Search
  • Follow NativePlanet
Share
» »ಮಹಾರಾಷ್ಟ್ರದ ಮೈನವಿರೇಳಿಸುವ 30 ಕೋಟೆಗಳು

ಮಹಾರಾಷ್ಟ್ರದ ಮೈನವಿರೇಳಿಸುವ 30 ಕೋಟೆಗಳು

By Vijay

ಹಿಂದೆ ರಾಜರುಗಳು ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು, ಶತ್ರುಗಳ ಆಕ್ರಮಣದ ಸಮಯದಲ್ಲಿ ಅವರ ಮೇಲೆ ಸುಲಭವಾಗಿ ಕಣ್ಣಿಡಲು ಭದ್ರವಾಗಿ, ಎತ್ತರವಾಗಿ, ಗಟ್ಟಿ ಮುಟ್ಟಾಗಿ ನಿರ್ಮಿಸಿಕೊಳ್ಳುತ್ತಿದ್ದ ರಚನೆಗಳೆ ಕೋಟೆಗಳು. ವಿಚಿತ್ರವಾಗಿ, ರಣ ತಂತ್ರಗಳ ಆಧಾರದ ಮೇಲೆ ರಚಿತವಾಗಿರುವ ಇಂತಹ ಐತಿಹಾಸಿಕ ಕೋಟೆಗಳನ್ನು ಇಂದು ನೋಡುವುದೆ ಒಂದು ರೋಮಾಂಚನ.

ಭಾರತದ ತುಂಬೆಲ್ಲ ಸಾಕಷ್ಟು ಅತ್ಯದ್ಭುತವಾದ ಕೋಟೆಗಳನ್ನು ಕಾಣಬಹುದು. ಆದರೆ ಮಹಾರಾಷ್ಟ್ರ ಎಂದಾಗ ಇದು ಭಾರತದ ಕೋಟೆಗಳ ರಾಜಧಾನಿ ಎಂದರೂ ತಪ್ಪಾಗಲಾರದು. ಹೌದು ಮಹಾರಾಷ್ಟ್ರದಲ್ಲಿ ಅತ್ಯದ್ಭುತವಾದ, ವಿವಿಧ ರೀತಿಯ, ಅಚ್ಚರಿ ಮೂಡಿಸುವ 350 ಕ್ಕೂ ಅಧಿಕ ಸಂಖ್ಯೆಯಲ್ಲಿ ಕೋಟೆಗಳಿರುವುದು ವಿಶೇಷ.

ಮಹಾರಾಷ್ಟ್ರದ ಈ ಮಹಾ ಕೋಟೆಗಳಲ್ಲಿ ಬಹುತೇಕ ಕೋಟೆಗಳನ್ನು ಮಹಾರಾಷ್ಟ್ರ ಕಂಡ ಮಹಾ ಯೋಧ ಛತ್ರಪತಿ ಶಿವಾಜಿ ಮಹಾರಾಜನು ನಿರ್ಮಿಸಿದುದೆನ್ನುವುದು ಇನ್ನೂ ವಿಶೇಷ. ತಲೆ ತಿರುಗಿಸುವಷ್ಟು ಎತ್ತರದ ಬೆಟ್ಟಗಳ ಮೇಲೆ, ಸಮುದ್ರದಲೆಗಳ ಮಧ್ಯದಲ್ಲಿ ಸಮುದ್ರಕ್ಕೆ ಸೆಡ್ಡು ಹೊಡೆದು ನಿಂತಿರುವ ಹಲವಾರು ಕೋಟೆಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ.

ಇಂದು ಈ ಸುಂದರ ಆಕರ್ಷಕ ಕೋಟೆಗಳು ಇಂದು ಕಾಲದ ತುಳಿತಕ್ಕೆ ಸಿಕ್ಕಿ ಗಾಯಗೊಂಡಿದ್ದರೂ ಇನ್ನೂ ಜೀವಂತವಾಗಿ ನೆಲೆಸಿದ್ದು ಪ್ರವಾಸಿಗರ ಅದರಲ್ಲೂ ವಿಶೇಷವಾಗಿ ಯುವಜನಾಂಗದವರನ್ನು ತನ್ನತ್ತ ಸೆಳೆಯುತ್ತವೆ. ಹೆಚ್ಚಾಗಿ ಚಾರಣ ಬಯಸುವ ಇಲ್ಲಿನ ಬಹುತೇಕ ಕೋಟೆಗಳು ಟ್ರೆಕ್ ಪ್ರೀಯರ ಪಾಲಿಗೆ ಸ್ವರ್ಗವಾಗಿದೆ.

ಪ್ರಸ್ತುತ, ಲೇಖನದ ಮೂಲಕ ಮಹಾರಾಷ್ಟ್ರದ ಆಯ್ದ 30 ಅದ್ಭುತ ಕೋಟೆಗಳ ಪರಿಚಯ ಮಾಡಿಕೊಳ್ಳಿ. ಆಯಾ ಕೋಟೆಗಳ ಹೆಸರು ಹಾಗೂ ಅದಿರುವ ಸ್ಥಳದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದ್ದು, ಸಮಯಾವಕಾಶ ದೊರೆತರೆ ಇವುಗಳಲ್ಲಿನ ಯಾವುದಾದರೂ ಕೋಟೆಗೆ ಹೋಗಲು ಪ್ರಯತ್ನಿಸಿ. ಖಂದಿತ ನಿಮಗೆ ನಿರಾಸೆಯಾಗುವುದಿಲ್ಲ.

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

1. ಸಿಂಧುದುರ್ಗ ಕೋಟೆ: ಇದೊಂದು ಅದ್ಭುತವಾದ ಸಮುದ್ರ ಕೋಟೆ. ಅರಬ್ಬಿ ಸಮುದ್ರದಲ್ಲಿ ಅಲೆಗಳನ್ನು ಎದುರಿಸುತ್ತ ಕಾಲಿನ ಚಕ್ಕ್ರಕ್ಕೆ ಸೆಡ್ಡು ಹೊಡೆಯುತ್ತ ನಿಂತಿರುವ ಅಮೋಘ ಕೋಟೆ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ ಪಟ್ಟಣದ ಕಡಲ ತೀರದಲ್ಲಿ ನೆಲೆಸಿರುವ ಈ ಕೋಟೆಯು 17 ನೆಯ ಶತಮಾನದಲ್ಲಿ ನಿರ್ಮಾಣಗೊಂಡ ಕೋಟೆಯಾಗಿದೆ.

