• Follow NativePlanet
Share
» »ಪುರುಷರಿಗೆ ಪ್ರವೇಶವಿಲ್ಲದ ಕೆಲವು ಭಾರತದ ದೇವಾಲಯಗಳು

ಪುರುಷರಿಗೆ ಪ್ರವೇಶವಿಲ್ಲದ ಕೆಲವು ಭಾರತದ ದೇವಾಲಯಗಳು

Written By:

ಹಿಂದೂ ಸಂಸ್ಕøತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಹೆಚ್ಚು. ಹಿಂದು ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ಸಾಧಾರಣವಾಗಿ ನಮ್ಮ ದೇಶದ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳುತ್ತೇವೆ. ಆದರೆ ಕೆಲವು ದೇವಾಲಯಗಳಿಗೆ ಮಾತ್ರ ನೀವು ಕುಟುಂಬ ಸಭ್ಯರ ಜೊತೆ ಭೇಟಿ ನೀಡುವುದಕ್ಕೆ ಆಗುವುದಿಲ್ಲ.

ಏನಪ್ಪ ಇದು? ಎಂದು ಆಶ್ಚರ್ಯಗೊಳ್ಳುತ್ತಾ ಇದ್ದೀರಾ? ಹೌದು ಇದು ನಿಜ. ಮುಖ್ಯವಾಗಿ ಭಾರತ ದೇಶದಲ್ಲಿನ ಕೆಲವು ಪ್ರಸಿದ್ಧವಾದ ದೇವಾಲಯಗಳಿಗೆ ಪುರುಷರಿಗೆ ಒಳ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ಆ ನಿಷಿದ್ಧವಾದ ದೇವಾಲಯಗಳು ಯಾವುವು? ಎಂದು ತಿಳಿಯಲು ಲೇಖನವನ್ನು ಓದಿರಿ.

ಪ್ರಸ್ತುತ ಲೇಖನದ ಮೂಲಕ ಪುರುಷರು ಈ ದೇವಾಲಯಕ್ಕೆ ಒಳ ಪ್ರವೇಶ ಮಾಡುವಂತಿಲ್ಲ? ಅದಕ್ಕೆ ಕಾರಣ ಏನು? ಹಾಗೂ ಆ ದೇವಾಲಯದ ಯಾವುವು? ಎಂಬುದನ್ನು ತಿಳಿಯಿರಿ

ಅಟ್ಟುಕಲ್ ದೇವಾಲಯ (ಕೇರಳ)

ಅಟ್ಟುಕಲ್ ದೇವಾಲಯ (ಕೇರಳ)

ಈ ಅಟ್ಟುಕಲ್ ದೇವಾಲಯವು ಕೇರಳ ರಾಜ್ಯದ ತಿರುವನಂತ ಪುರದಲ್ಲಿದೆ. ಈ ದೇವಾಲಯಲ್ಲಿಯೂ ಕೂಡ ಪುರುಷರಿಗೆ ಪ್ರವೇಶವಿಲ್ಲ. ಮುಖ್ಯವಾಗಿ ಈ ದೇವಾಲಯದಲ್ಲಿ ಕನ್ನಿಕಾ ದೇವಿ ನೆಲೆಸಿದ್ದಾಳೆ. ಈ ತಾಯಿ ಸಾಕ್ಷಾತ್ ಪಾರ್ವತಿ ದೇವಿ ಸ್ವರೂಪಿ ಎಂದು ಅಲ್ಲಿನ ಭಕ್ತರು ಎಷ್ಟೊ ಭಕ್ತಿ, ಶ್ರದ್ಧೆಗಳಿಂದ ಪೂಜಿಸುತ್ತಾರೆ. ಆದರೆ ಸಂಕ್ರಾತಿಯ ಹಬ್ಬದಂದು ಮಾತ್ರ ಈ ದೇವಾಲಯಕ್ಕೆ ಪುರುಷರ ಪ್ರವೇಶ ನಿಷಿದ್ಧವಾಗಿರುತ್ತದೆ.

