Search
  • Follow NativePlanet
Share
» »ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ

ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ

ಮಯೂರ್ಭಂಜ ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳನ್ನು ಹೊಂದಿದ್ದು ,ಇವು ಪ್ರವಾಸಿಗರನ್ನು ತನ್ನತ್ತ ಆಹ್ವಾನಿಸುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಇಲ್ಲಿನ ಹಬ್ಬಗಳಿಗೆ ದೂರದೂರುಗಳಿಂದಲೂ ಜನರು ಬರುತ್ತಾರೆ. ಈ ಸಮಯದಲ್ಲಿ ಅಪಾರವಾದ ಜನಸಂದಣಿ ಇರುತ್ತದೆ. ಚೈತ್ರ ಪರ್ವ ಉತ್ಸವದಲ್ಲಿ ದೇಶಾದ್ಯಂತ ಇರುವ ಪ್ರತಿಭಾನ್ವಿತ ವ್ಯಕ್ತಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಜನಮನ್ನಣೆಯನ್ನು ಗಳಿಸುತ್ತಾರೆ. ಮಯೂರ್ಭಂಜವು ಉತ್ತಮ ಪ್ರವಾಸಿ ತಾಣಗಳಿಂದ ಸುತ್ತುವರೆದಿದ್ದು, ಈ ಸ್ಥಳಗಳು ಆಕರ್ಷಕವಾಗಿವೆ. ಮಯೂರ್ಭಂಜ ಪ್ರವಾಸೋದ್ಯಮದಲ್ಲಿ ರಾಷ್ಟ್ರೀಯ ಉದ್ಯಾನವನವಾದ ಸಿಮಿಲಿಪಾಲವು ಸಹ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

 ಖನಿಜಗಳ ಸ್ವರ್ಗ

ಖನಿಜಗಳ ಸ್ವರ್ಗ

PC:Sulekindo

ಮಯೂರ್ಭಂಜ ಪ್ರದೇಶವು ತಾನು ಹೊಂದಿರುವ ಅಪಾರವಾದ ಖನಿಜಗಳ ನಿಕ್ಷೇಪಗಳಿಂದ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪ್ರದೇಶದಲ್ಲಿರುವ ಖನಿಜ ಸಂಪನ್ಮೂಲಗಳು ಮಯೂರ್ಭಂಜ ಪ್ರದೇಶದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತವೆ. ಮಯೂರ್ಭಂಜ ಪ್ರದೇಶದ ವಿನ್ಯಾಸವು ಯಾವ ರೀತಿಯಾಗಿದೆ ಎಂದರೆ, ಭಾಗಶಃ ನಿಧಾನವಾಗಿ ಹರಿಯುತ್ತಿರುವ ನದಿಯೊಂದಿಗೆ ಉರುಳುತ್ತಿರುವ ಬೆಟ್ಟದಂತಿದೆ. ಆದಾಗ್ಯೂ ಈ ಪ್ರದೇಶದಲ್ಲಿ ಅಸಂಖ್ಯಾತ ಗಣಿಗಳು ಕಾಯನಿರ್ವಹಿಸುತ್ತಿವೆ. ಇದರಿಂದ ಹಾಳಾಗುತ್ತಿರುವ ಈ ಪ್ರದೇಶದ ನೈಸರ್ಗಿಕ ಭೂ ರಚನೆಯ ಗುಣಮಟ್ಟವನ್ನು ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವನ್ನು ನಿರ್ಮಿಸುವ ಮೂಲಕ ಉಳಿಸಿಕೊಳ್ಳಲಾಗಿದೆ. ಇದು ಮಯೂರ್ಭಂಜನ ಪ್ರವಾಸೋದ್ಯಮವನ್ನು ವರ್ಧಿಸುತ್ತಿದೆ ಅಲ್ಲದೇ ಅದನ್ನು ಜೀವಂತವಾಗಿರಿಸಿದೆ.