ಚಿತ್ರಕೃಪೆ: Ankur P

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಅರಬ್ಬಿ ಸಮುದ್ರದ ನಡುಗಡ್ಡೆಯೊಂದರಲ್ಲಿ ಲೋಹದ ಸಲಕರಣೆಗಳನ್ನು ಕ್ರಮಬದ್ಧವಾಗಿ ಉಪಯೋಗಿಸಿ ಗಟ್ಟಿಯಾದ ತಳಪಾಯ ಹಾಕಿಸಿ ಈ ಬೃಹತ್ ಕೋಟೆಯನ್ನು ನಿರ್ಮಿಸಿದವನು ಛತ್ರಪತಿ ಶಿವಾಜಿ ಮಹಾರಾಜನು. 48 ಎಕರೆಅಗಳಷ್ಟು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ಬೃಹತ್ ಕೋಟೆಯು 30 ಅಡಿಗಳಷ್ಟು ಎತ್ತರದ ಗೋಡೆಗಳನ್ನು ಹೊಂದಿದ್ದು ಆ ಗೋಡೆಗಳು 12 ಅಡಿಗಳಷ್ಟು ದಪ್ಪವಾಗಿವೆ.

ಚಿತ್ರಕೃಪೆ: Ankur P

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

2. ಗವಿಲ್ಗಡ್ ಕೋಟೆ : ಹಿಂದೆ ಉತ್ತರ ದಖ್ಖನ ಪ್ರಸ್ಥಭೂಮಿಯಲ್ಲಿ ಭದ್ರವಾಗು ನೆಲೆಯೂರಿ ಆಳುತ್ತಿದ್ದ ಮರಾಠಾ ಸಾಮ್ರಾಜ್ಯದ ಭದ್ರವಾದ ಕೋಟೆಯಾಗಿತ್ತು ಗವಿಲ್ಗಡ್ ಕೋಟೆಯು ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲ್ಘಾಟ್ ಹುಲಿ ಮೀಸಲು ಅರಣ್ಯ ಪ್ರದೇಶದ ಬಳಿಯಿದೆ.

ಚಿತ್ರಕೃಪೆ: C .SHELARE

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

3. ಆಲಂಗ್ ಕೋಟೆ : ಪಶ್ಚಿಮ ಘಟ್ಟಗಳ ಕಳಸುಬಾಯಿ ಪರ್ವತ ಶ್ರೇಣಿಗಳಲ್ಲಿರುವ ಮೂರು ಕೋಟೆಗಳ ಪೈಕಿ ಒಂದಾಗಿದೆ ಅಲಂಗ್ ಕೋಟೆ. ನಾಶಿಕ್ ಜಿಲ್ಲೆಯಲ್ಲಿರುವ ಈ ಬೆಟ್ಟ ಕೋಟೆಯು ಅತಿ ಕಷ್ಟಕರವಾಗಿ ತಲುಪಬಹುದಾದ ಕೋತೆಯಾಗಿದೆ ಕಾರಣ ಗೊಂದಲ ಉಂಟು ಮಾಡುವ ಈ ಕೋಟೆಯ ದಾರಿ, ದಟ್ಟವಾದ ಅರಣ್ಯ ಹಾಗೂ ಮೊನಚಾದ ಬೆಟ್ಟ.

ಚಿತ್ರಕೃಪೆ: Mvkulkarni23

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಈ ಬೆಟ್ಟವನ್ನು ಏರುವಾಗ ಬಹು ಎಚ್ಚರಿಕೆಯಿಂದ ಜೋಪಾನವಾಗಿ ಏರಬೇಕು. ಮಳೆಗಾಲದ ಸಂದರ್ಭದಲ್ಲಿ ಟ್ರೆಕ್ ಮಾಡದೆ ಇದ್ದರೆ ಉತ್ತಮ. ಅಲ್ಲದೆ ಕೋಟೆಯ ತಾಣದಿಂದ ಪಶ್ಚಿಮ ಘಟ್ಟಗಳ ಸುಂದರವಾದ ನೋಟವನ್ನು ನೋಡಿ ಪಟ್ಟ ಕಷ್ಟ ಸಾರ್ಥಕ ಎಂಬ ಭಾವನೆ ಮೂಡದೆ ಇರಲಾರದು.

ಚಿತ್ರಕೃಪೆ: Mvkulkarni23

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಇನ್ನೊಂದು ವಿಷಯವೆಂದರೆ ಈ ಬೆಟ್ಟ ಕೋಟೆಯಲ್ಲಿ ಎರಡು ಗುಹೆಗಳು, ಒಂದು ಸಣ್ಣ ದೇವಾಲಯ ಹಾಗೂ 11 ನೀರಿನ ತೊಟ್ಟಿಗಳನ್ನು ಕಾಣಬಹುದು. ಇಲ್ಲಿ ತಿನ್ನಲು ಏನೂ ದೊರೆಯದ ಕಾರಣ ನಿಮ್ಮ ತಿಂಡಿಗಳನ್ನು ನೀವೆ ಒಯ್ಯಬೇಕು. ನೀರು ಸಿಗುತ್ತದಾದರೂ ಸ್ವಂತವಾಗಿ ಒಯ್ಯುವುದು ಉತ್ತಮ.

ಚಿತ್ರಕೃಪೆ: Mvkulkarni23

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಇಗತ್ಪುರಿ ಪಟ್ಟಣದಿಂದ ಅಂಬೇವಾಡಿ ಎಂಬ ಸ್ಥಳಕ್ಕೆ ತಲುಪಿ ಅಲ್ಲಿಂದ ಈ ಕಠಿಣವಾದ ಚಾರಣ ಕೈಗೊಂಡು ಸುಮಾರು 8 ರಿಂದ 9 ಘಂಟೆಗಳಲ್ಲಿ ಅಲಂಗ್ ಕೋಟೆಯನ್ನು ತಲುಪಬಹುದಾಗಿದೆ. ಇಲ್ಲಿರುವ ಎರಡು ಗುಹೆಗಳಲ್ಲಿ 30 ರಿಂದ 40 ರಷ್ಟು ಜನ ಬೇಕಾದರೆ ಕ್ಯಾಂಪ್ ಹೂಡಬಹುದು.

