Search
  • Follow NativePlanet
Share
» »ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ ಮೇಕೆದಾಟು

ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ ಮೇಕೆದಾಟು

ಬೆಂಗಳೂರಿನಿಂದ ಕೇವಲ 90 ಕಿ.ಮೀ ದೂರದಲ್ಲಿರುವ ಮೇಕೆದಾಟು ಬೆಂಗಳೂರಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಬೆಳಗ್ಗೆಯೇ ಹೊರಟರೆ ಸಂಜೆ ಸುಮಾರಿಗೆ ಹಿಂತಿರುಗಬಹುದು. ಖುಷಿ ನೀಡುದ ಜಾಗ ಇದಾಗಿದೆ. ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಬಗ್ಗೆ ಸಾಕಷ್ಟು ಪರ ವಿರೋಧಗಳೂ ಇವೆ.

ಎಲ್ಲಿದೆ ಈ ಮೇಕೆದಾಟು

ಎಲ್ಲಿದೆ ಈ ಮೇಕೆದಾಟು

PC:Madzmadz

ಕನಕಪುರದ ಮಾರ್ಗವಾಗಿ ಅರ್ಕಾವತಿ ನದಿ ಸುಮಾರು 32 ಕಿಮೀ ಮೈದಾನ ಪ್ರದೇಶದಲ್ಲಿ ಹರಿದು ಕಡೆಗೆ ತಾಲ್ಲೂಕಿನ ದಕ್ಷಿಣದ ಪ್ರದೇಶವಾದ ಅರಣ್ಯವನ್ನು ಹೊಕ್ಕು ಕಾವೇರಿಯನ್ನು ಸಂಗಮ ಎನ್ನುವೆಡೆ ಸೇರುತ್ತದೆ. ಅಲ್ಲಿ ಸಂಗಮೇಶ್ವರನ ದೇವಾಲಯ ಮತ್ತು ಒಂದು ಪ್ರವಾಸಿ ಮಂದಿರ ಇವೆ. ಇಲ್ಲಿಂದ ಅರ್ಕಾವತಿಯನ್ನು ದಾಟಿ ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿಮೀ ದೂರದಲ್ಲಿ ಮೇಕೆದಾಟು ಸಿಗುತ್ತದೆ.

ಟೇಬಲ್‍ರಾಕ್

ಟೇಬಲ್‍ರಾಕ್

PC: Sugan Raj S

ನದಿಯ ಎಡದಡದಲ್ಲಿ ಧುಮ್ಮಿಕ್ಕುವ ನೀರಿಗೆ ಸೋಂಕುವಂತೆ ಪಕ್ಕದಲ್ಲಿ ಅಗಲವಾದ ಚಪ್ಪಟೆ ಬಂಡೆಕಲ್ಲೊಂದಿದೆ. ಇದಕ್ಕೆ ಟೇಬಲ್‍ರಾಕ್ ಎಂದು ಹೆಸರು.

ರಾಮನಗರ ಜಿಲ್ಲೆಯ ಕನಕಪುರ

ರಾಮನಗರ ಜಿಲ್ಲೆಯ ಕನಕಪುರ

ರಾಮನಗರ ಜಿಲ್ಲೆಯ ಕನಕಪುರದಲ್ಲಿರುವ ಮೇಕೆದಾಟುವು ಕಾವೇರಿ ನದಿ ಹರಿಯುವ ಕಿರಿದಾದ, ಆಳವಾದ ಕಂದರಗಳಿಂದ ಕೂಡಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಆಸಕ್ತಿದಾಯಕ ಪೌರಾಣಿಕ ಕಥೆಯೂ ಇದೆ.

ಪುರಾತನ ಕಥೆ

ಪುರಾತನ ಕಥೆ

PC:Karthik Prabhu

ಸ್ಥಳೀಯರಲ್ಲಿ ಜನಪ್ರಿಯವಾಗಿರುವ ಪುರಾತನ ಕಥೆಯ ಪ್ರಕಾರ, ಹುಲಿಯೊಂದು ಮೇಕೆಯನ್ನು ಬೆನ್ನಟ್ಟುತ್ತಿರುತ್ತದೆ ಮೇಕೆಯು ತನ್ನ ಪ್ರಾಣ ಉಳಿಸಿಕೊಳ್ಳಲು ಹೆದರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತದೆ. ಆ ಸ್ಥಳ ಎಷ್ಟೊಂದು ಕಿರಿದಾಗಿತ್ತೆಂದರೆ ಅಲ್ಲಿ ಮೇಕೆ ಮಾತ್ರ ಹೋಗುವಷ್ಟು ಕಿರಿದಾಗಿರುತ್ತದೆ. ಹಾಗಾಗಿ ಹುಲಿಗೆ ಅದನ್ನು ಬೆನ್ನಟ್ಟಲು ಸಾಧ್ಯವಾಗೋದಿಲ್ಲ. ಹಾಗಾಗಿ ಆ ಸ್ಥಳಕ್ಕೆ ಮೇಕೆದಾಟು ಎನ್ನುವ ಹೆಸರು ಬಂದಿದೆ.