ಅಟ್ಟುಕಲ್ ದೇವಾಲಯ (ಕೇರಳ)

ಅಟ್ಟುಕಲ್ ದೇವಾಲಯ (ಕೇರಳ)

ಆ ಸಮಯದಲ್ಲಿ ಕನ್ನಿಕಾ ಮಾತಾಳಿಗೆ ವಿಶೇಷವಾದ ಪೂಜಾ ಕಾರ್ಯಕ್ರಮಗಳು ಮಾಡುತ್ತಾರೆ. ಈ ಪೂಜಾ ಕಾರ್ಯಾಕ್ರಮಗಳನ್ನು ಮಹಿಳೆಯರೇ ಮಾಡುತ್ತಾರೆ. ಕೇರಳದಲ್ಲಿ ಸಂಕ್ರಾಂತಿ ಹಬ್ಬವು ಸತತ ಮೂರು ದಿನಗಳು ನಡೆಯುವುದರಿಂದ ಸುಮಾರು 30 ಲಕ್ಷಕ್ಕಿಂತ ಹೆಚ್ಚು ಮಂದಿ ಮಹಿಳಾ ಭಕ್ತರು ಭೇಟಿ ನೀಡುತ್ತಾರಂತೆ.

ಕನ್ಯಾಕುಮಾರಿ ದೇವಿ (ತಮಿಳು ನಾಡು)

ಕನ್ಯಾಕುಮಾರಿ ದೇವಿ (ತಮಿಳು ನಾಡು)

ಈ ಕನ್ಯಾಕುಮಾರಿ ದೇವಿಯ ದೇವಾಲಯವು ತಮಿಳು ನಾಡಿನಲ್ಲಿದೆ. ಈ ದೇವಾಲಯವು ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದ ಸ್ಥಳ ಪುರಾಣದ ಪ್ರಕಾರ ಸತಿ ದೇವಿ ಪಾರ್ವತಿ ಮರಣಿಸಿದ ನಂತರ ಪರಮೇಶ್ವರನು ನೋವಿನಿಂದ ಪಾರ್ವತಿಯ ಶರೀರವನ್ನು ತೆಗೆದುಕೊಂಡು ಕೈಲಾಸಕ್ಕೆ ತೆರಳುವಾಗ ಪಾರ್ವತಿಯ ಬೆನ್ನಿನ ಮೂಳೆ ಈ ಸ್ಥಳದಲ್ಲಿ ಬಿದ್ದು ಶಕ್ತಿ ಪೀಠವಾಯಿತು.

ಕನ್ಯಾಕುಮಾರಿ ದೇವಿ (ತಮಿಳು ನಾಡು)

ಕನ್ಯಾಕುಮಾರಿ ದೇವಿ (ತಮಿಳು ನಾಡು)

ಈ ದೇವಾಲಯದಲ್ಲಿನ ಪಾರ್ವತಿ ದೇವಿಯ ಅಂಶವಾದ ಭಗವತಿ ಮಾತ ಸನ್ಯಾಸಿಯಾಗಿ ಈ ದೇವಾಲಯದಲ್ಲಿ ನೆಲೆಸಿದ್ದಾಳೆ. ಈ ತಾಯಿಯನ್ನು ದೇವಿ ಕುಮಾರಿ ಎಂದು ಕರೆಯುತ್ತಾರೆ. ಈ ತಾಯಿ ಸನ್ಯಾಸಿಯಾದ ಕಾರಣ ಈ ದೇವಾಲಯಕ್ಕೆ ತೆರಳುವ ಪುರುಷರು ಕೇವಲ ಸನ್ಯಾಸಿಯಾಗಿಯೇ ಇರಬೇಕು ಎಂದು ನಿಯಮ ಏರ್ಪಟ್ಟಿತು.

ಚೆಕ್ಕುವ ತುಕಾವಲ್ ದೇವಾಲಯ (ಕೇರಳ)

ಚೆಕ್ಕುವ ತುಕಾವಲ್ ದೇವಾಲಯ (ಕೇರಳ)