ಹಬ್ಬಗಳು ಮತ್ತು ಜಾತ್ರೆಗಳು

ಹಬ್ಬಗಳು ಮತ್ತು ಜಾತ್ರೆಗಳು

ಮಯೂರ್ಭಂಜವು ಜೀವನದಲ್ಲಿ ಮತ್ತೆ ಸಂಭ್ರಮವನ್ನು ಮರಳಿ ತರುತ್ತದೆ. ಬರುವ ಸಾಲು ಹಬ್ಬಗಳು ಮತ್ತು ಜಾತ್ರೆಗಳು ಮಯೂರ್ಭಂಜ ಜನತೆಯನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತವೆ. ಅವರಿಗೆ ಶಕ್ತಿಯನ್ನು ಕೊಡುವ ಆಹಾರ ಎಂದರೆ ಮುಧಿ. ಅಂದರೆ ಮಂಡಕ್ಕಿ. ಇದು ಈ ಪ್ರದೇಶದ ಬೆಳಗಿನ ಪ್ರಧಾನ ಉಪಹಾರವಾಗಿದೆ. ಪ್ರವಾಸಿಗರು ಇಲ್ಲಿ ವಿಶಿಷ್ಟವಾದ ಸ್ಮರಣಿಕೆಗಳನ್ನು ಖರೀದಿಸಬಹುದು. ಈ ತಾಟು ಮತ್ತು ಬಟ್ಟಲುಗಳ ಸ್ಮರಣಿಕೆಗಳು ಮರಗಳ ಎಲೆಯಿಂದ ತಯಾರಾಗುತ್ತವೆ. ಓರಿಸ್ಸಾದ ಪುರಿ ಜಗನ್ನಾಥನ ರಥಯಾತ್ರೆಯು ಮೊದಲನೇಯದಾದರೆ, ಬರಿಪಾದದ ಈ ರಥಯಾತ್ರಾ ಉತ್ಸವವು ಎರಡನೇಯದು.

ದೇವಕುಂಡ

ದೇವಕುಂಡ

ದೇವಕುಂಡವನ್ನು ದೇವಕುಂಡ ಎಂದು ಕರೆಯಲಾಗುತ್ತದೆ. ಇದನ್ನು ಭಾಷಾಂತರಿಸಿದಾಗ ದೇವ ಮತ್ತು ದೇವತೆಯರ ಸ್ನಾನದ ಕೊಳ ಅಥವಾ ತೊಟ್ಟಿ ಎಂಬ ಅರ್ಥ ಬರುತ್ತದೆ. ಇದು ಬರಿಪಾದದಿಂದ 60 ಕೀಲೊ ಮೀಟರ್ ದೂರದಲ್ಲಿದೆ. ಈ ಸ್ಥಳವು ತನ್ನ ಹೆಸರಿಗೆ ತಕ್ಕಂತೆ ಕೆಲವು ಅಲೌಕಿಕ ಗುಣಗಳನ್ನು ಹೊಂದಿದೆ. ಹಬ್ಬಗಳನ್ನು ಬಹು ವೈಭವ ಮತ್ತು ಅನುಪಮವಾಗಿ ಉಡಾಲದಲ್ಲಿ ಆಚರಿಸಲಾಗುತ್ತದೆ. ಈ ನಗರವು ದೇವಕುಂಡದಿಂದ 25 ಕೀಲೊ ಮೀಟರ್ ದೂರದಲ್ಲಿದೆ.

 ಖಿಚಿಂಗ

ಖಿಚಿಂಗ

PC: mayurbhanj.nic.in

ಖಿಚಿಂಗ ಇದು ಪ್ರಾಚೀನ ಕಾಲದಿಂದಲೂ ದೇವಾಲಯದ ನಗರವಾಗಿದೆ. ಈ ನಗರವು ಭಂಜ ವಂಶದ ರಾಜಧಾನಿಯಾಗಿ 9 ರಿಂದ 10 ನೇ ಶತಮಾನದವರೆಗೂ ಕಾರ್ಯ ನಿರ್ವಹಿಸಿದೆ. ಕಲೆ, ವಾಸ್ತು ಶಿಲ್ಪ ಮತ್ತು ಸಂಸ್ಕತಿಯ ಮುಂದುವರೆದ ಸಂಪ್ರದಾಯಗಳು ಖಿಚಿಂಗ ಗೆ ಅದರ ಕಳೆದು ಹೋದ ವೈಭವ ಮತ್ತು ದಿವ್ಯಕಾಂತಿಯನ್ನು ಮರಳಿ ತಂದು ಕೊಟ್ಟಿವೆ. ಭಂಜ ವಂಶದ ಆಡಳಿತಗಾರು ಮಾ ಖಿಚಕೇಶ್ವರಿಯ ಪರಮ ಭಕ್ತರು ಮತ್ತು ಆರಾಧಕರಾಗಿದ್ದರು.