ಚಿತ್ರಕೃಪೆ: Mvkulkarni23

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

4. ಹರಿಶ್ಚಂದ್ರಗಡ್ : ಮಹಾರಾಷ್ಟ್ರದ ಅಹ್ಮದ್ ನಗರ ಪ್ರದೇಶದಲ್ಲಿರುವ ಹರಿಶ್ಚಂದ್ರಗಡ್ ಎಂಬ ಅಚ್ಚರಿಪಡಿಸುವಂತಹ ಕೋಟೆ. ಈ ಬೆಟ್ಟ ಕೋಟೆಯ ಮೂಲವು ಆರನೆಯ ಶತಮಾನದ್ದಾಗಿದ್ದು, ನಂತರ 11 ನೆಯ ಶತಮಾನದಲ್ಲಿ ಇಲ್ಲಿ ಗುಹೆಗಳನ್ನು ಕೆತ್ತಲಾಗಿರುವುದನ್ನು ಕಾಣಬಹುದು. ತತ್ವಸಾರವನ್ನು ರಚಿಸಿದ ಮಹಾ ಋಷಿ ಚಾಂಗದೇವನು ಇಲ್ಲಿಯೆ ತಪಸ್ಸು ಆಚರಿಸಿದ್ದುದು ಮತ್ತೊಂದು ವಿಶೇಷ.

ಚಿತ್ರಕೃಪೆ: Cj.samson

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಇದೊಂದು ಟ್ರೆಕ್ ಯೋಗ್ಯ ಕೋಟೆಯಾಗಿದ್ದು ಇಲ್ಲಿ ಹರಿಶ್ಚಂದ್ರೇಶ್ವರ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Moju303

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಹರಿಶ್ಚಂದ್ರ ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಒಂದು ಬೃಹತ್ ಗುಹೆಯನ್ನು ಕಾಣಬಹುದಾಗಿದ್ದು ಅದೆ ಕೇದಾರೇಶ್ವರ ಗುಹೆ. ಈ ಗುಹೆಯಲ್ಲಿ 5 ಅಡಿಗಳ ಶಿವಲಿಂಗವೊಂದು ನೀರಿನಿಂದ ಆವೃತವಾಗಿರುವುದನ್ನು ಕಾಣಬಹುದು. ಸ್ಥಳಪುರಾಣದ ಪ್ರಕಾರ, ಈ ಶಿವಲಿಂಗದ ಮೇಲೆ ಛಾವಣಿಯೊಂದಿದ್ದು ಅದಕ್ಕೆ ಆಧಾರವೆಂಬಂತೆ ನಾಲ್ಕು ಖಂಬಗಳಿವೆ. ಇವು ನಾಲ್ಕು ಯುಗಗಳನ್ನು ಸೂಚಿಸುತ್ತವೆ. ಈಗಾಗಲೆ ಮೂರು ಖಂಬಗಳು ನಾಶಗೊಂಡಿದ್ದು ಕಳೆದುಹೋದ ಮೂರು ಯುಗಗಳ ಸಂಕೇತಗಳಾಗಿವೆ. ಕುತೂಹಲಕರ ವಿಷಯವೆಂದರೆ ಯಾವಾಗ ಈಗಿರುವ ಖಂಬವು ನಾಶವಾಗುತ್ತದೊ ಅದೆ ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ.

ಚಿತ್ರಕೃಪೆ: rohit gowaikar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

5. ಇರ್ಶಾಲಗಡ್ ಕೋಟೆ : ಮಹಾರಾಷ್ಟ್ರದ ಮಾಥೇರಾನ್ ಮತ್ತು ಪನ್ವೇಲ್ ಪ್ರದೇಶಗಳ ಮಧ್ಯದಲ್ಲಿ ಈ ಬೆಟ್ಟ ಕೋಟೆಯಿರುವುದನ್ನು ಕಾಣಬಹುದು. ಇರ್ಶಾಲ್ವಾಡಿ ಇದಕ್ಕೆ ಹತ್ತಿರದಲ್ಲಿರುವ ಗ್ರಾಮವಾಗಿದ್ದು ಇಲ್ಲಿಂದ ಎರಡು ಘಂಟೆಗಳಷ್ಟು ಚಾರಣದ ಮೂಲಕ ಈ ಬೃಹತ್ ಬೆಟ್ಟ ಕೋಟೆಯನ್ನು ಏರಬಹುದು. ಮೊನಚಾದ ಬಂಡೆ ಹಾಗೂ ಅದರ ಮೇಲೆ ಹತ್ತುತ್ತಿರುವ ಇರುವೆಗಳಂತೆ ಗೋಚರಿಸುವ ಪ್ರವಾಸಿಗರನ್ನು ಕಾಣಬಹುದು.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

6. ಜೈಗಡ್ ಕೋಟೆ : ಈ ಕೋಟೆಯು ಮಹಾರಾಷ್ಟ್ರದ ಕರಾವಳಿ ಪ್ರದೇಶದ ಕೋಟೆಗಳ ಪೈಕಿ ಒಂದಾಗಿದ್ದು ರತ್ನಾಗಿರಿ ಜಿಲ್ಲೆಯ ಗಣಪತಿಪುಳೆ ಎಂಬ ಪಟ್ಟಣದಿಂದ ಸುಮಾರು 14 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Hydkat

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

7. ಜಂಜೀರಾ : ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಮರಾಠರ, ಪೋರ್ಚುಗೀಸರ, ಡಚ್ಚರ ಮತ್ತು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪೆನಿಯವರ ದಾಳಿಗಳನ್ನು ತಡೆದುಕೊಂಡು ಅಜೇಯವಾಗಿ ಮತ್ತು ಒಂದು ಚೂರು ಮಂಕಾಗದಂತೆ ಇಂದಿಗೂ ಉಳಿದುಕೊಂಡಿರುವ ಏಕೈಕ ಕೋಟೆಯಾಗಿದೆ. ಈ ಕೋಟೆಯ ಸಮಕಾಲೀನ ಕೋಟೆಗಳೆಲ್ಲವು ಈಗಾಗಲೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ.

