಚಿತ್ರೀಕರಣವು ಈ ಒಂದು ತಾಣದಲ್ಲಾಗಿದೆ ಹಾಗೂ ಆಗುತ್ತಲೂ ಇವೆ. ಹೆಚ್ಚಿನ ಓದು.

ಚಿತ್ರಕೃಪೆ: Pranchiyettan

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕುಮರಕಮ್: ಇದೊಂದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ ಪರಿಗಣಿಸಲಾಗಿದೆ) ನೆಲೆಗೊಂಡಿದೆ. ಮಳೆಗಾಲದ ಸಂದರ್ಭದಲ್ಲಿ ನೀರಿನ ಆಗರವಾಗುವ ಕುಮರಕೊಮ್ ತನ್ನ ಪ್ರಶಾಂತ ವಾತಾವರಣ ಮತ್ತು ನಿರ್ಮಲವಾದ ನೀರಿನಿಂದಾಗಿ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಎಲ್ಲೆಲ್ಲೂ ನೀರು ಇದು ಕುಮರಕಮ್ ವಿಶೇಷ.

ಚಿತ್ರಕೃಪೆ: Sulfis

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕುಟ್ರಾಲಂ: ದಕ್ಷಿಣ ಭಾರತದ "ಸ್ಪಾ" ಎಂದೆ ಪ್ರಖ್ಯಾತವಾಗಿರುವ ಕುಟ್ರಾಲಂ, ತಮಿಳುನಾಡು ರಾಜ್ಯದ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇತರೆ ಕೆಲವು ಋತುಮಾನುಸಾರ ನದಿಗಳ ಜೊತೆಗೆ ಸಿಟ್ರಾರು, ಮಣಿಮುತ್ತಾರ್, ಪಚಯ್ಯಾರ್ ಹಾಗೂ ತಾಮಿರಭರಣಿಯಂತಹ ನದಿಗಳ ಉಗಮ ಸ್ಥಾನವಾಗಿರುವ ಕುಟ್ರಾಲಂ ತನ್ನಲ್ಲಿರುವ ಕುಟ್ರಾಲೇಶ್ವರ ದೇವಸ್ಥಾನ ಹಾಗೂ ದೆವಸ್ಥಾನದ ತೀರ್ಥ ರೂಪ ಎಂದು ಬಗೆಯಲಾಗುವ ಕುಟ್ರಾಲಂ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಇತರೆ ಸಮಯದಲ್ಲಿ ಸಾಧಾರಣ ಪ್ರಮಾಣದಲ್ಲಿರುವ ಕುಟ್ರಾಲಂ ಜಲಪಾತದ ನೀರು ಮಳೆಗಾಲದ ಸಂದರ್ಭದಲ್ಲಿ ತನ್ನ ಉತ್ಕೃಷ್ಟ ಕಳೆಯನ್ನು ಪಡೆಯುತ್ತದೆ.

ಚಿತ್ರಕೃಪೆ: Mdsuhail

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಪಾಪನಾಸಂ: ತಮಿಳುನಾಡಿನ ಪಾಪನಾಸಂ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಮಳೆಗಾಲದಲ್ಲಂತೂ ಇದು ನೋಡಲೇಬೇಕಾದ ಪ್ರವಾಸಿ ಆಕರ್ಷಣೆಯಾಗಿ ಜನರನ್ನು ಸೆಳೆಯುತ್ತದೆ. ಕಾರಣ ಇಲ್ಲಿನ ಪಶ್ಚಿಮ ಘಟ್ಟಗಳಲ್ಲಿರುವ ಮಂಜೋಲೈ ಬೆಟ್ಟ ಪ್ರದೇಶ, ಅಗಸ್ತಿಯಾರ್ ಜಲಪಾತ, ವನತೀರ್ಥಂ ಜಲಪಾತ ಹಾಗೂ ಪಾಪನಾಸಂ ಜಲಾಶಯ. ವನತೀರ್ಥಂ ಜಲಪಾತ.

ಚಿತ್ರಕೃಪೆ: Deadstar

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಪಾಪನಾಸಂನಲ್ಲಿರುವ ಅಗಸ್ತೀಯಾರ್ ಜಲಪಾತ. ಮಳೆಗಾಲದಲ್ಲಿ ಇದರ ವೈಭೋಗ ನೋಡಿದವನೆ ಬಲ್ಲ.