ಬರಿಪಾದ

ಬರಿಪಾದ

ಬರಿಪಾದವು ಮಯೂರ್ಭಂಜನ ಮುಖ್ಯ ಜಿಲ್ಲಾ ಕೇಂದ್ರವಾಗಿದೆ. ಸಿಮಿಲಿಪಾಲ ರಾಷ್ಟ್ರೀಯ ಉದ್ಯಾನವನವು ಬರಿಪಾದದಲ್ಲಿದೆ. ಬರಿಪಾದವು ಮಯೂರ್ಭಂಜವು ಸಾಂಸ್ಕತಿಕ ಮುಖ್ಯ ಕೇಂದ್ರವಾಗಿದೆ. ಇಲ್ಲಿ ಚಾಹು ನೃತ್ಯ ಎಂಬ ಸ್ಥಳೀಯ ನೃತ್ಯ ಪ್ರಕಾರವನ್ನು ಕಲಿತ ಸಾಕಷ್ಟು ಜನರು ನಿಮಗೆ ಬರಿಪಾದದಲ್ಲಿ ಸಿಗುತ್ತಾರೆ. ಈ ನೃತ್ಯಕ್ಕೆ ಸಿದ್ಧಗೊಂಡಿರುವ ವೇದಿಕೆಯ ಜೀವಂತಿಕೆ ಮತ್ತು ನೃತ್ಯಗಾರ್ತಿಯರ ವೈಭವವನ್ನು ನೋಡಲೇ ಬೇಕು. ಪ್ರವಾಸಿಗರು ಯಾವುದೇ ಕಾಣಕ್ಕೂ ಈ ಶಾಸ್ತ್ರೀಯ ನೃತ್ಯ ಪ್ರಕಾರ ಪ್ರದರ್ಶನವನ್ನು ನೋಡುವುದನ್ನು ಮರೆಯಲೇ ಬಾರದು. ಬರಿಪಾದದ ರಥೋತ್ಸವ ಅಥವಾ ರಥಯಾತ್ರೆ ಸಂಪ್ರದಾಯವು ಇಲ್ಲಿನ ಪ್ರಮುಖ ಹೆಗ್ಗುರುತು ಆಗಿದೆ.

ಮಯೂರ್ಭಂಜದ ನೃತ್ಯ

ಮಯೂರ್ಭಂಜದ ನೃತ್ಯ

PC: Swetapadma07

ಇಲ್ಲಿ ಹಬ್ಬಗಳು ಉಂಟು ಮಾಡುವ ಉತ್ಸಾಹ ಮತ್ತು ಸಂಭ್ರಮವನ್ನು ಶಬ್ದಗಳಲ್ಲಿ ಹಿಡಿದಿಡುವುದು ಖಂಡಿತವಾಗಿಯೂ ಅಸಾಧ್ಯದ ಮಾತೇ ಸರಿ. ಚಾಹು ನೃತ್ಯ ಮಯೂರ್ಭಂಜದ ನೃತ್ಯಪ್ರಕಾರವಾಗಿದ್ದು, ಅದು ಅಲ್ಲಿನ ಆ ಪ್ರದೇಶಗಳ ಸಾಂಸ್ಕತಿಕ ಚಟುವಟಿಕೆಗಳಿಗೆ ವಿಶಿಷ್ಟ ಲಕ್ಷಣವನ್ನು ನೀಡಿದೆ.

ಮಯೂರ್ಭಂಜವನ್ನು ತಲುಪುವುದು ಹೇಗೆ?

ಮಯೂರ್ಭಂಜವನ್ನು ತಲುಪುವುದು ಹೇಗೆ?