ಚಿತ್ರಕೃಪೆ: Ishan Manjrekar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಮೂಲವಾಗಿ ಜಂಜೀರಾ ಎಂಬ ಪದವು ಯಾವುದೇ ಭಾರತೀಯ ಭಾಷೆಯ ಮೂಲದಿಂದ ಬಂದಿಲ್ಲ ಬದಲಾಗಿ ಇದು ಅರೇಬಿಕ್ ಭಾಷೆಯ ಪದವಾಗಿದೆ. ಅರೇಬಿಯಾ ಭಾಷೆಯಲ್ಲಿ ಇದರರ್ಥ 'ದ್ವೀಪ' ಎಂದಾಗುತ್ತದೆ. ಒಂದಾನೊಂದು ಕಾಲದಲ್ಲಿ ಮುರುದ್ ಅನ್ನು ಹಬ್ಸನ್ ಅಥವಾ ಹಬ್ಷಿ ಎಂದು ಕರೆಯಲಾಗುತ್ತಿತ್ತು. ಮರಾಠಿ ಭಾಷೆಯಲ್ಲಿ ಇದರರ್ಥ ಅಬಿಶ್ಶಿನಿಯನ್ ದೇಶಕ್ಕೆ ಸೇರಿದವನು ಎಂದಾಗುತ್ತದೆ. ಮುರುದ್ ಎಂಬ ಪದವು ಕೊಂಕಣಿ ಪದವಾದ ಮೊರೊಡ್ ಎಂಬ ಪದದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಹಾಗಾಗಿ ಈ ಕೋಟೆಯು ಮೊರೊಡ್ ಮತ್ತು ಜಜೀರಾ ಕೊಂಕಣಿ ಮತ್ತು ಅರೇಬಿಕ್ ಪದಗಳ ಸಮಿಶ್ರಣದಿಂದಾಗಿ ಆಗಿದೆ.

ಚಿತ್ರಕೃಪೆ: Ankur P

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

8. ಕಮಲಗಡ್ : ಭೆಲಂಜಾ ಅಥವಾ ಕತಲ್ ಗಡ್ (ಸಾವಿನ ಕೋಟೆ) ಎಂತಲೂ ಕರೆಯಲ್ಪಡುವ ಈ ಕೋಟೆಯು ಒಂದು ಚೌಕಾಕಾರದ ಕೋಟೆಯಾಗಿದ್ದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೈ ತಾಲೂಕಿನಲ್ಲಿದೆ. ಈ ಕೋಟೆಯು ಎಲ್ಲ ಕೋಟೆಗಳಂತೆ ಯಾವುದೆ ರೀತಿಯ ಗೋಡೆಗಳನ್ನು ಹೊಂದಿಲ್ಲ. ಬಹುಶಃ ಇದರ ಅತ್ಯಂತ ಅಪಾಯಕಾರಿಯಾದ ಮೇಲ್ಮೈ ಬಂಡೆಗಳೆ ಇದಕ್ಕೆ ಬೇಕಾದ ರಕ್ಷಣೆ ನೀಡಿತ್ತು ಎಂದು ಹೇಳಬಹುದು.

ಚಿತ್ರಕೃಪೆ: rohit gowaikar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಇದನ್ನು ಹತ್ತುವುದು ಅಪಾಯಕಾರಿಯಾಗಿದ್ದು ಅದಕ್ಕೂ ಮುಂಚೆ ಕೃತಕ ಸುರಂಗ ಮಾರ್ಗವೊಂದನ್ನು ಕೆಳಗಿನಿಂದ ಮೇಲಿನವರೆಗೂ ಮೆಟ್ಟಿಲುಗಳ ಮೂಲಕ ಕೊರೆಯಲಾಗಿತ್ತು. ಆದರೆ ಮಧ್ಯದಲ್ಲಿ ಬೃಹತ್ ಬಂಡೆಯೊಂದು ಈ ಮಾರ್ಗದಲ್ಲಿ ಅಡ್ಡ ಬಿದ್ದು ಇಂದು ಇದು ಹತ್ತಲಸಾಧ್ಯವಾದಂತಾಗಿದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

9. ಕರ್ನಾಲಾ ಕೋಟೆ : ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿರುವ ಕರ್ನಾಲಾ ಕೋಟೆಯು ಒಂದು ಸುಂದರ ಬೆಟ್ಟ ಕೋಟೆಯಾಗಿದೆ. ಪನ್ವೇಲ್ ನಗರದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಕರ್ನಾಲಾ ಕೋಟೆಯು ಕ್ರಿ.ಶ 1400 ಕ್ಕಿಂತಲೂ ಮುಂಚೆಯೆ ನಿರ್ಮಾಣ ಮಾಡಲಾಗಿರುವ ಕೋಟೆ ಎಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ರಣತಂತ್ರಕ್ಕನುಗುಣವಾಗಿ ನಿರ್ಮಿಸಲಾಗಿರುವ ಈ ಕೋಟೆಯು ಬೋರ್ ಪಾಸ್ (ರಹದಾರಿ) ಗೆ ಅಭಿಮುಖವಾಗಿ ನೆಲೆಸಿದೆ. ಬೋರ್ ಪಾಸ್ ಕೊಂಕಣ ಭಾಗವನ್ನು ಮಹಾರಾಷ್ಟ್ರದ ಒಳನಾಡಿನೊಂದಿಗೆ ಬೆಸೆಯುತ್ತದೆ. ಮೂಲತಃ ಇಲ್ಲಿ ಎರಡು ಕೋಟೆಗಳಿದ್ದು ಒಂದು ದೊಡ್ಡದಾಗಿದೆ ಹಾಗೂ ಇನ್ನೊಂದು ಚಿಕ್ಕದಾಗಿದೆ. ಏರಲು ಮೆಟ್ಟಿಲುಗಳಿದ್ದರೂ ಸಹ ಹತ್ತುವ ಹಾದಿಯಲ್ಲಿ ಜೇನು ಗೂಡುಗಳು ಸಾಕಷ್ಟಿದ್ದು ಏರುವ ಕಾರ್ಯಕ್ಕೆ ಅಡ್ಡಿಪಡಿಸುತ್ತದೆ.