ಚಿತ್ರಕೃಪೆ: Bastintonyroy

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಕೊಡೈಕೆನಾಲ್: ಸಾಮಾನ್ಯವಾಗಿ ಗಿರಿಧಾಮ ಎಂದಾಕ್ಷಣ ಬೇಸಿಗೆಯಲ್ಲಿ ಭೇಟಿ ನೀಡಲು ಆದರ್ಶಪ್ರಾಯವಾಗಿರುತ್ತವೆ ಎಂದು ನಮಗೆ ತಿಲಿದಿರುವ ವಿಚಾರ. ಆದರೆ ಕೆಲ ಗಿರಿಧಾಮಗಳು ಚಳಿಗಾಲ ಹಾಗೂ ಮಳೆಗಾಲದಲ್ಲೂ ಆಕರ್ಷಕವಾಗಿ ಕಾಣುತ್ತವೆ. ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ.

ಚಿತ್ರಕೃಪೆ: netlancer2006

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಎತಿ ಪೋತಲ ಜಲಪಾತ: ಚಂದ್ರವಂಕ ನದಿಯಿಂದ ರೂಪಗೊಳ್ಳುವ, ಸುಮಾರು 70 ಅಡಿಗಳಷ್ಟು ಆಳಕ್ಕೆ ಧುಮುಕುವ ಎತಿಪೋತಲ ಜಲಪಾತವು ತೆಲಂಗಾಣದ ನಲ್ಗೊಂಡಾ ಜಿಲ್ಲೆ ಹಾಗೂ ಆಂಧ್ರದ ಗುಂಟೂರು ಜಿಲ್ಲೆಗಳಲ್ಲಿ ಹಂಚಿಹೋಗಿರುವ ನಾಗಾರ್ಜುನಸಾಗರ ಜಲಾಶಯದಿಂದ 11 ಕಿ.ಮೀ ದೂರವಿರುವ ಸುಂದರ ತಾಣವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪ್ರದೇಶದ ಹಸಿರು ದಟ್ಟವಾಗಿ ನೀರು ಹಾಲಿನಂತೆ ಧರೆಗುರುಳುವ ನೋಟವು ಮೂಕ ವಿಸ್ಮಿತರನ್ನಾಗಿಸುತ್ತದೆ.

ಚಿತ್ರಕೃಪೆ: Sarvagyana guru

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ತಲಕೋನ ಜಲಪಾತ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದಲ್ಲಿರುವ ತಲಕೋನ ಜಲಪಾತವು ಮಳೆಗಾಲದ ಸಂದರ್ಭದಲ್ಲಿ ಭೇಟಿ ಮಾಡಲೇಬೇಕಾದಂತಹ ಸುಂದರ ಜಲಪಾತ ಕೇಂದ್ರವಾಗಿದೆ. ಅಲ್ಲದೆ ತಲಕೋನ ಕಾಡು ಪ್ರದೇಶವು ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಮೆರುಗನ್ನು ಪಡೆಯುವುದರಿಂದ ಭೇಟಿ ಯೋಗ್ಯ ಪ್ರದೇಶವಾಗಿದೆ.

ಚಿತ್ರಕೃಪೆ: VinothChandar

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ನಲ್ಲಮಲ್ಲ ಅರಣ್ಯ: ಪೂರ್ವ ಘಟ್ಟಗಳ ಭಾಗವಾಗಿರುವ ನಲ್ಲಮಲ್ಲ ಬೆಟ್ಟ ಪ್ರದೇಶವು ಪ್ರಾಚೀನ ಕಲ್ಲು ಬಂಡೆಗಳ ಹಾಗೂ ದಟ್ಟವಾದ ಮರ ಗಿಡಗಳುಳ್ಳ ಕಾಡು ಪ್ರದೇಶವಾಗಿದ್ದು ಮಳೆಗಾಲದ ಸಂದರ್ಭದಲ್ಲಿ ವೈಭವವನ್ನು ಪಡೆಯುತ್ತದೆ. ಸಾಕಷ್ಟು ಬಿಸಿಯಿರುವ ಈ ಪ್ರದೇಶವು ಮಳೆಗಾಲದಲ್ಲಿ ಕೊಂಚ ಹಿತಕರವಾದ ವಾತಾವರಣ ಹೊಂದಿದ್ದು ಟ್ರೆಕ್ ನಂತಹ ಅದ್ಭುತ ಚಟುವಟಿಕೆಗೆ ವೇದಿಕೆಯಾಗಿ ಸಜ್ಜಾಗುತ್ತದೆ. ಆಂಧ್ರದ ಕಡಪ, ಚಿತ್ತೂರು, ಪ್ರಕಾಶಂ, ಗುಂಟೂರು, ಕರ್ನೂಲ್ ಹಾಗೂ ತೆಲಂಗಾಣದ ಮೆಹಬೂಬ್ನಗರ, ನಲ್ಗೊಂಡಗಳಲ್ಲಿ ವಿಸ್ತರಿಸಿದೆ.