ಜನರ ನಂಬಿಕೆ

ಜನರ ನಂಬಿಕೆ

PC:Rayabhari

ಆ ಮೇಕೆಯೇ ಶಿವನ ರೂಪ ಎಂದು ನಂಬುತ್ತಾರೆ ಜನರು. ಇಲ್ಲಿನ ಬಂಡೆಗಳಲ್ಲಿ, ವಿಚಿತ್ರ ರಂಧ್ರಗಳನ್ನು ಕಾಣಬಹುದು. ಅದರ ಆಕಾರಗಳು ಮೇಕೆಯ 'ಕಾಲುಗಳನ್ನು ಹೋಲುತ್ತವೆ. ದೈವಿಕ ಮೇಕೆ ಮಾತ್ರವೇ ತಮ್ಮ ಕಲ್ಲಿನ ಗುರುತುಗಳನ್ನು ಗುರುತಿಸಲು ಸಾಧ್ಯವೆಂದು ನಂಬಲಾಗಿದೆ.

 ರೌಂಡ್ ಬೋಟ್ ಸವಾರಿ

ರೌಂಡ್ ಬೋಟ್ ಸವಾರಿ

PC:Karthik Prabhu

ಮೇಕೆದಾಟುವಿನಿಂದ ಸುಮಾರು 3.5 ಕಿ.ಮೀ ದೂರದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮವಾಗಿದೆ. ನಂತರದ ನದಿಯು ಹಿಂದಿನ ಭಾಗಕ್ಕೆ ವಿಲೀನಗೊಳ್ಳುತ್ತದೆ. ಇದರಿಂದಾಗಿ ಪರಿಣಾಮವಾಗಿ ನೀರಿನ ದೇಹವು 150 ಮೀಟರ್ ಅಗಲವಾಗಿರುತ್ತದೆ. ಸಂಗಮದಲ್ಲಿ, ಸಾಂಪ್ರದಾಯಿಕ ರೌಂಡ್ ಬೋಟ್ ಕಾರಾಕಲ್ ಸವಾರಿ ಅನುಭವವನ್ನು ಅನುಭವಿಸಬಹುದು..

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC:ArunCyriac

ಆಗಸ್ಟ್ ನಿಂದ ಜನವರಿ ತಿಂಗಳು ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸರಿಯಾದ ಸಮಯವಾಗಿದೆ. ಊಟ ಮತ್ತು ವಸತಿಯ ವ್ಯವಸ್ಥೆಗಳಿಲ್ಲ. ಬೆಳಿಗ್ಗೆ ಬಂದು ಸಂಜೆಯವರೆಗಿದ್ದು ಮತ್ತೆ ವಾಪಸ್ ಹೋಗಬೇಕು. ಕೆಲವು ರೆಸ್ಟೋರೆಂಟ್‌ಗಳಲ್ಲಿ ಊಟ ಇರೋದಿಲ್ಲ ಕೇವಲ ಕೂಲ್‌ಡ್ರಿಂಕ್ಸ್‌, ಸ್ನಾಕ್ಸ್ ಇರುತ್ತದೆ. ಹಾಗಾಗಿ ಊಟವನ್ನು ನೀವು ಕಟ್ಟಿಕೊಂಡು ಬರುವುದೇ ಒಳ್ಳೆಯದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: ArunCyriac

ಕನಕಪುರದಿಂದ ಇದು ನಿಖರವಾಗಿ 26 ಕಿ.ಮೀ.ದೂರದಲ್ಲಿದೆ. ಮೇಕೆದಾಟುವಿಗೆ ಹೋಗಲು ಸಂಗಮವನ್ನು ತಲುಪಬೇಕಾಗಿದೆ. ಸಂಗಮಕ್ಕೆ ತಲುಪಿದ ನಂತರ ನದಿಯ ಇನ್ನೊಂದು ಭಾಗಕ್ಕೆ ತಲುಪಲು ಬೋಟ್ ಮೂಲಕವೂ ಹೋಗಬಹುದು. ನಂತರ ಬಸ್ ಹಿಡಿಯಬಹುದು. ಪ್ರತಿ ಅರ್ಧಗಂಟೆಗೊಂದು ಬಸ್‌ ಚಲಿಸುತ್ತದೆ. 5.30ಕ್ಕೆ ಮೇಕೆದಾಟುವಿನಿಂದ ಸಂಗಮಕ್ಕೆ ಕೊನೆಯ ಬಸ್ ಚಲಿಸುತ್ತದೆ. ಆ ನಂತರ ಅಲ್ಲಿಗೆ ಯಾರಿಗೂ ಪ್ರವೇಶವಿರೋದಿಲ್ಲ.

 ಮೀನುಗಾರಿಕೆ ಕ್ಯಾಂಪ್

ಮೀನುಗಾರಿಕೆ ಕ್ಯಾಂಪ್

PC:Karthik Prabhu

ಮೇಕೆದಾಟುವಿಗೆ ಹೋಗುವ ದಾರಿಯಲ್ಲಿ ಗಾಲಿಬೋರ್ ಮೀನುಗಾರಿಕೆ ಕ್ಯಾಂಪ್ ಎಂದು ಕರೆಯಲಾಗುವ ಮೀನುಗಾರಿಕೆ ಕ್ಯಾಂಪ್ ಇದೆ. ಹಾಗಾಗಿ ನೀವು ಮೇಕೆದಾಟು ಬೋರ್ಡ್ ಅನ್ನು ಮಿಸ್‌ ಮಾಡಿಕೊಂಡರೆ ಈ ಫಿಶಿಂಗ್ ಕ್ಯಾಂಪ್ ಬೋರ್ಡ್ ಅನ್ನು ನೋಡುವ ಮೂಲಕ ಮೇಕೆದಾಟುವನ್ನು ತಲುಪಬಹುದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X