ಚಿತ್ರಕೃಪೆ: Dupinder singh

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಕೋಟೆಯ ಬುಡದಲ್ಲಿ ಭವಾನಿ ದೇವಿಗೆ ಮುಡಿಪಾದ ಚಿಕ್ಕ ದೇಗುಲವೊಂದಿದ್ದು ಸುತ್ತಮುತ್ತಲಿನ ಹಸಿರುಮಯ ಪ್ರದೇಶವು ಮನಸ್ಸಿಗೆ ಆನಂದವನ್ನು ಕರುಣಿಸುತ್ತದೆ.

ಚಿತ್ರಕೃಪೆ: Ghariprasada90

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

10. ಕೋರಿಗಡ್ ಕೋಟೆ : ಪುಣೆ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಲೋಣಾವಲಾದಿಂದ 20 ಕಿ.ಮೀ ಗಳಷ್ಟು ದೂರದಲ್ಲಿರುವ ಬೆಟ್ಟ ಕೋಟೆ ಇದಾಗಿದೆ. ಮಳೆಗಾಲ ಹಾಗೂ ಅದರ ನಂತರದಲ್ಲಂತೂ ಈ ಕೋಟೆಯ ಸುತ್ತಮುತ್ತಲಿನ ಪ್ರದೇಶವು ಹಸಿರಿನಿಂದ ಸಿಂಗರಿಸಿಕೊಂಡು ಸ್ವರ್ಗ ಸದೃಶವಾಗಿರುತ್ತದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಈ ಬೆಟ್ಟ ಕೋಟೆಗೆ ಹತ್ತಿರದಲ್ಲಿ ಮುಲ್ಶಿ ಜಲಾಶಯವಿರುವುದರಿಂದ ಬೆಟ್ಟದ ಬುಡದಲ್ಲಿ ಒಂದು ಕೆರೆ ರೂಪಗೊಂಡಿದೆ. ಅಲ್ಲದೆ ಕೋಟೆಯ ಮೇಲೂ ಸಹ ಎರಡು ಚಿಕ್ಕ ಕೆರೆಗಳು ಹಾಗೂ ದೇವಿಯ ಒಂದು ದೇವಾಲಯವನ್ನು ಕಾಣಬಹುದಾಗಿದೆ. ಕೋಟೆಯ ಮೇಲೆ ಕಂಡುಬರುವ ಕೆರೆ.

ಚಿತ್ರಕೃಪೆ: solarisgirl

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಮಳೆಗಾಲದ ಸಂದರ್ಭದಲ್ಲಿ ಭದ್ರ ಕೋಟೆಯ ಮೇಲ್ಮೈಗಳಿಂದ ಚಿಕ್ಕ ಜಲಧಾರೆಗಳು ಉದ್ಭವಗೊಂಡು ಭುವಿಗೆ ಧುಮುಕುವ ನೋಟವಂತೂ ಎಂದಿಗೂ ಮರೆಯಲಾಗದ ಅನುಭವ ನೀಡುತ್ತದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

11. ಕೊಲಾಬಾ ಕೋಟೆ : ಅಲಿಬಾಗ್ ಕಡಲ ತೀರದಿಂದ ಸುಮಾರು 1.5 ಕಿ.ಮೀ ಗಳಷ್ಟು ಒಳಗೆ ಸಮುದ್ರದಲ್ಲಿ ನಿರ್ಮಿತವಾದ ಕೋಟೆ ಇದಾಗಿದೆ. ದಕ್ಷಿಣ ಮುಂಬೈನಿಂದ 35 ಕಿ.ಮೀ ದೂರವಿರುವ ಈ ಕೋಟೆಯು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಬ್ರಿಟೀಷ್ ಕಡಲ ನೌಕೆಗಳ ಮೇಲೆ ಆಕ್ರಮಣ ಮಾಡಲು ಶಿವಾಜಿ ಮಹಾರಾಜನು ಈ ಕೋಟೆಯನ್ನು ಭದ್ರವಾಗಿ ತನ್ನ ಅಧೀನದಲ್ಲಿಟ್ಟುಕೊಂಡು ನಿರ್ವಹಿಸುತ್ತಿದ್ದ.

ಚಿತ್ರಕೃಪೆ: Vikas Rana

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಈ ಕೋಟೆಯ ಆವರಣದಲ್ಲಿ ದೇವಾಲಯ, ವಾಸಸ್ಥಳಗಳು ಹಾಗೂ ಬಾವಿಗಳಿವೆ. ಅಚ್ಚರಿಯೆಂದರೆ ಈ ಕೋಟೆಯು ಸಮುದ್ರದಲ್ಲಿದ್ದರೂ ಸಹ ಇಲ್ಲಿರುವ ಬಾವಿಗಳಲ್ಲಿ ದೊರೆಯುವ ನೀರು ಸಿಹಿಯಾಗಿದೆ. ಕೋಟೆಗೆ ಎರಡು ಪ್ರವೇಶ ದ್ವಾರಗಳಿದ್ದು ಒಂದು ಕಡಲ ತೀರಕ್ಕೆ ಅಭಿಮುಖವಾಗಿಯೂ ಇನ್ನೊಂದು ವಿರುದ್ಧ ದಿಕ್ಕಿನಲ್ಲಿ ಸಮುದ್ರಕ್ಕೆ ಅಭಿಮುಖವಾಗಿಯೂ ಇರುವುದು ಕಂಡುಬರುತ್ತವೆ. ಕೋಟೆಯಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನ.