ಚಿತ್ರಕೃಪೆ: Gopal Venkatesan

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಲೋನಾವಲಾ: ಪುಣೆ ನಗರದಿಂದ ಕೇವಲ 64 ಕಿ.ಮೀ ಗಳಷ್ಟು ದೂರದಲ್ಲಿರುವ ಲೋನಾವಲಾ ಗಿರಿಧಾಮ ಮಳೆಗಾಲದಲ್ಲಂತೂ ಸಾಕ್ಷಾತ್ ಮದುವಣಗಿತ್ತಿಯಂತೆ ಸುಂದರವಾಗಿ ಶೃಂಗರಿಸಿಕೊಳ್ಳುತ್ತದೆ. ಹಸಿರು ಹಸಿರಾದ ಸುತ್ತಮುತ್ತಲಿನ ಪ್ರದೇಶ, ಮಂಜಿನಿಂದ ಕೂಡಿರುವ ವಾತಾವರಣ, ತಾಜಾತನದ ಅನುಭವ ನೀಡುವ ತಂಪಾದ ಮಳೆ ಹನಿಗಳು, ನೋಡಲು ಯೋಗ್ಯವಾದ ಆಕರ್ಷಕ ಸ್ಥಳಗಳು. ಇವೆಲ್ಲಾ ಲೋನಾವಲಾದ ವಿಶೇಷತೆಗಳು.

ಚಿತ್ರಕೃಪೆ: ptwo

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಅಂಬೋಲಿ: ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿದ್ದು, ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅಂಬೋಲಿ ಎಂಬ ಮಾಯಾ ಪ್ರದೇಶ ಒಂದೆ ಸಲದ ಭೇಟಿಯಲ್ಲೆ ಮರಳಾಗುವಂತೆ ಮಾಡುತ್ತದೆ. ಇದೊಂದು "ಹಿಲ್ ಸ್ಟೇಷನ್" ಆಗಿರುವುದರಿಂದ ಬೇಸಿಗೆಯಲ್ಲಷ್ಟೆ ಭೇಟಿ ನೀಡಬೇಕೆಂದಿಲ್ಲ. ಮಳೆಗಾಲ ಹಾಗೂ ಚಳಿಗಾಲದ ಸಮಯದಲ್ಲೂ ತುಂಬ ಆಕರ್ಷಕವಾಗಿರುತ್ತದೆ ಈ ಅಂಬೋಲಿ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ಪ್ರಚಂಡವಾಗಿ ಒಡಮೂಡುವ ಅಂಬೋಲಿ ಜಲಪಾತ ನೋಡಿದವನೆ ಧನ್ಯ ಎಂಬುವಂತೆ ರಸ್ತೆಯಲ್ಲಿ ಹೋಗುವವರಿಗೆ ತನ್ನ ಮಾದಕ್ತೆಯಿಂದ ಸೆಳೆಯುತ್ತದೆ.

ಚಿತ್ರಕೃಪೆ: Ayilliath

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಶಿಲ್ಲಾಂಗ್: ಸದಾ ಮೇಘಗಳ ನರ್ತನವಿರುವ ಮೇಘಾಲಯ ರಾಜ್ಯದ ರಾಜಧಾನಿ ನಗರವಾದ ಶಿಲ್ಲಾಂಗ್ ಪಟ್ಟಣವು ಮಳೆಗಾಲದ ಸಂದರ್ಭದಲ್ಲಿ ಭೇಟಿ ಮಾಡಲೇಬೇಕಾದಂತಹ ಸುಂದರ ನಗರವಾಗಿದೆ. ಶಿಲ್ಲಾಂಗ್ ಕುರಿತು ಓದಿ. ವಾರ್ಡ್ಸ್ ಕೆರೆ.

ಚಿತ್ರಕೃಪೆ: Udayan Singh

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಚೀರಾಪುಂಜಿ: ಜಗತ್ತಿನಲ್ಲೆ ಹೆಚ್ಚಿನ ಮಳೆಯನ್ನು ಪಡೆಯುವ ಸ್ಥಳಗಳಲ್ಲೊಂದಾಗಿರುವ ಚೀರಾಪುಂಜಿಯನ್ನು ಮಳೆಗಾಲದ ವಿಶೇಷ ತಾಣವನ್ನಾಗಿಯೆ ನೋಡಬೇಕು. ವರ್ಷವಿಡೀ ಸುರಿಯುವ ಮಳೆ, ಸದಾ ತೇವಾಂಶದಿಂದ ಕೂಡಿರುವ ಕಾಡುಗಳು ಅಸಾಮಾನ್ಯ ಪ್ರಕೃತಿ ವೈಭವವನ್ನು ಪ್ರವಾಸಿಗನ ಕಣ್ಣುಗಲ ಮುಂದೆ ತೆರೆದಿಡುತ್ತದೆ. ಹೆಚ್ಚಿನ ಓದು. ನೋಹ್ ಕಾಲಿಕಾಯ್ ಜಲಪಾತ.

