• Follow NativePlanet
Share
» »ಈ ದೇವಸ್ಥಾನದಲ್ಲಿ ಪುರುಷರಿಗೆ ನೋ ಎಂಟ್ರಿ

ಈ ದೇವಸ್ಥಾನದಲ್ಲಿ ಪುರುಷರಿಗೆ ನೋ ಎಂಟ್ರಿ

Written By:

ಸ್ತ್ರೀಯರಿಗೆ ಪ್ರವೇಶವನ್ನು ನಿಷೇಧಿಸಲಾಗಿರುವ ಹಲವಾರು ಮಂದಿರಗಳು ಭಾರತದಲ್ಲಿವೆ. ಆದರೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಕೆಲವು ಮಂದಿರಗಳಲ್ಲಿ ಪುರುಷರಿಗೂ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ಮಂದಿರದೊಳಗೆ ಪ್ರವೇಶ ಮಾಡಬಹುದು, ಪೂಜೆ ಮಾಡಬಹುದು. ಆದರೆ ಪುರುಷರು ಮಾತ್ರ ಪ್ರವೇಶಿಸುವಂತಿಲ್ಲ. ಅಂತಹ ಮಂದಿರಗಳು ಯಾವುವು ಅನ್ನೋದನ್ನು ನೋಡೋಣ.

ಫ್ರೆಂಡ್ಸ್‌ಜೊತೆ ಕಾಲ ಕಳೆಯೋಕೆ ಚೀಪ್ & ಬೆಸ್ಟ್ ಹ್ಯಾಂಗ್‌ಔಟ್ ಸ್ಪಾಟ್

ಅಟ್ಟುಕಲ್ ದೇವಸ್ಥಾನ , ಕೇರಳ

ಅಟ್ಟುಕಲ್ ದೇವಸ್ಥಾನ , ಕೇರಳ

PC:Vijayakumarblathur
ಕೇರಳದಲ್ಲಿರುವ ಅಟ್ಟುಕಲ್ ದೇವಸ್ಥಾನ ದೇವಸ್ಥಾನದಲ್ಲಿ ಅಟ್ಟುಕಲ್ ಪೊಂಗಲ್ ಎನ್ನುವ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಯಾವುದೇ ಪುರುಷನಿಗೆ ದೇವಸ್ಥಾನದ ಒಳಗೆ ಹೋಗಲು ಅನುಮತಿ ಇಲ್ಲ.

ಚಕ್ಕುಲತುಕ್ಕಾವ್ ದೇವಸ್ಥಾನ ಕೇರಳ

ಚಕ್ಕುಲತುಕ್ಕಾವ್ ದೇವಸ್ಥಾನ ಕೇರಳ

PC: youtube
ಕೇರಳದಲ್ಲಿರುವ ಭಗವತಿ ದೇವಸ್ಥಾನ ಇದಾಗಿದ್ದು, ಇಲ್ಲಿ ಪ್ರತಿವರ್ಷ ನಾರಿ ಪೂಜಾ ಜರುತ್ತದೆ. ಇದರಲ್ಲಿ ಪುರುಷ ಪೂಜಾರಿ ೧೦ ದಿನಗಳ ಕಾಲ ಉಪವಾಸ ವೃತ ಹಿಡಿದಿರುವ ಮಹಿಳಾ ಭಕ್ತರ ಪಾದ ತೊಳೆಯುತ್ತಾರೆ. ಈ ದಿನ ಕೇವಲ ಮಹಿಳೆಯರಿಗೆ ಮಾತ್ರ ಇಲ್ಲಿ ಪ್ರವೇಶ.

ಕಾಮಾಕ್ಯ ಮಂದಿರ, ಅಸ್ಸಾಂ

ಕಾಮಾಕ್ಯ ಮಂದಿರ, ಅಸ್ಸಾಂ

PC: Vikramjit Kakati
ಅಸ್ಸಾಂನ ಗುವಾಹಟಿಯಲ್ಲಿ ಈ ದೇವಾಲಯವಿದೆ. ದೇವಿಯ ಶಕ್ತಿ ಪೀಠಗಳಲ್ಲಿ ಇದೂ ಒಂದು. ಇಲ್ಲಿ ದೇವಿ ವರ್ಷಕ್ಕೊಮ್ಮೆ ಮುಟ್ಟಾಗುತ್ತಾಳೆ. ಆ ಸಂದರ್ಭದಲ್ಲಿ ಯಾವುದೇ ಪುರುಷರಿಗೆ ದೇವಾಲಯದ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಆ ಸಂದರ್ಭದಲ್ಲಿ ಮಹಿಳಾ ಪೂಜಾರಿಗಳೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ. ದೇವಿಯ ಮುಟ್ಟಾದ ಬಟ್ಟೆಯನ್ನು ಪ್ರಸಾದ ರೂಪದಲ್ಲಿ ಹಂಚುವ ಕಾರ್ಯ ಮಾಡುತ್ತಾರೆ.

 ಸಾವಿತ್ರಿ ಮಂದಿರ ಪುಷ್ಕರ್

ಸಾವಿತ್ರಿ ಮಂದಿರ ಪುಷ್ಕರ್

PC: youtube

ರಾಜಸ್ಥಾನದ ಪುಷ್ಕರದಲ್ಲಿ ಬ್ರಹ್ಮದೇವನ ಪತ್ನಿ ಸಾವಿತ್ರಿಗೆ ಸಂಬಂಧಿಸಿದ ಮಂದಿರವೊಂದಿದೆ. ಇಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಈ ಮಂದಿರವಿರುವುದು ರತ್ನಗಿರಿ ಪರ್ವತದಲ್ಲಿ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಪುರಾಣದ ಪ್ರಕಾರ ಬ್ರಹ್ಮದೇವ ಒಂದು ಪತ್ನಿ ಇರುವಾಗಲೇ ಇನ್ನೊಂದು ವಿವಾಹ ಮಾಡಿಕೊಂಡಿದ್ದರು ಇದರಿಂದ ಕೋಪಗೊಂಡ ಸಾವಿತ್ರಿ ಬ್ರಹ್ಮನಿಗೆ ಕೇವಲ ಪುಷ್ಕರದಲ್ಲಿ ಮಾತ್ರ ಮಂದಿರ ಇರುವಂತೆ ಶಾಪ ನೀಡಿದಳು ಎನ್ನಲಾಗುತ್ತದೆ. ನಂತರ ರತ್ನಗಿರಿಯಲ್ಲಿ ಹೋಗಿ ನೆಲೆಯಾದಳು ಎನ್ನಲಾಗುತ್ತದೆ.

ದುರ್ಗಾಮಾತ ದೇವಸ್ಥಾನ, ಬಿಹಾರ

ದುರ್ಗಾಮಾತ ದೇವಸ್ಥಾನ, ಬಿಹಾರ

PC: youtube
ಈ ದೇವಸ್ಥಾನದಲ್ಲಿ ಕೆಲವು ಸಂದರ್ಭದಲ್ಲಿ ಪುರುಷರಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ಬಿಹಾರದ ಮುಜಾಫರ್‌ಪುರದಲ್ಲಿರು ಈ ದೇವಾಲಯದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿರುತ್ತದೆ. ಪುರುಷ ಪೂಜಾರಿಗೂ ಪ್ರವೇಶವಿರುವುದಿಲ್ಲ.

Read more about: india temple

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