ಚಿತ್ರಕೃಪೆ: Vikas Rana

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಈ ಕೋಟೆಗೆ ತೆರಳಲು ಸಮುದ್ರದಲ್ಲಿ ನಡೆದುಕೊಂಡು ಇಲ್ಲವೆ ಕುದುರೆಗಾಡಿಗಳ ಸಹಾಯದಿಂದ ಹೋಗಬಹುದು. ನೀರು ಹೆಚ್ಚು ಕಮ್ಮಿ ಸೊಂಟದ ಬಳಿಯಷ್ಟು ಬರುವಷ್ಟೆ ಇರುತ್ತದೆ. ಒಮ್ಮೊಮ್ಮೆ ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾಗಿದ್ದಾಗ ಮೋಟಾರು ಬೋಟುಗಳ ಮೂಲಕ ಮಾತ್ರವೆ ಇಲ್ಲಿ ತಲುಪಬಹುದಾಗಿದೆ. ಕೋಟೆ ನೋಡಿ ಮತ್ತೆ ಅಲಿಬಾಗ್ ಕಡಲ ತೀರಕ್ಕೆ ಮರಳುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Vikas Rana

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

12. ಲೋಹಗಡ್ ಕೋಟೆ : ಪುಣೆ ಜಿಲ್ಲೆಯಲ್ಲಿರುವ ಲೋಹಗಡ್ ಬೆಟ್ಟ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3,389 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಅದ್ಭುತವಾದ, ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯಾವಳಿಗಳನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ. ಮತ್ತೊಂದು ಪ್ರಖ್ಯಾತ ಗಿರಿಧಾಮವಾದ ಲೋನಾವಲಾಕೆ ಸನಿಹದಲ್ಲಿರುವ ಲೋಹಗಡ್ ಸುತ್ತ ಮುತ್ತಲೂ ಅನೇಕ ಆಕರ್ಷಕ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: vivek Joshi

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

13. ಪತ್ತಾ ಕೋಟೆ : ಮಹಾರಾಷ್ಟ್ರದ ನಾಶಿಕ್ ಮತ್ತು ಅಹ್ಮದಾಬಾದ್ ಗಳ ಮಧ್ಯೆ ಸ್ಥಿತವಿರುವ ಅದ್ಭುತ ಬೆಟ್ಟ ಕೋಟೆ ಇದಾಗಿದೆ. ಈ ಕೋಟೆ ತಾಣದ ಪ್ರದೇಶದಲ್ಲಿ ವಾಸಿಸುವವರನ್ನು ಪತ್ತೆಕಾರ್ ಎಂಬ ಅಡ್ಡ ಹೆಸರಿನಿಂದ ಸಂಭೋದಿಸಲಾಗುತ್ತದೆ. ಹಿಂದೊಮ್ಮೆ ಶಿವಾಜಿ ಮಹಾರಾಜನು ಈ ಕೋಟೆಗೆ ಭೇಟಿ ನೀಡಿದ್ದ. ಇಲ್ಲಿ ಲಕ್ಷ್ಮಿ ದೇಗುಲವೊಂದಿದೆ. ಆದರೆ ಕೋಟೆಗೆ ಬೇಕಾದ ಗಮನ ಸಿಗದೆ ದುಸ್ಥಿತಿಯಲ್ಲಿರುವುದು ವಿಷಾದನೀಯ ಸಂಗತಿ.

ಚಿತ್ರಕೃಪೆ: Pankajshirke

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

14. ಪ್ರತಾಪಗಡ್ ಕೋಟೆ : ಸತಾರಾ ಜಿಲ್ಲೆಯ ಮಹಾಬಳೇಶ್ವರದಿಂದ 23 ಕಿ.ಮೀ ಗಳಷ್ಟು ದೂರದಲ್ಲಿದೆ ಪ್ರತಾಪಗಡ್ ಕೋಟೆ. ಐತಿಹಾಸಿಕವಾಗಿ ಪ್ರತಾಪಗಡ್ ಯುದ್ಧಭೂಮಿ ಎಂದು ಪ್ರಸಿದ್ಧವಾಗಿರುವ ಈ ಕೋಟೆಯು ಇಂದು ಆಕರ್ಷಕ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಶಿವಾಜಿ ಮಹಾರಾಜನ ಆದೇಶದಂತೆ ಅವನ ಮಂತ್ರಿಯಾಗಿದ್ದ ಮೋರೊಪಂತ್ ತ್ರಿಂಬಕ್ ಪಿಂಗ್ಲೆ ಎಂಬಾತನು ಈ ಕೋಟೆಯ ನಿರ್ಮಾಣದ ಜವಾಬ್ದಾರಿ ಪಡೆದು ನಿರ್ಮಿಸಿದ. ಶಿವಾಜಿಯು ಈ ಕೋಟೆಯನ್ನು ನೀರಾ ಹಾಗೂ ಕೊಯ್ನಾ ನದಿ ದಂಡೆಗಳನ್ನು ಮತ್ತು ಪರ್ ರಹದಾರಿಯನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ನಿರ್ಮಿಸಿದ್ದ.

ಚಿತ್ರಕೃಪೆ: Ms.Mulish

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

15. ಪ್ರಬಾಲಗಡ್ ಕೋಟೆ : ಮಾಥೇರಾನ್ ಮತ್ತು ಪನ್ವೇಲ್ ಗಳ ಮಧ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ ಈ ಕೋಟೆಯಿದೆ. ಪ್ರಸ್ತುತ ಸ್ಥಿತಿಯಲ್ಲಿರುವ ಕೋಟೆಯನ್ನು ಬಹಮನಿ ಸುಲ್ತಾನರು ನಿರ್ಮಿಸಿದುದಾಗಿದೆ. ಇಲ್ಲಿಂದ ಸ್ಪಷ್ಟವಾಗಿ ಕಂಡುಬರುವ ಪನ್ವೇಲ್ ಹಾಗೂ ಕಲ್ಯಾಣ ಕೋಟೆಗಳ ಮೇಲೆ ಹದ್ದಿನ ಕಣ್ಣಿಡುವ ಉದ್ದೇಶದಿಂದ ಈ ಕೋಟೆಯ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Hasenläufer

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

16. ಪುರಂದರ ಕೋಟೆ : ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿದೆ ಈ ಕೋಟೆ. ಇವು ಮೂಲತಃ ಜೋಡಿ ಕೋಟೆಗಳಾಗಿದ್ದು ಇದರ ಪಕ್ಕದಲ್ಲಿರುವ ಕೋಟೆ ವಜ್ರಗಡ್ ಕೋಟೆ ಎಂದು ಕರೆಯಲ್ಪಡುತ್ತದೆ. ಸಮುದ್ರ ಮಟ್ಟದಿಂದ 4,472 ಅಡಿಗಳಷ್ಟು ಎತ್ತರದಲ್ಲಿ ಬೆಟ್ಟವೊಂದರ ಮೇಲೆ ಈ ಕೋಟೆಯಿರುವುದನ್ನು ಕಾಣಬಹುದಾಗಿದೆ. ಕೋಟೆಯ ಮೇಲೆರುತ್ತಿರುವ ಪ್ರವಾಸಿಗರು.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

17. ರಾಯಗಡ್ ಕೋಟೆ : ಮಹಾರಾಶ್ಟ್ರದ ರಾಯಗಡ್ ಜಿಲ್ಲೆಯ ಮಹಾಡ್ ನಲ್ಲಿದೆ ಈ ಕೋಟೆ. ಶಿವಾಜಿಯು ಮರಾಠಾ ಸಾಮ್ರಾಜ್ಯದ ರಾಜನಾಗಿ ಅಧಿಕಾರಕ್ಕೆ ಬಂದಾಗ ಈ ಕೋಟೆಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು.