ಚಿತ್ರಕೃಪೆ: Sagarika Dev Roy

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಹಾಬಲೇಶ್ವರ: ಮಹಾಬಲೇಶ್ವರ ತಾಣವು ಮಳೆಗಾಲದಲ್ಲಿಯೂ ಸಹ ಭೇಟಿ ನೀಡಬಹುದಾದ ಅದ್ಭುತ ಗಿರಿಧಾಮ ಪ್ರದೇಶವಾಗಿದ್ದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದೆ. ಬಹುಕಾಂತೀಯ ಪಶ್ಚಿಮ ಘಟ್ಟಗಳ ಭಾಗದಲ್ಲಿ ನೆಲೆಸಿರುವ ವಿಶ್ವದ ಕೆಲವೇ ಕೆಲವು ನಿತ್ಯಹರಿದ್ವರ್ಣ ತಾಣಗಳಲ್ಲಿ ಮಹಾಬಲೇಶ್ವರವೂ ಸಹ ಒಂದಾಗಿದೆ. ಹೆಚ್ಚಿನ ಓದು.

ಚಿತ್ರಕೃಪೆ: Ankur P

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯಲ್ಲೆ ಭಂಡಾರಧಾರಾ ಎಂಬ ಸುಂದರವಾದ ಪ್ರವಾಸಿ ಆಕರ್ಷಣೆಯುಳ್ಳ ಹಳ್ಳಿಯನ್ನು ಕಾಣಬಹುದಾಗಿದೆ. ಪ್ರವರ ನದಿಗೆ ಅಡ್ಡಲಾಗಿ ವಿಲ್ಸನ್ ಗಾರ್ಡನ್ ಎಂಬ ಅಣೆಕಟ್ಟನ್ನು ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಈ ಹಳ್ಳಿಯ ಪರಿಧಿಯಲಿ ಕೆಲ ಜಲಪಾತಗಳು ಹಾಗೂ ಆಕರ್ಷಕವಾದ ಕೆರೆಯನ್ನು ಸಹ ಕಾಣಬಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಮೈದುಂಬಿ ಹರಿಯುವ ಜಲಪಾತ, ಅಣೆಕಟ್ಟೆಯ ನೀರು, ಪ್ರಕೃತಿಯ ದಟ್ಟ ಹಸಿರು ಇದನ್ನು ಒಂದು ಸ್ವರ್ಗವನ್ನೆ ಮಾಡಿಬಿಡುತ್ತದೆ.

ಚಿತ್ರಕೃಪೆ: Desktopwallpapers

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಿನಿ ಮಹಾಬಲೇಶ್ವರ ಎಂದೆ ಕರೆಯಲ್ಪಡುವ ದಾಪೋಳಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಸುಂದರ ಪಟ್ಟಣವಾಗಿದೆ. ಕರಾವಳಿ ಭಾಗದಲ್ಲಿದ್ದರೂ ಸಹ ವರ್ಷಪೂರ್ತಿ ಇಲ್ಲಿ ತಂಪಾದ ವಾತವರಣ ಇರುವುದನ್ನು ಗಮನಿಸಬಹುದು. ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾದ್ದು ಮಳೆಗಾಲದಲ್ಲಿ ಈ ಪುಟ್ಟ ತಾಣವು ಮತ್ತಷ್ಟು ಕಳೆಯನ್ನು ಪಡೆಯುತ್ತದೆ.

ಚಿತ್ರಕೃಪೆ: Parag Purandare

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಳೆಗಾಲದಲ್ಲಿ ಭಾರತ ಪ್ರವಾಸ:

ಮಹಾರಾಷ್ಟ್ರ ರಾಜ್ಯದಲ್ಲಿರುವ ಮಾಥೇರಾನ್ ಒಂದು ತಂಪು ತಂಪಾದ ಹಚ್ಚ ಹಸಿರಿನಿಂದ ಕೂಡಿದ ಸುಂದರ ಗಿರಿಧಾಮ ಪ್ರದೇಶ. ಕೇವಲ ಬೇಸಿಗೆಯಲ್ಲದೆ ಮಳೆಗಾಲದ ಸಂದರ್ಭದಲ್ಲೂ ಅಪಾರವಾದ ಪ್ರಕೃತಿ ಸೊಬಗಿನಿಂದ, ಇಬ್ಬನಿಯ ಹಾಸಿಗೆಯಿಂದ ಇದರ ವಾತಾವರಣ ನಾಚಿಕೆಯ ಶೃಂಗಾರ ಹೊತ್ತ ಹೆಣ್ಣಿನಂತೆ ಕಂಗೊಳಿಸುತ್ತದೆ. ಮಾಥೇರಾನ್ ಕುರಿತು ತಿಳಿಯಿರಿ.

ಚಿತ್ರಕೃಪೆ: praveensagarc

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more