Search
  • Follow NativePlanet
Share
» »ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನಿಗೆ ಭಾರತ ದೇಶದಲ್ಲಿ ಬೆರಳಣಿಕೆಯಷ್ಟು ದೇವಾಲಯಗಳು ಮಾತ್ರವೇ ಇವೆ. ಆದರೆ ಅವುಗಳಲ್ಲಿ ಒಂದಾದ ಕೋನಾರ್ಕ್ ದೇವಾಲಯವು ಒಂದು.ಇದೊಂದು ಪ್ರಪಂಚ ಪ್ರಸಿದ್ಧಿಯನ್ನು ಹೊಂದಿರುವ ಅದ್ಭುತವಾದ ದೇವಾಲಯ. ಈ ಸೂರ್ಯ ದೇವಾಲಯವನ್ನು ನೋಡಲು ವಿದೇಶಿಯರು ಕೂಡ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೇ, ಈ ದೇವಾಲಯದ ನಿರ್ಮಾಣದ ಶೈಲಿ, ಇಂಜನಿಯರಿಂಗ್ ಪ್ರತಿಭೆಯನ್ನು ಎಷ್ಟೇ ಹೊಗಳಿದರು ಕಡಿಮೆಯೇ.

ಇಂಥಹ ಲಕ್ಷಣಗಳನ್ನು ಹೊಂದಿರುವ ಸೂರ್ಯ ದೇವಾಲಯ ಮತ್ತೊಂದಿದೆ. ಆದರೆ ಅಷ್ಟು ಪ್ರಚಾರ ಇಲ್ಲದೇ ಇರುವುದರಿಂದ ಪ್ರವಾಸಿ ದೃಷ್ಟಿಯಿಂದ ಈ ದೇವಾಲಯವು ಹಿಂದೆ ಉಳಿದಿದೆ ಎಂದೇ ಹೇಳಬಹುದು. ಆದರೆ ಸ್ಥಳೀಯರ ಜೊತೆಜೊತೆಗೆ ಈ ದೇವಾಲಯದ ವಿಶಿಷ್ಟತೆಯನ್ನು ತಿಳಿದುಕೊಂಡವರು ಆಗಾಗ ವಜ್ರಗಳ ಭೇಟೆಗೆ ತೆರೆಳುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಕಥನವನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.ಮೊಧೇರಾದಲ್ಲಿನ ಸೂರ್ಯ ದೇವಾಲಯ

1.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಗುಜರಾತ್‍ನಲ್ಲಿನ ಮಹಾಸಾನಾ ಜಿಲ್ಲೆಯಲ್ಲಿರುವ ಪುಷ್ಪವತಿ ನದಿ ತೀರದಲ್ಲಿರುವ ಈ ಮೊಧೇರಾ ಒಂದು ಚಿಕ್ಕದಾದ ಹಳ್ಳಿ. ಈ ಪುಷ್ಪವತಿ ನದಿ ಗುಜರಾತ್‍ನಲ್ಲಿನ ಸರಸ್ವತಿ ನದಿಯೊಂದಿಗೆ ಸೇರಿ ಪ್ರವಹಿಸುತ್ತದೆ.

2.ಮೊಧೇರಾದಲ್ಲಿನ ಸೂರ್ಯ ದೇವಾಲಯ

2.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಅಲ್ಲಿರುವ ರಾಣ್ ಆಫ್ ಕಚ್‍ನ ಒಳಗೆ ಹೋಗಿ ಸೇರುತ್ತದೆ. ಇನ್ನು ಮಹಾಸಾಕಿಗೆ 18 ಕಿ.ಮೀ ದೂರದಲ್ಲಿದೆ. ಇದನ್ನು ಅಂಹಿಲವಡಿ ಪಾಟನ್ ಎಂದು ಕೂಡ ಕರೆಯುತ್ತಿದ್ದರು. ಇದು ಒಂದು ಕಾಲದಲ್ಲಿ ಸೋಲಂಕಿ ರಾಜರ ಮುಖ್ಯವಾದ ಪಟ್ಟಣವಾಗಿತ್ತು. ಅವರ ಕಾಲದಲ್ಲಿ ಬಂಗಾರ, ಮುತ್ತು, ರತ್ನಗಳು ಮೊದಲಾದವು ರಸ್ತೆಯ ಮೇಲೆ ರಾಶಿ ರಾಶಿ ಹಾಕಿ ಮಾರುತ್ತಿದ್ದರು.

3.ಮೊಧೇರಾದಲ್ಲಿನ ಸೂರ್ಯ ದೇವಾಲಯ

3.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಆ ಬೆಲೆ ಬಾಳುವ ಚಿನ್ನಾಭರಣಗಳು ಮಾರುವ ಸ್ಥಳದ ಸಮೀಪದಲ್ಲಿಯೇ ಒಂದು ಸೂರ್ಯ ದೇವಾಲಯವಿತ್ತು. ಇಂದಿಗೂ ಅಲ್ಲಿ ಆಗಾಗ ವಜ್ರಗಳು, ವೈಡೂರ್ಯ, ರತ್ನಗಳು, ಮುತ್ತುಗಳು ದೊರೆಯುತ್ತಿವೆ ಎಂದು ಹೇಳುತ್ತಾರೆ. ಇನ್ನು ಪಾಟನ್‍ಗೆ ಸ್ವಲ್ಪ ದೂರದಲ್ಲಿ ಧರ್ಮಾರಣ್ಯಂ ಇತ್ತಂತೆ.