ಚಿತ್ರಕೃಪೆ: Swapnaannjames

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

18. ರಾಜಮಾಚಿ : ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ರಾಚಮಾಚಿ ಎಂಬ ಹಳ್ಳಿಯ ಬಳಿ ಈ ಅದ್ಭುತ ಕೋಟೆಯಿದೆ. ಟ್ರೆಕ್ಕಿಂಗ್ ಚಟುವಟಿಕೆಗೆ ಬಹು ಹೆಸರುವಾಸಿಯಾಗಿರುವ ಈ ಕೋಟೆಯು ಪ್ರಸಿದ್ಧ ತಾಣವಾದ ಲೋಣಾವ್ಲಾದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Kandoi.sid

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

19. ರಾಜಗಡ್ ಕೋಟೆ : ಪುಣೆ ಜಿಲ್ಲೆಯ ನರ್ಸಾಪುರದಿಂದ 15 ಕಿ.ಮೀ ದೂರದಲ್ಲಿದೆ ಈ ಕೋಟೆ. ಶಿವಾಜಿ ಮಹಾರಾಜನ ಆಡಳಿತ ಸಮಯದಲ್ಲಿ ಬರೋಬ್ಬರಿ 26 ವರ್ಷಗಳ ಕಾಲ ಈ ಕೋಟೆಯು ಮರಾಠಾ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿತ್ತು. ಇಂದು ಟ್ರೆಕ್ ಚಟುವಟಿಕೆಗೆ ಹೆಸರುವಾಸಿಯಾದ ತಾಣವಾಗಿದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

20. ರಾಮ್ಶೆಜ್ ಕೋಟೆ : ನಾಶಿಕ್ ಪಟ್ಟಣದ ವಾಯವ್ಯಕ್ಕೆ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ ಈ ಬೆಟ್ಟ ಕೋಟೆ. ಇತಿಹಾಸದ ಪ್ರಕಾರ ಮುಘಲರು ಆರುವರೆ ವರ್ಷಗಳ ಕಾಲ ಸತತವಾಗಿ ಈ ಕೋಟೆ ಪಡೆಯಲು ಹವಣಿಸಿದ್ದರು. ಆದರೆ ಅಂದಿನ ಕಿಲ್ಲೆದಾರ್ (ಕೋಟೆ ನಿರ್ವಾಹಕ) ಆಗಿದ್ದ ಸೂರ್ಯಾಜಿ ಜಾಧವ್ ಅವರು ಎಂದಿಗೂ ಇದಕ್ಕೆ ಆಸ್ಪದ ನೀಡಿರಲಿಲ್ಲ. ಕೊನೆಗೆ ಅದಿದುವರೆ ವರ್ಷಗಳ ಕಾಲ ಅವರು ಕೆಲಸ ನಿರ್ವಹಿಸಿ ನಂತರ ವರ್ಗಾವಣೆಗೊಂಡ ಮೇಲೆ ಅವರ ಸ್ಥಾನ ತುಂಬಿದ ಇನ್ನೊಬ್ಬ ಕಿಲ್ಲೇದಾರ್ ಮುಘಲರಿಂದ ಲಂಚ ಪಡೆದು ಅವರು ಇದನ್ನು ವಶಪಡಿಸಿಕೊಳ್ಳುವಂತೆ ಮಾಡಿದನೆನ್ನಲಾಗಿದೆ.

ಚಿತ್ರಕೃಪೆ: Prashant sonwane

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

36.ಸಾಲ್ಹೇರ್ : ನಾಶಿಕ್ ಜಿಲ್ಲೆಯ ಸತನಾ ಎಂಬಲ್ಲಿರುವ ವಾಗಾಂಭಾ ಬಳಿ ಇರುವ ಸಾಲ್ಹೇರ್ ಎಂಬ ಸ್ಥಳದಲ್ಲಿ ಈ ಕೋಟೆಯನ್ನು ಕಾಣಬಹುದು. ಆದ್ದರಿಂದ ಇದನ್ನು ಸಾಲ್ಹೇರ್ ಕೋಟೆ ಎಂತಲೂ ಕರೆಯುತ್ತಾರೆ. ದಂತ ಕಥೆಯ ಪ್ರಕಾರ, ಪರಶುರಾಮರು ತಮ್ಮ ಒಂದು ಜಾಗವನ್ನು ನಿರ್ಮಿಸಿಕೊಂಡು ಇಲ್ಲಿ ತಪಗೈದಿದ್ದರಂತೆ.

ಚಿತ್ರಕೃಪೆ: Bhushan Kotakar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

ಇಂದು ಸಜ್ಜನಗಡ್ ಒಂದು ಪವಿತ್ರ ಕ್ಷೇತ್ರವಾಗಿಯೂ ಹೆಸರುವಾಸಿಯಾಗಿದೆ. ರಾಮದಾಸರ ಸಾವಿರಾರು ಅನುಯಾಯಿಗಳು ಇಂದಿಗೂ ಈ ಕೋಟೆಗೆ ಭೇಟಿ ನೀಡಿ ಅವರ ಸಮಾಧಿಯ ದರುಶನ ಪಡೆಯುತ್ತಾರೆ.