ಈ ಚೆಕ್ಕುವ ತುಕಾವಲ್ ದೇವಾಲಯವು ಕೇರಳ ರಾಜ್ಯದ ಅಲ್ ಫುಲಾ ಎಂಬ ಗ್ರಾಮದಲ್ಲಿದೆ. ಈ ದೇವಾಲಯದಲ್ಲಿ ದುರ್ಗಾ ಮಾತೆಯನ್ನು ಸಾಕಷ್ಟೂ ನಿಯಮ ನಿಷ್ಟೆಯಿಂದ ಪೂಜಿಸುತ್ತಾರೆ. ಇಲ್ಲಿ ಉಳಿದ ಹಬ್ಬಗಳ ಜೊತೆಗೆ 2 ಪ್ರತ್ಯೇಕವಾದ ಪೂಜೆಗಳನ್ನು ಕೂಡ ನಿರ್ವಹಿಸುತ್ತಾರೆ. ಒಂದು ಸಂಕ್ರಾಂತಿ ಸಮಯದಲ್ಲಿ ಮಾಡುವ ನಾರಿ ಪೂಜಾ ಎರಡನೇಯದು ಧನುರ್ ಮಾಸದಲ್ಲಿ ಮಾಡುವ ಧನುರ್ ಪೂಜಾ.

ಚೆಕ್ಕುವ ತುಕಾವಲ್ ದೇವಾಲಯ (ಕೇರಳ)

ಚೆಕ್ಕುವ ತುಕಾವಲ್ ದೇವಾಲಯ (ಕೇರಳ)

ಇವುಗಳಲ್ಲಿ ಮೊದಲನೇಯ ಪೂಜೆಯನ್ನು ಸತತ 7 ದಿನಗಳವರೆಗೆ ನೆರವೇರಿಸಿದರೆ, ಎರಡನೇ ಪೂಜೆಯನ್ನು 10 ದಿನಗಳವರೆಗೆ ನಡೆಸುತ್ತಾರೆ. ಈ ಪರ್ವ ದಿನಗಳಲ್ಲಿ ದೇವಾಲಯದ ಒಳ ಪ್ರವೇಶ ಪುರುಷರಿಗೆ ನಿಷಿಧ್ದವಾಗಿರುತ್ತದೆ. ಆ ದಿನಗಳಲ್ಲಿ ನಡೆಯುವ ಪ್ರತಿ ಕೆಲಸವು ಕೂಡ ಮಹಿಳೆಯರೇ ಮಾಡುತ್ತಾರೆ. ಆ ಪೂಜಾ ದಿನಗಳಲ್ಲಿ ಯಾವುದೇ ಸಂದರ್ಭ ಹಾಗೂ ಪರಿಸ್ಥಿತಿಯಲ್ಲಿಯೂ ಚೆಕ್ಕುವ ತುಕಾವಲ್ ದೇವಾಲಯಕ್ಕೆ ಪುರುಷರು ಪ್ರವೇಶ ಮಾಡುವಹಾಗಿಲ್ಲ.

ಮಾತಾ ದೇವಾಲಯ (ಬಿಹಾರ)

ಮಾತಾ ದೇವಾಲಯ (ಬಿಹಾರ)

ಈ ದೇವಾಲಯವು ಬಿಹಾರ ರಾಜ್ಯದ ಮುಜಾಬರ್‍ಪುರ್ ಎಂಬ ಗ್ರಾಮದಲ್ಲಿದೆ. ಅಲ್ಲಿ ಮಹಾ ಶಕ್ತಿ ಸ್ವಯಂ ನೆಲೆಸಿದ್ದಾಳೆ ಎಂದು ಅಲ್ಲಿನ ಸ್ಥಳೀಯ ಭಕ್ತರ ನಂಬಿಕೆಯಾಗಿದೆ. ಈ ದೇವಾಲಯದಲ್ಲಿನ ಮಹಾ ಶಕ್ತಿಗೆ ನಡೆಯುವ ಪ್ರತಿ ಕೆಲಸಗಳು ನಿಯಮ ನಿಷ್ಟೆಗಳಿಂದ ನೆರವೇರಿಸಬೇಕಾಗುತ್ತದೆ. ಇಲ್ಲಿ ವರ್ಷದ ಕೆಲವು ವಿಶೇಷವಾದ ದಿನಗಳಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ.