4.ಮೊಧೇರಾದಲ್ಲಿನ ಸೂರ್ಯ ದೇವಾಲಯ

4.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಸೊಲಂಕಿ ರಾಜರ ಕಾಲದಲ್ಲಿ ಪಾಟನ್‍ನಲ್ಲಿ ರಾಜರು ಕೆಲವು ಮಂದಿ ಬ್ರಾಹ್ಮಣರಿಗೆ ಧರ್ಮಾರಣ್ಯದಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿ ದಾನವನ್ನು ನೀಡುತ್ತಿದ್ದರಂತೆ. ಪಾಟನ್‍ನಿಂದ ಬಂದ ಬ್ರಾಹ್ಮಣರನ್ನು ಮೋಥ್ ಅಥವಾ ಯೋಡ್ ಬ್ರಾಹ್ಮಣರು ಎಂದು ಕರೆಯುತ್ತಿದ್ದರು. ಅದ್ದರಿಂದಲೇ ಈ ಪ್ರದೇಶಕ್ಕೆ ಮೊಥೇರಾ ಎಂಬ ಹೆಸರು ಬಂದಿತು.

5.ಮೊಧೇರಾದಲ್ಲಿನ ಸೂರ್ಯ ದೇವಾಲಯ

5.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಇನ್ನು ಪುಷ್ಪವತಿ ಪಕ್ಕದಲ್ಲಿಯೇ ಇರುವ ಸೂರ್ಯ ದೇವಾಲಯವನ್ನು ಸೋಲಂಕಿ ರಾಜನಾದ 2 ನೇ ಭಿಂದೇವ್ ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ಆಗ ದಕ್ಷಿಣ ಭಾರತ ದೇಶದಲ್ಲಿ ಚೋಳರು ಅಧಿಕಾರದಲ್ಲಿ ಇದ್ದರು.

6.ಮೊಧೇರಾದಲ್ಲಿನ ಸೂರ್ಯ ದೇವಾಲಯ

6.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಇನ್ನು ಇಲ್ಲಿ ನೋಡಿದ ಅದ್ಭುತವಾದ ದೇವಾಲಯವನ್ನು ಅತ್ಯಂತ ಗಟ್ಟಿಯಾದ ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದರು. ಸುಣ್ಣವನ್ನು ಬಳಸದೇ ಕಲ್ಲಿನಿಂದ ಭದ್ರವಾಗಿ ಒಂದು ಸುಂದರವಾದ ಕಲ್ಲಿನ ದೇವಾಲಯವನ್ನು ನಿರ್ಮಿಸಿರುವುದು ಅಂದಿನ ಇಂಜನಿಯರಿಂಗ್ ಪ್ರತಿಭೆಗೆ ನಿದರ್ಶನ.

7.ಮೊಧೇರಾದಲ್ಲಿನ ಸೂರ್ಯ ದೇವಾಲಯ

7.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಇನ್ನು ದೇವಾಲಯದ ಗರ್ಭಗುಡಿಯ ಜೊತೆಜೊತೆಗೆ ಗೂಢ ಮಂಟಪ, ಸಭಾ ರಂಗ ಮಂಟಪ, ಸೂರ್ಯ ಕುಂಡ ಎಂಬ ಮೂರು ಪ್ರಧಾನವಾದ ಭಾಗಗಳಾಗಿವೆ. ಗೂಢ ಮಂಟಪದ ಪ್ರವೇಶ ದ್ವಾರವು ಒಂದು ಮಕರ ತೋರಣವಾಗಿ ಕೆತ್ತನೆ ಮಾಡಲಾಗಿದೆ. ನೋಡಲು ಅತ್ಯಂತ ರಮಣೀಯವಾಗಿದೆ.

8.ಮೊಧೇರಾದಲ್ಲಿನ ಸೂರ್ಯ ದೇವಾಲಯ

8.ಮೊಧೇರಾದಲ್ಲಿನ ಸೂರ್ಯ ದೇವಾಲಯ

PC:YOUTUBE

ಇನ್ನು ದ್ವಾರದಿಂದ ಒಳಗೆ ಪ್ರವೇಶಿಸುತ್ತಿದ್ದಂತೆ ಗರ್ಭಗುಡಿಯ ಸ್ತಂಭಗಳ ಮೇಲಿರುವ ಶಿಲ್ಪಸಂಪತ್ತು ಅಮೋಘವಾದುದು. ಇಲ್ಲಿ ರಾಮಾಯಣ, ಮಹಾಭಾರತ ಚಿತ್ರಗಳನ್ನು ನಾವು ಕಾಣಬಹುದು. ರಂಗ ಮಂಟಪವು ದುಂಡಾಗಿರುತ್ತದೆ. ಇಲ್ಲಿರುವ ಸ್ತಂಭಗಳ ಮೇಲೆ ಆನೆ, ಸಂಗೀತ ಪರಿಕರಗಳನ್ನು ನುಡಿಸುತ್ತಿರುವ ಶಿಲ್ಪಗಳನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X