ಚಿತ್ರಕೃಪೆ: Sachin jahagirdar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

23. ಶಿವನೇರಿ ಕೋಟೆ : ಪುಣೆಯ ಜುನ್ನಾರ್ ಬಳಿಯಿರುವ ಈ ಕೋಟೆಯು ಶಿವಾಜಿ ಮಹಾರಾಜನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಪ್ರವಾಸಿ ಆಕರ್ಷಣೆಯಾಗಿರುವ ಈ ಕೋಟೆಗೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Ramveeturi

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

24. ಶ್ರೀವರ್ಧನ ಕೋಟೆ : ರಾಜಮಾಚಿ ಹಳ್ಳಿಯಲ್ಲಿದೆ ಈ ಬೆಟ್ಟ ಕೋಟೆ. ಸಹ್ಯಾದ್ರಿ ಶ್ರೇಣಿಯಲ್ಲಿರುವ ಈ ಕೋಟೆಯು ಲೋಣಾವ್ಲಾದಿಂದ ಎಂಟು ಕಿ.ಮೀ ದೂರವಿದೆ. ಇಂದು ಕೇವಲ ಅಳಿದುಳಿದ ಅವಶೇಷಗಳನ್ನು ಮಾತ್ರವೆ ಇಲ್ಲಿ ಕಾಣಬಹುದಾಗಿದೆ. ಬಹುಶಃ ವೀಕ್ಷಣಾ ಕೋಟೆಯಾಗಿ ಇದು ಬಳಕೆಯಾಗುತ್ತಿತ್ತೆಂದು ನಂಬಲಾಗಿದೆ.

ಚಿತ್ರಕೃಪೆ: Rudolph.A.furtado

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

25. ತೋರ್ಣಾ ಕೋಟೆ : ಇದು ಪ್ರಚಂಡಗಡ್ ಕೋಟೆ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಈ ಕೋಟೆ ಪುಣೆ ಜಿಲ್ಲೆಯ ತೋರ್ಣಾ ಎಂಬ ಗ್ರಾಮದ ಬಳಿ ಸ್ಥಿತವಿದೆ.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

26. ಸಿಂಹಗಡ್ ಕೋಟೆ : ಪುಣೆ ನಗರದ ನೈರುತ್ಯಕ್ಕೆ 30 ಕಿ.ಮೀ ಗಳಷ್ಟು ದೂರದಲ್ಲಿ ಈ ಕೋಟೆಯನ್ನು ಕಾಣಬಹುದು. ಐತಿಹಾಸಿಕವಾಗಿ ಕೋಟೆಯು ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ.

ಚಿತ್ರಕೃಪೆ: Dmpendse

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

27. ಉದ್ಗೀರ್‍ ಕೋಟೆ : ಲಾತೂರ್ ಜಿಲ್ಲೆಯ ಉದ್ಗೀರ್ ಪಟ್ಟಣದಲ್ಲಿದೆ ಈ ಕೋಟೆ. ಉದ್ಗೀರ್ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಕೋಟೆಯು 12 ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

28. ವಿಜಯದುರ್ಗ : ಸಿಂಧುದುರ್ಗ ಜಿಲ್ಲೆಯ ಕರಾವಳಿ ಪ್ರದೇಶದಲ್ಲೆ ಅತ್ಯಂತ ಹಳೆಯದಾದ ಕೋಟೆ ಇದಾಗಿದೆ. ಶಿಲಾಹಾರ ಸಾಮ್ರಾಜ್ಯದ ಎರಡನೆಯ ಭೋಜ್ ರಾಜನಿಂದ 12 ನೆಯ ಶತಮಾನದಲ್ಲಿ ಈ ಕೋಟೆಯ ನಿರ್ಮಾಣವಾಗಿದೆ. ನಂತರ ಮರಾಠಾ ಸಾಮ್ರಾಜ್ಯ ಬೆಳೆಯುತ್ತಿದ್ದಂತೆ ಶಿವಾಜಿ ಮಹಾರಾಜನು ಇದನ್ನು ಮರು ನಿರ್ಮಾಣ ಮಾಡಿದನು.

ಚಿತ್ರಕೃಪೆ: Belasd

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

29. ವೀಸಾಪುರ ಕೋಟೆ : ಪುಣೆ ಜಿಲ್ಲೆಯ ವಿಸಾಪುರ ಎಂಬ ಸ್ಥಳದಲ್ಲಿ ಈ ಕೋಟೆಯಿದೆ. ಮರಾಠಾ ಸಾಮ್ರಾಜ್ಯದ ಮೊದಲನೆಯ ಪೇಶ್ವೆಯಾದ ಬಾಲಾಜಿ ವಿಶ್ವನಾಥನಿಂದ ಈ ಕೋಟೆಯ ನಿರ್ಮಾಣವಾಗಿದೆ. ಪ್ರಸ್ತುತ ಒಂದು ಅದ್ಭುತ ಪ್ರವಾಸಿ ತಾಣವಾಗಿ ಈ ಕೋಟೆಯು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Anant Rohankar

ಪ್ರಚಂಡ ಕೋಟೆಗಳು:

ಪ್ರಚಂಡ ಕೋಟೆಗಳು:

30. ವಿಶಾಲಗಡ್ ಕೋಟೆ : ಶಿವಾಜಿಯ ಪ್ರಮುಖ ಕೋಟೆಗಳ ಪೈಕಿ ಒಂದಾಗಿತ್ತು ವಿಶಾಲಗಡ್ ಕೋಟೆ. ಖೇಲ್ನಾ ಎಂದು ಕರೆಯಲ್ಪಡುತ್ತಿದ್ದ ಈ ಕೋಟೆಯು ಮೊದಲಿಗೆ ಬಿಜಾಪುರದ ಆದಿಲ್ ಶಾಹಿ ಸುಲ್ತಾನನ ನಿಯಂತ್ರಣದಲ್ಲಿತ್ತು. ಆದರೆ ಉಪಾಯ ಮಾಡಿ ಶಿವಾಜಿಯು ಈ ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡು ಇದಕ್ಕೆ ವಿಶಾಲಗಡ್ ಕೋಟೆ ಎಂದು ಹೆಸರಿಸಿದನು. ಈ ಕೋಟೆಯು ಕೋಲ್ಹಾಪುರದ ವಾಯವ್ಯ ದಿಕ್ಕಿಗೆ 76 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ankur P

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X