ಮಾತಾ ದೇವಾಲಯ (ಬಿಹಾರ)

ಮಾತಾ ದೇವಾಲಯ (ಬಿಹಾರ)

ಕೆಲವು ವಿಶೇಷವಾದ ದಿನಗಳಲ್ಲಿ ಅಪ್ಪಿ ತಪ್ಪಿಯೂ ಆ ದೇವಾಲಯದ ಬಳಿ ಕೂಡ ಸುಳಿಯಬಾರದಂತೆ. ಹಾಗೆ ಏನಾದರೂ ಸುಳಿದರೆ ಗ್ರಾಮದ ದೊಡ್ಡವರು ಕಠಿಣವಾದ ಶಿಕ್ಷೆಗಳನ್ನು ವಿಧಿಸುತ್ತಾರಂತೆ. ಈ ತಾಯಿಗೆ ಪ್ರತಿ ಕೆಲಸವು ಕೂಡ ಮಹಿಳೆಯರ ಕೈಯಲ್ಲಿಯೇ ಮಾಡಿಸುತ್ತಾರಂತೆ.

ಬ್ರಹ್ಮ ದೇವಾಲಯ ( ರಾಜಸ್ಥಾನ)

ಬ್ರಹ್ಮ ದೇವಾಲಯ ( ರಾಜಸ್ಥಾನ)

ಈ ಪ್ರಪಂಚದಲ್ಲಿಯೇ ಏಕೈಕ ಬ್ರಹ್ಮನಿಗೆ ಸಮರ್ಪಿತವಾದ ದೇವಾಲಯವೆಂದರೆ ಅದು ರಾಜಸ್ಥಾನದಲ್ಲಿನ ಬ್ರಹ್ಮ ದೇವಾಲಯ. ಈ ದೇವಾಲಯವು ರಾಜಸ್ಥಾನದ ಪುಷ್‍ಪಕ್ ಎಂಬ ಗ್ರಾಮದಲ್ಲಿದೆ. ಈ ಗ್ರಾಮದ ಹೆಸರು ಈ ದೇವಾಲಯದ ಬಳಿಯಿರುವ ಪುಷ್‍ಪಕ್ ಎಂಬ ಸರೋವರದ ಮೂಲಕ ಏರ್ಪಟ್ಟಿತ್ತಂತೆ. ಆಶ್ರ್ಚಯವೆನೆಂದರೆ ಈ ದೇವಾಲಯದಲ್ಲಿ ವಿವಾಹವಾಗದೇ ಇರುವ ಪುರುಷರಿಗೆ ದೇವಾಲಯದ ಪ್ರವೇಶ ನಿಷಿದ್ಧವಂತೆ.

ಬ್ರಹ್ಮ ದೇವಾಲಯ ( ರಾಜಸ್ಥಾನ)

ಬ್ರಹ್ಮ ದೇವಾಲಯ ( ರಾಜಸ್ಥಾನ)

ಇದಕ್ಕೆ ಪುರಾಣಗಳಲ್ಲಿ ಸುಂದರವಾದ ಒಂದು ಕಾರಣಗಳು ಇವೆ. ಒಮ್ಮೆ ಬ್ರಹ್ಮ ದೇವನು ಈ ಸ್ಥಳದಲ್ಲಿ ಒಂದು ಯಾಗವನ್ನು ಮಾಡುವುದಕ್ಕೆ ನಿರ್ಧರಿಸುತ್ತಾನೆ. ಸಾಮಾನ್ಯವಾಗಿ ಯಾಗ ಮಾಡಬೇಕಾದರೆ ಸತಿ ಪತಿ ಸಮೇತವಾಗಿ ಮಾಡಬೇಕಾಗಿರುತ್ತದೆ. ತಾಯಿ ಸರಸ್ವತಿ ದೇವಿಯು ಯಾಗಕ್ಕೆ ಬರುವುದು ತಡವಾದ್ದರಿಂದ ಬ್ರಹ್ಮ ದೇವನು ಗಾಯತ್ರಿ ದೇವಿಯನ್ನು ವಿವಾಹವಾಗಿ ಯಾಗವನ್ನು ಪೂರ್ತಿ ಮಾಡುತ್ತಾನೆ. ಅದೇ ಸಮಯಕ್ಕೆ ಬಂದ ಸರಸ್ವತಿ ದೇವಿಯು ತನ್ನ ಸ್ಥಾನದಲ್ಲಿ ಬೇರೆ ಮಹಿಳೆ ಕುಳಿತಿರುವುದನ್ನು ಕಂಡು ಬ್ರಹ್ಮ ದೇವನಿಗೆ ಶಪಿಸುತ್ತಾಳೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