ಮಯೂರ್ಭಂಜನ ರಸ್ತೆ ಸಾರಿಗೆ ಸೌಲಭ್ಯವು ನಂಬಿಕೆ ಅರ್ಹವಾಗಿದೆ. ಸುಸಜ್ಜಿತ ರಸ್ತೆಗಳನ್ನು ಇದು ಹೊಂದಿದ್ದು, ನಿಯಮಿತ ಸಾರ್ವಜನಿಕ ಸಾರಿಗೆಗಳು, ಹವಾ ನಿಯಂತ್ರಿತ ಬಸ್ಸುಗಳು ಪ್ರಯಾಣಿಕರ ಸೇವೆಗಾಗಿ ಸದಾ ಸಿದ್ದವಿರುತ್ತವೆ. ಮಯೂರ್ಭಂಜ ನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ನಿರಂತರವಾಗಿ ಉತ್ತಮ ಬಸ್ಸುಗಳ ಸೌಲಭ್ಯವಿದೆ. ಬರಿಪಾದ ನಗರವು ರಾಷ್ಟ್ರೀಯ ಹೆದ್ದಾರಿ 5 ರ ಆರಂಭಿಕ ಹಂತದಿಂದ 30 ಕೀಲೊ ಮೀಟರ್ ದೂರದಲ್ಲಿ ನೆಲೆಗೊಂಡಿದೆ. ಈ ಹೆದ್ದಾರಿಯು ನೇರವಾಗಿ ಚೆನ್ನೈಯೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.

ಒರಿಸ್ಸಾವು ಈ ದೇಶದ ಅತ್ಯಂತ ಹಳೆಯ ರೇಲ್ವೆ ನಿಲ್ದಾಣಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ. ಬರಿಪಾದವು ಮಹಾರಾಜ ಕೃಷ್ಣ ಚಂದ್ರ ಭಂಜದೇವರಿಂದಾಗಿ ಹೌರಾ - ಚೆನ್ನೈ ರೇಲ್ವೆ ಕಾರಿಡಾರನೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಭುವನೇಶ್ವರ ಮತ್ತು ಕಲ್ಕತ್ತಾ ನಗರಗಳಿಗೆ ಹೋಗುವ ಮತ್ತು ಬರುವ ರೇಲ್ವೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇವುಗಳನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸಾಕಷ್ಟು ಬಳಸುತ್ತಾರೆ.ಮಯೂರ್ಭಂಜ ನಗರಕ್ಕೆ ತಲುಪುವ ಅತ್ಯಂತ ಯೋಗ್ಯವಾದ ಮಾರ್ಗ ಎಂದರೆ ಕಲ್ಕತ್ತಾದವರೆಗೆ ವಿಮಾನ ಪ್ರಯಾಣ ಮಾಡುವುದು. ನಂತರ ರೆಲ್ವೆಯನ್ನು ಬಳಸಿ ಬರಿಪಾದವನ್ನು ತಲುಪುವುದು.

ಮಯೂರ್ಭಂಜ ನಗರಕ್ಕೆ ಅತ್ಯಂತ ಹತ್ತಿರವಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ನೇತಾಜಿ ಸುಭಾಷ ಚಂದ್ರ ಬೋಸ್ ವಿಮಾನ ನಿಲ್ದಾಣ. ಇದು ಕಲ್ಕತ್ತಾದಲ್ಲಿದ್ದು ಮಯೂರ್ಭಂಜನಿಂದ 248 ಕೀಲೊ ಮೀಟರ್ ದೂರದಲ್ಲಿದೆ. ಸೋನಾರಿ,ರೂರ್ಕೇಲಾ ಮತ್ತು ಬಿರ್ಸಾ ಮುಂಡಾ ವಿಮಾನ ನಿಲ್ದಾಣಗಳು ಮಯೂರ್ಭಂಜ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣಗಳಾಗಿವೆ.

 ಮಯೂರ್ಭಂಜ ಹವಾಮಾನ

ಮಯೂರ್ಭಂಜ ಹವಾಮಾನ

ಸಪ್ಟಂಬರ್ ಮತ್ತು ಮಾರ್ಚ್ ತಿಂಗಳುಗಳು ಮಯೂರ್ಭಂಜಕ್ಕೆ ಭೇಟಿ ಕೊಡಲು ಯೋಗ್ಯವಾಗಿದೆ. ಈ ಸಮಯದಲ್ಲಿ ತಾಪಮಾನವು ಆದ್ರತೆಯಿಂದ ಕೂಡಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more